ಒಂದು ಕೊಡಲಿ ಕಾವು, ಹತ್ತು ಸಾವಿರ ರೂಪಾಯಿ: ಮನುಷ್ಯತ್ವದ ಪತನದ ಕಥೆ ಇದು..
Taluknewsmedia.comಒಂದು ಕೊಡಲಿ ಕಾವು, ಹತ್ತು ಸಾವಿರ ರೂಪಾಯಿ: ಮನುಷ್ಯತ್ವದ ಪತನದ ಕಥೆ ಇದು.. ನಮ್ಮ ದೈನಂದಿನ ಬದುಕಿನಲ್ಲಿ ಹತ್ತು ಸಾವಿರ ರೂಪಾಯಿ ಎನ್ನುವುದು ಕೆಲವರಿಗೆ ಒಂದು ತಿಂಗಳ ಖರ್ಚಿರಬಹುದು, ಇನ್ನು ಕೆಲವರಿಗೆ ಒಂದು ಸಣ್ಣ ಉಳಿತಾಯವಿರಬಹುದು. ಆದರೆ ಬೆಳಗಾವಿಯ ಈ ಘಟನೆಯನ್ನು ನೋಡಿದರೆ, “ಮನುಷ್ಯನ ಜೀವಕ್ಕೆ ಬೆಲೆ ಎಷ್ಟು?” ಎಂಬ ಭಯಾನಕ ಪ್ರಶ್ನೆ ಕಾಡತೊಡಗುತ್ತದೆ. ಕೇವಲ ಹತ್ತು ಸಾವಿರ ರೂಪಾಯಿಯ ಮುಂಗಡ ಹಣದ ವಿವಾದಕ್ಕಾಗಿ, 38 ವರ್ಷದ ಫಕ್ಕೀರಪ್ಪ ಕಿರಕಸಾಲಿ ಎಂಬ ವ್ಯಕ್ತಿಯನ್ನು ಅತಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ಕೇವಲ ಒಂದು ಅಪರಾಧ ಸುದ್ದಿಯಲ್ಲ, ಇದು ನಮ್ಮ ಸಮಾಜದಲ್ಲಿ ಮರೆಯಾಗುತ್ತಿರುವ ಸಹನೆ ಮತ್ತು ಮನುಷ್ಯತ್ವದ ಸಂಕೇತವೂ ಹೌದು. ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ರುದ್ರವ್ವ ಬಸಪ್ಪ ಹೆಬ್ಬಳ್ಳಿ ಅವರಿಗೆ ಸೇರಿದ ಗೊಂಜಾಳ ಬೆಳೆ ಬೆಳೆದ ಜಮೀನಿನಲ್ಲೊಂದು ಹುಣಸೆ ಮರ. ಅದರ ಬುಡದಲ್ಲಿ ಫಕ್ಕೀರಪ್ಪನ ಶವ…
ಮುಂದೆ ಓದಿ..
