ಸಾಲಗಾರರಿಗೆ ಆರ್‌ಬಿಐನಿಂದ ದೊಡ್ಡ ರಿಲೀಫ್: ಲೋನ್ ಕಟ್ಟದಿದ್ದರೂ ನಿಮ್ಮ ಫೋನ್ ಲಾಕ್ ಆಗಲ್ಲ!
Taluknewsmedia.comಸಾಲಗಾರರಿಗೆ ಆರ್‌ಬಿಐನಿಂದ ದೊಡ್ಡ ರಿಲೀಫ್: ಲೋನ್ ಕಟ್ಟದಿದ್ದರೂ ನಿಮ್ಮ ಫೋನ್ ಲಾಕ್ ಆಗಲ್ಲ! ಸಾಲ ಮರುಪಾವತಿ ಮಾಡುವಲ್ಲಿ ವಿಳಂಬವಾದಾಗ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅನುಸರಿಸುವ ಆಕ್ರಮಣಕಾರಿ ವಸೂಲಾತಿ ಕ್ರಮಗಳು ಅನೇಕ ಬಾರಿ ಗ್ರಾಹಕರ ನೆಮ್ಮದಿಯನ್ನು ಕೆಡಿಸುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಗ್ರಾಹಕರ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ರಿಮೋಟ್ ಆಗಿ ಲಾಕ್ ಮಾಡುವ ಮೂಲಕ ಮರುಪಾವತಿಗೆ ಒತ್ತಡ ಹೇರುವ ‘ಡಿಜಿಟಲ್ ದಾಳಿ’ಗಳು ಜನರಲ್ಲಿ ಆತಂಕ ಮೂಡಿಸಿದ್ದವು. ಸಾಲ ಪಡೆದವನು ಅಪರಾಧಿಯಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುವ ವಸೂಲಾತಿ ಏಜೆಂಟ್‌ಗಳಿಗೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸರಿಯಾದ ಬ್ರೇಕ್ ಹಾಕಿದೆ. ವೈಯಕ್ತಿಕ ಸಾಲಗಳಿಗಾಗಿ ಡಿಜಿಟಲ್ ಕಿರುಕುಳಕ್ಕೆ ಬ್ರೇಕ್ ಸಾಲಗಾರರು ತಮ್ಮ ಗೃಹ ಸಾಲ (Home Loan), ವಾಹನ ಸಾಲ ಅಥವಾ ವೈಯಕ್ತಿಕ ಸಾಲಗಳ (Personal Loan) ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು…
ಮುಂದೆ ಓದಿ..
