ಲಂಚದ ಬೆದರಿಕೆ, 2400 ಕೋಟಿ ರಿಲೀಸ್ ಮತ್ತು 38,000 ಕೋಟಿಯ ಅಸಲಿ ಕಥೆ!
Taluknewsmedia.comಲಂಚದ ಬೆದರಿಕೆ, 2400 ಕೋಟಿ ರಿಲೀಸ್ ಮತ್ತು 38,000 ಕೋಟಿಯ ಅಸಲಿ ಕಥೆ! ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿಯಾಗದಿರುವುದು ಇದೀಗ ದೊಡ್ಡ ಮಟ್ಟದ ರಾಜಕೀಯ ಮತ್ತು ಆಡಳಿತಾತ್ಮಕ ಸಂಘರ್ಷಕ್ಕೆ ಕಾರಣವಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಗುತ್ತಿಗೆದಾರರ ಸಂಘವು ಸರ್ಕಾರದ ವಿರುದ್ಧ ಸಿಡಿದೆದ್ದು, ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿತ್ತು. ಅಷ್ಟೇ ಅಲ್ಲದೆ, ಲಂಚ ಪಡೆದ ಹಾಗೂ ಬೇಡಿಕೆಯಿಟ್ಟ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ ತಕ್ಷಣವೇ ರಾಜ್ಯ ಸರ್ಕಾರವು ತಡಿಬಡಿಯಾಗಿ ಪ್ರತಿಕ್ರಿಯಿಸಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಸರ್ಕಾರ ನೀರಾವರಿ ಇಲಾಖೆಗೆ ಅನುದಾನ ಬಿಡುಗಡೆ ಮಾಡಿದ್ದು, ವ್ಯವಸ್ಥೆಯಲ್ಲಾಗುತ್ತಿರುವ ಆಡಳಿತಾತ್ಮಕ ಹಾಗೂ ಹಣಕಾಸಿನ ಏರಿಳಿತಗಳ ಕುರಿತು ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ‘ಹೆಸರು ಬಯಲು’ ಎಚ್ಚರಿಕೆಗೆ ಬೆದರಿತೇ ಸರ್ಕಾರ? ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಸುಮಾರು ₹38,000 ಕೋಟಿ ಬಿಲ್…
ಮುಂದೆ ಓದಿ..
