ಕಾಂಗ್ರೆಸ್‌ನಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಅಸಹಾಯಕತೆ ಮತ್ತು ಡಿಕೆಶಿ ‘ಹಾದಿ’ ತಪ್ಪಿದ್ದರ ಹಿಂದಿನ ಅಚ್ಚರಿಯ ಸಂಗತಿಗಳು!…
ಕಾಂಗ್ರೆಸ್‌ನಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಅಸಹಾಯಕತೆ ಮತ್ತು ಡಿಕೆಶಿ ‘ಹಾದಿ’ ತಪ್ಪಿದ್ದರ ಹಿಂದಿನ ಅಚ್ಚರಿಯ ಸಂಗತಿಗಳು!… ಕರ್ನಾಟಕ ರಾಜಕಾರಣದ ಪಡಸಾಲೆಗಳಲ್ಲಿ ಈಗ ಹೊಸದೊಂದು ಚರ್ಚೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಹೊರನೋಟಕ್ಕೆ ‘ಕೈ’ ನಾಯಕರೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೂ, ಅಂತರಂಗದಲ್ಲಿ ಭಿನ್ನಮತದ ಬೇಗುದಿ ಆರಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಇತ್ತೀಚೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರ ನಡುವೆ ನಡೆದ ಸುದೀರ್ಘ ಭೇಟಿ ಕೇವಲ ಒಂದು ಸೌಜನ್ಯದ ಭೇಟಿಯಾಗಿ ಉಳಿಯಲಿಲ್ಲ. ಬದಲಿಗೆ, ಇದು ಕಾಂಗ್ರೆಸ್ ಸರ್ಕಾರದ ಕೋಟೆಯ ಗೋಡೆಯಲ್ಲಿ ಮೂಡಿರುವ ಬಿರುಕನ್ನು ಎತ್ತಿ ತೋರಿಸಿದೆ. ಹಿರಿಯ ನಾಯಕ ರಾಜಣ್ಣ ಅವರು ಹಾರಿಸಿರುವ ಸ್ಫೋಟಕ ಹೇಳಿಕೆಗಳ ಬಾಣಗಳು ಈಗ ನೇರವಾಗಿ ಪಕ್ಷದ ಹೈಕಮಾಂಡ್ ಮತ್ತು ನಾಯಕತ್ವಕ್ಕೆ ತಗುಲಿವೆ.ಯಾರಿಗೆ ಯಾರೇ ಆಗಲಿ ‘ಬಂಡೆ’ಯಂತೆ ನಿಲ್ಲುವ, ಅಹಿಂದ ನಾಯಕನೆಂದೇ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಅಸಹಾಯಕರಾಗಿದ್ದಾರೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು…
ಮುಂದೆ ಓದಿ..
