ಪಿಎಂ ಮಾತೃತ್ವ ರಕ್ಷೆ ಯೋಜನೆ ಫಲಕಾರಿತ್ವ: ಮೈಸೂರಿನಲ್ಲಿ 13,910 ತಾಯಂದಿರ ಜೀವ ರಕ್ಷಣೆ
ಪಿಎಂ ಮಾತೃತ್ವ ರಕ್ಷೆ ಯೋಜನೆ ಫಲಕಾರಿತ್ವ: ಮೈಸೂರಿನಲ್ಲಿ 13,910 ತಾಯಂದಿರ ಜೀವ ರಕ್ಷಣೆ ಮೈಸೂರು: ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಮೈಸೂರು ಜಿಲ್ಲೆಯಲ್ಲಿ ಈವರೆಗೆ 13,910 ಹೈರಿಸ್ಕ್ ಗರ್ಭಿಣಿಯರು ಜೀವಾಪಾಯದಿಂದ ಪಾರಾಗಿದ್ದಾರೆ. ಯೋಜನೆ ಆರಂಭದ ನಂತರ ಜಿಲ್ಲೆಯಲ್ಲಿ ಮಾತೃ ಮರಣ ಪ್ರಮಾಣ ಶೇ. 16ರಿಂದ 11.5ಕ್ಕೆ ಇಳಿಕೆಯಾಗಿ, ರಾಜ್ಯದ ಸರಾಸರಿ ಪ್ರಮಾಣವಾದ 19% ಕ್ಕಿಂತ ಉತ್ತಮ ಸಾಧನೆ ದಾಖಲಿಸಿದೆ. ಯೋಜನೆಯ ಉದ್ದೇಶಗರ್ಭಧಾರಣೆಯ ಅವಧಿಯಲ್ಲಿ ತಾಯಿ ಮತ್ತು ಶಿಶುವಿನ ಜೀವಕ್ಕೆ ಅಪಾಯ ಉಂಟುಮಾಡಬಹುದಾದ ತೊಡಕುಗಳನ್ನು ಮುಂಚಿತವಾಗಿ ಪತ್ತೆಹಚ್ಚಿ, ತಕ್ಷಣ ಚಿಕಿತ್ಸೆ ನೀಡುವುದು ಅಭಿಯಾನದ ಮುಖ್ಯ ಗುರಿ. ಪ್ರತಿ ತಿಂಗಳು 9ರಂದು ವಿಶೇಷ ತಪಾಸಣೆಜಿಲ್ಲೆಯಾದ್ಯಂತ ಪಿಎಚ್ಸಿಗಳಲ್ಲಿ ಪ್ರತಿ ತಿಂಗಳು 9ರಂದು ಗರ್ಭಿಣಿಯರ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹಿಂದೆ ಸಿಸೇರಿಯನ್, ಅವಳಿ ಗರ್ಭ, ಗಂಡಾಂತರ ಹೆರಿಗೆ ಸೇರಿದಂತೆ 18 ವಿಧದ ಅಪಾಯಕಾರಿ ಲಕ್ಷಣಗಳು…
ಮುಂದೆ ಓದಿ..
