ಮಂತ್ರಿಗಿರಿ ಕನಸು: ಶಾಸಕ ಪ್ರದೀಪ್ ಈಶ್ವರ್ ನಡೆ – ಇದು ಮಹತ್ವಾಕಾಂಕ್ಷೆಯೋ ಅಥವಾ ತಂತ್ರಗಾರಿಕೆಯೋ?..
ಮಂತ್ರಿಗಿರಿ ಕನಸು: ಶಾಸಕ ಪ್ರದೀಪ್ ಈಶ್ವರ್ ನಡೆ – ಇದು ಮಹತ್ವಾಕಾಂಕ್ಷೆಯೋ ಅಥವಾ ತಂತ್ರಗಾರಿಕೆಯೋ?.. ರಾಜ್ಯ ರಾಜಕೀಯದ ಕಲಿಗಳ ನಡುವೆ ಈಗ ಸಚಿವ ಸಂಪುಟ ವಿಸ್ತರಣೆಯ ಜಿದ್ದಾಜಿದ್ದಿ ಶುರುವಾಗಿದೆ. “ಯಾರಿಗೆ ಮಂತ್ರಿಗಿರಿ? ಯಾರಿಗೆ ಕೊಕ್?” ಎಂಬ ಕುತೂಹಲದ ನಡುವೆಯೇ, ಚಿಕ್ಕಬಳ್ಳಾಪುರದ ಫೈರ್ ಬ್ರಾಂಡ್ ಶಾಸಕ ಪ್ರದೀಪ್ ಈಶ್ವರ್ ಆಡಿರುವ ಮಾತುಗಳು ಈಗ ಸಖತ್ ‘ಸೌಂಡ್’ ಮಾಡುತ್ತಿವೆ. ಸದಾ ತಮ್ಮ ವಿಭಿನ್ನ ಶೈಲಿಯಿಂದಲೇ ಸುದ್ದಿಯಲ್ಲಿರುವ ಈ ಯುವ ಶಾಸಕ, ಈಗ ನೇರವಾಗಿ ಹೈಕಮಾಂಡ್ ಅಂಗಳಕ್ಕೆ ಚೆಂಡೆಸೆದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಇದು ಕೇವಲ ಆಸೆಯೋ ಅಥವಾ ಅಳೆದು ತೂಗಿ ಹಾಕಿರುವ ರಾಜಕೀಯ ದಾಳವೋ? ಸುದ್ದಿಗಾರರೊಂದಿಗೆ ಮಾತನಾಡುವಾಗ ಅವರು ಬಿಚ್ಚಿಟ್ಟ ಮೂರು ಪ್ರಮುಖ ಸಂಗತಿಗಳ ವಿಶ್ಲೇಷಣೆ ಇಲ್ಲಿದೆ: ಸಾಮಾನ್ಯವಾಗಿ ರಾಜಕಾರಣಿಗಳು ಸಚಿವ ಸ್ಥಾನದ ಆಸೆಯ ಬಗ್ಗೆ ಪ್ರಶ್ನಿಸಿದರೆ, “ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ”, “ಹೈಕಮಾಂಡ್ ನಿರ್ಧಾರಕ್ಕೆ ಬದ್ಧ”…
ಮುಂದೆ ಓದಿ..
