ಚಿಕಮಗಳೂರಿನ ಮನಕಲಕುವ ಘಟನೆ: ಗೌರವದ ಹೆಸರಿನಲ್ಲಿ ಹಸುಗೂಸಿನ ಬಲಿ – ನಾವು ಎತ್ತ ಸಾಗುತ್ತಿದ್ದೇವೆ?…
ಚಿಕಮಗಳೂರಿನ ಮನಕಲಕುವ ಘಟನೆ: ಗೌರವದ ಹೆಸರಿನಲ್ಲಿ ಹಸುಗೂಸಿನ ಬಲಿ – ನಾವು ಎತ್ತ ಸಾಗುತ್ತಿದ್ದೇವೆ?… ಒಂದು ಮಗುವಿನ ಜನನವೆಂದರೆ ಅದು ಆ ಕುಟುಂಬಕ್ಕೆ ಹೊಸ ಭರವಸೆ ಮತ್ತು ಸಂಭ್ರಮದ ಕ್ಷಣವಾಗಬೇಕು. ಆದರೆ, ಮಲೆನಾಡಿನ ತಪ್ಪಲು ಚಿಕ್ಕಮಗಳೂರಿನಲ್ಲಿ ನಡೆದ ಈ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದ ಈ ಘಟನೆ, ಮನುಷ್ಯ ತನ್ನ ಕಪಟ “ಸಾಮಾಜಿಕ ಗೌರವ”ಕ್ಕಾಗಿ ಎಷ್ಟು ಅಮಾನವೀಯನಾಗಬಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಕಣ್ಣು ಬಿಡಬೇಕಾದ ಹಸುಗೂಸು ಮರ್ಯಾದೆಯ ಹೆಸರಿನಲ್ಲಿ ಅಜ್ಜಿಯ ಕೈಯಲ್ಲೇ ಹತರಾಗಿರುವುದು ನಮ್ಮ ಕಾಲದ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಮರ್ಯಾದೆಯ ಭಯ ಮತ್ತು ಕ್ರೂರ ನಿರ್ಧಾರ ಈ ಘಟನೆಯ ಮೂಲದಲ್ಲಿರುವುದು ಸಮಾಜದ ಟೀಕೆಗಳಿಗೆ ಅಂಜುವ ಅಂಧಾಭಿಮಾನ ಮತ್ತು ಪ್ರತಿಷ್ಠೆಯ ಹಪಾಹಪಿ. ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾದ ವಿಷಯ ಹೊರಜಗತ್ತಿಗೆ ತಿಳಿದರೆ ಕುಟುಂಬದ ಗೌರವ ಮಣ್ಣುಪಾಲಾಗುತ್ತದೆ ಎಂಬ ಅತಿಯಾದ…
ಮುಂದೆ ಓದಿ..
