ನ್ಯಾಯಾಂಗದ ಘನತೆ Vs ರಾಜಕೀಯ ಒತ್ತಡ: ಕೇಜ್ರಿವಾಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದೇಕೆ?
ನ್ಯಾಯಾಂಗದ ಘನತೆ Vs ರಾಜಕೀಯ ಒತ್ತಡ: ಕೇಜ್ರಿವಾಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದೇಕೆ? ದಿಲ್ಲಿಯ ಮದ್ಯ ನೀತಿ ಪ್ರಕರಣವು ಕೇವಲ ಒಂದು ರಾಜಕೀಯ ಜಟಾಪಟಿಯಲ್ಲ; ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ‘ಸಾಂವಿಧಾನಿಕ ನೈತಿಕತೆ’ (Constitutional Morality) ಮತ್ತು ‘ನ್ಯಾಯಾಂಗದ ಸ್ವಾಯತ್ತತೆ’ಯನ್ನು (Judicial Autonomy) ಒರೆಗೆ ಹಚ್ಚುವಂತಹ ಮಹತ್ವದ ಘಟ್ಟವಾಗಿದೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು (Recusal) ಎಂದು ಕೋರಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಕಟುವಾದ ಮಾತುಗಳೊಂದಿಗೆ ತಿರಸ್ಕರಿಸಿದೆ. ಈ ಬೆಳವಣಿಗೆಯನ್ನು ಒಬ್ಬ ಕಾನೂನು ವಿಶ್ಲೇಷಕನಾಗಿ ಗಮನಿಸಿದಾಗ ಒಂದು ಮೂಲಭೂತ ಪ್ರಶ್ನೆ ಕಾಡುತ್ತದೆ: ಒಬ್ಬ ಪ್ರಭಾವಿ ರಾಜಕಾರಣಿಗೆ ನ್ಯಾಯಾಂಗದ ಪ್ರಕ್ರಿಯೆಗಳನ್ನು ತನ್ನ ಇಚ್ಛಾನುಸಾರ ಬದಲಾಯಿಸುವ ಅಥವಾ ತನಗೆ ಬೇಕಾದ ನ್ಯಾಯಾಧೀಶರನ್ನು ಆಯ್ದುಕೊಳ್ಳುವ (Judge Shopping) ಹಕ್ಕಿದೆಯೇ? ಅಥವಾ ಇದು ವ್ಯವಸ್ಥಿತವಾಗಿ ನ್ಯಾಯಾಂಗದ ಮೇಲೆ…
ಮುಂದೆ ಓದಿ..
