ಬಲೆಗೆ ಬಿದ್ದ ಬಡವನಲ್ಲ, ‘ದೊಡ್ಡ’ ಮನುಷ್ಯ: ಕಡೂರು ಮೆಸ್ಕಾಂ ಭ್ರಷ್ಟಾಚಾರದ ಅಸಲಿ ಮುಖ!..
ಬಲೆಗೆ ಬಿದ್ದ ಬಡವನಲ್ಲ, ‘ದೊಡ್ಡ’ ಮನುಷ್ಯ: ಕಡೂರು ಮೆಸ್ಕಾಂ ಭ್ರಷ್ಟಾಚಾರದ ಅಸಲಿ ಮುಖ!.. ಸಾರ್ವಜನಿಕ ಸೇವೆ ಎನ್ನುವುದು ಇಂದು ಜನಸಾಮಾನ್ಯರ ಪಾಲಿಗೆ ಒಂದು ದುಸ್ವಪ್ನವಾಗಿ ಪರಿಣಮಿಸಿದೆ. ತೆರಿಗೆ ಪಾವತಿಸುವ ನಾಗರಿಕರು ತಮ್ಮ ನ್ಯಾಯಸಮ್ಮತ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳ ಮೆಟ್ಟಿಲೇರಿದಾಗ, ಅಲ್ಲಿ ಸ್ವಾಗತ ಕೋರುವುದು ಪಾರದರ್ಶಕತೆಯಲ್ಲ, ಬದಲಿಗೆ ಭ್ರಷ್ಟಾಚಾರದ ಪಿಡುಗು. ಕಡೂರಿನ ಮೆಸ್ಕಾಂ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿಯು ಕೇವಲ ಒಂದು ಲಂಚದ ಪ್ರಕರಣವಲ್ಲ; ಇದು ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ‘ವ್ಯವಸ್ಥಿತ ಲೂಟಿ’ ಮತ್ತು ಸಾರ್ವಜನಿಕ ಇಲಾಖೆಗಳಲ್ಲಿ ಬೇರೂರಿರುವ ನೈತಿಕ ಅದಃಪತನಕ್ಕೆ ಹಿಡಿದ ಕನ್ನಡಿ. ಒಬ್ಬ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (AEE) ದರ್ಜೆಯ ಅಧಿಕಾರಿಯ ಮಾಸಿಕ ವೇತನ ಮತ್ತು ಸಮಾಜದಲ್ಲಿ ಅವರಿಗಿರುವ ಘನತೆಯನ್ನು ಲೆಕ್ಕ ಹಾಕಿದರೆ, ಅವರು ಕೇವಲ ಐದು ಸಾವಿರ ರೂಪಾಯಿಗಾಗಿ ಕೈಯೊಡ್ಡುವುದು ಅರಗಿಸಿಕೊಳ್ಳಲಾಗದ ಸತ್ಯ. ಕಡೂರು ಮೆಸ್ಕಾಂ ವಿಭಾಗದ ಎಇಇ ತಿರುಪತಿ ನಾಯ್ಕ ಎಂಬ…
ಮುಂದೆ ಓದಿ..
