ಅತ್ತೆ-ಸೊಸೆಯ ಜಗಳದ ಕಥೆಗಳ ನಡುವೆ ಒಂದು ಅಪರೂಪದ “ಜೀವದಾನ”: ನಾವು ಕಲಿಯಬೇಕಾದ ಪಾಠಗಳು..
ಅತ್ತೆ-ಸೊಸೆಯ ಜಗಳದ ಕಥೆಗಳ ನಡುವೆ ಒಂದು ಅಪರೂಪದ “ಜೀವದಾನ”: ನಾವು ಕಲಿಯಬೇಕಾದ ಪಾಠಗಳು.. ನಮ್ಮ ಸಮಾಜದಲ್ಲಿ ‘ಅತ್ತೆ-ಸೊಸೆ’ ಎನ್ನುವ ಸಂಬಂಧವನ್ನು ನೆನೆದ ಕೂಡಲೇ ಕಣ್ಣಮುಂದೆ ಬರುವುದು ಕೌಟುಂಬಿಕ ಕಲಹ, ಸಣ್ಣಪುಟ್ಟ ವಿಚಾರಗಳಿಗೂ ಸಿಡಿಯುವ ಕೋಪ ಅಥವಾ ವೈಮನಸ್ಸಿನ ಚಿತ್ರಣಗಳು. ದಿನನಿತ್ಯದ ಸಿನೆಮಾ ಅಥವಾ ಧಾರಾವಾಹಿಗಳು ಕೂಡ ಈ ಸಂಬಂಧದ ನಡುವೆ ಕೇವಲ ದ್ವೇಷದ ವಿಷಬೀಜಗಳನ್ನೇ ಬಿತ್ತಿ, ಒಂದು ‘ಸಿದ್ಧಮಾದರಿ’ಯನ್ನು (Stereotype) ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಿವೆ. ಆದರೆ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾಳನೂರು ಎಂಬ ಗಡಿಗ್ರಾಮದ ಈ ಘಟನೆಯು ಆ ಎಲ್ಲಾ ಕಲ್ಪನೆಗಳನ್ನು ಧೂಳೀಪಟ ಮಾಡಿದೆ. ತನ್ನ ರಕ್ತಸಂಬಂಧಿಯಲ್ಲದಿದ್ದರೂ, ಮನೆಯ ಬೆಳಗಾಗಿ ಬಂದ ಸೊಸೆ ಬಸಮ್ಮ ಆ ಮನೆಯ ನಂದಾದೀಪದಂತೆ ಬೆಳಗಲಿ ಎಂದು ಹಾರೈಸಿ, ತನ್ನ ಒಂದು ಕಿಡ್ನಿಯನ್ನೇ ದಾನ ಮಾಡಿದ ಶಾಂತಾಬಾಯಿ ಅವರ ಈ ಕಥೆ, ಇಂದಿನ ಸ್ವಾರ್ಥಪರ ಜಗತ್ತಿಗೆ ಒಂದು ಸಾರ್ಥಕ ಮಾನವೀಯ ಪಾಠವಾಗಿದೆ. ರಕ್ತಸಂಬಂಧ…
ಮುಂದೆ ಓದಿ..
