ರಸ್ತೆಯ ಬದಿಯಲ್ಲೇ ಹೊಂಚು ಹಾಕಿದ್ದ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಅಮಾಯಕ ಜೀವ…
ರಸ್ತೆಯ ಬದಿಯಲ್ಲೇ ಹೊಂಚು ಹಾಕಿದ್ದ ಸಾವು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಅಮಾಯಕ ಜೀವ… ಬೆಳಿಗ್ಗೆ ಮನೆಯಿಂದ ಹೊರಡುವ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಒಂದು ನಂಬಿಕೆ ಇರುತ್ತದೆ; ಅದೆಂದರೆ ಸಂಜೆ ಕೆಲಸ ಮುಗಿಸಿ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬುದು. ಆದರೆ ಇಂದು ನಮ್ಮ ನಾಡಿನ ರಸ್ತೆಗಳು ಆ ನಂಬಿಕೆಯನ್ನು ಅಣಕಿಸುವಂತಿದೆ. ಶ್ರವಣಬೆಳಗುಳ ಹೋಬಳಿಯ ಚಿಕ್ಕಬಿಳ್ತಿ ಗ್ರಾಮದಲ್ಲಿ ನಡೆದ ಕರುಣಾಜನಕ ಘಟನೆಯು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಆದೇಶಿಸುವ ಅಧಿಕಾರಿಗಳ ಅಸಡ್ಡೆಯಿಂದಾಗಿ, ಇಂದು ಒಂದು ಬಡ ಕುಟುಂಬ ತನ್ನ ಆಧಾರಸ್ತಂಭವನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದೆ. ನಿರ್ಲಕ್ಷ್ಯದ ಅನಾಹುತ: ತೆರೆದಿದ್ದ ಸಾವಿನ ಬಾಗಿಲು… ಅಭಿವೃದ್ಧಿಯ ಹೆಸರಿನಲ್ಲಿ ನಡೆಸುವ ಕೆಲಸಗಳು ಜನರಿಗೆ ಅನುಕೂಲವಾಗಬೇಕಿತ್ತು, ಆದರೆ ಇಲ್ಲಿ ಅದು ಸಾವಿನ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ರಸ್ತೆಯ ಪಕ್ಕದಲ್ಲೇ ಇದ್ದ ನೀರು ಸರಬರಾಜು ಚೇಂಬರ್‌ನ ಸ್ಲ್ಯಾಬ್ ಅನ್ನು ಯಾವುದೋ ದುರಸ್ತಿ ಕೆಲಸಕ್ಕಾಗಿ ತೆಗೆದಿದ್ದ…
ಮುಂದೆ ಓದಿ..
