ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೆರೆ – 11 ದಿನಗಳಲ್ಲಿ 4.60 ಲಕ್ಷ ಮಂದಿ ವೀಕ್ಷಣೆ
ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೆರೆ – 11 ದಿನಗಳಲ್ಲಿ 4.60 ಲಕ್ಷ ಮಂದಿ ವೀಕ್ಷಣೆ ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿ ನವೆಂಬರ್ 27ರಿಂದ ಆಯೋಜಿಸಲಾಗಿದ್ದ 11 ದಿನಗಳ ಪುಷ್ಪ ಪ್ರದರ್ಶನಕ್ಕೆ ಭಾನುವಾರ (ಡಿ.7) ಅಧಿಕೃತವಾಗಿ ತೆರೆ ಬಿದ್ದಿದೆ. ಪ್ರದರ್ಶನದ ಕೊನೆಯ ದಿನ ರಜಾ ಪ್ರಯುಕ್ತ ಸಾವಿರಾರು ಮಂದಿ ಭೇಟಿ ನೀಡಿದ್ದು, ಈ ಬಾರಿ ನಿರೀಕ್ಷೆ ಮೀರಿ ಜನಪ್ರಿಯತೆ ಕಂಡು ಬಂದಿದೆ. ಪ್ರದರ್ಶನದ ಆಯೋಜಕರ ಮಾಹಿತಿ ಪ್ರಕಾರ, ಹನ್ನೊಂದು ದಿನಗಳಲ್ಲಿ 4.60 ಲಕ್ಷಕ್ಕೂ ಹೆಚ್ಚು ಮಂದಿ ಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದು, ಪ್ರವೇಶ ಶುಲ್ಕದ ರೂಪದಲ್ಲಿ 55 ಲಕ್ಷ ರೂ.ಕ್ಕೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ವಯೋಮಾನದವರಿಗೂ ಆಕರ್ಷಕವಾಗಿದ್ದ ಪಾರ್ಕ್ ಪ್ರದರ್ಶನವು ಕುಟುಂಬ ಸೇರಿದಂತೆ ಭೇಟಿ ನೀಡಿದವರಿಗೆ ವಿಶೇಷ ಅನುಭವ ನೀಡಿತು. ಪ್ರಮುಖ ಆಕರ್ಷಣೆಗಳು…
ಮುಂದೆ ಓದಿ..
