ಹಾಸನ ಉಪ ತಹಶೀಲ್ದಾರ್ ಆತ್ಮಹತ್ಯೆ: ವ್ಯವಸ್ಥೆಯ ಒಳಗಿನ ಮೌನ ರೋಧನೆಯೇ ಈ ನಾಲ್ಕು ಪುಟಗಳ ಪತ್ರ?..
ಹಾಸನ ಉಪ ತಹಶೀಲ್ದಾರ್ ಆತ್ಮಹತ್ಯೆ: ವ್ಯವಸ್ಥೆಯ ಒಳಗಿನ ಮೌನ ರೋಧನೆಯೇ ಈ ನಾಲ್ಕು ಪುಟಗಳ ಪತ್ರ?.. ನಮ್ಮ ಸಮಾಜದಲ್ಲಿ ಸರ್ಕಾರಿ ಉದ್ಯೋಗ ಎನ್ನುವುದು ಕೇವಲ ಜೀವನೋಪಾಯದ ಮಾರ್ಗವಲ್ಲ; ಅದೊಂದು ಭದ್ರತೆಯ ಕೋಟೆ, ಅಧಿಕಾರ ಮತ್ತು ಗೌರವದ ಹಣೆಪಟ್ಟಿ. ಈ “ಗೌರವಾನ್ವಿತ” ವಲಯದೊಳಗೆ ಪ್ರವೇಶ ಪಡೆಯುವುದೇ ಅನೇಕರ ಜೀವನದ ಪರಮ ಗುರಿಯಾಗಿರುತ್ತದೆ. ಆದರೆ, ಈ ಉನ್ನತ ಹುದ್ದೆಗಳ ಹೊಳಪಿನ ಹಿಂದೆ, ಸಾರ್ವಜನಿಕವಾಗಿ ಕಾಣಿಸದ ಹತ್ತಾರು ಒತ್ತಡಗಳು, ಕಾಣದ ಕೈಗಳ ಹಸ್ತಕ್ಷೇಪ ಮತ್ತು ಮಾನಸಿಕ ಸಂಕಟಗಳು ಅಡಗಿರುತ್ತವೆ ಎಂಬುದು ಕಟು ಸತ್ಯ. ಮೇ 31, 2026ರಂದು ಹಾಸನದಲ್ಲಿ ನಡೆದ ಉಪ ತಹಶೀಲ್ದಾರ್ ತಿಮ್ಮಯ್ಯ ಅವರ ಆತ್ಮಹತ್ಯೆಯ ಘಟನೆಯು ಈ ಹೊಳಪಿನ ಹಿಂದಿರುವ ಕರಾಳ ಮುಖವನ್ನು ನಮ್ಮ ಮುಂದಿಟ್ಟಿದೆ. ಒಬ್ಬ ಉನ್ನತ ಶ್ರೇಣಿಯ ಅಧಿಕಾರಿಯು ತನ್ನ ಬದುಕನ್ನು ಕೊನೆಗಾಣಿಸಿಕೊಳ್ಳುವಂತಹ ತುತ್ತತುದಿಯ ನಿರ್ಧಾರಕ್ಕೆ ಬಂದಿದ್ದಾರೆಯೆಂದರೆ, ಆ ಹಂತಕ್ಕೆ ಅವರನ್ನು ತಳ್ಳಿದ ಆಡಳಿತಾತ್ಮಕ ಅಥವಾ…
ಮುಂದೆ ಓದಿ..
