ಯಲಹಂಕದಲ್ಲಿ ಎಂ.ಡಿ.ಎಂ.ಎ ವಶ – ಮನೆಮಾಲಕಿಗೆ ಪ್ರಕರಣ ದಾಖಲಾತಿ
ಬೆಂಗಳೂರು, 21 ಆಗಸ್ಟ್ 2025ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಸ್ತೆಗಿರಿ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳಿಂದ ಭಾರಿ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿ ಪ್ರಕಾರ, ವಿದ್ಯಾರಣ್ಯಪುರ ಅಂಚೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬ್ರಿಟ್ ಮತ್ತು ಕೋಡು ಎಂಬ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಇವರ ಬಳಿಯಿಂದ 700 ಗ್ರಾಂ ತೂಕದ, ಸುಮಾರು 70 ಲಕ್ಷ ರೂ. ಮೌಲ್ಯದ ಎಂ.ಡಿ.ಎಂ.ಎ (ಎಕ್ಸ್ಟಸಿ) ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧವಾಗಿ NDPS ಕಾಯ್ದೆ 1985ರ ಸೆಕ್ಷನ್‌ಗಳು 8(c), 21, 22(c) ಹಾಗೂ Foreigners Act 1946ರ ಸೆಕ್ಷನ್ 14 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ವಿದೇಶಿ ಪ್ರಜೆಗಳಿಗೆ ಬಾಡಿಗೆ ಮನೆಯನ್ನು ನೀಡಿದ ಮನೆಮಾಲಕಿ ಜಯಶ್ರೀ ಅಲಿಯಾಸ್ ಜಯಮ್ಮ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಅವರು FRRO ಅಧಿಕಾರಿಗಳಿಂದ ಪಡೆದ ಸಿ-ಫಾರ್ಮ್ ಮಾಹಿತಿಯನ್ನು ಸ್ಥಳೀಯ…
ಮುಂದೆ ಓದಿ..
