ಗೋದ್ರೇಜ್ ಆನಂದ ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ವೈರ್ ಕಳ್ಳತನ
ಬೆಂಗಳೂರು ಆಗಸ್ಟ್ 16 2025 ಯಲಹಂಕ ನ್ಯೂಟೌನ್‌ನ ಜಲದಿ ಎಲೆಕ್ಟ್ರಿಕಲ್ (ಜಿ.ಇ. ಪ್ರಾಜೆಕ್ಟ್) ಕಂಪನಿಯಲ್ಲಿ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ದೂರು ಆಧಾರವಾಗಿ ಬಾಗಲೂರು ಸಮೀಪದ ಗೋದ್ರೇಜ್ ಆನಂದ ಫೇಸ್–2 ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ಎಲೆಕ್ಟ್ರಿಕಲ್ ವೈರ್ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಬಿ ಮತ್ತು ಸಿ ಟವರ್‌ಗಳ 2ನೇ ಮಹಡಿಯಲ್ಲಿ (ಪಾಟ್ ನಂ. 203 ಮತ್ತು 209) ಕೆಲಸಕ್ಕಾಗಿ ಇಟ್ಟಿದ್ದ ಕಾಪರ್ ವೈರ್ ಕಾಯಿಲ್ ಬಾಕ್ಸ್‌ಗಳನ್ನು ಆಗಸ್ಟ್ 6ರಂದು ಸಂಜೆ ಲಾಕ್ ಹಾಕಿ ಬಿಟ್ಟು ಹೋಗಿದ್ದರು. ಆದರೆ, ಆಗಸ್ಟ್ 7ರಂದು ಬೆಳಿಗ್ಗೆ ಬಂದು ನೋಡಿದಾಗ ಲಾಕ್ ಮುರಿದು ಕಾಯಿಲ್‌ಗಳು ಕಳ್ಳತನವಾಗಿರುವುದು ಪತ್ತೆಯಾಯಿತು. ಕಂಪನಿಯವರು ಕಳ್ಳತನವಾದ ಸಾಮಗ್ರಿಗಳ ನಿಖರ ಪ್ರಮಾಣ ಮತ್ತು ಮೌಲ್ಯದ ಮಾಹಿತಿಯನ್ನು ನಂತರ ನೀಡುವುದಾಗಿ ತಿಳಿಸಿದ್ದಾರೆ. ಪ್ರಕರಣ ಬಾಗಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮುಂದೆ ಓದಿ..
