ಯುವತಿಗೆ ಉದ್ಯೋಗವನ್ನೆಂದು ಕರೆಸಿ ಮಾನಸಿಕ ಹಿಂಸೆ: ಮಧ್ಯವಯಸ್ಕನ ವಿರುದ್ಧ ಪೊಲೀಸ್ ದೂರು
ಬೆಂಗಳೂರು, ಜುಲೈ 31:2025ಉದ್ಯೋಗವನ್ನೆಂಬ ನೆಪದಲ್ಲಿ ಯುವತಿಗೆ ಸ್ನೇಹಸ್ಥಾಪನೆ ಮಾಡಿ, ನಂತರ ಅಸಭ್ಯ ಸಂದೇಶಗಳು ಹಾಗೂ ವಿಡಿಯೋ ಕಾಲ್‌ಗಳ ಮೂಲಕ ಮಾನಸಿಕ ಹಿಂಸೆ ನೀಡಿದ ಘಟನೆ ನಗರದ ಯಲಹಂಕ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ವಿವರಗಳ ಪ್ರಕಾರ, ಪಿರ್ಯಾದಿದಾರೆಯು ಕೇರ್‌ಟೇಕರ್ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕವಿತಾ ಎಂಬ ಮಹಿಳೆ ಮೂಲಕ ಶವಿತಾ ಎಂಬ ಏಜೆನ್ಸಿ ನಿರ್ವಾಹಕೆಯ ಪರಿಚಯವಾಗಿದ್ದು, ಅವರು ಜಿಗಣಿಯಲ್ಲಿ ತೋಟದ ಮನೆಯಲ್ಲಿ ಉದ್ಯೋಗದ ಅವಕಾಶವಿದೆ ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಶವಿತಾ ಅವರು ಪ್ರಸಾದ್ ಎಂಬ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿ, ಅವರ ಸಂಪರ್ಕದಲ್ಲಿರಲು ಹೇಳಿದ್ದಾರೆ. ಪ್ರಸಾದ್ ನಂತರ ಯುವತಿಗೆ ಸಂಪರ್ಕಿಸಿ, ತೋಟದ ಮನೆಯಲ್ಲಿ ತಿಂಗಳಿಗೆ ₹30,000 ಸಂಬಳದ ಉದ್ಯೋಗ ನೀಡುತ್ತೇನೆ ಎಂದಿದ್ದರು. ಆದರೆ, ದಿನಾಂಕ 20.07.2025 ನಂತರ ಅವರು ಯುವತಿಗೆ ನಿರಂತರವಾಗಿ ಅಸಭ್ಯ ಸಂದೇಶಗಳು, ವಿಡಿಯೋ…
ಮುಂದೆ ಓದಿ..
