ಬೆಂಗಳೂರು ನಗರದಲ್ಲಿ ಆಸ್ತಿ ವಿವಾದ – ವ್ಯಾಜ್ಯ ಮತ್ತು ತನಿಖೆಗೆ ದೂರು
ಬೆಂಗಳೂರು, ಆಗಸ್ಟ್ 5: 2025ನಗರದ ಉತ್ತರ ಭಾಗದ ರಾಜಮಳಯ್ಯನಗರದಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ಗಂಭೀರ ವಿವಾದ ಹಾಗೂ ಕಾನೂನು ವ್ಯಾಜ್ಯ ಉಂಟಾಗಿದೆ. ಈ ಸಂಬಂಧ ಜಗನ್ನಾಥ್ ಎಂಬವರು ಕೊಡುಗೆಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪಿರ್ಯಾದಿದಾರ ಜಗನ್ನಾಥ್ (ವಯಸ್ಸು 49), ಅವರು ತಮ್ಮ ಹೆಸರಿನಲ್ಲಿ ಇರುವ ರಾಜಮಳಯ್ಯನಗರದ ಖಾತೆ ನಂ. 38, ಪ್ರಾಪರ್ಟಿ ನಂ. 6 ಮತ್ತು 1ಎ—ಒಟ್ಟು 3358 ಚದರ ಅಡಿ ಆಸ್ತಿಯನ್ನು ಹಿಂದೆ ಶುದ್ಧ ಕ್ರಯದ ಮೂಲಕ ಖರೀದಿಸಿಕೊಂಡಿದ್ದರು. ಈ ಆಸ್ತಿ ಈಗಲೂ ಅವರ ಸಂಪೂರ್ಣ ಸ್ವಾಧೀನದಲ್ಲಿದ್ದು, ಅವರು ತಾವು ಕಂದಾಯ ಪಾವತಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಇತ್ತೀಚೆಗೆ ಎನ್.ರಾಜಣ್ಣ ಎಂಬವರು ಈ ಆಸ್ತಿ ಸಂಬಂಧ “ಅಗ್ರಿಮೆಂಟ್ ಆಫ್ ಸೇಲ್” ಮಾಡಿಕೊಂಡಿದ್ದಾಗಿ ದೂರಿದ್ದು, ಈ ಆಧಾರದ ಮೇಲೆ ಅವರು ಸಿವಿಲ್ ಕೇಸು (ಕೇಸು ನಂ. 2192/2025) ದಾಖಲಿಸಿದ್ದಾರೆ. ಈ ಅರ್ಜಿಯಲ್ಲಿ ಜಗನ್ನಾಥ್ ಅವರ ಅಣ್ಣನಾದ ಬಾಬು ಕುಂಬಾರ್…
ಮುಂದೆ ಓದಿ..
