ಅಂಕಣ 

ತಾಲಿಬಾನ್ ಮಂತ್ರಿಯ ಆದೇಶ…….

Taluknewsmedia.com

Taluknewsmedia.comತಾಲಿಬಾನ್ ಮಂತ್ರಿಯ ಆದೇಶ……. ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ…. ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ” ಭಯೋತ್ಪಾದಕರು ” ಎಂದು ಕರೆಯಲ್ಪಡುತ್ತಿದ್ದ ತಾಲಿಬಾನ್ ಎಂಬ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿರುವಾಗ, ಅದರ ಜೊತೆಗೆ ಸ್ನೇಹ ಬೆಳೆಸಿಕೊಂಡು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಸಿದ್ಧಾಂತಕ್ಕೆ ಬಲಿಯಾಗಿ, ಆ ತಾಲಿಬಾನಿ ಸರ್ಕಾರದ ಮಂತ್ರಿಯೊಬ್ಬ ನಮ್ಮದೇ ಸರ್ಕಾರದ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಪತ್ರಿಕಾಗೋಷ್ಠಿ ನಡೆಸುವಾಗ, ಅಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿ ತಾನು ಪತ್ರಿಕಾಗೋಷ್ಠಿ ನಡೆಸುವ ಹಂತಕ್ಕೆ ಬಂದುಬಿಡುತ್ತದೆ….. ಛೇ ಛೇ ಛೇ……. ತೀರಾ ಅನ್ಯಾಯ, ಅಸಹಾಯಕ ಮತ್ತು ನಾಚಿಕೆಗೇಡಿನ ಸಂಗತಿ….. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದ ಯಾವ ನಾಗರಿಕ ಮನುಷ್ಯನು ಸಹ ಅಲ್ಲೊಂದು ಸರ್ಕಾರವಿದೆ ಎಂದು…

ಮುಂದೆ ಓದಿ..
ಅಂಕಣ 

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು……

Taluknewsmedia.com

Taluknewsmedia.comಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು…… ಭಾರತದ ವಿದೇಶ ( ಫಾರಿನ್ ) ಗೋವಾ,ಕಡಲ ತೀರದ ಪರ್ಯಾಯ ದ್ವೀಪ ಗೋವಾ,ಮೋಜು, ಮಸ್ತಿ, ಮನರಂಜನೆ, ಕ್ಯಾಸಿನೋಗಳ ಪ್ರದೇಶ ಗೋವಾ,ದೇಶದ ಅತ್ಯಂತ ದುಬಾರಿ ಬೆಲೆಯ ಪ್ರವಾಸಿ ಕೇಂದ್ರ ಗೋವಾ,ಭ್ರಷ್ಟ, ದುಷ್ಟ ದುಡ್ಡಿನ ಪ್ರದರ್ಶನದ ಮಜಾ ನಗರಿ ಗೋವಾ,ಪ್ರವಾಸಿಗರ ರಜಾ ದಿನಗಳ ಸುಂದರ ತಾಣ ಗೋವಾ,ಭಾರತದ ಸುರಕ್ಷತೆಯ, ಸ್ವಚ್ಛ ನಗರಗಳಲ್ಲಿ ಒಂದು ಗೋವಾ, ಪೋರ್ಚುಗೀಸರಿಂದ ಸುಮಾರು 500 ವರ್ಷಗಳಷ್ಟು ದೀರ್ಘಕಾಲದವರೆಗೆ ಆಡಳಿತಕ್ಕೊಳಪಟ್ಟ ಮತ್ತು ಈಗಲೂ ಅದರ ಕುರುಹುಗಳ ಸಂಕೇತವಾಗಿ ಉಳಿದಿರುವ ಹೆರಿಟೇಜ್ ಸಿಟಿ ಗೋವಾ,ಸಮುದ್ರದ ಜಲಚರಗಳ ಖಾದ್ಯದ, ಮದ್ಯಗಳ ಪಾನಪ್ರಿಯರ ಸ್ವರ್ಗ ಗೋವಾ,ಸಿನಿಮಾ, ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಉತ್ಸವದ ನಗರ ಗೋವಾ. ಇಂತಹ ಗೋವಾದಲ್ಲಿ ಅಂತರಾಷ್ಟ್ರೀಯ ದಿವ್ಯಾಂಗ ಚೇತನರ ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಇದೇ ಅಕ್ಟೋಬರ್ ಒಂಬತ್ತರಿಂದ ಹನ್ನೆರಡರವರೆಗೆ ( 9th to 12th ) ಎಂಟರ್ಟೈನ್ಮೆಂಟ್ ಸೊಸೈಟಿ…

ಮುಂದೆ ಓದಿ..
ಅಂಕಣ 

ತ್ರಿಭಾಷಾ ಸೂತ್ರ ಎಷ್ಟು ಸರಿ……..ದ್ವಿಭಾಷಾ ಸೂತ್ರ ಉತ್ತಮವೇ……

Taluknewsmedia.com

Taluknewsmedia.comತ್ರಿಭಾಷಾ ಸೂತ್ರ ಎಷ್ಟು ಸರಿ……..ದ್ವಿಭಾಷಾ ಸೂತ್ರ ಉತ್ತಮವೇ…… ಕನ್ನಡ : ರಾಜ್ಯ ಭಾಷೆ….ಹಿಂದಿ : ರಾಷ್ಟ್ರ ಭಾಷೆ….ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ….. ಈ ಭಾಷಾ ಸೂತ್ರ ಸರಿಯೇ ?ಇದು ಸಂವಿಧಾನಾತ್ಮಕವೇ ?ಇದು ವಾಸ್ತವವೇ ?ಪ್ರಾಯೋಗಿಕವೇ ?ಕನ್ನಡದ ಹಿತಕ್ಕೆ ಇದು ಒಳ್ಳೆಯದೇ ಅಥವಾ ಮಾರಕವೇ ?ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಹಿತವೇ ಅಥವಾ ಅಪಾಯಕಾರಿಯೇ ?ಭಾಷಾ ಅಸ್ಮಿತೆ ಮತ್ತು ದೇಶದ ಅಸ್ಮಿತೆಗೆ ಇದು ಪೂರಕವೇ ವಿರುದ್ಧವೇ ?ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಮರಸ್ಯಕ್ಕೆ ಉಪಕಾರವೇ ? ವಿನಾಶವೇ ?…. ನೀವು ಅಪ್ಪಟ ಕನ್ನಡ ಅಭಿಮಾನಿಗಳೇ ಆಗಿರಲಿ,ನೀವು ಭಾವುಕ ದೇಶಭಕ್ತರೇ ಆಗಿರಲಿ,ನೀವು ಹಿಂದಿ ಭಾಷೆಯ ಪಂಡಿತರೇ ಆಗಿರಲಿ,ನೀವು ಸಹಜ ಸ್ವಾಭಾವಿಕ ಸಾಮಾನ್ಯ ಪ್ರಜೆಗಳೇ ಆಗಿರಲಿ ಮತ್ತು ಏನೇ ಆಗಿರಲಿ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕಿಕೊಂಡಾಗ ಮಾತ್ರ ಈ…

ಮುಂದೆ ಓದಿ..
ಅಂಕಣ 

ಬಸವ ಸಂಸ್ಕೃತಿ ಅಭಿಯಾನ……..

Taluknewsmedia.com

Taluknewsmedia.comಬಸವ ಸಂಸ್ಕೃತಿ ಅಭಿಯಾನ…….. ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ಗರಿಗೆದರಿದ ಲಿಂಗಾಯತ ಧರ್ಮ ಸುದ್ದಿಯಲ್ಲಿ…… ತುಂಬಾ ಹಳೆಯ ಬೇಡಿಕೆಯಾದರೂ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ. ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ…. ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿ ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು “ 12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯಯರನ್ನು ನಿಕೃಷ್ಟವಾಗಿ…

ಮುಂದೆ ಓದಿ..
ಅಂಕಣ 

ಕುರ್ಚಿಗಾಗಿ ಕಿತ್ತಾಟ…….

Taluknewsmedia.com

Taluknewsmedia.comಕುರ್ಚಿಗಾಗಿ ಕಿತ್ತಾಟ……. ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ….. ಸಮಾಜದ ನಡೆ ದುರಂತದ ಕಡೆ……. ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ…….. ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ. ನಿಮಗೆ ತಿಳಿದಿರಬಹುದು,ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೃಹ…

ಮುಂದೆ ಓದಿ..
ಅಂಕಣ 

ತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ…….

Taluknewsmedia.com

Taluknewsmedia.comತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ……. ಅಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ….. ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿದ್ದ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ….. ಅಕ್ಟೋಬರ್ 16 ” ವಿಶ್ವ ಆಹಾರ ದಿನ “….. 1945 ರಲ್ಲಿ ವಿಶ್ವಸಂಸ್ಥೆಯ ” Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ…

ಮುಂದೆ ಓದಿ..
ಸುದ್ದಿ 

ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..

Taluknewsmedia.com

Taluknewsmedia.comಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ…….. ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಮೂಲಭೂತವಾದ ಸಂಪೂರ್ಣವಾಗಿ ತನ್ನ ನೆಲೆಯನ್ನು ವಿಸ್ತರಿಸುವ ಮುನ್ನ ಕ್ರಿಯೆ – ಪ್ರತಿಕ್ರಿಯೆಗಳ ಸುತ್ತ ಒಂದು ಸುತ್ತು……. ವಿರೋಧಿಗಳನ್ನುಕೆಲವರು ಬಾಂಬ್ ಹಾಕಿ ಉಡಾಯಿಸುತ್ತಾರೆ,ಕೆಲವರು ಬಂದೂಕಿನಿಂದ ಗುರಿಯಿಟ್ಟು ಹೊಡೆಯುತ್ತಾರೆ,ಕೆಲವರು ಮಚ್ಚು ಲಾಂಗುಗಳನ್ನು ಬೀಸುತ್ತಾರೆ,ಕೆಲವರು ರಾಡು, ದೊಣ್ಣೆಗಳಿಂದ ದಾಳಿ ಮಾಡುತ್ತಾರೆ,ಕೆಲವರು ಚಾಕುವಿನಿಂದ ಚುಚ್ಚುತ್ತಾರೆ,ಕೆಲವರು ಕಲ್ಲು ಬೀಸುತ್ತಾರೆ,ಕೆಲವರು ಚಪ್ಪಲಿ ಎಸೆಯುತ್ತಾರೆ, ಕೆಲವರು ಪೇಪರ್ ಹರಿದು ಹಾಕುತ್ತಾರೆ,ಕೆಲವರು ಧಿಕ್ಕಾರ ಕೂಗುತ್ತಾರೆ, ಕೆಲವರು ಮೌನವಾಗಿ ಪ್ರತಿಭಟಿಸುತ್ತಾರೆ,ಕೆಲವರು ಕಾನೂನು ಕ್ರಮ ಕೈಗೊಳ್ಳುತ್ತಾರೆ,ಕೆಲವರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತಾರೆ,ಕೆಲವರು ಸ್ವತಃ ಪತ್ರ ಬರೆದು ಅಥವಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,ಕೆಲವರು ಸಂಬಂಧಪಟ್ಟವರಿಗೆ ದೂರು ನೀಡುತ್ತಾರೆ,ಕೆಲವರು ಎಲ್ಲಾ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ,ಕೆಲವರು ತಮಗೆ ಸಂಬಂಧವೇ ಇಲ್ಲದಂತೆ ದಿವ್ಯ ಮೌನಕ್ಕೆ…

ಮುಂದೆ ಓದಿ..
ಅಂಕಣ 

ಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ…….

Taluknewsmedia.com

Taluknewsmedia.comಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ……. ಒಂದು ಸಲಹೆ ಮತ್ತು ಮನವಿ….. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ, ಮೌಲ್ಯಗಳ, ಮಾತಿನ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಪ್ರಯತ್ನ…… ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?……………….. ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ/ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. ನಮ್ಮ ಅತ್ಯಂತ ಖಾಸಗಿ ಆರೋಗ್ಯದಿಂದ – ವಿಶ್ವದ ಎಲ್ಲಾ ಆಸಕ್ತಿದಾಯಕ ವಿಷಯಗಳನ್ನೂ ಚರ್ಚಿಸುತ್ತೇವೆ. ನಮ್ಮ ಆರ್ಥಿಕ ಸಂಕಷ್ಟ, ನೈತಿಕ/ಅನೈತಿಕ ಸಂಬಂಧಗಳು, ಇತರರ ಬಗ್ಗೆ ನಮಗಿರುವ ಪ್ರೀತಿ/ದ್ವೇಷ/ಅಸೂಯೆ ಎಲ್ಲವನ್ನೂ ಮಾತನಾಡುತ್ತೇವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲವೂ ನಮ್ಮ ನಮ್ಮ ಆಸಕ್ತಿಗೆ ಅನುಗುಣವಾಗಿ ಸಂಭಾಷಣೆ ಇರುತ್ತದೆ. ಕೆಲವೊಮ್ಮೆ…

ಮುಂದೆ ಓದಿ..
ಅಂಕಣ 

ಮಹರ್ಷಿ ವಾಲ್ಮೀಕಿ…..

Taluknewsmedia.com

Taluknewsmedia.comಮಹರ್ಷಿ ವಾಲ್ಮೀಕಿ….. ರಾಮಾಯಣದ ಸೃಷ್ಟಿಕರ್ತರ ಜಯಂತಿಯ ಸಂದರ್ಭದಲ್ಲಿ……… ಈ ದಿನ ಯಾರನ್ನು ಸ್ಮರಿಸೋಣ…………, ರಾಮ – ಲಕ್ಷ್ಮಣ – ಭರತ – ಶತ್ರುಜ್ಞ – ರಾವಣ – ಸೀತೆ – ಆಂಜನೇಯ – ವಾಲಿ – ಸುಗ್ರೀವ – ವಿಭೀಷಣ – ದಶರಥ – ಶಬರಿ – ಶ್ರವಣ ಕುಮಾರ……. ಹೀಗೆ ಸಾಗುವ ಪಾತ್ರಗಳೋ…. ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ, ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ…….. ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ…. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ, ಭರತ, ಶತೃಘ್ಞರಂತ ಆದರ್ಶ…

ಮುಂದೆ ಓದಿ..
ಅಂಕಣ 

ಆ ನೆನಪು…….

Taluknewsmedia.com

Taluknewsmedia.comಆ ನೆನಪು……. ನೆನಪಿನ ರಣಹದ್ದೊಂದುಬಸವಳಿದ ಹೃದಯವನ್ನುಮತ್ತೆ ಮತ್ತೆ ಕುಕ್ಕುತ್ತಲಿದೆ, ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ,ಶೌಚದ ಐಕಾಂತದಲ್ಲಿ,ಬೆಳಗಿನ ವಾಯು ವಿಹಾರದಲ್ಲಿ,ಉಪಹಾರದ ಎಲೆಯಲ್ಲಿ, ಚೂಪಾದ ಉದ್ದನೆಯ ಕೊಕ್ಕಿನಲ್ಲಿ ಕುಟುಕುತ್ತಾ ಮನಸ್ಸು ಹಿಂಡುತ್ತಿದೆ, ಸೂಜಿ ಮಲ್ಲಿಗೆಯ ಚೆಲುವಿನ,ಸಾಸಿವೆಯಷ್ಟು ಸಣ್ಣದಾದ,ಬೆಣ್ಣೆಯಷ್ಟು ಮೃದುವಾದ,ಹೃದಯಯನ್ನು ನೆನಪೆಂಬ ರಣಹದ್ದು ಗಟ್ಟಿಯಾದ ತೀಕ್ಷ್ಣವಾದ ಕೊಕ್ಕಿನಿಂದ ಇರಿಯುತ್ತಿದೆ, ಘಾಸಿಗೊಂಡ ಹೃದಯವೆಂದು ಪಾಪ ಅದಕ್ಕೇನು ಗೊತ್ತು.ಬಗೆದು ತಿನ್ನುವುದು ಅದರ ಸಹಜ ಧರ್ಮ, ಇಡೀ ದಿನದ ಕೆಲಸದಲ್ಲಿ,ಇಳಿ ಸಂಜೆಯ ನೋಟದಲ್ಲಿ,ಹಾಸಿಗೆಯ ಅನಾಥ ಪ್ರಜ್ಞೆಯಲ್ಲಿ,ಚುಚ್ಚುತ್ತಿದೆ ನೆನಪಿನ ರಣಹದ್ದು, ಹೇಳಲಾಗದು,ಹೇಳದಿರಲಾಗದು,ಸಹಿಸಲಾಗದು,ಎದುರಿಸಲಾಗದ,ಅಮಾಯಕ ಅಸಹಾಯಕ ಹೃದಯವದು, ವಿರಹದ ವೇದನೆಯೋ,ಪ್ರೀತಿಯ ವಂಚನೆಯೋ,ನಂಬಿಕೆಯ ದ್ರೋಹವೋ,ಆಂತರ್ಯದ ಬೇಗುದಿಯೋ,ಒಡಲಾಳದ ಸಂಕಟವೋ,ನೆನಪಿನ ರಣಹದ್ದಾಗಿ ಮತ್ತೆ ಮತ್ತೆ ಕುಕ್ಕುತ್ತಲಿದೆ. ಹೊರಬರದ ದಾರಿ ಕಾಣದೆ,ಒಳಗಿರುವ ಜಾಗ ಅರಿಯದೆ,ಸಂಕಟದಿಂದ ವಿಲ ವಿಲನೆ ಒದ್ದಾಡುತ್ತಾ, ಕೆಲವೊಮ್ಮೆ ಕಣ್ಣೀರಾಗಿ,ಒಮ್ಮೊಮ್ಮೆ ಆಕ್ರೋಶವಾಗಿ,ಆಗೊಮ್ಮೆ ಸಮಾಧಾನವಾಗಿಮತ್ತೊಮ್ಮೆ ಹುಚ್ಚುಚ್ಚಾಗಿ,ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಹರಿದಾಡುತ್ತಿದೆ. ನೆನಪಿನ ರಣಹದ್ದನ್ನು ಓಡಿಸಲಾಗದೆ ,ನೋವನ್ನು ಅನುಭವಿಸುತ್ತಾ,ನಿಮ್ಮೊಂದಿಗೆ ಸದಾ ಹಂಚಿಕೊಳ್ಳುತ್ತಿರುವ,ಅನಾಥ – ಅಜ್ಞಾತ,ಹೃದಯ –…

ಮುಂದೆ ಓದಿ..