ಮನೆಗೆ ಮರಳದ ರವಿಕಿರಣ್ – ಪೊಲೀಸರು ಶೋಧ ಕಾರ್ಯ ಆರಂಭ
Taluknewsmedia.comಬೆಂಗಳೂರು, ಆಗಸ್ಟ್ 11:2025ನಗರದ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 31 ವರ್ಷದ ಯುವಕ ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರ ಪ್ರಕಾರ, ದೂರುದಾರರಾದ ವರ್ಷದ ನರಸಿಂಹ ಮೂರ್ತಿ ಎಂ.ಡಿ. ಅವರು ತಮ್ಮ ಮಗ ರವಿಕಿರಣ್ ಎನ್. ಕಾಣೆಯಾದ ಕುರಿತು ದೂರು ನೀಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಲ್ಯಾಪ್‌ಟಾಪ್ ಸರ್ವಿಸಿಂಗ್ ಹಾಗೂ ದುರಸ್ತಿ ಕೆಲಸ ಮಾಡುತ್ತಿದ್ದ ರವಿಕಿರಣ್, ಕಳೆದ ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ರಾಜಾಜಿನಗರದ ಸ್ಪಂದನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 17ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಮನೆಯಿಂದ ಹೊರಟ ಅವರು, ಬಳಿಕ ಮನೆಗೆ ಮರಳಿಲ್ಲ. ಕುಟುಂಬದವರು ಅನೇಕಡೆ ಹುಡುಕಿದರೂ ಪತ್ತೆಯಾಗದ ಕಾರಣ, ಆಗಸ್ಟ್ 8ರಂದು ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಯಲಹಂಕ ಪೊಲೀಸರು ಯುವಕನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಮುಂದೆ ಓದಿ..
