19 ವರ್ಷದ ವೈಷ್ಣವಿ ನಾಪತ್ತೆ: ತಲೆದೋರುವ ಮಾಹಿತಿ ಇಲ್ಲದೆ ಪೋಷಕರು ಆತಂಕ
Taluknewsmedia.comಬೆಂಗಳೂರು: ಜುಲೈ 23 2025ನಗರದಲ್ಲಿ 19 ವರ್ಷದ ಯುವತಿ ವೈಷ್ಣವಿ ಎಸ್.ಆರ್ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವೈಷ್ಣವಿ ತನ್ನ ಪಿಯುಸಿ 2ನೇ ವರ್ಷದ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಳು. ದಿನಾಂಕ 21-05-2025ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಮನೆ ಬಳಿ ಇರುವ ಅಂಗಡಿಗೆ ಪುಸ್ತಕ ತರುವುದಾಗಿ ಹೇಳಿ ಹೋಗಿದ್ದಳು. ಆದರೆ ನಂತರ ಮನೆಗೆ ವಾಪಸ್ ಬಂದಿಲ್ಲ. ಪೋಷಕರು ಸ್ನೇಹಿತರು, ಓಡಲುಗಳು ಹಾಗೂ ಸಂಬಂಧಿಕರನ್ನು ಸಂಪರ್ಕಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಎಲ್ಲೆಡೆ ಹುಡುಕಿದರೂ ಹುಡುಗಿ ಪತ್ತೆಯಾಗದ ಕಾರಣದಿಂದಾಗಿ ಕುಟುಂಬಸ್ಥರು ಯಲಹಂಕ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳೀಯ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಗೊತ್ತಿರುವವರು ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮುಂದೆ ಓದಿ..
