ಸುದ್ದಿ 

ಹೆಂಡತಿ ಮತ್ತು ಗಂಡನಿಗೆ ಜೀವ ಬೆದರಿಕೆ: ಖಾಸಗಿ ಫೋಟೋಗಳಿಂದ ಬ್ಲಾಕ್‌ಮೇಲ್ ಆರೋಪ

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 16 2025ಹೆಗಡೆನಗರ ತಿರುಮೇನಹಳ್ಳಿಯ ದಂಪತಿಗೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಗಲೂರು ಪೊಲೀಸರ ಮಾಹಿತಿಯಂತೆ, ದೂರುದಾರರು ವೈಟ್ರಿಲ್ಯ ಬ್ರಾಂಚ್ ರಿಸರ್ಚ್ & ಡೆವಲಪ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2021ರಲ್ಲಿ ದಿವ್ಯಜ್ಯೋತಿ ಕಾಲೇಜಿನಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಾಧ್ಯಾಪಕರಾದ ಘನಲಿಂಗಮೂರ್ತಿ ಡಿ.ಬಿ. ಅವರನ್ನು ಪರಿಚಯ ಮಾಡಿಕೊಂಡಿದ್ದರು. ಸ್ನೇಹ ಬೆಳೆದ ಬಳಿಕ ಅವರು ದೂರುದಾರರ ಮನೆಯಲ್ಲಿ ಆಗಾಗ 2-3 ದಿನಗಳ ಕಾಲ ತಂಗುತ್ತಿದ್ದರು. ವೈಯಕ್ತಿಕ ಸಮಸ್ಯೆಯ ಹಿನ್ನೆಲೆಯಲ್ಲಿ ದೂರುದಾರರು ಹಂತ ಹಂತವಾಗಿ ಒಟ್ಟು ₹11,75,000/- ರೂಪಾಯಿ ಘನಲಿಂಗಮೂರ್ತಿಗೆ ನೀಡಿದ್ದರು. ನಂತರ, ಅವರು ಹಣವನ್ನು ಬಡ್ಡಿ ಸಹಿತವಾಗಿ ಹಿಂತಿರುಗಿಸಿದರೂ, ಇನ್ನೂ ಹಣ ಕೊಡಬೇಕೆಂದು ಘನಲಿಂಗಮೂರ್ತಿ ಒತ್ತಾಯಿಸಿದ್ದಾಗಿ ದೂರು ಹೇಳುತ್ತದೆ. ಆಗಸ್ಟ್ 8ರಂದು, ಬಾಗಲೂರು ಕಾಲೋನಿಯಲ್ಲಿರುವ ದೂರುದಾರರ ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ದಂಪತಿಗೆ ಜೀವ ಬೆದರಿಕೆ…

ಮುಂದೆ ಓದಿ..
ಸುದ್ದಿ 

ಮದುವೆ ನಂತರ ಪತ್ನಿಯಿಂದ ಸುಳ್ಳು ದೂರಿನ ಕಿರುಕುಳ – ಸೇನಾ ಅಧಿಕಾರಿಯ ಕುಟುಂಬದಿಂದ ಪೊಲೀಸ್ ದೂರು

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 16 2025ಸೇನಾ ಮೇಜರ್ ಗೌರಿ ಶಂಕರ್ ಪೌಲ್ ಅವರ ಕುಟುಂಬವು, ಪತ್ನಿಯಿಂದ ಮದುವೆಯ ಕೆಲವೇ ದಿನಗಳಲ್ಲಿ ಆರಂಭವಾದ ಕಿರುಕುಳ ಹಾಗೂ ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. 2021ರ ಜುಲೈ 2ರಂದು ಪಂಜಾಬ್ ರಾಜ್ಯದ ಪಠಾಣ್‌ಕೋಟ್‌ನಲ್ಲಿ ಮದುವೆಯಾದ ದಂಪತಿಗಳ ಜೀವನದಲ್ಲಿ, ಒಂದು ವಾರದೊಳಗೇ ವೈಮನಸ್ಸು ಶುರುವಾಗಿದೆ. ಪತ್ನಿ ವಿನಿತಾ ಬಸ್ಸಾ ಅವರ ಬಗ್ಗೆ, ಹಿಂದೆಯೇ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾರೆಯೆಂಬ ಅನುಮಾನ ವ್ಯಕ್ತವಾಗಿದ್ದು, ಇದರ ಕುರಿತು ಕೇಳಿದಾಗ ಆಕೆ ಕೋಪಗೊಂಡು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ನೀಡಿದ್ದಾಳೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಅದಾದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ — ಮಣಿಪುರ, ಹರಿಯಾಣ, ಪಂಜಾಬ್ — ದೂರು-ಪ್ರತಿದೂರುಗಳ ಸರಮಾಲೆ ಮುಂದುವರಿದಿದ್ದು, ಆರೋಪಿಯು 50 ಲಕ್ಷ ರೂ. ಬೇಡಿಕೆ, ಕೆಲಸದ ಸ್ಥಳದಲ್ಲಿ ಗಲಾಟೆ, ಸ್ವಯಂ ಹಾನಿ ಮಾಡುವ ಬೆದರಿಕೆ, ಹಾಗೂ…

ಮುಂದೆ ಓದಿ..
ಸುದ್ದಿ 

ಲಾಭಾಂಶದ ಹೆಸರಿನಲ್ಲಿ ₹48.90 ಲಕ್ಷ ವಂಚನೆ — ಅಸಾಂ ಪಾಷ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025ಡಿ.ಟಿ.ಎಚ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ತಿಂಗಳಿಗೆ ಲಾಭಾಂಶ ನೀಡುವುದಾಗಿ ನಂಬಿಸಿ, ಒಟ್ಟು ₹48.90 ಲಕ್ಷ ಹಣವನ್ನು ಪಡೆದು ವಂಚಿಸಿದ ಘಟನೆ ಭಾರತ್ ನಗರದಲ್ಲಿ ನಡೆದಿದೆ. ಸಂಪಿಗೆಹಳ್ಳಿ ಪೊಲೀಸರ ಪ್ರಕಾರ, 2024ರ ಆಗಸ್ಟ್‌ನಲ್ಲಿ ಡಿ.ಟಿ.ಎಚ್ ಅಳವಡಿಸಲು ಅಸಾಂ ಪಾಷ ಮನೆಗೆ ಹೋದ ಫಿರ್ಯಾದುದಾರರನ್ನು ಆರೋಪಿಯು ಪರಿಚಯ ಮಾಡಿಕೊಂಡನು. ಅವರ ಜೀವನ ಪರಿಸ್ಥಿತಿ ತಿಳಿದುಕೊಂಡು, ತಿಂಗಳಿಗೆ ₹15 ಸಾವಿರ ಲಾಭಾಂಶ ನೀಡುವುದಾಗಿ ಹೇಳಿ ಹಂತ ಹಂತವಾಗಿ ಹಣ ಸ್ವೀಕರಿಸಿದನು. ಕೆಲವು ಬಾರಿ ಲಾಭಾಂಶ ನೀಡಿದ ನಂತರ, ಬಂಗಾರ ಅಡಮಾನ, ಬ್ಯಾಂಕ್ ಸಾಲ ಹಾಗೂ ನೇರ ಖಾತೆ ವರ್ಗಾವಣೆಗಳ ಮೂಲಕ ಕೋಟಿಗೂ ಸಮೀಪವಾದ ಹಣವನ್ನು ಪಡೆದುಕೊಂಡು, ಬಳಿಕ ಯಾವುದೇ ಹಣ ಮರಳಿಸದೆ ತಪ್ಪಿಸಿಕೊಂಡಿದ್ದಾನೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಾಂ ಪಾಷ ವಿರುದ್ಧ ಮೋಸ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮುಂದೆ ಓದಿ..
ಸುದ್ದಿ 

ಚಿನ್ನದ ಸರ ಗಿರವಿ ಇಟ್ಟು ಹಣ ಪಡೆದ ಬಳಿಕ ಹಿಂತಿರುಗಿಸದೇ ಮೋಸ – ಪವನ್‌ಕುಮಾರ್ ವಿರುದ್ಧ ದೂರು

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ತುಮಕೂರಿನಲ್ಲಿ ಚಿನ್ನದ ಸರವನ್ನು ಗಿರವಿ ಇಟ್ಟು ಹಣ ಪಡೆದು, ಹಣವನ್ನು ಮರುಪಾವತಿ ಮಾಡಿದ ನಂತರವೂ ಸರವನ್ನು ಹಿಂತಿರುಗಿಸದೇ ಮೋಸ ಮಾಡಿದ ಪ್ರಕರಣದಲ್ಲಿ ವ್ಯಾಪಾರಿಣಿಯೊಬ್ಬರು ವಿದ್ಯಾನಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಮಹಿಳೆ ಸ್ಟೇಷನರಿ ಅಂಗಡಿ ನಡೆಸುತ್ತಿದ್ದು, ಅವರ ಗಂಡ ಅರುಣ್ ಅವರು ಹಿಂದಿನಲ್ಲಿ ವರಾಹಿ ಗೋಲ್ಡ್ ಬ್ರಿಯರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಂಪನಿಯ ಮಾಲೀಕ ಪವನ್‌ಕುಮಾರ್ ಅವರ ಪರಿಚಯವಾಯಿತು. 2025ರ ಫೆಬ್ರವರಿ 27ರಂದು ಮಹಿಳೆ 35.5 ಗ್ರಾಂ ತೂಕದ ಚಿನ್ನದ ಸರವನ್ನು ಗಿರವಿಗೆ ಇಟ್ಟು ₹1 ಲಕ್ಷ ಪಡೆದರು. ನಂತರ 2025ರ ಮೇ 6 ಮತ್ತು 7ರಂದು ಒಟ್ಟು ₹1 ಲಕ್ಷವನ್ನು ಆನ್‌ಲೈನ್ ಮೂಲಕ ಪವನ್‌ಕುಮಾರ್ ಅವರ ಖಾತೆಗೆ ಮರುಪಾವತಿ ಮಾಡಿದರು. ಆದಾಗ್ಯೂ, ಪವನ್‌ಕುಮಾರ್ ಅವರು ಚಿನ್ನದ ಸರವನ್ನು ಹಿಂತಿರುಗಿಸದೇ ಕಾಲಹರಣ ಮಾಡುತ್ತಿದ್ದು, ಮಹಿಳೆ ಪದೇಪದೇ ಕೇಳಿದ ಮೇಲೂ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಡ್ರೈ ಫ್ರೂಟ್ ಆರ್ಡರ್ ಮಾಡಿ ₹74,000 ಕಳೆದುಕೊಂಡ ನಾಗರಿಕ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ಕಾಳಿಗ ರಾಜರಾಜಿ ಎಂಬವರು ಕೊಡುಗೆಹಳ್ಳಿ ಪೊಲೀಸರಿಗೆ ನೀಡಿದ ದೂರು ಪ್ರಕಾರ, 12 ಆಗಸ್ಟ್ 2025 ರಂದು ಆನ್‌ಲೈನ್‌ನಲ್ಲಿ ಡ್ರೈ ಫ್ರೂಟ್ ಆರ್ಡರ್ ಮಾಡಿ ಯುಪಿಐ ಮೂಲಕ ₹299 ಪಾವತಿಸಿದ್ದಾರೆ. ನಂತರದ ದಿನ 7085716403 ಸಂಖ್ಯೆಯಿಂದ ಕರೆ ಮಾಡಿ 30% ರಿಯಾಯಿತಿ ನೀಡುವುದಾಗಿ ತಿಳಿಸಲಾಗಿದೆ. 13 ಆಗಸ್ಟ್ 2025 ರಂದು ಮತ್ತೊಬ್ಬರು 7004098089 ಸಂಖ್ಯೆಯಿಂದ ಕರೆ ಮಾಡಿ, ಹಣ ಮರುಪಾವತಿ ಮಾಡುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾರೆ. ನಂತರ ಖಾತೆಯಿಂದ ₹74,000 (ವಹಿವಾಟು ಸಂಖ್ಯೆ: 223-5010019677589) ಹಣ ಕಳವಾಗಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಇದು ಆನ್‌ಲೈನ್ ವಂಚನೆ ಎಂದು ದೃಢಪಟ್ಟಿದ್ದು, ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂನಲ್ಲಿ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಪಾರ್ಟ್‌ಟೈಮ್ ಕೆಲಸದ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..

ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ

Taluknewsmedia.com

Taluknewsmedia.comಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ ಬೆಂಗಳೂರು ಆಗಸ್ಟ್ 16 2025 ಟೆಲಿಗ್ರಾಂ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು. maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು. ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಶಿಕ್ಷಕಿಯ ವಿರುದ್ಧ ಕಿರುಕುಳ – ಪ್ರಕರಣ ದಾಖಲು

Taluknewsmedia.com

Taluknewsmedia.comಬೆಂಗಳೂರು: ಆಗಸ್ಟ್ 16 2025ಹೆಬ್ಬಾಳದಲ್ಲಿರುವ ಕೆ.ಪಿ.ಎಸ್ ಶಾಲೆಯೊಬ್ಬ ಶಿಕ್ಷಕಿಯು, ತನ್ನ ಮೇಲೆ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ವಿಶ್ವನಾಥ್ ಎಂಬ ವ್ಯಕ್ತಿಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಪ್ರಕಾರ, ಆರೋಪಿಯು ಸುಮಾರು ಎಂಟು ತಿಂಗಳಿನಿಂದ ಪರಿಚಯವಾಗಿದ್ದು, ಜುಲೈ 18ರಿಂದ ಶಿಕ್ಷಕಿಯ ಮನೆಯಲ್ಲಿ ಹಾರ್ನ್ ಹೊಡೆದು ತೊಂದರೆ ನೀಡುತ್ತಿದ್ದನು ಮತ್ತು ಕೆಲಸಕ್ಕೆ ಹೋಗುವಾಗ ಪ್ರತಿದಿನ ಹಿಂಬಾಲಿಸುತ್ತಿದ್ದನು. ಆಗಸ್ಟ್ 1ರಂದು ಸಂಜೆ 5 ಗಂಟೆಗೆ, ಶಿಕ್ಷಕಿ ಮತ್ತು ಅವರ ಮಗಳನ್ನು ಹಿಂಬಾಲಿಸಿ ಬಂದು ಆವಾಚ್ಯ ಶಬ್ದಗಳಿಂದ ಬೈದು ಬಾಯಿಂದ ಉಗುಳಿದ್ದಾನೆ. ಪರಿಚಯದ ಆರಂಭದಲ್ಲಿ ಶಿಕ್ಷಕಿಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿಯು, ಅವುಗಳನ್ನು ಅವರ ತಂಗಿಯ ಮೊಬೈಲ್‌ಗೆ ಕಳುಹಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಶಿಕ್ಷಕಿಯ ಮಾಜಿ ಪತಿಯೊಂದಿಗೆ ನಡೆದ ಮಾತುಕತೆಯ ಆಡಿಯೋವನ್ನು ವಾಟ್ಸ್‌ಆಪ್ ಮೂಲಕ…

ಮುಂದೆ ಓದಿ..
ಸುದ್ದಿ 

ವೀರಸಾಗರದಲ್ಲಿ ಗಣೇಶ ಹಬ್ಬದ ಚರ್ಚೆ ವೇಳೆ ಯುವಕನ ಮೇಲೆ ಹಲ್ಲೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 12 2025ವೀರಸಾಗರ ಮುಖ್ಯರಸ್ತೆಯ ಹತ್ತಿರ ಗಣೇಶ ಹಬ್ಬದ ವ್ಯವಸ್ಥೆ ಕುರಿತು ಚರ್ಚಿಸುತ್ತಿದ್ದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ 9 ಆಗಸ್ಟ್ ರಾತ್ರಿ ನಡೆದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯಂತೆ, ರಾತ್ರಿ 11:30ರ ಸುಮಾರಿಗೆ ನಾಗು ಎಂಬಾತ ತನ್ನ ಸಹೋದರ ಹಾಗೂ ರಾಜು ಎಂಬಾತನೊಂದಿಗೆ ಕಾರಿನಲ್ಲಿ ಬಂದು, ಆನಂದ ಅವರ ತಮ್ಮನನ್ನು ಹೊಡೆದಿದ್ದಾನೆ. ಮಧ್ಯ ಪ್ರವೇಶ ಮಾಡಿದ ಆನಂದ್ ಅವರಿಗೂ ಹೊಡೆದು ಬಾಯಿ ಮತ್ತು ಕಣ್ಣಿನ ಹತ್ತಿರ ಗಾಯಪಡಿಸಲಾಗಿದೆ. ಗಾಯಗೊಂಡವರು ಮೈತ್ರಿ ಕ್ಲಿನಿಕ್ ಕಡೆ ತೆರಳುತ್ತಿದ್ದಾಗ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರುಣ ಅಪಾರ್ಟ್ಮೆಂಟ್ ಹತ್ತಿರ ನಾಗು, ರಾಜು, ಅನೀಲ್ ಮತ್ತು ಇತರರು ಚಾಕು ಹಾಗೂ ಬ್ಯಾಟ್ ಹಿಡಿದು ಮತ್ತೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರೆಂದು ಯಲಂಕ ಸಂಚಾರಿ ಪೊಲೀಸ್ ಠಾಣೆಯ ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ಪೀಡಿತನನ್ನು ಕುಟುಂಬಸ್ಥರು ಯಲಹಂಕ ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಜೆ.ಪಿ.ನಗರದಲ್ಲಿ ಯುವಕ ಕಾಣೆ – ಪೊಲೀಸರ ಶೋಧ ಮುಂದುವರಿಕೆ

Taluknewsmedia.com

Taluknewsmedia.comಬೆಂಗಳೂರು ಆಗಸ್ಟ್ 12 2025ಬೆಂಗಳೂರು: ಜೆ.ಪಿ.ನಗರದಲ್ಲಿ 19 ವರ್ಷದ ಯುವಕ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಯಲಹಂಕ ಉಪನಗರ ಪೊಲೀಸರ ಪ್ರಕಾರ, ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ (19)ರ ನಡುವೆ ಆಗಸ್ಟ್ 8ರಂದು ಆಂಜಿನೇಯ ದೇವಾಸಾನದ ಹತ್ತಿರ ಕುಟುಂಬ ಸಂಬಂಧಿತ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಗೆ ಹೋಗಿ ವಾಪಸು ಬಂದಿಲ್ಲ. ಕುಟುಂಬದವರು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದ ಕಾರಣ, ವೆಂಕಟೇಶ್ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಪತ್ತೆ ಕಾರ್ಯ ಕೈಗೊಂಡಿದ್ದು, ಯಾರಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.

ಮುಂದೆ ಓದಿ..