ಸುದ್ದಿ 

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌..

Taluknewsmedia.com

Taluknewsmedia.comಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ. ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಆದಿ ಆಂಧ್ರ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಆದಿ ಕರ್ನಾಟಕ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಂಜಾರ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬುಡುಗ ಜಂಗಮ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಗೊಲ್ಲ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಾಡರ್‌ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ…

ಮುಂದೆ ಓದಿ..
ಸುದ್ದಿ 

ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

Taluknewsmedia.com

Taluknewsmedia.comಕರ್ನಾಟಕದ ಮುಜರಾಯಿ ಇಲಾಖೆ ನಿಯಂತ್ರಣದಲ್ಲಿರುವ 14 ಪ್ರಮುಖ ದೇವಸ್ಥಾನಗಳಲ್ಲಿ ಸೇವಾ ಶುಲ್ಕ (seva / ritual charges) ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಸೇವಾ ಶುಲ್ಕದ ಆದೇಶವು “ದೇವಾಲಯಗಳ ಆಡಳಿತ ಮಂಡಳಿಗಳ ತೀರ್ಮಾನದ ಅನುಸಾರವಾಗಿದೆ, ಸರ್ಕಾರದ ಸ್ವಯಂ ನಿರ್ಧಾರವಲ್ಲ” ಎಂಬಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಕೆಳಗಿನ ಕೆಲವು ದೇವಾಲಯಗಳು ಸೇವಾ ಶುಲ್ಕ ಏರಿಕೆಗೆ ಒಳಗೊಂಡಿವೆ:

ಮುಂದೆ ಓದಿ..
ಸುದ್ದಿ 

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ..

Taluknewsmedia.com

Taluknewsmedia.comನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ.. ತೆರೆದ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ನೀಡುವ ಆಯಿಲ್ ನಂಬದಿರಿ.. ಕಳಪೆ ಆಯಿಲ್ – ರೈತನ ಶ್ರಮಕ್ಕೆ ಕಲ್ಲು ಹಾಕುವಂತದ್ದು! ನಿಮ್ಮ ಮುಂದೆ ಪ್ಯಾಕ್ ಓಪನ್ ಮಾಡಿಸಿ.. ಇಂದನ ತುಂಬಿಸಿ. ಈಗಾಗಲೇ ತಪ್ಪು ಮಾಡುತ್ತೀರುವ ಪೆಟ್ರೋಲ್ ಬಂಕುನವರಿಗೆ ರೈತರೂ ನೇರವಾಗಿ ಹೇಳಿದರೂ ಕೇಳುತ್ತಿಲ್ಲ.. ಇಂದಿನ ದಿನಗಳಲ್ಲಿ ನಗರದಲ್ಲೋ, ಹಳ್ಳಿಯಲ್ಲೋ, ಸ್ಕೂಟರ್, ಬೈಕ್, ಟ್ರ್ಯಾಕ್ಟರ್, ಪಂಪುಮೆಷಿನ್, ಅಥವಾ ಥ್ರೆಷರ್‌ಗಳ ಉಪಯೋಗ ಪ್ರತಿದಿನವೂ ಹೆಚ್ಚುತ್ತಿದೆ. ಇವುಗಳೆಲ್ಲವೂ ಸರಿಯಾಗಿ ಕೆಲಸಮಾಡಬೇಕಾದರೆ, ಅವುಗಳಿಗೆ ಬಳಸುವ ಎಂಜಿನ್ ಆಯಿಲ್ ಅತ್ಯಂತ ಮುಖ್ಯ. ಆದರೆ ಈಗ ಕಳಪೆ ಆಯಿಲ್ (Adulterated/Low Grade Oil) ಗಳ ಬಳಕೆ ಮುಕ್ತಿ ಕೊಡುವಂತೆ ಆಗಿದೆ. ಇದು ಗಾಡಿಯನ್ನಷ್ಟೇ ಅಲ್ಲ, ರೈತನ ದುಡಿಮೆಯನ್ನೂ ನಾಶಪಡಿಸುತ್ತದೆ. ಕಳಪೆ ಆಯಿಲ್ ಎಂದರೇನು? : ಕಳಪೆ ಆಯಿಲ್ ಎಂದರೆ: ಶುದ್ಧ ಎಂಜಿನ್ ಆಯಿಲ್‌ಗೆ ಬೇರೆ ಕಿಮಿಕಲ್…

ಮುಂದೆ ಓದಿ..
ಸುದ್ದಿ 

ಬಾಲಕನ ಅಪಹರಿಸಿ ಬರ್ಬರ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು..

Taluknewsmedia.com

Taluknewsmedia.comಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳಾಗಿ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ್ ಕುಮಾರ್ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡೂ ಕಾಲುಗಳು ಮತ್ತು ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಂಗಳೂರು ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಅವನ ಪೋಷಕರು ವಾಸಿಸುತ್ತಿದ್ದರು. ನಿಶ್ಚಿತ್‌ನ ತಂದೆ ನಗರದ ಪ್ರತಿಷ್ಠಿತ…

ಮುಂದೆ ಓದಿ..
ಸುದ್ದಿ 

ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ

Taluknewsmedia.com

Taluknewsmedia.comನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ…

ಮುಂದೆ ಓದಿ..
ಸುದ್ದಿ 

su_from_so ಸುಲೋಚನ_ಫ್ರಾಮ್_ಸೋಮೇಶ್ವರ

Taluknewsmedia.com

Taluknewsmedia.comsu_from_so ಸುಲೋಚನ_ಫ್ರಾಮ್_ಸೋಮೇಶ್ವರ ಬೇರೆ_ಯಾರೋ_ನಿರ್ದೇಶಕರಾಗಿದ್ದರೆ_ಈ_ಚಿತ್ರವನ್ನು_ಕೇವಲ_ತುಳು_ಭಾಷೆಗೆ_ಸೀಮಿತ_ಮಾಡುತ್ತಿದ್ದರೇನೂ_ಈ ವಿಷಯದಲ್ಲಿ ನಿರ್ದೇಶಕರ ಜಾಣ್ಮೆ ಅಡಗಿದೆ. ಕೊಟ್ಟ ಹಣಕ್ಕೆ ಮೊಸವೇನಿಲ್ಲ! ಚಿತ್ರ ನೋಡಿ ನಕ್ಕು ಬರುವುದು ಖಂಡಿತಾ. ಸಾಮಾನ್ಯವಾಗಿ ಹೇಳೋದೇ ಆದರೆ ನಮ್ಮ ಉತ್ತರ ಕರ್ನಾಟಕದವರಿಗೆ ರುಚಿಸದು ನನ್ನ ಪ್ರಕಾರ. ಆದರೆ ಮಲೆನಾಡಿನವರಿಗೆ ಮೃಷ್ಟಾನ್ನ ಭೋಜನ. ಚಿತ್ರದಲ್ಲಿ ಅಂತದ್ದು ಹೊಸ ವಿಷಯವೇನು ಹೇಳದೆ ಇದ್ದರೂ ಸಾಮಾನ್ಯರ ಜೊತೆಗೂಡಿ ಒಂದು ಅಸಾಮಾನ್ಯ ಚಿತ್ರವನ್ನು ನಿರ್ಮಿಸಬಹುದುದೆನ್ನುವುದಕ್ಕೆ ಇದೊಂದು ಉದಾಹರಣೆ. ಅಬ್ಬರದ ಸಂಗೀತವಿಲ್ಲ, ಬೇಕೆಂದೇ ಸೃಟ್ಟಿಸಿದ ದೃಶ್ಯ ವ ಹಾಡುಗಳಿಲ್ಲ. ಕರಾವಳಿಯಲ್ಲಿ ಈಗಲೂ ಚಾಲ್ತಿಯಲ್ಲಿರುವ ಮೂಢನಂಬಿಕೆಗಳ ಮೇಲೆ ಕಥೆ ಸಾಗುತ್ತೆ. ಯಾರ್ ಹೀರೋ, ಯಾರ್ ಹೀರೋಹಿನ್ ಅಂತಾ ನೀವೇ ಊಹಿಸಕೊಳ್ಳಬೇಕು ಅಷ್ಟರಮಟ್ಟಿಗಿನ ಸಾಮಾನ್ಯ ಚಿತ್ರ. ನೋಡಿಸಿಕೊಂಡು ಹೋಗುವ ವೇಗ, ಸೆಳೆತ ಚಿತ್ರಕ್ಕಿದೆ. ಈ ವರ್ಷದ ಹೊಸಬರ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಡಬೇಕು ಅಂತಿದ್ದರೆ ಇದೇ ಮೊದಲ ಚಿತ್ರವೆಂದು ಧಾರಾಳವಾಗಿ ಹೇಳಬಹುದು. Vijay Iliger

ಮುಂದೆ ಓದಿ..
ಸುದ್ದಿ 

ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆ ಕೊಡುಗೆಯಾಗಬೇಕಿದೆ : ಡಾ.ಸೋಮನಾಥ್

Taluknewsmedia.com

Taluknewsmedia.comನಾಗಮಂಗಲ : ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ ‌ ಹೆಚ್ಚುತ್ತಿರುವ ಪದವೀಧರರ ಆಲೋಚನೆಗಳು ಯೋಜನೆಗಳು ದೇಶಕ್ಕೆಕೊಡುಗೆಯಾಗಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಡಾ.ಎಸ್.ಸೋಮನಾಥ್ ಅಭಿಪ್ರಾಯ ಪಟ್ಟರು. ತಾಲ್ಲೂಕಿನ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು. ಇಲ್ಲಿಯವರೆಗೆ ನಿಮ್ಮ ಬದುಕಿನ ದಿಕ್ಕೇ ಬೇರೆ. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿರುವ ಜ್ಞಾನದ ಜೊತೆಗೆ ಕೌಶಲ್ಯ ಕೂಡ ನೆರವಿಗೆ ಬರುತ್ತದೆ. ನಿಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಮನ್ನಣೆ ನೀಡಿ ಎಂದರು. ಇಂದು ಭಾರತ ವಿಶ್ವಕ್ಕೆ ತನ್ನ ಸಂಸ್ಕೃತಿಯ ಮೂಲಕ ಅನೇಕ ಕೊಡುಗೆ ನೀಡಿದೆ. ಅದೇ ರೀತಿ…

ಮುಂದೆ ಓದಿ..
ಸುದ್ದಿ 

ಬೀರೇಶ್ವರಪುರ ಗ್ರಾಮದಲ್ಲಿ ನಿರ್ಮಾಣವಾಗಲಿದೆ ಶ್ರಮಿಕ ವಸತಿ ಶಾಲೆ..

Taluknewsmedia.com

Taluknewsmedia.comನಾಗಮಂಗಲ: ತಾಲೂಕಿನ ಬೀರೇಶ್ವರಪುರ ಗ್ರಾಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ದೃಷ್ಟಿಯಿಂದ ಮಂಜೂರಾಗಿರುವ ಶ್ರಮಿಕ ವಸತಿ ಶಾಲೆ ನಿರ್ಮಾಣವಾಗಲಿದೆ. ರಾಜ್ಯದ ೩೧ ಜಿಲ್ಲೆಗಳಲ್ಲಿ ತಲಾ ಒಂದರಂತೆ ಒಟ್ಟು ೧೧೨೫.೨೫ ಕೋಟಿ ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆಗಳು ನಿರ್ಮಾಣವಾಗಲಿವೆ. ೬ ರಿಂದ ೧೨ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಈ ಶಾಲೆಗಳಲ್ಲಿ ದೊರೆಯಲಿದೆ. ಬೀರೇಶ್ವರಪುರ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಗುರುತಿಸಲಾಗಿರುವ ೭ ಎಕರೆ ಜಮೀನಿನಲ್ಲಿ ೩೧ ಕೋಟಿ ರೂ ವೆಚ್ಚದಲ್ಲಿ ಶಾಲಾ ಕಟ್ಟಡ ಮತ್ತು ೧ ಕೋಟಿ ರೂ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ೩ ಕೋಟಿ ರೂ ವೆಚ್ಚದಲ್ಲಿ ಪೀಠೋಪಕರಣ ಹಾಗೂ ೭೫ ಲಕ್ಷ ರೂ ವೆಚ್ಚದಲ್ಲಿ ಪ್ರಯೋಗಶಾಲಾ ಉಪಕರಣಗಳ ಪೂರೈಕೆಯಾಗಲಿದೆ. ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ನೊಂದಾಯಿಸಲ್ಪಟ್ಟಿರುವ ಕಾರ್ಮಿಕರ…

ಮುಂದೆ ಓದಿ..
ಸುದ್ದಿ 

ವಿಶ್ವ ಪರಿಸರ ಸಂಕೀರ್ಣ ದಿನಾಚರಣೆ – ಆನೇಕಲ್ ತಾಲ್ಲೂಕಿನಲ್ಲಿ ಹಸಿರು ಹಬ್ಬ!

Taluknewsmedia.com

Taluknewsmedia.com ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಕಾರಿ ಹೊಸ ಮಾದರಿ ಪ್ರಾಥಮಿಕ ಪಾಠಶಾಲೆ ಮತ್ತು ಮಾದರಿ ಬಾಲಕಿಯರ ಪ್ರೌಢಶಾಲೆ, ಆನೇಕಲ್ನಲ್ಲಿ ವಿಶ್ವ ಪರಿಸರ ಸಂಕೀರ್ಣ ದಿನಾಚರಣೆಯು ಅತ್ಯಂತ ಉತ್ಸಾಹಭರಿತವಾಗಿ ನಡೆಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಶಾಲೆಯ ಗುರುಗಳು ಮತ್ತು ಗುರುಮಾತೆಯರು, ಮುದ್ದಾದ ಮಕ್ಕಳು, ಮತ್ತು ಪರಿಸರಕ್ಕೆ ಪ್ರೀತಿ ಹೊಂದಿರುವ ಹಲವರು ಭಾಗವಹಿಸಿದ್ದರು. ವಿಶೇಷವಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರಾದ ದಾವಲ್ ಸಾಬ್ ಅಣ್ಣಿಗೇರಿ, ಪತ್ರಕರ್ತ ಶಿವಣ್ಣ ಸರ್, ಹಾಗೂ ಬಿಎಂಟಿಸಿ ಸಿಬ್ಬಂದಿಗಳಾದ ಬಸವರಾಜ ಜಾಪೂರ, ನಿಂಗಪ್ಪ ಬೈರಗೊಂಡ, ಮಂಜಪ್ಪ ಕೆ, ಬಸನಗೌಡ ಮತ್ತು ಸಿದ್ದಲಿಂಗಪ್ಪ ಮೆಣಸಗಿ ಈ ಹಸಿರು ಉತ್ಸವದಲ್ಲಿ ತಮ್ಮ ಸಾಂದರ್ಭಿಕ ಹಾಜರಾತಿಯನ್ನು ಗುರುತಿಸಿಕೊಂಡರು. ಕಾರ್ಯಕ್ರಮದ ಅಂಗವಾಗಿ, ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪರಿಸರ ಸಂರಕ್ಷಣೆಯ ಪ್ರೇರಣೆಯಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಕೃತಿಯ ಪ್ರೀತಿಯನ್ನು ಬೆಳೆಸುವ ನಿಟ್ಟಿನಲ್ಲಿ ಒಂದು…

ಮುಂದೆ ಓದಿ..
ಸುದ್ದಿ 

ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವ..

Taluknewsmedia.com

Taluknewsmedia.comನಾಗಮಂಗಲ : ಪ್ರತಿಷ್ಠಿತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವವು ಇದೇ ಜುಲೈ ೨೯ರಂದು ಬೆಳಿಗ್ಗೆ ೧೦:೩೦ಕ್ಕೆ ಬಿಜಿಎಸ್ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಎಸ್ ಎನ್ ಶ್ರೀಧರ ತಿಳಿಸಿದರು. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾರಂಭದ ದಿವ್ಯ ಸಾನಿಧ್ಯವನ್ನು ಗೌರವಾನ್ವಿತ ಕುಲಾಧಿಪತಿಗಳು ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಎಸ್. ಸೋಮನಾಥ್, ಗೌರವ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಭಾಗವಹಿಸುವರು. ವಿಶ್ವವಿದ್ಯಾಲಯದ ಕುಲಪತಿ ಡಾ ಎಸ್ ಎನ್ ಶ್ರೀಧರ. ಕುಲಸಚಿವ ಡಾ ಸಿ ಕೆ ಸುಬ್ಬರಾಯ.ಕುಲ ಸಚಿವ (ಮೌಲ್ಯಮಾಪನ) ಡಾ. ನಾಗರಾಜ್ ಉಪಸ್ಥಿತರಿರುವರು. ೯೬೮ ವಿದ್ಯಾರ್ಥಿನಿಯರಿಗೆ ೯೧೨ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ಹಾಗೂ…

ಮುಂದೆ ಓದಿ..