ಸುದ್ದಿ 

ಬೆಂಗಳೂರಿನ ಐಷಾರಾಮಿ ಬದುಕಿನ ಹಿಂದಿನ ಕರಾಳ ಮುಖ: 10 ಕೋಟಿ ರೂಪಾಯಿ ಡ್ರಗ್ಸ್ ಜಾಲದ ಬಯಲು..

Taluknewsmedia.com

Taluknewsmedia.comಬೆಂಗಳೂರಿನ ಐಷಾರಾಮಿ ಬದುಕಿನ ಹಿಂದಿನ ಕರಾಳ ಮುಖ: 10 ಕೋಟಿ ರೂಪಾಯಿ ಡ್ರಗ್ಸ್ ಜಾಲದ ಬಯಲು.. ಬೆಂಗಳೂರು ಇಂದು ಕೇವಲ ಸಿಲಿಕಾನ್ ಸಿಟಿಯಲ್ಲ, ಅದು ಅಸಂಖ್ಯಾತ ಕನಸುಗಳ ಮತ್ತು ಅದ್ಧೂರಿ ಜೀವನಶೈಲಿಯ ಕೇಂದ್ರ. ಇಲ್ಲಿನ ‘ಗೇಟೆಡ್ ಕಮ್ಯುನಿಟಿ’ಗಳು ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಹೊರನೋಟಕ್ಕೆ ಅತ್ಯಂತ ಸುರಕ್ಷಿತ ಹಾಗೂ ಸಭ್ಯ ನಾಗರಿಕರ ತಾಣಗಳಂತೆ ಕಾಣುತ್ತವೆ. ಆದರೆ, ಇದೇ ಶಾಂತಿ ಮತ್ತು ಗೌಪ್ಯತೆಯ ಮುಖವಾಡದ ಹಿಂದೆ ಅತ್ಯಂತ ವ್ಯವಸ್ಥಿತವಾದ ಮಾದಕ ದ್ರವ್ಯದ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತಿರುವುದು ಈಗ ಬಯಲಾಗಿದೆ. ನಗರದ ಪ್ರತಿಷ್ಠಿತ ‘ಪ್ರೆಸ್ಟೀಜ್ ಫೈನ್ ಬೇ ಪಾರ್ಕ್’ (Prestige Fine Bay Park) ವಸತಿ ಸಂಕೀರ್ಣದ ಮೇಲೆ ಸಿಸಿಬಿ (CCB) ಪೊಲೀಸರು ನಡೆಸಿದ ದಿಢೀರ್ ದಾಳಿ, ಹೈ-ಫೈ ಜೀವನದ ಹಿಂದಿರುವ ಕರಾಳ ಸತ್ಯವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದೆ. ಹತ್ತು ಕೋಟಿಯ ಮಾಯಾಲೋಕ: ಬೃಹತ್ ದಂಧೆಯ ನೆಟ್ವರ್ಕ್… ಬೆಂಗಳೂರಿನ ಇತಿಹಾಸದಲ್ಲೇ…

ಮುಂದೆ ಓದಿ..
ರಾಜಕೀಯ ಸುದ್ದಿ 

ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಉದಯ್ ಸ್ಫೋಟಕ ವಾಗ್ದಾಳಿ: ಜೆಡಿಎಸ್ ಕುಟುಂಬದ ಒಳಸಂಚು ಮತ್ತು ‘ಲೂಟಿ’ಯ ಕರಾಳ ರಹಸ್ಯಗಳು!..

Taluknewsmedia.com

Taluknewsmedia.comಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಉದಯ್ ಸ್ಫೋಟಕ ವಾಗ್ದಾಳಿ: ಜೆಡಿಎಸ್ ಕುಟುಂಬದ ಒಳಸಂಚು ಮತ್ತು ‘ಲೂಟಿ’ಯ ಕರಾಳ ರಹಸ್ಯಗಳು!.. ರಾಜಕೀಯ ಭೂಕಂಪಕ್ಕೆ ಮುನ್ನುಡಿ: ಸಾವಿರಾರು ಕೋಟಿಯ ‘ಲೂಟಿ’ ಆರೋಪ!… ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ಹೊಸದೊಂದು ಸುನಾಮಿ ಎದ್ದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಮಂಡ್ಯಜಿಲ್ಲೆಯ ಮದ್ದೂರು ಶಾಸಕ ಉದಯ್ ನಡೆಸಿರುವ ವಾಗ್ದಾಳಿ ಕೇವಲ ರಾಜಕೀಯ ಟೀಕೆಯಲ್ಲ, ಅದು ಜೆಡಿಎಸ್‌ನ ಭದ್ರಕೋಟೆಯನ್ನು ನಡುಗಿಸುವಂತಹ ಸ್ಫೋಟಕ ಸತ್ಯಗಳ ಅನಾವರಣ. ಉದಯ್ ಅವರು ನೇರವಾಗಿ “ಲೂಟಿ”ಯ ಪ್ರಸ್ತಾಪ ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಒಬ್ಬ ಅಧಿಕಾರಿಗೆ ಸಾವಿರಾರು ಕೋಟಿ ಆಸ್ತಿ ಎಲ್ಲಿಂದ ಬರುತ್ತದೆ? ಇಂತಹ ಲೂಟಿಕೋರರ ಬಗ್ಗೆ ನಾನೀಗ ಬಾಯಿ ಬಿಟ್ಟರೆ ಇವರ ಅಸಲಿ ಮುಖ ಬಯಲಾಗುತ್ತದೆ ಎಂದು ಎಚ್ಚರಿಸುವ ಮೂಲಕ, ಕುಮಾರಸ್ವಾಮಿ ಶಿಬಿರದ ಆರ್ಥಿಕ ವ್ಯವಹಾರಗಳ ಮೇಲೆ ತನಿಖಾತ್ಮಕ ಕಣ್ಣು ನೆಡುವಂತೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣ: ಇದು…

ಮುಂದೆ ಓದಿ..
ರಾಜಕೀಯ ಸುದ್ದಿ 

ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಉದಯ್ ವಾಗ್ದಾಳಿ: ರಾಜಕೀಯ ಸಂಚಲನ …

Taluknewsmedia.com

Taluknewsmedia.comಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಉದಯ್ ವಾಗ್ದಾಳಿ: ರಾಜಕೀಯ ಸಂಚಲನ … ಮಂಡ್ಯದ ರಾಜಕೀಯ ಅಖಾಡ ಈಗ ಕೇವಲ ಅಭಿವೃದ್ಧಿಯ ಚರ್ಚೆಯಾಗಿ ಉಳಿದಿಲ್ಲ, ಅದು ವೈಯಕ್ತಿಕ ಘನತೆ ಮತ್ತು ಅಧಿಕಾರದ ಅಹಂ ನಡುವಿನ ಸತ್ವಪರೀಕ್ಷೆಯಾಗಿ ಮಾರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮದ್ದೂರು ನಗರಸಭೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಕಿಡಿಕೊಟ್ಟರೆ, ಶಾಸಕ ಉದಯ್ ಅವರು ಆ ಕಿಚ್ಚಿಗೆ ಪ್ರತ್ಯುತ್ತರದ ತುಪ್ಪ ಸುರಿದಿದ್ದಾರೆ. ಗೆದ್ದಲಗೆರೆಯಿಂದ ಬೆಂಗಳೂರಿನವರೆಗೆ ಕೇಳಿಬರುತ್ತಿರುವ ಈ ವಾಕ್ಸಮರವು ಕೇವಲ ರಾಜಕೀಯ ಪಲ್ಲಟವೋ ಅಥವಾ ಹೊಸ ನಾಯಕತ್ವದ ಉದಯವೋ? ಈ ಸಂಘರ್ಷದ ಆಳದಲ್ಲಿ ಅಡಗಿರುವ ಸತ್ಯಗಳೇನು? ಶಾಸಕ ಉದಯ್ ಅವರು ಕುಮಾರಸ್ವಾಮಿ ಅವರ ಟೀಕೆಗಳಿಗೆ ನೀಡಿರುವ ತೀಕ್ಷ್ಣ ತಿರುಗೇಟಿನ 5 ಪ್ರಮುಖ ಆಯಾಮಗಳು ಇಲ್ಲಿವೆ: ರಿಯಲ್ ಎಸ್ಟೇಟ್ ಆರೋಪ ಮತ್ತು ವಾಸ್ತವದ ನೆಲೆಗಟ್ಟು … ಗೆದ್ದಲಗೆರೆಯನ್ನು ನಗರಸಭೆಯ ವ್ಯಾಪ್ತಿಗೆ ಸೇರಿಸುವ ಮೂಲಕ ಉದಯ್…

ಮುಂದೆ ಓದಿ..
ಸುದ್ದಿ 

ಇತ್ತೀಚೆಗೆ ಒಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ  : ಏನಾಗಿದೆ ನಮ್ಮ ಭಾರತೀಯ ಗಾಯಕಿಯರಿಗೆ?

Taluknewsmedia.com

Taluknewsmedia.comಇತ್ತೀಚೆಗೆ ಒಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ  : ಏನಾಗಿದೆ ನಮ್ಮ ಭಾರತೀಯ ಗಾಯಕಿಯರಿಗೆ? ಒಂದೇ ಕಾಲದಲ್ಲಿ ಶಬ್ದ, ಸಾಹಿತ್ಯ, ಶ್ರುತಿ ಮತ್ತು ಸಂಯಮದಿಂದ ಗುರುತಿಸಿಕೊಂಡಿದ್ದ ಮಹಿಳಾ ಗಾಯನ ಲೋಕ ಇಂದು ಯಾವ ದಿಕ್ಕಿಗೆ ಹೋಗುತ್ತಿದೆ?ಒಂದು ಕಾಲ ಇತ್ತು. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಸುಶೀಲಾ, ಚಿತ್ರಾ, ಜಾನಕಿ, ಅನುರಾಧಾ ಪೌಡ್ವಾಲ್, ಅಲ್ಕಾ ಯಾಗ್ನಿಕ್… ಅವರ ಹಾಡುಗಳಲ್ಲಿ ಶರೀರವಲ್ಲ, ಶಬ್ದಕ್ಕೆ ಗೌರವ ಇತ್ತು. ವೇದಿಕೆಯಲ್ಲಿ ಅವರು ನಿಂತು ಹಾಡುತ್ತಿದ್ದರು, ಹಾಡೇ ಅವರ ಅಸ್ತ್ರವಾಗಿತ್ತು. ಆದರೆ ಇಂದು? ನೇಹಾ ಕಕ್ಕರ್ ವೇದಿಕೆಯಲ್ಲಿ “I want one lollipop… two lollipop” ಎಂದು ಹಾಡುತ್ತಾ ಕುಣಿದರೆ,ಸುನಿಧಿ ಚೌಹಾನ್‌ — ಅಸಾಧಾರಣ ಶ್ರುತಿ, ಶಕ್ತಿ, ಶಬ್ದದ ಮಾಲಕಿ — ಚಿಕ್ಕ ಬಟ್ಟೆ ಹಾಕಿಕೊಂಡು ಕುಣಿದುಕೊಳ್ಳಬೇಕಾದ ಅನಿವಾರ್ಯತೆ ಯಾಕೆ ಬಂದಿದೆ? ಇಲ್ಲಿ ಪ್ರಶ್ನೆ ಮಹಿಳೆಯ ಬಟ್ಟೆಯ ಬಗ್ಗೆ ಅಲ್ಲ.ಪ್ರಶ್ನೆ ಕಲೆ ಎಲ್ಲಿ ನಿಂತಿದೆ? ಮಾರುಕಟ್ಟೆ…

ಮುಂದೆ ಓದಿ..
ಸುದ್ದಿ 

ಜೈಲಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗ ಘಟನೆಯ ಪ್ರಮುಖ ಅಂಶಗಳು…

Taluknewsmedia.com

Taluknewsmedia.comಜೈಲಿನಲ್ಲಿ ಗಾಂಜಾ ಸಾಗಾಟ: ಶಿವಮೊಗ್ಗ ಘಟನೆಯ ಪ್ರಮುಖ ಅಂಶಗಳು… ಜೈಲುಗಳೆಂದರೆ ಅಭೇದ್ಯ ಕೋಟೆಗಳೆಂದು ನಾವು ಭಾವಿಸುತ್ತೇವೆ, ಆದರೆ ಅಲ್ಲಿಯೂ ಭದ್ರತೆಯನ್ನು ಮೀರಿ ಅಪರಾಧ ಚಟುವಟಿಕೆಗಳು ನಡೆಯಲು ಯತ್ನಿಸುತ್ತವೆ. ಇತ್ತೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದ ಒಂದು ಘಟನೆಯು ಈ ಸವಾಲನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಘಟನೆಯಲ್ಲಿ, ಮದರಿ ಪಾಳ್ಯದ ನಿವಾಸಿಗಳಾದ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22) ಮತ್ತು ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂಬ ಇಬ್ಬರು ವ್ಯಕ್ತಿಗಳು ಜೈಲಿನಲ್ಲಿರುವ ಕೈದಿಯೊಬ್ಬರನ್ನು ಭೇಟಿಯಾಗುವ ನೆಪದಲ್ಲಿ ಗಾಂಜಾ ಸಾಗಿಸಲು ಯತ್ನಿಸಿದ್ದಾರೆ. ತಮ್ಮ ಪ್ಯಾಂಟ್‌ನಲ್ಲಿ ಗಾಂಜಾವನ್ನು ಬಚ್ಚಿಟ್ಟುಕೊಂಡು ಬಂದಿದ್ದ ಇವರ ಕೃತ್ಯ, ಕೈದಿಗಳ ಭೇಟಿಯಂತಹ ಸಾಮಾನ್ಯ ಸಂದರ್ಭಗಳನ್ನು ಸಹ ಅಪರಾಧಿಗಳು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಇಂತಹ ಘಟನೆಗಳು ಭೇಟಿ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಅಲುಗಾಡಿಸುವುದಲ್ಲದೆ, ಪ್ರತಿಯೊಂದು ಸಂವಾದವನ್ನು ಅನುಮಾನದಿಂದ ನೋಡುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತವೆ, ಇದು ಪುನರ್ವಸತಿ ಪ್ರಕ್ರಿಯೆಯನ್ನು…

ಮುಂದೆ ಓದಿ..
ಸುದ್ದಿ 

ಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ…

Taluknewsmedia.com

Taluknewsmedia.comಓದಿಲ್ಲವೆಂದು 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳನೆ – ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಕೃತ್ಯ… ಓದಿಲ್ಲ ಅಂತ 3ನೇ ತರಗತಿ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ ಸರ್ಕಾರಿ ಶಾಲೆ ಶಿಕ್ಷಕಿರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮದಲ್ಲಿ ನಡೆದ ಘಟನೆ ಶಿಕ್ಷಣ ವ್ಯವಸ್ಥೆಯ ಮಾನವೀಯತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಓದಿಲ್ಲ ಎನ್ನುವ ಒಂದೇ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಮನಸೋಇಚ್ಛೆ ಥಳಿಸಿರುವ ಅಮಾನವೀಯ ಘಟನೆ ಸರ್ಕಾರಿ ಉರ್ದು ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕಿ ಹರ್ಷಿಯಾ ತಸ್ಕಿನ್, ಓದದೆ ಶಾಲೆಗೆ ಬಂದಿದ್ದಾನೆ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನ ಮೇಲೆ ಭಾರೀ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಾಲಕನ ದೇಹದ ಮೇಲೆ ಬಾಸುಂಡೆಗಳು ಕಾಣಿಸಿಕೊಂಡಿದ್ದು, ಥಳನೆಯ ತೀವ್ರತೆ ಎಷ್ಟು ಭೀಕರವಾಗಿತ್ತೆಂಬುದಕ್ಕೆ ಇದು ಸಾಕ್ಷಿಯಾಗಿದೆ.ಶಿಕ್ಷಕಿಯ ಕ್ರೂರ ವರ್ತನೆಯಿಂದ ಗಾಯಗೊಂಡ ಬಾಲಕನ ಸ್ಥಿತಿ ಗಂಭೀರವಾಗಿದ್ದು,…

ಮುಂದೆ ಓದಿ..
ಸುದ್ದಿ 

ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ..

Taluknewsmedia.com

Taluknewsmedia.comಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ – ಅಪ್ರಾಪ್ತ ನೇಪಾಳಿ ಬಾಲಕ ಪೊಲೀಸ್ ವಶ.. ಚಿತ್ರಮಂದಿರದ ಮಹಿಳಾ ಶೌಚಗೃಹದಲ್ಲಿ ಕ್ಯಾಮರಾ ಬೆಂಗಳೂರು: ಚಿತ್ರಮಂದಿರವೊಂದರ ಮಹಿಳಾ ಶೌಚಗೃಹದಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ನೇಪಾಳ ಮೂಲದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನೇಪಾಳಿ ಬಾಲಕ ಪೊಲೀಸರ ವಶಕ್ಕೆನೇಪಾಳ ಮೂಲದ 15 ವರ್ಷದ ಅಪ್ರಾಪ್ತನನ್ನು ಸಿನಿಮಾ ವೀಕ್ಷಕರೇ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬ ಬಹಳ ದಿನಗಳಿಂದ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನ ಅಣ್ಣನ ಮಗ ಮನೆಗೆ ಬಂದಿದ್ದ, ಭಾನುವಾರ ಕೆಲಸಕ್ಕೆ ಹೋಗುವಾಗ ಅಣ್ಣನ ಮಗನನ್ನ ಚಿತ್ರಮಂದಿರಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆ ಬಾಲಕ ಮಹಿಳಾ ಶೌಚಗೃಹಕ್ಕೆ ತೆರಳಿ ರಹಸ್ಯ ಕ್ಯಾಮರಾ ಇಟ್ಟಿದ್ದ. ಮಹಿಳೆಯೊಬ್ಬರು ಶೌಚಕ್ಕೆ ತೆರಳಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಗಾಬರಿಗೊಂಡ ಮಹಿಳೆ ಕೂಡಲೇ ಚಿತ್ರಮಂದಿರದ…

ಮುಂದೆ ಓದಿ..
ಸುದ್ದಿ 

ಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ…

Taluknewsmedia.com

Taluknewsmedia.comಶೂನ್ಯ ಶಿಕ್ಷೆ, ಅಮಾನವೀಯ ಹೇಳಿಕೆ: ಅಂಕಿ-ಅಂಶಗಳು ತೆರೆದಿಟ್ಟ ಕರ್ನಾಟಕದ ಕರಾಳ ಸತ್ಯ… “ಅತ್ಯಾಚಾರ ಅನಿವಾರ್ಯವಾದರೆ ಮಲಗಿ ಆನಂದಿಸಬೇಕು” –  ಈ ಮಾತುಗಳು 2021 ರ  ಬೆಳಗಾವಿ ವಿಧಾನ ಸಭೆ ಕಲಾಪದಲ್ಲಿ  ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಶಾಸಕ ರಮೇಶ್ ಕುಮಾರ್ ಅವರದ್ದು. ಸದನದಲ್ಲಿ  ಇಂತಹದೊಂದು ಅಮಾನವೀಯ ಹೇಳಿಕೆ ನೀಡಿದು ಕೇವಲ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ತೋರಿಸುವುದಿಲ್ಲ, ಬದಲಿಗೆ ನಮ್ಮ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ ಆಳದಲ್ಲಿ ಬೇರೂರಿರುವ ಒಂದು ಗಂಭೀರ ಸಮಸ್ಯೆಯ ಪ್ರತಿಬಿಂಬವಾಗಿದೆ. ಇದು ಒಬ್ಬ ಜನಪ್ರತಿನಿಧಿಯ ಬೇಜವಾಬ್ದಾರಿ ಹೇಳಿಕೆಗಿಂತ ಮಿಗಿಲಾದದ್ದು.ಈ ಹೇಳಿಕೆ ಕೇವಲ ನಾಲಿಗೆಯ ಪ್ರಮಾದವಲ್ಲ, ಬದಲಿಗೆ ಅಂಕಿ-ಅಂಶಗಳು ದೃಢಪಡಿಸುವ ವ್ಯವಸ್ಥಿತ ವೈಫಲ್ಯದ ಮುಖವಾಣಿ. ಈ ಲೇಖನದಲ್ಲಿ ನಾವು ಪೊಲೀಸ್ ಇಲಾಖೆಯದ್ದೇ ಡೇಟಾವನ್ನು ಬಳಸಿ, ಸಂತ್ರಸ್ತರಿಗೆ ನ್ಯಾಯ ಹೇಗೆ ಶೂನ್ಯವಾಗುತ್ತಿದೆ ಎಂಬುದನ್ನು ಅನಾವರಣ ಮಾಡುತ್ತೇವೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂತಹ ಗಂಭೀರ ಅಪರಾಧಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಕಟು ಸತ್ಯವನ್ನು…

ಮುಂದೆ ಓದಿ..
ಸುದ್ದಿ 

ಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ,

Taluknewsmedia.com

Taluknewsmedia.comಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ, ಸಮಾಜವನ್ನು ಕಟ್ಟುವ ತಿದ್ದುವ ಪ್ರಶ್ನಿಸುವ ನೊಂದವರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ವಕೀಲರು ಮಾಡುವುದರಿಂದ ಅವರನ್ನು ಸಾಮಾಜಿಕ ಅಭಿಯಂತರರು Social Engineers ಎಂದು ಕರೆಯುತ್ತಾರೆಂಬ ಲಾ ಕಾಲೇಜು ಮೇಷ್ಟ್ರುಗಳ ಮಾತನ್ನು ನಂಬಿಕೊಂಡು, ಅವರು ನೀಡಿದ ಮಹಾತ್ಮ ಗಾಂಧೀಜಿ, ವಲ್ಲಭಭಾಯ್ ಪಟೇಲ್, ಡಾ ಬಾಬು ರಾಜೇಂದ್ರ ಪ್ರಸಾದ್, ಡಾ ಬಿ ಆರ್ ಅಂಬೇಡ್ಕರ್, ಕರ್ನಾಟಕದವರೇ ಆದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ಕೆ ವಿ ಶಂಕರೇಗೌಡರು, ಬಂಗಾರಪ್ಪ,ಮೊಯ್ಲಿ, ಎಸ್ ಆರ್ ಬೊಮ್ಮಯಿ, ವೈ ಕೆ ರಾಮಯ್ಯ ಮತ್ತು ತೀರಾ ಇತ್ತೀಚೆಗಿನ ಎ ಪಿ ರಂಗನಾಥ್ ಮುಂತಾದವರನ್ನು ಆದರ್ಶವಾಗಿಟ್ಟುಕೊಂಡು ಸಮಾಜವನ್ನು / ಸರ್ಕಾರವನ್ನು / ಭ್ರಷ್ಟರು ಮತ್ತು ದುಷ್ಟರನ್ನು ನೀವು ಪ್ರಶ್ನಿಸ ತೊಡಗಿದರೆ ನಿಮ್ಮ ಬಾಯಿಗೆ ಬೀಗ ಜಡಿಯಲು ಸಂವಿಧಾನ ಬದ್ಧ ಸಂಸ್ಥೆಯನ್ನು ಬಳಸಿಕೊಳ್ಳುತ್ತಾರೆ ! ಪ್ರತಿಯೊಂದು ಸಾರ್ವಜನಿಕ…

ಮುಂದೆ ಓದಿ..
ಸುದ್ದಿ 

‘ಬನ’ ಮೂಲಕ ಕೊಸ್ಟಲ್‌ವುಡ್‌ಗೆ ಜೆ.ಪಿ. ಶೆಟ್ಟಿ ಎಂಟ್ರಿ..

Taluknewsmedia.com

Taluknewsmedia.com‘ಬನ’ ಮೂಲಕ ಕೊಸ್ಟಲ್‌ವುಡ್‌ಗೆ ಜೆ.ಪಿ. ಶೆಟ್ಟಿ ಎಂಟ್ರಿ.. ಬೆಂಗಳೂರು ಸುದ್ದಿ ಮಾಧ್ಯಮದಲ್ಲಿ ನಿರೂಪಕರಾಗಿ ಹೆಸರು ಮಾಡಿದ್ದ ಹಲವರು ಈಗಾಗಲೇ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ. ಅಪರ್ಣ, ಗೌದೀಶ್ ಅಕ್ಕಿ ರೆಹಮಾನ್, ಜಾಹ್ನವಿ, ಶೀತಲ್ ಶೆಟ್ಟಿ, ಪ್ರಮೋದ್ ಬೋಪಣ್ಣ, ವೆಂಕಟೇಶ್ ಅಡಿಗ ಅವರ ಸಾಲಿಗೆ ಇದೀಗ ಮತ್ತೊಬ್ಬ ನಿರೂಪಕ ಜಯಪ್ರಕಾಶ್ ಶೆಟ್ಟಿ (ಜೆ.ಪಿ. ಶೆಟ್ಟಿ) ಸೇರಿಕೊಂಡಿದ್ದಾರೆ. ಜಗ್ಗೇಶ್ ನಾಯಕನಾಗಿದ್ದ ‘ಸಾಫ್ಟ್‌ವೇರ್ ಗಂಡ’ ಚಿತ್ರ ಹಾಗೂ ‘ನಿರ್ಭಯ’ ಧಾರಾವಾಹಿಯಲ್ಲಿ ನಟಿಸಿದ್ದ ಜೆ.ಪಿ. ಶೆಟ್ಟಿ, ಇದೀಗ ‘ಬನ’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಧರ್ಮದೈವ’ ಹಾಗೂ 75 ದಿನಗಳ ಕಾಲ ಪ್ರದರ್ಶನ ಕಂಡ ‘ಧರ್ಮ ಚಾವಡಿ’ ಚಿತ್ರಗಳ ಖ್ಯಾತಿಯ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಜೆ.ಪಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ…

ಮುಂದೆ ಓದಿ..