ಸುದ್ದಿ 

ಯಶವಂತಪುರದಲ್ಲಿ ಗಾಂಜಾ ಮಾರಾಟ: ಬಿಹಾರ ಮೂಲದ ವ್ಯಕ್ತಿಯಿಂದ 1.9 ಕೆ.ಜಿ ಗಾಂಜಾ ವಶ.

Taluknewsmedia.com

Taluknewsmedia.comಯಶವಂತಪುರದ 90 ರೂಟ್ ರಸ್ತೆಯ ಚರ್ಚ್ ಮುಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದ ಚಟುವಟಿಕೆಯಲ್ಲಿ ತೊಡಗಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿತನಿಂದ 1.9 ಕೆ.ಜಿ ಗಾಂಜಾ ಹಾಗೂ ನಗದು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಶ್ರೀ ಈರಣ್ಣ ನಣಜಗಿ ಅವರು ನೀಡಿದ ಮಾಹಿತಿ ಪ್ರಕಾರ, ದಿನಾಂಕ 19/06/2025 ರಂದು ಸಂಜೆ ಸುಮಾರು 6 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ವೇಳೆ ಖಚಿತ ಬಾತ್ಮೀದಾರರಿಂದ ಮಾದಕ ವಸ್ತು ಮಾರಾಟದ ಮಾಹಿತಿ ಲಭಿಸಿದ ತಕ್ಷಣ, ಸಹಾಯಕ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ತಂಡದೊಂದಿಗೆ ದಾಳಿ ನಡೆಸಲಾಯಿತು. ಪಂಚರರು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ, ಅಲ್ಲಿ ಇದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ದಿನೇಶ್ ಮಂಡಲ್ (30 ವರ್ಷ) ಎಂಬ ಬಿಹಾರ…

ಮುಂದೆ ಓದಿ..
ಸುದ್ದಿ 

ಲಾರಿ ಸ್ಟ್ಯಾಂಡ್ ಬಳಿ ಅಕ್ರಮ ಗಾಂಜಾ ಮಾರಾಟ: ಇಬ್ಬರು ಯುವಕರು ಪೊಲೀಸರ ಬಲೆಗೆ..

Taluknewsmedia.com

Taluknewsmedia.comನಗರದ ಲಾರಿ ಸ್ಟ್ಯಾಂಡ್ ಬಳಿಯ ರವಿತೇಜ್ ಪೆಟ್ರೋಲ್ ಬಂಕ್ ಹತ್ತಿರದ ಖಾಲಿ ಜಾಗದಲ್ಲಿ ಅಕ್ರಮ ಗಾಂಜಾ ಸಾಗಣೆ ಮತ್ತು ಮಾರಾಟ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. R. M. C ಯಾರ್ಡ್ ಯ ಪೊಲೀಸ್ ಅಧಿಕಾರಿಗಳು ದಿನಾಂಕ 19/06/2025 ರಂದು ಸಂಜೆ ಸುಮಾರು 7.30ರ ಸುಮಾರಿಗೆ ಗಸ್ತಿನಲ್ಲಿ ಇದ್ದಾಗ, ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅಲ್ಲಿಗೆ ಬೇಟಿ ನೀಡಿದಾಗ, ರಾಜುಕುಮಾರ್ ಮತ್ತು ಸೌರವ್ ಎಂಬ ಇಬ್ಬರು ವ್ಯಕ್ತಿಗಳು ಮಾಧಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ಈ ಮೂಲಕ ಅವರು ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದರೆಂದು ತಿಳಿದುಬಂದಿದ್ದು, ಸಾಮಾಜಿಕ ಸ್ವಾಸ್ಥ್ಯತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಕ್ರಿಯೆಯಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ಸಂಬಂಧಿತ…

ಮುಂದೆ ಓದಿ..
ಸುದ್ದಿ 

ವಾಟ್ಸ್‌ಆಪ್ ಹ್ಯಾಕ್ ಮಾಡಿ, ಸ್ನೇಹಿತ ಎಂದು ನಂಬಿಸಿ ₹70,000 ಮೋಸ – ಸೈಬರ್ ಕ್ರೈಂನಲ್ಲಿ ದೂರು

Taluknewsmedia.com

Taluknewsmedia.comವಾಟ್ಸ್‌ಆಪ್ ಖಾತೆ ಹ್ಯಾಕ್ ಮಾಡಿ ಹಣದ ಬೇಡಿಕೆ ಇಟ್ಟು, ಆನ್‌ಲೈನ್ ಮೂಲಕ ₹70,000 ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗಂಡೆಪಲ್ಲಿ ಮಧು ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಧು ರವರು ನೀಡಿರುವ ದೂರಿನ ಪ್ರಕಾರ, ಜೂನ್ 19, 2025 ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಅವರ ಸ್ನೇಹಿತ ವೆಂಕಟಶಿವ ಪ್ರಸಾದ್ ಅವರ ವಾಟ್ಸ್‌ಆಪ್ ನಂಬರ್ (8197449432) ಮೂಲಕ ಹಣಕ್ಕಾಗಿ ಸಂದೇಶ ಬಂದಿದೆ. ಕೆಲಸದ ಒತ್ತಡದಲ್ಲಿದ್ದ ಮಧು, ಅದು ನಿಜವಾದ ಸಂದೇಶವೆಂದು ನಂಬಿ ಯಾವುದೇ ದೃಢೀಕರಣವಿಲ್ಲದೇ ಮೆಸೇಜಿನಲ್ಲಿ ನೀಡಲಾಗಿದ್ದ 8271987069 ನಂಬರ್‌ಗೆ PhonePe ಮತ್ತು Google Pay ಮೂಲಕ ಒಟ್ಟು ₹70,000 ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ ಸ್ವಲ್ಪ ಹೊತ್ತಿನ ನಂತರ, ಅವರ ಇತರ ಸ್ನೇಹಿತರೂ ಇದೇ ರೀತಿಯ ವಾಟ್ಸ್‌ಆಪ್ ಸಂದೇಶಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಮಧುವಿಗೆ ಲಭ್ಯವಾಗಿದ್ದು, ತಕ್ಷಣವೇ ಆತ…

ಮುಂದೆ ಓದಿ..
ಸುದ್ದಿ 

ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟಕ್ಕೆ ಸಿಸಿಬಿ ದಾಳಿ – ಇಬ್ಬರು ಆರೋಪಿತರ ಬಂಧನ…

Taluknewsmedia.com

Taluknewsmedia.comನಗರದ ನುರಾನಿ ಮಸೀದಿ ಹತ್ತಿರ, ಅಲ್‌ಅಮೀನ್ ಅಪಾರ್ಟ್‌ಮೆಂಟ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಜೂಜಾಟದ ಮೇಲೆ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ದಿ. 18.06.2025 ರಂದು ಸಂಜೆ ಸುಮಾರು 4.45ರ ವೇಳೆಗೆ ಪ್ರಕರಣ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ನಾಗಪ್ಪ ಅಂಬಿಗೇರ್ ಅವರು ದಳದ ಎಸಿಪಿ ಅವರಿಂದ ಶೋಧನಾ ವಾರೆಂಟ್ ಹಾಗೂ ದಾಳಿ ನಡೆಸಲು ನ್ಯಾಯಾಲಯದ ಅನುಮತಿ ಪಡೆದು ಸ್ಥಳಕ್ಕೆ ತೆರಳಿದರು. ಪೊಲೀಸರು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 6.40ರ ವೇಳೆಗೆ ದಾಳಿ ನಡೆಸಿ ಆರೋಪಿತರಾದ ಉಜ್ವಲ್ ಮತ್ತು ಮಂಜುನಾಥ್ ಎಂಬುವರನ್ನು ಸ್ಥಳದಲ್ಲಿಯೇ ಬಂಧಿಸಿದರು. ಬಂಧಿತರಿಂದ ₹9,300 ನಗದು, 2 ಮೊಬೈಲ್ ಫೋನ್‌ಗಳು ಹಾಗೂ 21 ಆನ್‌ಲೈನ್ ಬೆಟ್ಟಿಂಗ್ ಸ್ಕ್ರೀನ್‌ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಯಾವುದೇ ವಿಧದ ಅಧಿಕೃತ…

ಮುಂದೆ ಓದಿ..
ಸುದ್ದಿ 

ಬಸಾಪುರದಲ್ಲಿ ದ್ವಿಚಕ್ರ ವಾಹನ ಸುಜಿಕಿ ಆಕ್ಸಿಸ್ 125 ಕಳುವು : ಪ್ರಕರಣ ದಾಖಲು.

Taluknewsmedia.com

Taluknewsmedia.com.ಬೆಂಗಳೂರು, ಜೂನ್ 22 – ನಗರದ ಬಸಾಪುರದಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳುವು ಪ್ರಕರಣ ಬೆಳಕಿಗೆ ಬಂದಿದೆ. ವೇಣು ಕುಮಾರ್ Y M ಎಂಬುವರು ತಮ್ಮ ಸ್ವಂತ ಉಪಯೋಗಕ್ಕಾಗಿ ಖರೀದಿಸಿಕೊಂಡಿದ್ದ ಸುಜಿಕಿ ಆಕ್ಸಿಸ್ 125 ದ್ವಿಚಕ್ರ ವಾಹನವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದ್ದು, ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ವೇಣು ಕುಮಾರ್ ಪ್ರಕಾರ, ದಿನಾಂಕ 12/06/2025 ರಂದು ರಾತ್ರಿ 9:30 ಗಂಟೆಗೆ, ಅವರು ತಮ್ಮ KA 51 JH 6201 ನೋಂದಣಿ ಸಂಖ್ಯೆಯ ಸುಜಿಕಿ ಆಕ್ಸಿಸ್ 125 (ಮಾಡೆಲ್ 2025) ವಾಹನವನ್ನು ಬಸಾಪುರದ ಮೀನಾಕ್ಷಿ ಬಿಲ್ಡಿಂಗ್, ಬ್ರಿಟಿಷ್ ಸ್ಕೂಲ್ ಎದುರು 3ನೇ ಕ್ರಾಸ್‌ನಲ್ಲಿ ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಆದರೆ, 13/06/2025 ಬೆಳಿಗ್ಗೆ 8:30 ಗಂಟೆಗೆ ಅವರು ವೀಕ್ಷಿಸಿದಾಗ ವಾಹನ ಅದರ ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿ, ಎಲ್ಲೆಲ್ಲೂ ಹುಡುಕಿದರೂ ಪತ್ತೆ ಮಾಡಲಾಗದ ಕಾರಣದಿಂದ,…

ಮುಂದೆ ಓದಿ..
ಸುದ್ದಿ 

ನಕಲಿ ‘ಮಫ್ತಿ’ ಬ್ರಾಂಡ್ ಬಟ್ಟೆಯ ಮಾರಾಟ: ಕಂಪನಿಯ ಪ್ರತಿನಿಧಿಯಿಂದ ಪೊಲೀಸರಿಗೆ ದೂರು.

Taluknewsmedia.com

Taluknewsmedia.comನಗರದ ಬಿ.ಎಸ್.ಕೆ-1ನೇ ಹಂತದ 22ನೇ ಮುಖ್ಯರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ, ಪ್ರಸಿದ್ಧ ಮಫ್ತಿ (Muffthi) ಬ್ರಾಂಡ್ ಹೆಸರಿನಲ್ಲಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕಂಪನಿಯ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೆ/ಎಸ್ ಬ್ರಾಂಡ್ ಪ್ರೋಡಕ್ಟೋರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶ್ರೀ ಸ್ಟೀಫನ್ ರಾಜ್ ಅವರು ದಿನಾಂಕ 20.06.2025 ರಂದು ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ, ಅಲ್ವೇಸ್ ಎಂಬ ಬಟ್ಟೆ ಅಂಗಡಿಯಲ್ಲಿ ಮಫ್ತಿ ಬ್ರಾಂಡ್ ಹೆಸರಿನಲ್ಲಿ ನಕಲಿ ಗಾರ್ಮೆಂಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ಕಂಪನಿಯ ಬ್ರಾಂಡ್ ಮೌಲ್ಯವನ್ನು ಹಾನಿಗೊಳಿಸುತ್ತಿರುವುದರ ಜೊತೆಗೆ ಗ್ರಾಹಕರನ್ನೂ ಮೋಸಗೊಳಿಸಲಾಗುತ್ತಿದೆ. ಈ ನಕಲಿ ಉತ್ಪನ್ನಗಳ ಮಾರಾಟದಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ, ಸರಿಯಾದ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ…

ಮುಂದೆ ಓದಿ..
ಸುದ್ದಿ 

ಮಧ್ಯರಾತ್ರಿ ಯುವತಿಯ ಮನೆ ಮೇಲೆ ದಾಳಿ: ಮಾಜಿ ಪ್ರೇಮಿಯಿಂದ ಕಿರುಕುಳ, ಹಲ್ಲೆ ಯತ್ನ..

Taluknewsmedia.com

Taluknewsmedia.comಒಂದು ಕಾಲದ ಪ್ರೇಮಿ ಮಧ್ಯರಾತ್ರಿ ಯುವತಿಯ ಮನೆಗೆ ನುಗ್ಗಿ ಕಿರುಕುಳ ನೀಡಿದ ಹಾಗೂ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಯುವತಿ ವೈಷ್ಣವಿ ಅವರು ಹನುಮಂತನಗರದ ಪೊಲೀಸರಿಗೆ ದೂರು ನೀಡಿದ್ದು, ಯೋಗೇಶ್ ಎಂಬಾತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವೈಷ್ಣವಿಯವರ ಮಾಹಿತಿ ಪ್ರಕಾರ, ವೈಷ್ಣವಿ ಮತ್ತು ಯೋಗೇಶ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯೋಗೇಶ್ ನಡತೆ ಸರಿ ಇಲ್ಲದ ಕಾರಣ ಸಂಬಂಧ ಮುರಿದುಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ ನಿರಂತರವಾಗಿ ವಿವಿಧ ಅಪರಿಚಿತ ನಂಬರ್‌ಗಳಿಂದ ಕರೆಮಾಡಿ ಅವಳಿಗೆ ಕಿರುಕುಳ ನೀಡುತ್ತಿದ್ದನು. ದಿನಾಂಕ 20ರಂದು ರಾತ್ರಿ ಸುಮಾರು 12:30ರ ಸುಮಾರಿಗೆ, ಯೋಗೇಶ್ ವೈಷ್ಣವಿಯ ಮನೆಯ ಬಳಿಗೆ ಬಂದು ಜೋರಾಗಿ ಕೂಗಾಡುತ್ತಿದ್ದನು. ಈ ವಿಷಯವನ್ನು ತಾಯಿ ಗಮನಿಸಿದಾಗ, ಯಾಕೆ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು, ಸಮೀಪದಲ್ಲಿದ್ದ ಕಲ್ಲಿನಿಂದ ವೈಷ್ಣವಿಯ…

ಮುಂದೆ ಓದಿ..
ಸುದ್ದಿ 

ಗೋಡಾನ್ ಮೇಲೆ ನಾಲ್ವರು ಅಪರಿಚಿತರ ದಾಳಿ: ಕಾರ್ಮಿಕನಿಗೆ ಹಲ್ಲೆ, ಚಾಕುವಿನಿಂದ ಬೆದರಿಕೆ…

Taluknewsmedia.com

Taluknewsmedia.comಬೆಂಗಳೂರು, ಜೂನ್ 22: ನಗರದ ಮಾರುತಿ ಟೈಲ್ಸ್ ಗೋಡಾನ್ ನಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ, ಕಾರ್ಮಿಕನಿಗೆ ಹಲ್ಲೆ ನಡೆಸಿದ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶ್ರೀ ಸದಾನಂದ ಅವರು ಕೊಟ್ಟಿರುವ ದೂರಿನ ಪ್ರಕಾರ, ಅವರು ಕಳೆದ ಐದು ವರ್ಷಗಳಿಂದ ಗೋಡಾನ್ ನಲ್ಲಿ ವಾಸವಿದ್ದು ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಗೋಡಾನ್ ನಲ್ಲಿ ಆಸ್ಸಾಂ ಮೂಲದ ಆರು ಕಾರ್ಮಿಕರು ಸಹ ವಾಸವಿದ್ದು, ಕೆಲಸ ಮಾಡುತ್ತಿದ್ದಾರೆ. ದಿನಾಂಕ 18-06-2025 ರಂದು ಸಂಜೆ 6.45ರ ಸುಮಾರಿಗೆ, ಗೋಡಾನ್ ಮುಂದೆ ನಾಲ್ವರು ಅಪರಿಚಿತರು ನಿಂತು ಶಂಕಿಸಬಹುದಾದ ಚಲನವಲನಗಳಲ್ಲಿ ತೊಡಗಿದ್ದರು. ಈ ವೇಳೆ ಸದಾನಂದ ಹಾಗೂ ಕಾರ್ಮಿಕ ರಾಜು ಚೌಹಾಣ್ ಅವರು ಗೋಡಾನ್ ಗೇಟ್ ಬಳಿ ಹೋದಾಗ, ಆ ವ್ಯಕ್ತಿಗಳಲ್ಲಿ ಒಬ್ಬರು “ಏ ಬಾರೋಲೇ” ಎಂದು ಕೂಗಿದ್ದು, ಪ್ರತಿಕ್ರಿಯೆ ನೀಡಿದ ತಕ್ಷಣ ನಾಲ್ವರೂ ಏಕಾಏಕಿ ದೌಡಾಯಿಸಿ ಬಲವಂತವಾಗಿ…

ಮುಂದೆ ಓದಿ..
ಸುದ್ದಿ 

ಮಹಿಳೆಯೊಬ್ಬರಿಗೆ ಅಸಭ್ಯ ವರ್ತನೆ ಹಾಗೂ ಜೀವ ಬೆದರಿಕೆ: ಇಬ್ಬರ ವಿರುದ್ಧ ಪೊಲೀಸ್ ದೂರು..

Taluknewsmedia.com

Taluknewsmedia.comಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಯೊಬ್ಬರ ಮಾನಕ್ಕೆ ಧಕ್ಕೆಯುಂಟುಮಾಡಿದ ಆರೋಪ ಮತ್ತು ಬಳಿಕ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಅಶೋಕ್ ಹಾಗೂ ಆಶಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಮತಿ ರಾಜೇಶ್ವರಿ ಅವರು ನೀಡಿದ ದೂರಿನ ಪ್ರಕಾರ, 18 ಜೂನ್ 2025 ರಂದು ಬೆಳಿಗ್ಗೆ ಸುಮಾರು 6:00 ಗಂಟೆಗೆ, ಅವರ ತಂಗಿ ವನಜಾಕ್ಷಿ ಅವರು ಅಂಜನಾಪುರದ 80 ಅಡಿ ರಸ್ತೆಯ ಡಿಪೋದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಅಶೋಕ್ ಎಂಬಾತನು ತನ್ನ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಂಗಿಯನ್ನು ತಡೆದು “ಎಲ್ಲಿ ಹೋಗುತ್ತಿದ್ದೀಯಾ?” ಎಂದು ಕೇಳಿದ್ದನು. ತದನಂತರ, ಆಕೆಯ ಕೈ ಹಿಡಿದು ಎಳೆದಾಡಿ, “ನನ್ನ ಜೊತೆಗೆ ಬಾ” ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವನಜಾಕ್ಷಿ ಶಬ್ದ ಮಾಡಿದಾಗ, ಅಶೋಕ್ ಸ್ಥಳದಿಂದ ಪರಾರಿಯಾದನು.…

ಮುಂದೆ ಓದಿ..
ಸುದ್ದಿ 

ಜಾಮೀನಿನ ನಿಯಮ ಉಲ್ಲಂಘಿಸಿದ ಆರೋಪಿಗೆ ಮತ್ತೆ ದಸ್ತಗಿರಿ – ಬಿಡದಿ ಪೊಲೀಸರು ತಕ್ಷಣದ ಕ್ರಮ

Taluknewsmedia.com

Taluknewsmedia.com392 ಐಪಿಸಿ ಕಾಲಂ ಅಡಿಯಲ್ಲಿ ದೂರು ದಾಖಲಾಗಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಅಜಯ್ ಕುಮಾರ್ (28), ನ್ಯಾಯಾಲಯದ ಜಾಮೀನಿನ ನಿಯಮಗಳನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ, ಬಿಡದಿ ಠಾಣಾ ಪೊಲೀಸರು ಆತನನ್ನು ಮರುದಸ್ತಗಿರಿ ಮಾಡಿದ್ದಾರೆ. ಅಜಯ್ ಕುಮಾರ್, ಮಡಿವಾಳ ಜನಾಂಗದವನು, ಕೆಂಗೇರಿ ಉಪನಗರದ ಬಂಡೆಮಠದ ಬಳಿಯ 1ನೇ ಅಡ್ಡರಸ್ತೆಯ ನಿವಾಸಿಯಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುತ್ತಿದ್ದ. ಆತನ ವಿರುದ್ಧದ ಪ್ರಕರಣಗಳು ಬಿಡದಿ ಪೊಲೀಸ್ ಠಾಣೆಯಲ್ಲಿ ಮೊ.ನಂ-57/2021 ಹಾಗೂ ಮೊ.ನಂ-323/2021 ರಂತೆ ದಾಖಲಾಗಿದ್ದು, ಸುತ್ತೋಲೆ ಪ್ರಕರಣಗಳು ಕ್ರಮವಾಗಿ ಸಿ.ಸಿ ನಂ-09/2022 ಮತ್ತು ಸಿ.ಸಿ ನಂ-20/2022 ರಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಆರೋಪಿ ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿರುವುದರಿಂದ, ನ್ಯಾಯಾಲಯವು ಈಗಾಗಲೇ ಎರಡು ಉದ್ಘೋಷಣೆಗಳನ್ನು ಹೊರಡಿಸಿದ್ದರ ಬಗ್ಗೆ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಮೊ.ನಂ-57/2021 ಪ್ರಕರಣದಲ್ಲಿ 2024ರ ಫೆಬ್ರವರಿ 8ರಂದು ಹಾಗೂ ಮೊ.ನಂ-323/2021 ಪ್ರಕರಣದಲ್ಲಿ 2023ರ ಆಗಸ್ಟ್ 24ರಂದು ಉದ್ಘೋಷಣೆಯನ್ನು ಜಾರಿಗೆ ತಂದಿರುವುದಾಗಿ ವರದಿಯಿದೆ.…

ಮುಂದೆ ಓದಿ..