ನಾಗಮಂಗಲ ಕಾಲೇಜಿನಲ್ಲಿ ಜಾತಿ ನಿಂದನೆ ಗೊಂದಲ: ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ವಿರುದ್ಧ ಶಿಕ್ಷಕನ ದೂರು.
Taluknewsmedia.comನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾತಿ ನಿಂದನೆ ಸಂಬಂಧಿತ ಗಂಭೀರ ಆರೋಪ ಉದ್ಭವಿಸಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅವರ ವಿರುದ್ಧ ಅಂಗ್ಲಭಾಷೆ ಉಪನ್ಯಾಸಕ ಶ್ರೀ ಸುರೇಶ್ ವೈ. ಅವರು ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.ದೂರುದಾರರ ಪ್ರಕಾರ, ದಿನಾಂಕ 16/06/2025 ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಧನಂಜಯ ಮತ್ತು ಜೀವಶಾಸ್ತ್ರ ಉಪನ್ಯಾಸಕ ಗಂಗಾಧರ ವಿ.ಆರ್. ನಡುವೆ ವಾಗ್ವಾದ ಉಲ್ಬಣಗೊಂಡಿತು. ಮಧ್ಯ ಪ್ರವೇಶಿಸಿ ಸಮ್ಮಜಿಸಲು ಪ್ರಯತ್ನಿಸಿದ ಉಪನ್ಯಾಸಕ ಸುರೇಶ್ ಅವರ ಮೇಲೂ ಧನಂಜಯ ಅವರು ಅನಾದರದ ಮಾತುಗಳನ್ನು ಬಳಸಿ ಗದರಿಸಿದ್ದಾರೆ ಎನ್ನಲಾಗಿದೆ.ಸಭೆಯ ಬಳಿಕ ಧನಂಜಯ ಅವರು ಕಾಲೇಜಿನ ಬಾಗಿಲ ಬಳಿ “ನೀನೇನು ಗಂಗಾಧರನನ್ನು ವಹಿಸಿಕೊಳ್ಳುವುದು ಮಾದಿಗ ಜಾತಿಗೆ ಸರಿಯಾಗಿದೆ. ನೀನು ಮೈಸೂರು ರಸ್ತೆ ಮೇಲೆ ಸಾಯುತ್ತಿರುವೆ” ಎಂಬುದಾಗಿ ಹೇಳಿದ್ದು, ಪರಿಶಿಷ್ಟ ಜಾತಿಗೆ…
ಮುಂದೆ ಓದಿ..
