ಅಂಕಣ 

ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಳ್ಳಾರಿ ಸಾಹಿತ್ಯ ಸಮ್ಮೇಳನ ಹಾಗೂ ಸರ್ವಾಧ್ಯಕ್ಷ ಸ್ಥಾನ…….

Taluknewsmedia.com

Taluknewsmedia.comಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ತಾಕ್ ಅವರು ಆಯ್ಕೆಯಾಗಿದ್ದಾರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೀಗ ಅವರು ಆ ಆಹ್ವಾನ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.ಈ ನಡುವೆ ಅವರು ಒಪ್ಪಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಏಕೆಂದರೆ ಎರಡು ವರ್ಷದ ಹಿಂದೆ ಕಲ್ಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಕೆಲವು ಧೋರಣೆಗಳನ್ನು ವಿರೋಧಿಸಿ ಪ್ರಗತಿಪರ ಚಿಂತಕರು ಪ್ರತ್ಯೇಕ ಜನ ಸಾಹಿತ್ಯ ಸಮ್ಮೇಳನ ಏರ್ಪಡಿಸಿದ್ದರು. ಅದಕ್ಕೆ ಭಾನು ಮುಷ್ತಾಕ್ ಅವರೇ ಅಧ್ಯಕ್ಷರಾಗಿದ್ದರು. ಈಗ ಅದೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೇ ಬಾನು ಮುಷ್ತಾಕ್ ಅವರನ್ನು ಬಳ್ಳಾರಿಯ 88ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದಾರೆ. ಈ ವಿಷಯದಲ್ಲಿ ಈ ಬಗ್ಗೆ ಯೋಚಿಸುವ ಎಲ್ಲರಿಗೂ ಅವರವರದೇ ಆದ ಅಭಿಪ್ರಾಯವಿರುತ್ತದೆ. ಆ…

ಮುಂದೆ ಓದಿ..
ಅಂಕಣ 

ವೈದ್ಯರ ದಿನ – ಪತ್ರಕರ್ತರ ದಿನ – ಲೆಕ್ಕಪರಿಶೋಧಕರ ದಿನ -ಅಂಚೆ ಕಾರ್ಮಿಕರ ದಿನ…..

Taluknewsmedia.com

Taluknewsmedia.comಜುಲೈ 1……….. ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ……. ವೈದ್ಯರ ದಿನ – ಪತ್ರಕರ್ತರ ದಿನ – ಲೆಕ್ಕಪರಿಶೋಧಕರ ದಿನ -ಅಂಚೆ ಕಾರ್ಮಿಕರ ದಿನ….. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು…….. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ಗೌರವ ಮತ್ತು ಕೃತಜ್ಞತೆ ಅರ್ಪಿಸುವ ದೃಷ್ಟಿಯಿಂದ ಈ ವಿಭಾಗದಲ್ಲಿ ನಡೆದ ಮಹತ್ವದ ಘಟನೆಯ ದಿನವನ್ನು ನೆಪವಾಗಿ ಇಟ್ಟುಕೊಂಡು ಆಚರಿಸಲಾಗುತ್ತದೆ. ಶತಮಾನಗಳಿಂದ ಶತಮಾನಕ್ಕೆ, ದಶಕಗಳಿಂದ ದಶಕಕ್ಕೆ, ವರ್ಷಗಳಿಂದ ವರ್ಷಕ್ಕೆ ವೃತ್ತಿಗಳು ಏರಿಕೆಯಾಗುತ್ತಿದ್ದರೆ ಅದೇ ಸಮಯದಲ್ಲಿ ವೃತ್ತಿಯ ನೈತಿಕ ಮೌಲ್ಯಗಳು ಕುಸಿಯುತ್ತಾ ಸಾಗುತ್ತಿದೆ. ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಬಹುದು. ಅಭಿವೃದ್ಧಿ, ಆಧುನಿಕತೆ ಎಂದೂ ಕರೆಯಬಹುದು ಅಥವಾ ವಿನಾಶದ ಅಂಚಿನತ್ತ ಎಂದೂ ಭಾವಿಸಬಹುದು.ಬಹುಮುಖ್ಯವಾಗಿ ಜನಸಂಖ್ಯೆಯ ಸ್ಪೋಟ, ಅದರಿಂದಾಗಿ ಸಂಪನ್ಮೂಲಗಳ ಕೊರತೆ, ಆ ಕಾರಣದಿಂದಾಗಿ ವಾಣಿಜ್ಯೀಕರಣ, ಅದಕ್ಕಾಗಿಯೇ…

ಮುಂದೆ ಓದಿ..
ಅಂಕಣ 

ಗಣತಿ : ಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು..

Taluknewsmedia.com

Taluknewsmedia.comಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು, ವಿಷಯ ಕಲೆ ಹಾಕುವುದು ಮುಂತಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಇದೀಗ ಜನಗಣತಿ, ಜಾತಿಗಣತಿ, ಉಪಜಾತಿ ಗಣತಿ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ, ಆರ್ಥಿಕ ಮತ್ತು ಲಿಂಗ ಗಣತಿ ಮುಂತಾದ ಗಣತಿಗಳ ಸರಣಿ ಪ್ರಾರಂಭವಾಗಿದೆ. ಇದು ಮೊದಲಿನಿಂದಲೂ ನಡೆದುಕೊಂಡೆ ಬಂದಿರುವುದು ಆದರೆ ಈಗ ಹೆಚ್ಚಾಗಿ ಚಲಾವಣೆಯಲ್ಲಿದೆ. ಕೆಲವು ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿಗಾಗಿ ಜನಗಣತಿಯು ಅನಿವಾರ್ಯ ಸಹ. ಸರ್ಕಾರ ಎಲ್ಲಾ ರೀತಿಯ ಕ್ರಮಬದ್ಧ ಮತ್ತು ನ್ಯಾಯಯುತ ಆಡಳಿತ ವ್ಯವಸ್ಥೆಗಾಗಿ ಗಣತಿ ಮಾಡಿಸಿ, ಅಂಕಿ ಸಂಖ್ಯೆಗಳನ್ನು ಇಟ್ಟುಕೊಂಡು ಆ ಮೂಲಕ ಯೋಜನೆ ರೂಪಿಸಲು ಗಣತಿ ಅತ್ಯಾವಶ್ಯಕ. ಸ್ವಾತಂತ್ರ್ಯ ನಂತರದಲ್ಲಿ ಅನೇಕ ರೀತಿಯ ಗಣತಿಗಳು ನಡೆದಿದೆ. ಆಗೆಲ್ಲಾ ಜನಸಂಖ್ಯೆ ತುಂಬಾ ಕಡಿಮೆ ಇತ್ತು. ಇರುವ ಕೆಲವು ಸರ್ಕಾರಿ ಅಧಿಕಾರಿಗಳನ್ನೇ ಸಂಪನ್ಮೂಲಗಳನ್ನಾಗಿ ಉಪಯೋಗಿಸಿಕೊಂಡು ಗಣತಿ ಮಾಡಲಾಗುತ್ತಿತ್ತು. ಹೆಚ್ಚು ಕಡಿಮೆ ಶೇಕಡಾ 70 ರಿಂದ…

ಮುಂದೆ ಓದಿ..
ಅಂಕಣ 

ದಿಢೀರ್ ಸಾವುಗಳ ಸುತ್ತಾ…..ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು..

Taluknewsmedia.com

Taluknewsmedia.comದಿಢೀರ್ ಸಾವುಗಳ ಸುತ್ತಾ….. ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ…… ಆದರೆ ಈ ಕ್ಷಣದಲ್ಲಿ ಆ ವಿಷಯಗಳ ಬಗ್ಗೆ ನಾವು ಹೊಂದಬಹುದಾದ ಕೆಲವು ಮಾನಸಿಕ ಮತ್ತು ದೈಹಿಕ ಪೂರ್ವ ತಯಾರಿಗಳ ಬಗ್ಗೆ ನನ್ನ ವೈಯಕ್ತಿಕ ಅನಿಸಿಕೆ. ಯಾರಿಗೂ ಮನುಷ್ಯನ ಆಯಸ್ಸಿನ ಬಗ್ಗೆ, ಮನುಷ್ಯನ ಬದುಕಿನ ಬಗ್ಗೆ ಸಂಪೂರ್ಣ ಖಚಿತತೆ ಇರುವುದಿಲ್ಲ. ನಾವು ವಾಸಿಸುವ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ, ನಮ್ಮ ಅನುವಂಶೀಯ ದೇಹ ಪ್ರಕೃತಿಯ ಅನುಸಾರವಾಗಿ, ನಮ್ಮ ಬುದ್ಧಿ ಶಕ್ತಿಯ ಬೆಳವಣಿಗೆಯ ರೀತಿಗೆ ತಕ್ಕಂತೆ, ನಮ್ಮ ಆಡಳಿತ ವ್ಯವಸ್ಥೆ ಮತ್ತು ಒಟ್ಟು ವ್ಯವಸ್ಥೆಗೆ ನಾವು ಪ್ರತಿಕ್ರಿಯಿಸುವ ರೀತಿ ಸಾಮಾನ್ಯವಾಗಿ…

ಮುಂದೆ ಓದಿ..
ಅಂಕಣ 

ನಾವು ಯಾರು ? ನಮ್ಮ ಯೋಗ್ಯತೆ ಏನು ?.

Taluknewsmedia.com

Taluknewsmedia.comನಾವು ಯಾರು ? ನಮ್ಮ ಯೋಗ್ಯತೆ ಏನು ?……… ಕೆಲವರ ಬಗ್ಗೆ ಹಲವು ಉದಾಹರಣೆಗಳು……. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ…. ಮೂಕ ಪ್ರಾಣಿಗಳಿಗೆ ಆಹಾರದಲ್ಲಿ ವಿಷವಿಕ್ಕುವ ಅನಾಗರಿಕರು ನಾವು ಅನಾಗರಿಕರು………. ಅನ್ನಭಾಗ್ಯದ ಹಸಿದ ಹೊಟ್ಟೆಯ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು…. ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು….. ಬುದ್ಧಿಮಾಂದ್ಯ ಬೀದಿ ಹೆಣ್ಣಿನ ಅತ್ಯಾಚಾರ ಮಾಡುವ ಕೀಚಕರು ನಾವು ಕೀಚಕರು…… ವೃದ್ಧಾಪ್ಯದ ಪಿಂಚಣಿಯಲ್ಲಿ ಕಮೀಷನ್ ಹೊಡೆಯುವ ಕಿರಾತಕರು ನಾವು ಕಿರಾತಕರು…… ಡೆತ್ ಸರ್ಟಿಫಿಕೇಟ್ ನೀಡಲೂ ಲಂಚ ಪಡೆಯುವ ಭ್ರಷ್ಟರು ನಾವು ಭ್ರಷ್ಟರು…… ಗಂಡ ಹೆಂಡತಿಯ ಸ್ವಾರ್ಥಕ್ಕಾಗಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕೊಳಕರು ನಾವು ಕೊಳಕರು…… ಹಣಕ್ಕಾಗಿ ಮನುಷ್ಯನ ಕಿಡ್ನಿಯನ್ನೇ ಕದಿಯುವ ಕಟುಕರು ನಾವು ಕಟುಕರು…… ಮೂರು ವರ್ಷದ ಹಸುಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ರಾಕ್ಷಸರು ನಾವು…

ಮುಂದೆ ಓದಿ..
ಅಂಕಣ 

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ…….

Taluknewsmedia.com

Taluknewsmedia.comಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ…….. ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ….. ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ…

ಮುಂದೆ ಓದಿ..
ಅಂಕಣ 

ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ?

Taluknewsmedia.com

Taluknewsmedia.com” ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ………… ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ…… ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ….. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ?ಇಲ್ಲಿನ ಒಳ್ಳೆಯಅಂಶಗಳು ನಿಮಗೆ ಕಾಣುವುದಿಲ್ಲವೆ? ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆಗೋಚರಿಸುವುದಿಲ್ಲವೆ ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ ? ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ ?…… ನೀವು ನೋಡುವ ದೃಷ್ಟಿ ಸರಿ ಇಲ್ಲ ,ನಿಮ್ಮ ಮನಸ್ಸು ಶುಧ್ದವಿಲ್ಲ,ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ…

ಮುಂದೆ ಓದಿ..
ಅಂಕಣ 

ಒಂದು ಕಹಿ ನೆನಪು ಮತ್ತು ಎಚ್ಚರಿಕೆ…..

Taluknewsmedia.com

Taluknewsmedia.comಜೂನ್ 25 – 1975,ಜೂನ್ 25 – 2025….ಸರಿಯಾಗಿ 50 ವರ್ಷಗಳ ಹಿಂದೆ…..ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ…… ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಅಪಾಯವಿದೆ ಎಂಬ ನೆಪದಿಂದ, ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು….. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸದಸ್ಯರುಗಳು ಅತ್ಯಂತ ಗಂಭೀರವಾಗಿ ಒಂದು ವಿಷಯವನ್ನು ಸಂವಿಧಾನದಲ್ಲಿ ಸೇರಿಸಿರುತ್ತಾರೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ನಿಜವಾಗಲೂ ದುಷ್ಟ ಶಕ್ತಿಗಳಿಂದ ಅತ್ಯಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದಾಗ ದೇಶವನ್ನು ರಕ್ಷಿಸಲು ಈ ಒಂದು ಸ್ವಯಂ ವಿವೇಚನೆಯ…

ಮುಂದೆ ಓದಿ..
ಅಂಕಣ 

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು.

Taluknewsmedia.com

Taluknewsmedia.comಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು….. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,………… ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ…… ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ ಹಾಕಿದೆ.ವ್ಯಾವಹಾರಿಕ ಪೈಪೋಟಿಗಿಳಿದ ಅದರಲ್ಲೂ ಮುಖ್ಯವಾಗಿ ಟೆಲಿವಿಷನ್ ಮಾಧ್ಯಮ ಇನ್ನೂ ಬಹಳಷ್ಟು ವಿಷಯಗಳಲ್ಲಿ ಮಾನಸಿಕವಾಗಿ ಭ್ರೂಣಾವಸ್ಥೆಯಲ್ಲೇ ಇರುವ ಅನೇಕ ಮಹಿಳೆಯರ ಅಂತರಾಳಕ್ಕೆ ಲಗ್ಗೆ ಇಟ್ಟು ತಪ್ಪು ಸಂದೇಶಗಳನ್ನು ಹರಿಯಬಿಡುತ್ತಿದೆ…… ಹೆಣ್ಣು ಸಮಾಜದ ಮುಕ್ತತೆಗೆ ತೆರೆದುಕೊಳ್ಳುತ್ತಿರುವ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಟ್ಟ ಮೌಲ್ಯಗಳನ್ನು – ಅಮಾನವೀಯ ವರ್ತನೆಗಳನ್ನು ಸಮರ್ಥಿಸುವ,ಅತಿರಂಜಿತ ಘಟನೆಗಳನ್ನು ವೈಭವೀಕರಿಸಿ ವಾಸ್ತವದ ಅರ್ಥವನ್ನು…

ಮುಂದೆ ಓದಿ..
ಅಂಕಣ 

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ……..

Taluknewsmedia.com

Taluknewsmedia.comಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗೆ ಅದಕ್ಕೆ ತಾಳೆಯಾಗುತ್ತದೆ ಜೊತೆಗೆ ಕೆಲವು ಸನ್ನಿವೇಶಗಳು ಸಂಪೂರ್ಣ ಭಿನ್ನವೂ ಆಗಿದೆ…….ಎರಡೂ ಮಹಾ ಯುದ್ಧಗಳ ಕೇಂದ್ರ ಬಿಂದು ಯೂರೋಪ್ ಖಂಡವೇ ಆದರೂ ಜೊತೆಗೆ ಎರಡೂ ಮಹಾ ಯುದ್ಧಗಳ ಕೊನೆಯ ಹಂತದಲ್ಲಿ ಅಮೆರಿಕ ಪ್ರವೇಶ ಮಾಡಿರುವುದು, ತದನಂತರ ಅನಾಹುತಗಳಾದ ಮೇಲೆ ಯುದ್ಧ ಕೆಲವು ಒಪ್ಪಂದಗಳೊಂದಿಗೆ ಮುಕ್ತಾಯವಾಗಿದೆ…… ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿಯೇ ಅಮೆರಿಕ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸಿ, ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ವಿಶ್ವ ನಾಯಕತ್ವದ ಸ್ಥಾನವನ್ನು ನಿಭಾಯಿಸಿದೆ ಮತ್ತು ಉಳಿಸಿಕೊಂಡಿದೆ. ಅದಕ್ಕಾಗಿ ಎಲ್ಲಾ ರೀತಿಯ ತಂತ್ರ, ಕುತಂತ್ರ, ಚಾಣಕ್ಯ…

ಮುಂದೆ ಓದಿ..