ಅಂಕಣ 

ಬುದ್ದಿವಂತಿಕೆ ಮತ್ತು ಹೃದಯವಂತಿಕೆ……

Taluknewsmedia.com

Taluknewsmedia.comಬುದ್ದಿವಂತಿಕೆ ಮತ್ತು ಹೃದಯವಂತಿಕೆ…… ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ……..……ಒಂದು X ಸಾಮಾಜಿಕ ಜಾಲತಾಣದ ಟ್ವೀಟ್… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ. ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು ಎಲ್ಲವನ್ನೂ ಒಳಗೊಂಡ ವಿಶೇಷ ಅತಿಮಾನುಷ ಶಕ್ತಿಯೇನು ಅಲ್ಲ. ಅಕ್ಷರ ಕಲಿಯದೆಯೂ ವ್ಯಕ್ತಿತ್ವವಿದೆ, ಜ್ಞಾನವಿದೆ, ನಾಗರೀಕತೆಯಿದೆ ಬದುಕಿದೆ, ಹಾಗೆಯೇ ಅಕ್ಷರ ಕಲಿತೂ ಅಜ಼್ಞಾನವಿದೆ, ಮೋಸವಿದೆ, ಅಮಾನವೀಯತೆಯಿದೆ, ಅನಾಗರಿಕತೆ ಇದೆ…… ಅಕ್ಷರಸ್ಥರ ಈಗಿನ ಮೋಸ, ವಂಚನೆ, ದುಷ್ಟತನ, ಭ್ರಷ್ಟಾಚಾರ, ಜಾತಿವಾದ, ಶೋಷಣೆ, ಅಪನಂಬಿಕೆ ಎಲ್ಲವನ್ನೂ ಗಮನಿಸಿದಾಗ ಅನಕ್ಷರಸ್ಥರ ಕೈ, ಬಾಯಿ, ಮೆದುಳು, ಮನಸ್ಸು, ಹೃದಯ, ನಾಲಿಗೆ, ನಂಬಿಕೆ,…

ಮುಂದೆ ಓದಿ..
ಅಂಕಣ 

ದೀಪ – ಪಟಾಕಿ ಮತ್ತು ಕತ್ತಲು…..

Taluknewsmedia.com

Taluknewsmedia.comದೀಪ – ಪಟಾಕಿ ಮತ್ತು ಕತ್ತಲು….. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು……. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ,…… ಆಕಾಶದಲ್ಲಿ ಹಕ್ಕಿಯೊಂದು ಹಾರುತ್ತಾ ಕೇಳುತ್ತಿತ್ತು…. ಪ್ರೇಮಿಸುವ ಮನಸುಗಳೇ ಪ್ರೇಮವೆಂದರೇ ಗೊತ್ತೆ…. ಎತ್ತರದಲ್ಲಿ ಹಕ್ಕಿಯೊಂದು ಹಾರುತ್ತಾ ನುಡಿಯುತ್ತಿತ್ತು…… ತ್ಯಾಗ ಜೀವಿಗಳೇ ತ್ಯಾಗವೆಂದರೆ ಗೊತ್ತೆ….. ಮೋಡಗಳಲ್ಲಿ ಹಕ್ಕಿಯೊಂದು ಹಾರುತ್ತಾ ಹೇಳುತ್ತಿತ್ತು…… ಸ್ನೇಹಿತರೆ ಸ್ನೇಹವೆಂದರೆತಿಳಿದಿದೆಯೇ….. ಮೇಲೆ ಹಕ್ಕಿಯೊಂದು ಹಾರುತ್ತಾ ಪ್ರಶ್ನಿಸುತ್ತಿತ್ತು…… ಮನುಷ್ಯರೇ ಮಾನವೀಯತೆ ಎಂದರೆ ಗೊತ್ತಿದೆಯೇ….. ದೂರದಲ್ಲಿ ಹಕ್ಕಿಯೊಂದು ಹಾರುತ್ತಾ ಅನ್ನುತ್ತಿತ್ತು…… ಎಲೈ ಜೀವಿಗಳೆ ಸಂಬಂಧಗಳೆಂದರೆ ಗೊತ್ತೆ……. ಕೆಳಗಿನಿಂದ ಮನುಷ್ಯ ಹೇಳಿದ,ಹೌದು ಚೆನ್ನಾಗಿ ಗೊತ್ತು……. ಭಾನಲ್ಲಿ ಹಕ್ಕಿಯೊಂದು ಹಾರುತ್ತಾ ಉತ್ತರಿಸಿತು……. ಹೌದು ಅದೆಲ್ಲಾ ನನಗೂ ಕಾಣುತ್ತಿದೆ ಮೇಲಿನಿಂದ….. ಅವೆಲ್ಲಾ ನಿನ್ನ ಆಂತರ್ಯದಲ್ಲಿ ಬಂಧಿಯಾಗಿದೆ……. ಮಸುಕಾಗಿದೆ, ಮಂಕಾಗಿದೆ, ಮುಖವಾಡಧರಿಸಿದಂತಿದೆ…….. ಸರಿಸು ಮುಸುಕನ್ನು,ಒರೆಸು ಮಂಕನ್ನು,ಕಿತ್ತೊಗೆ ಮುಖವಾಡವನ್ನು…… ಆಗ ಗೋಚರಿಸುತ್ತದೆ ನಿನಗೆ ನಿಜವಾದಪ್ರೀತಿ, ಪ್ರೇಮ, ತ್ಯಾಗ,…

ಮುಂದೆ ಓದಿ..
ಅಂಕಣ 

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ……

Taluknewsmedia.com

Taluknewsmedia.comದೀಪಾವಳಿ………. ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ…… ಜ್ಞಾನದ ಮರು ಪೂರಣ…… ಜ್ಞಾನ – ಬುದ್ದಿ – ತಿಳಿವಳಿಕೆ…..ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ……… ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ ಹೋಗುವ ಮತ್ತು ಎಂದೂ ಮುಗಿಯದ ವಸ್ತುಗಳು ಎಂದು…. ಜ್ಞಾನ ಮೊದಲ ಪಟ್ಟಿಯಲ್ಲಿ ಸೇರುತ್ತದೆ. ಆದರೆ ಅದರ ವಿಶೇಷತೆ ಎಂದರೆ ಅದಕ್ಕೆ ಎರಡನೇ ಪಟ್ಟಿಯಲ್ಲಿಯೂ ಸ್ಥಾನ ಕಲ್ಪಿಸಬಹುದು. ಅದು ವ್ಯಕ್ತಿಗಳ ಶ್ರಮ, ಸಾಧನೆ ಮತ್ತು ಪ್ರಯತ್ನದ ಮೇಲೆ ಅವಲಂಬಿಸಿರುತ್ತದೆ…… ಒಂದಷ್ಟು ಜನ ಜ್ಞಾನ ಎಂದರೆ ಹಣ ಅಧಿಕಾರ ಆಸ್ತಿ ಸಂಪಾದನೆ ಎಂದು ಭಾವಿಸಿರುತ್ತಾರೆ. ಅದರ ಆಧಾರದ ಮೇಲೆ ಜ್ಞಾನವನ್ನು ಅಳೆಯುತ್ತಾರೆ. ಎಷ್ಟು ಯಶಸ್ವಿಯಾಗುವರೋ ಅಷ್ಟು ಜ್ಞಾನಿಗಳು ಎಂಬ ಅರ್ಥದಲ್ಲಿ……. ಇನ್ನೊಂದಿಷ್ಟು ಜನ ಅಕ್ಷರ ಕಲಿಕೆಯ ಮೂಲಕ ಅಂಕಗಳ ಆಧಾರದ…

ಮುಂದೆ ಓದಿ..
ಅಂಕಣ 

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ……

Taluknewsmedia.com

Taluknewsmedia.comಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು ಉಂಟಾಗಲು ಕಾರಣ ಭಕ್ತಿಯೇ – ಮತಿ ಭ್ರಮಣೆಯೇ – ಅಜ್ಞಾನವೇ – ದುರಾಸೆಯೇ…… ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಬಹುದೊಡ್ಡ ಜನಜಂಗುಳಿ ಸೇರುತ್ತಿದೆ. ಇಡೀ ಹಾಸನ ನಗರದಲ್ಲಿ ಟ್ರಾಫಿಕ್ ಜಾಮ್ ಮತ್ತು ದೇವಾಲಯದ ಸುತ್ತಮುತ್ತ ಸ್ವಲ್ಪ ನೂಕುನುಗ್ಗಲು, ದೊಡ್ಡ ಸರತಿಯ ಸಾಲುಗಳು ಕಂಡುಬರುತ್ತಿದೆ. ಎಂದೂ ಇಲ್ಲದಷ್ಟು ಭಕ್ತಿಯ ರಸ ಜನರಲ್ಲಿ ಉಕ್ಕಿ ಹರಿಯುತ್ತಿದೆ. ಈ ವಾರ ಅದು ತಿರುಪತಿಯ ಭಕ್ತರ ಸಂಖ್ಯೆಯನ್ನು ಮೀರಿದೆ ಎನ್ನುವ ಸುದ್ದಿಯು ಸಹ ಕೇಳಿ ಬರುತ್ತಿದೆ…… ಭಾರತೀಯರ ಮೋಕ್ಷದ ಹಾದಿಯ ನಂಬಿಕೆಗಳಲ್ಲಿ ಜ್ಞಾನ, ಭಕ್ತಿ, ಕರ್ಮ, ಯೋಗ ( ರಾಜ ) ಮಾರ್ಗಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಜನರನ್ನು ಆಕರ್ಷಿಸಿರುವುದು ಭಕ್ತಿ ಮಾರ್ಗ ಮತ್ತು ಅತ್ಯಂತ ಭಾವನಾತ್ಮಕ ಸೆಳೆತವನ್ನು ಹೊಂದಿರುವುದು ಸಹ ಭಕ್ತಿ ಮಾರ್ಗವೇ. ಅದಕ್ಕೆ ಮೂಲ ಕಾರಣ ಅತ್ಯಂತ ಭಕ್ತಿ ಎಂಬ ಭಾವ ಅತ್ಯಂತ ಆಂತರಿಕವಾದದ್ದು, ಸುಲಭವಾದದ್ದು, ಸರಳವಾದದ್ದು,…

ಮುಂದೆ ಓದಿ..
ಅಂಕಣ 

ಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…

Taluknewsmedia.com

Taluknewsmedia.comಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…… ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ – ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವಂತೆ ಚಿತ್ರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಂದೆಯ ತ್ಯಾಗವನ್ನು ಸಹ ಕಥೆ, ಹಾಡುಗಳಲ್ಲಿ ಚಿತ್ರಿಸಲಾಗುತ್ತಿದೆ. ಎಲ್ಲಾ ಧಾರಾವಾಹಿ, ಕಥೆ, ಕಾದಂಬರಿ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪುರುಷರನ್ನು ಮಾತ್ರವೇ ಖಳ ಪಾತ್ರಗಳಲ್ಲಿ ನಿರೂಪಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳೆಯರ ಪಾತ್ರಗಳನ್ನು ಸಹ ಹೆಚ್ಚು ಹೆಚ್ಚು ವಿಲನ್ ಗಳಾಗಿ ನಿರೂಪಿಸಲಾಗುತ್ತಿದೆ. ಮೊದಲೆಲ್ಲಾ ಪತಿಯಿಂದ ಪತ್ನಿಯ ಕೊಲೆ ಎಂಬುದನ್ನು ಮಾತ್ರವೇ ಕೇಳುತ್ತಿದ್ದೆವು. ಇತ್ತೀಚೆಗೆ ಪತ್ನಿಯಿಂದ ಪತಿ ಕೊಲೆಯ ಪಿತೂರಿ ಎಂಬುದನ್ನು ಸಹ ನೋಡುತ್ತಿದ್ದೇವೆ. ಪ್ರೇಮಿಗಳ ವಿಷಯದಲ್ಲಿ ಗಂಡಿನಿಂದ ಹೆಣ್ಣಿಗೆ ಮೋಸ, ವಂಚನೆಯ ವಿಷಯಗಳು ಮಾತ್ರ ಸುದ್ದಿಯಾಗುತ್ತಿದ್ದವು. ಇತ್ತೀಚೆಗೆ ಹೆಣ್ಣುಗಳಿಂದ ಸಹ ಪುರುಷ ಮೇಲೆ ಮೋಸ, ದೌರ್ಜನ್ಯದ ಕೇಸು ದಾಖಲಾಗುತ್ತಿವೆ.…

ಮುಂದೆ ಓದಿ..
ಅಂಕಣ 

ನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ….

Taluknewsmedia.com

Taluknewsmedia.comನಮ್ಮ ಯೋಚನಾ ಶಕ್ತಿಯ ಮೂಲಗಳು – ಕ್ರಮವಾಗಿ…. ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು….. ಜೀವಪರ ನಿಲುವಿನ ವಿಚಾರಗಳು. ‌‌.‌.. ಮಾನವೀಯ ಮುಖದ ಚಿಂತನೆಗಳು…. ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು… ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು…. ಜ್ಞಾನದ ಆಧಾರದಿಂದ ಬರುವ ಚಿಂತನೆಗಳು…….. ನಾಗರಿಕತೆಯ ನಡವಳಿಕೆಗಳಿಂದ ಮೂಡುವ ಅಂಶಗಳು…. ಒಂದು ಪ್ರದೇಶ ಅಥವಾ ದೇಶದ ಕಾರಣದಿಂದಾಗಿ ಹುಟ್ಟುವ ವಿಚಾರಗಳು…… ಧರ್ಮದ ಮೂಲದಿಂದ ರೂಪಿಸಿಕೊಳ್ಳುವ ವಿಚಾರಗಳು…… ಆಡಳಿತ ವ್ಯವಸ್ಥೆಯಿಂದ ಮೂಡುವ ಚಿಂತನೆಗಳು…. ಪಕ್ಷದ ದೃಷ್ಟಿಕೋನದಿಂದ ಬರುವ ಚಿಂತನೆಗಳು.. ಭಾಷೆಯ ಬಲದಿಂದ ಸೃಷ್ಟಿಯಾಗುವ ವಿಚಾರಗಳು…. ಸಂಬಂಧಗಳ ಆಧಾರದಲ್ಲಿ ಬೆಳೆಯುವ ಚಿಂತನೆಗಳು…. ಕುಟುಂಬದ ನೆರಳಲ್ಲಿ ಬೆಳೆಯುವ ಚಿಂತನೆಗಳು.. ಸ್ವಾರ್ಥದ ಮೂಲದಿಂದ ಹೊಳೆಯುವ ವಿಚಾರಗಳು….. ದುರಹಂಕಾರದಿಂದ ಮೊಳೆಯುವ ವಿಚಾರಗಳು….. ಕೋಪದಿಂದ ಮೂಡುವ ಚಿಂತನೆಗಳು……. ಅಸೂಯೆಯಿಂದ ಹುಟ್ಟುವ ವಿಚಾರಗಳು…… ಹೀಗೆ ನಮ್ಮಲ್ಲಿ, ಇವುಗಳಲ್ಲಿ ಯಾವ ಆಧಾರದಲ್ಲಿ ನಮ್ಮ ಚಿಂತನೆಗಳು ಅಭಿಪ್ರಾಯಗಳು ಮೂಡಿವೆ ಎಂಬುದರ ಮೇಲೆ ನಮ್ಮ…

ಮುಂದೆ ಓದಿ..
ಅಂಕಣ 

ಅನ್ನ ದೇವರ ಮುಂದೆಅನ್ಯ ದೇವರು ಉಂಟೆ,ಅನ್ನವಿರುವತನಕ ಪ್ರಾಣವು, ಜಗದೊಳಗನ್ನವೇ ದೈವ ಸರ್ವಜ್ಞ…

Taluknewsmedia.com

Taluknewsmedia.com” ಅನ್ನ ದೇವರ ಮುಂದೆಅನ್ಯ ದೇವರು ಉಂಟೆ,ಅನ್ನವಿರುವತನಕ ಪ್ರಾಣವು,ಜಗದೊಳಗನ್ನವೇ ದೈವ ಸರ್ವಜ್ಞ…….” ವಿಶ್ವ ಆಹಾರ ದಿನದ ಸಂದರ್ಭದಲ್ಲಿ…..ಅಕ್ಟೋಬರ್ 16….. ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ” ವಿಶ್ವ ಆಹಾರ ದಿನ ” ಆಚರಿಸಲಾಗುತ್ತಿದೆ. ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಬೆಂಗಳೂರು ಮತ್ತು ಕೊಡಗಿನ ಶ್ರೀ ಎಂ. ಯುವರಾಜ್ ಮತ್ತು ಶ್ರೀ ಮೋಹನ್ ಕುಮಾರ್ ಅವರ ಸುಮಾರು ಹದಿನೈದು ವರ್ಷಗಳ ಸತತ ಪರಿಶ್ರಮದಿಂದ ಅಧಿಕೃತವಾಗಿ ಇನ್ನು ಮುಂದೆ ಪ್ರತಿವರ್ಷ ವಿಶ್ವ ಆಹಾರ ದಿನವನ್ನು ಸರ್ಕಾರ ಮಟ್ಟದಲ್ಲಿ ಆಚರಿಸಲಾಗುತ್ತದೆ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ನಮಗೂ ಹೆಮ್ಮೆ ಇದೆ. ಈ ನಿಟ್ಟಿನಲ್ಲಿ ಇಂದು ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ನಾವು ಸಲ್ಲಿಸುತ್ತಿರುವ ಮನವಿ…

ಮುಂದೆ ಓದಿ..
ಅಂಕಣ 

ತಾಲಿಬಾನ್ ಮಂತ್ರಿಯ ಆದೇಶ…….

Taluknewsmedia.com

Taluknewsmedia.comತಾಲಿಬಾನ್ ಮಂತ್ರಿಯ ಆದೇಶ……. ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ…. ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ” ಭಯೋತ್ಪಾದಕರು ” ಎಂದು ಕರೆಯಲ್ಪಡುತ್ತಿದ್ದ ತಾಲಿಬಾನ್ ಎಂಬ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿರುವಾಗ, ಅದರ ಜೊತೆಗೆ ಸ್ನೇಹ ಬೆಳೆಸಿಕೊಂಡು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಸಿದ್ಧಾಂತಕ್ಕೆ ಬಲಿಯಾಗಿ, ಆ ತಾಲಿಬಾನಿ ಸರ್ಕಾರದ ಮಂತ್ರಿಯೊಬ್ಬ ನಮ್ಮದೇ ಸರ್ಕಾರದ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಪತ್ರಿಕಾಗೋಷ್ಠಿ ನಡೆಸುವಾಗ, ಅಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿ ತಾನು ಪತ್ರಿಕಾಗೋಷ್ಠಿ ನಡೆಸುವ ಹಂತಕ್ಕೆ ಬಂದುಬಿಡುತ್ತದೆ….. ಛೇ ಛೇ ಛೇ……. ತೀರಾ ಅನ್ಯಾಯ, ಅಸಹಾಯಕ ಮತ್ತು ನಾಚಿಕೆಗೇಡಿನ ಸಂಗತಿ….. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದ ಯಾವ ನಾಗರಿಕ ಮನುಷ್ಯನು ಸಹ ಅಲ್ಲೊಂದು ಸರ್ಕಾರವಿದೆ ಎಂದು…

ಮುಂದೆ ಓದಿ..
ಅಂಕಣ 

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು……

Taluknewsmedia.com

Taluknewsmedia.comಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು…… ಭಾರತದ ವಿದೇಶ ( ಫಾರಿನ್ ) ಗೋವಾ,ಕಡಲ ತೀರದ ಪರ್ಯಾಯ ದ್ವೀಪ ಗೋವಾ,ಮೋಜು, ಮಸ್ತಿ, ಮನರಂಜನೆ, ಕ್ಯಾಸಿನೋಗಳ ಪ್ರದೇಶ ಗೋವಾ,ದೇಶದ ಅತ್ಯಂತ ದುಬಾರಿ ಬೆಲೆಯ ಪ್ರವಾಸಿ ಕೇಂದ್ರ ಗೋವಾ,ಭ್ರಷ್ಟ, ದುಷ್ಟ ದುಡ್ಡಿನ ಪ್ರದರ್ಶನದ ಮಜಾ ನಗರಿ ಗೋವಾ,ಪ್ರವಾಸಿಗರ ರಜಾ ದಿನಗಳ ಸುಂದರ ತಾಣ ಗೋವಾ,ಭಾರತದ ಸುರಕ್ಷತೆಯ, ಸ್ವಚ್ಛ ನಗರಗಳಲ್ಲಿ ಒಂದು ಗೋವಾ, ಪೋರ್ಚುಗೀಸರಿಂದ ಸುಮಾರು 500 ವರ್ಷಗಳಷ್ಟು ದೀರ್ಘಕಾಲದವರೆಗೆ ಆಡಳಿತಕ್ಕೊಳಪಟ್ಟ ಮತ್ತು ಈಗಲೂ ಅದರ ಕುರುಹುಗಳ ಸಂಕೇತವಾಗಿ ಉಳಿದಿರುವ ಹೆರಿಟೇಜ್ ಸಿಟಿ ಗೋವಾ,ಸಮುದ್ರದ ಜಲಚರಗಳ ಖಾದ್ಯದ, ಮದ್ಯಗಳ ಪಾನಪ್ರಿಯರ ಸ್ವರ್ಗ ಗೋವಾ,ಸಿನಿಮಾ, ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಉತ್ಸವದ ನಗರ ಗೋವಾ. ಇಂತಹ ಗೋವಾದಲ್ಲಿ ಅಂತರಾಷ್ಟ್ರೀಯ ದಿವ್ಯಾಂಗ ಚೇತನರ ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಇದೇ ಅಕ್ಟೋಬರ್ ಒಂಬತ್ತರಿಂದ ಹನ್ನೆರಡರವರೆಗೆ ( 9th to 12th ) ಎಂಟರ್ಟೈನ್ಮೆಂಟ್ ಸೊಸೈಟಿ…

ಮುಂದೆ ಓದಿ..
ಅಂಕಣ 

ತ್ರಿಭಾಷಾ ಸೂತ್ರ ಎಷ್ಟು ಸರಿ……..ದ್ವಿಭಾಷಾ ಸೂತ್ರ ಉತ್ತಮವೇ……

Taluknewsmedia.com

Taluknewsmedia.comತ್ರಿಭಾಷಾ ಸೂತ್ರ ಎಷ್ಟು ಸರಿ……..ದ್ವಿಭಾಷಾ ಸೂತ್ರ ಉತ್ತಮವೇ…… ಕನ್ನಡ : ರಾಜ್ಯ ಭಾಷೆ….ಹಿಂದಿ : ರಾಷ್ಟ್ರ ಭಾಷೆ….ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ….. ಈ ಭಾಷಾ ಸೂತ್ರ ಸರಿಯೇ ?ಇದು ಸಂವಿಧಾನಾತ್ಮಕವೇ ?ಇದು ವಾಸ್ತವವೇ ?ಪ್ರಾಯೋಗಿಕವೇ ?ಕನ್ನಡದ ಹಿತಕ್ಕೆ ಇದು ಒಳ್ಳೆಯದೇ ಅಥವಾ ಮಾರಕವೇ ?ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಹಿತವೇ ಅಥವಾ ಅಪಾಯಕಾರಿಯೇ ?ಭಾಷಾ ಅಸ್ಮಿತೆ ಮತ್ತು ದೇಶದ ಅಸ್ಮಿತೆಗೆ ಇದು ಪೂರಕವೇ ವಿರುದ್ಧವೇ ?ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಾಮರಸ್ಯಕ್ಕೆ ಉಪಕಾರವೇ ? ವಿನಾಶವೇ ?…. ನೀವು ಅಪ್ಪಟ ಕನ್ನಡ ಅಭಿಮಾನಿಗಳೇ ಆಗಿರಲಿ,ನೀವು ಭಾವುಕ ದೇಶಭಕ್ತರೇ ಆಗಿರಲಿ,ನೀವು ಹಿಂದಿ ಭಾಷೆಯ ಪಂಡಿತರೇ ಆಗಿರಲಿ,ನೀವು ಸಹಜ ಸ್ವಾಭಾವಿಕ ಸಾಮಾನ್ಯ ಪ್ರಜೆಗಳೇ ಆಗಿರಲಿ ಮತ್ತು ಏನೇ ಆಗಿರಲಿ ಈ ವಿಷಯದ ಬಗ್ಗೆ ಸ್ಪಷ್ಟ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕಿಕೊಂಡಾಗ ಮಾತ್ರ ಈ…

ಮುಂದೆ ಓದಿ..