ಅಂಕಣ 

ಬಸವ ಸಂಸ್ಕೃತಿ ಅಭಿಯಾನ……..

Taluknewsmedia.com

Taluknewsmedia.comಬಸವ ಸಂಸ್ಕೃತಿ ಅಭಿಯಾನ…….. ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ಗರಿಗೆದರಿದ ಲಿಂಗಾಯತ ಧರ್ಮ ಸುದ್ದಿಯಲ್ಲಿ…… ತುಂಬಾ ಹಳೆಯ ಬೇಡಿಕೆಯಾದರೂ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ. ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ…. ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿ ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು “ 12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯಯರನ್ನು ನಿಕೃಷ್ಟವಾಗಿ…

ಮುಂದೆ ಓದಿ..
ಅಂಕಣ 

ಕುರ್ಚಿಗಾಗಿ ಕಿತ್ತಾಟ…….

Taluknewsmedia.com

Taluknewsmedia.comಕುರ್ಚಿಗಾಗಿ ಕಿತ್ತಾಟ……. ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ….. ಸಮಾಜದ ನಡೆ ದುರಂತದ ಕಡೆ……. ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ…….. ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ. ನಿಮಗೆ ತಿಳಿದಿರಬಹುದು,ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೃಹ…

ಮುಂದೆ ಓದಿ..
ಅಂಕಣ 

ತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ…….

Taluknewsmedia.com

Taluknewsmedia.comತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ……. ಅಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ….. ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿದ್ದ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ….. ಅಕ್ಟೋಬರ್ 16 ” ವಿಶ್ವ ಆಹಾರ ದಿನ “….. 1945 ರಲ್ಲಿ ವಿಶ್ವಸಂಸ್ಥೆಯ ” Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ…

ಮುಂದೆ ಓದಿ..
ಅಂಕಣ 

ಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ…….

Taluknewsmedia.com

Taluknewsmedia.comಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ……. ಒಂದು ಸಲಹೆ ಮತ್ತು ಮನವಿ….. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ, ಮೌಲ್ಯಗಳ, ಮಾತಿನ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಪ್ರಯತ್ನ…… ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?……………….. ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ/ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. ನಮ್ಮ ಅತ್ಯಂತ ಖಾಸಗಿ ಆರೋಗ್ಯದಿಂದ – ವಿಶ್ವದ ಎಲ್ಲಾ ಆಸಕ್ತಿದಾಯಕ ವಿಷಯಗಳನ್ನೂ ಚರ್ಚಿಸುತ್ತೇವೆ. ನಮ್ಮ ಆರ್ಥಿಕ ಸಂಕಷ್ಟ, ನೈತಿಕ/ಅನೈತಿಕ ಸಂಬಂಧಗಳು, ಇತರರ ಬಗ್ಗೆ ನಮಗಿರುವ ಪ್ರೀತಿ/ದ್ವೇಷ/ಅಸೂಯೆ ಎಲ್ಲವನ್ನೂ ಮಾತನಾಡುತ್ತೇವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲವೂ ನಮ್ಮ ನಮ್ಮ ಆಸಕ್ತಿಗೆ ಅನುಗುಣವಾಗಿ ಸಂಭಾಷಣೆ ಇರುತ್ತದೆ. ಕೆಲವೊಮ್ಮೆ…

ಮುಂದೆ ಓದಿ..
ಅಂಕಣ 

ಮಹರ್ಷಿ ವಾಲ್ಮೀಕಿ…..

Taluknewsmedia.com

Taluknewsmedia.comಮಹರ್ಷಿ ವಾಲ್ಮೀಕಿ….. ರಾಮಾಯಣದ ಸೃಷ್ಟಿಕರ್ತರ ಜಯಂತಿಯ ಸಂದರ್ಭದಲ್ಲಿ……… ಈ ದಿನ ಯಾರನ್ನು ಸ್ಮರಿಸೋಣ…………, ರಾಮ – ಲಕ್ಷ್ಮಣ – ಭರತ – ಶತ್ರುಜ್ಞ – ರಾವಣ – ಸೀತೆ – ಆಂಜನೇಯ – ವಾಲಿ – ಸುಗ್ರೀವ – ವಿಭೀಷಣ – ದಶರಥ – ಶಬರಿ – ಶ್ರವಣ ಕುಮಾರ……. ಹೀಗೆ ಸಾಗುವ ಪಾತ್ರಗಳೋ…. ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ, ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ…….. ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ…. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ, ಭರತ, ಶತೃಘ್ಞರಂತ ಆದರ್ಶ…

ಮುಂದೆ ಓದಿ..
ಅಂಕಣ 

ಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು?

Taluknewsmedia.com

Taluknewsmedia.comಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು? ಬೆಂಗಳೂರು – ಮಳೆ ಬಂತು ಅಂದರೆ ತಂಪಾದ ಹವಾಮಾನ, ತಾಜಾ ವಾತಾವರಣ, ಹಸಿರು ಚೆಲುವು ಎಂಬ ಸುಂದರ ಚಿತ್ರಣವೇ ತಲೆಗೆ ಬರುವುದು. ಆದರೆ, ಬೆಂಗಳೂರಿನ ನಾಗರಿಕರಿಗೆ ಮಳೆ ಅಂದರೆ ಗುಂಡಿಗಳ ಹಬ್ಬ, ನೀರು ತುಂಬಿದ ರಸ್ತೆಗಳು, ಸಂಚಾರ ಕಷ್ಟ ಹಾಗೂ ಅಪಘಾತದ ಭೀತಿ. ವರ್ಷಾವರ್ಷ ಇದೇ ದೃಶ್ಯ ಮರುಕಳಿಸುತ್ತಿದ್ದರೂ, ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇವಲ “ತಾತ್ಕಾಲಿಕ ಪ್ಯಾಚ್ ವರ್ಕ್” ಮಾಡುತ್ತಲೇ ಕಾಲಹರಣ ಮಾಡುತ್ತಿದೆ. ಸರ್ಕಾರದ ಮಾತು – ನೆಲದ ಸತ್ಯ ಪ್ರತಿ ಬಾರಿ ಮಳೆ ಬಂತು ಅಂದರೆ, “ನಾವು ರಸ್ತೆಗಳ ನವೀಕರಣ ಮಾಡುತ್ತೇವೆ”, “ಶಾಶ್ವತ ಪರಿಹಾರ ತರುತ್ತೇವೆ” ಎಂಬ ಸರ್ಕಾರದ ಘೋಷಣೆಗಳನ್ನು ಜನ ಕೇಳಿದ್ದಾರೆ. ಆದರೆ ನೆಲದ ಸತ್ಯ ಏನು? – ಮಳೆ ಬಂದ ತಕ್ಷಣವೇ ಹೊಸಾಗಿ ಹಾಕಿದ…

ಮುಂದೆ ಓದಿ..
ಅಂಕಣ 

ಆ ನೆನಪು…….

Taluknewsmedia.com

Taluknewsmedia.comಆ ನೆನಪು……. ನೆನಪಿನ ರಣಹದ್ದೊಂದುಬಸವಳಿದ ಹೃದಯವನ್ನುಮತ್ತೆ ಮತ್ತೆ ಕುಕ್ಕುತ್ತಲಿದೆ, ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ,ಶೌಚದ ಐಕಾಂತದಲ್ಲಿ,ಬೆಳಗಿನ ವಾಯು ವಿಹಾರದಲ್ಲಿ,ಉಪಹಾರದ ಎಲೆಯಲ್ಲಿ, ಚೂಪಾದ ಉದ್ದನೆಯ ಕೊಕ್ಕಿನಲ್ಲಿ ಕುಟುಕುತ್ತಾ ಮನಸ್ಸು ಹಿಂಡುತ್ತಿದೆ, ಸೂಜಿ ಮಲ್ಲಿಗೆಯ ಚೆಲುವಿನ,ಸಾಸಿವೆಯಷ್ಟು ಸಣ್ಣದಾದ,ಬೆಣ್ಣೆಯಷ್ಟು ಮೃದುವಾದ,ಹೃದಯಯನ್ನು ನೆನಪೆಂಬ ರಣಹದ್ದು ಗಟ್ಟಿಯಾದ ತೀಕ್ಷ್ಣವಾದ ಕೊಕ್ಕಿನಿಂದ ಇರಿಯುತ್ತಿದೆ, ಘಾಸಿಗೊಂಡ ಹೃದಯವೆಂದು ಪಾಪ ಅದಕ್ಕೇನು ಗೊತ್ತು.ಬಗೆದು ತಿನ್ನುವುದು ಅದರ ಸಹಜ ಧರ್ಮ, ಇಡೀ ದಿನದ ಕೆಲಸದಲ್ಲಿ,ಇಳಿ ಸಂಜೆಯ ನೋಟದಲ್ಲಿ,ಹಾಸಿಗೆಯ ಅನಾಥ ಪ್ರಜ್ಞೆಯಲ್ಲಿ,ಚುಚ್ಚುತ್ತಿದೆ ನೆನಪಿನ ರಣಹದ್ದು, ಹೇಳಲಾಗದು,ಹೇಳದಿರಲಾಗದು,ಸಹಿಸಲಾಗದು,ಎದುರಿಸಲಾಗದ,ಅಮಾಯಕ ಅಸಹಾಯಕ ಹೃದಯವದು, ವಿರಹದ ವೇದನೆಯೋ,ಪ್ರೀತಿಯ ವಂಚನೆಯೋ,ನಂಬಿಕೆಯ ದ್ರೋಹವೋ,ಆಂತರ್ಯದ ಬೇಗುದಿಯೋ,ಒಡಲಾಳದ ಸಂಕಟವೋ,ನೆನಪಿನ ರಣಹದ್ದಾಗಿ ಮತ್ತೆ ಮತ್ತೆ ಕುಕ್ಕುತ್ತಲಿದೆ. ಹೊರಬರದ ದಾರಿ ಕಾಣದೆ,ಒಳಗಿರುವ ಜಾಗ ಅರಿಯದೆ,ಸಂಕಟದಿಂದ ವಿಲ ವಿಲನೆ ಒದ್ದಾಡುತ್ತಾ, ಕೆಲವೊಮ್ಮೆ ಕಣ್ಣೀರಾಗಿ,ಒಮ್ಮೊಮ್ಮೆ ಆಕ್ರೋಶವಾಗಿ,ಆಗೊಮ್ಮೆ ಸಮಾಧಾನವಾಗಿಮತ್ತೊಮ್ಮೆ ಹುಚ್ಚುಚ್ಚಾಗಿ,ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಹರಿದಾಡುತ್ತಿದೆ. ನೆನಪಿನ ರಣಹದ್ದನ್ನು ಓಡಿಸಲಾಗದೆ ,ನೋವನ್ನು ಅನುಭವಿಸುತ್ತಾ,ನಿಮ್ಮೊಂದಿಗೆ ಸದಾ ಹಂಚಿಕೊಳ್ಳುತ್ತಿರುವ,ಅನಾಥ – ಅಜ್ಞಾತ,ಹೃದಯ –…

ಮುಂದೆ ಓದಿ..
ಅಂಕಣ 

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್……

Taluknewsmedia.com

Taluknewsmedia.comಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್…… ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ…… ಉಕ್ರೇನಿಯನ್ ಜನರು ಅನುಭವಿಸುತ್ತಿರುವ ನರಕಯಾತನೆಯಾಗಲಿ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಾಗಲಿ, ಆಫ್ರಿಕಾದ ಆಂತರಿಕ ಸಂಘರ್ಷದಿಂದ ಬಳಲುತ್ತಿರುವ ದೇಶಗಳಾಗಲಿ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾದ ಕೆಲವು ದೇಶಗಳ ಹಿಂಸಾತ್ಮಕ ಘಟನೆಗಳಾಗಲಿ ಇನ್ನೂ ಜನರಿಗೆ ಬುದ್ಧಿ ಕಲಿಸಿದಂತೆ ಕಾಣುತ್ತಿಲ್ಲ.ಕೊರೋನ ಎಂಬ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿತು. ಆ ಸಮಯದಲ್ಲಿ ಬಹಳಷ್ಟು ಜನರಿಗೆ ಸನ್ಯಾಸ ವೈರಾಗ್ಯ ಉಂಟಾಯಿತು. ಜೀವನ ನಶ್ವರ, ಯಾವಾಗ ಬೇಕಾದರೂ, ಯಾವ ರೂಪದಲ್ಲಾದರೂ ಸಾವು ಬರಬಹುದು. ಆದ್ದರಿಂದ ಒಂದಷ್ಟು ತಾಳ್ಮೆಯಿಂದ, ಪ್ರೀತಿಯಿಂದ ದುರಾಸೆಗಳಿಲ್ಲದೆ ಬದುಕಬೇಕು ಎಂದು ಅಂದುಕೊಂಡರು. ಆದರೆ ಸಮಕಾಲಿನ ಜಗತ್ತು ಕೋವಿಡ್ ನಂತರ ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಸಾವೋ, ಬದುಕೋ ಒಟ್ಟಿನಲ್ಲಿ ಸಮಾಜಗಳು,…

ಮುಂದೆ ಓದಿ..
ಅಂಕಣ 

ಅಡುಗೆ…….

Taluknewsmedia.com

Taluknewsmedia.comಅಡುಗೆ……. ರುಚಿ – ತೃಪ್ತಿ – ಸಮಾನತೆ….. ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ…. ಮನುಷ್ಯ ಬದುಕಿನ ಜೀವದ್ರವ್ಯಗಳಲ್ಲಿ ಗಾಳಿ ಮತ್ತು ನೀರಿನ ನಂತರ ಆಹಾರವೇ ಅತ್ಯಂತ ಪ್ರಮುಖವಾದದ್ದು. ಹಿಂದೆ ಅನಾಗರಿಕ ಮಾನವ ಗೆಡ್ಡೆ, ಗೆಣಸು, ಹಣ್ಣು, ಹಂಪಲು, ಪ್ರಾಣಿ, ಪಕ್ಷಿ, ಕೀಟಗಳನ್ನು ತಿಂದು ಬದುಕುತ್ತಿದ್ದ. ದಿನಗಳೆದಂತೆ ಮನುಷ್ಯನ ಅನಿವಾರ್ಯತೆಗಳು, ಅಗತ್ಯಗಳು, ಆಸೆಗಳು, ದುರಾಸೆಗಳುಜೊತೆಗೆ ಆತನ ನಾಲಿಗೆ ರುಚಿಬಯಸತೊಡಗಿತು ಮತ್ತು ಅದಕ್ಕೆ ತಕ್ಕಂತೆ ಅವಕಾಶಗಳು ಒದಗಿ ಬಂದವು. ನಿರ್ದಿಷ್ಟವಾಗಿ ಹಣ್ಣು, ತರಕಾರಿ, ಪ್ರಾಣಿ, ಪಕ್ಷಿಗಳನ್ನು ಅನುಭವದ ಆಧಾರದ ಮೇಲೆಯೇ ಗುರುತಿಸಿ ಆಹಾರವನ್ನಾಗಿ ಉಪಯೋಗಿಸ ತೊಡಗಿದ. ಕೊನೆಗೆ ಈ 2025 ರಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಹಾರಗಳ ವೈವಿಧ್ಯತೆ ಕಲ್ಪನೆಗೂ ಮೀರಿ ಬೆಳೆದಿದೆ. ದಕ್ಷಿಣದಿಂದ ಉತ್ತರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶದ ಆಹಾರ ವಿಭಿನ್ನತೆ ಚಕಿತಗೊಳಿಸುತ್ತದೆ. ನಮ್ಮ ದೇಶದಲ್ಲಿ ಹಳ್ಳಿ, ಪಟ್ಟಣ, ನಗರ,ಮೆಟ್ರೋಪಾಲಿಟಿನ್ ಸಿಟಿ ಸೇರಿ…

ಮುಂದೆ ಓದಿ..
ಅಂಕಣ 

ಸಹಾಯ ಮತ್ತು ಆತ್ಮಸಾಕ್ಷಿ……

Taluknewsmedia.com

Taluknewsmedia.comಸಹಾಯ ಮತ್ತು ಆತ್ಮಸಾಕ್ಷಿ…… ಸಹಾಯ – ಸೇವೆ – ನೆರವು – ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ……… ಮತ್ತು ಇದರಲ್ಲಿನ ವೈವಿಧ್ಯತೆ…………… ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ…. ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ… ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ…. ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು……. ಪಾಪ, ಪುಣ್ಯ – ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು….. ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಠೆಗಾಗಿ ಸಹಾಯ ಮಾಡುವವರು ಹಲವರು….. ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ….. ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ…

ಮುಂದೆ ಓದಿ..