ಅಂಕಣ 

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17………

Taluknewsmedia.com

Taluknewsmedia.comಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17……… ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ….. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ….. ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು. GST ಸಂಗ್ರಹದಲ್ಲಿ ದೇಶದ ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಇಲ್ಲಿನ ಶಾಸಕರ ಸರಾಸರಿ ಆದಾಯ ದೇಶದಲ್ಲೇ ಅತಿ ಹೆಚ್ಚು. ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು….1) ಮಲೆನಾಡು ಕರ್ನಾಟಕ2) ಮೈಸೂರು ಕರ್ನಾಟಕ3) ಕರಾವಳಿ ಕರ್ನಾಟಕ4) ಕಿತ್ತೂರು (ಮುಂಬಯಿ) ಕರ್ನಾಟಕ5) ಕಲ್ಯಾಣ (ಹೈದರಾಬಾದ್) ಕರ್ನಾಟಕ. ಗಾಳಿ ನೀರು ಆಹಾರ ಶಿಕ್ಷಣ ಆರೋಗ್ಯ ಸಾರಿಗೆ ಸಂಪರ್ಕ ರಸ್ತೆ ಮನೆ ಪ್ರಾಕೃತಿಕ ವಾತಾವರಣ…

ಮುಂದೆ ಓದಿ..
ಅಂಕಣ 

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣಗಳು – ಬರಹಗಳು……..

Taluknewsmedia.com

Taluknewsmedia.comಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣಗಳು – ಬರಹಗಳು…….. ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ.ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ……… ನಮ್ಮ ಅಭಿಪ್ರಾಯ ಏನಿದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯಬಹುದೇ ? ಹಾಗಾದರೆ,ಒಬ್ಬ ಸಕ್ಕರೆ ಕಹಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಬಹುದು, ಇನ್ನೊಬ್ಬ ಕಾಗೆ ಬೆಳ್ಳಗಿದೆ ಎನ್ನಬಹುದು, ಮತ್ತೊಬ್ಬ ಜಾತಿಯೇ ಶ್ರೇಷ್ಠ ಎಂದು ಹೇಳಬಹುದು, ಮಗದೊಬ್ಬ ಆ ಪಕ್ಷ ದೇಶ ದ್ರೋಹಿ ಎನ್ನಬಹುದು, ಇನ್ಯಾರೋ ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎನ್ನಬಹುದು, ಮತ್ತೊಬ್ಬ ಅಧಿಕಾರಿಗಳೆಲ್ಲಾ ಭ್ರಷ್ಟರು ಎನ್ನಬಹುದು, ಮತ್ಯಾರೋ ಯುವಕರೆಲ್ಲಾ ಕೆಟ್ಟವರು ಎನ್ನಬಹುದು, ಅವರ್ಯಾರೋ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಇನ್ನೇನೋ ಹೇಳಬಹುದು, ಹೀಗೆ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಅದು ನನಗಿರುವ ಅಭಿವ್ಯಕ್ತಿ…

ಮುಂದೆ ಓದಿ..
ಅಂಕಣ 

“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?”

Taluknewsmedia.com

Taluknewsmedia.com“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?” ಭಾರತೀಯ ಸಮಾಜವು ತನ್ನ ಸಂಸ್ಕೃತಿ, ಮೌಲ್ಯ ಮತ್ತು ಮಾನವೀಯತೆಯಿಂದ ಜಗತ್ತಿಗೆ ಹೆಸರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದ ಗೌರವವನ್ನು ಮಸಿ ಹೊಡೆಯುತ್ತಿವೆ. ಪ್ರತಿದಿನ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸುವ ರಕ್ತ ಕುದಿಸುವ ಘಟನೆಗಳು ಜನತೆಯಲ್ಲಿ ಆತಂಕ, ಕೋಪ ಹಾಗೂ ನಿರಾಸೆಯನ್ನು ಉಂಟುಮಾಡುತ್ತಿವೆ. ಪ್ರತಿ ಕಿರಿಯ ಹುಡುಗಿಯೂ ಭಯದಿಂದ ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಸಮಾಜದ ದುರಂತವಾಗಿದೆ. ಒಬ್ಬ ಬಾಲಕಿ ಶಾಲೆಗೆ, ಕಾಲೇಜಿಗೆ, ಅಥವಾ ಬೀದಿಗೆ ಹೋಗುವಾಗ ಪೋಷಕರ ಹೃದಯದಲ್ಲಿ ಭಯವಿರಬಾರದು ಎಂಬುದೇ ಪ್ರತಿ ಕುಟುಂಬದ ಕನಸು. ಆದರೆ ಇಂದಿನ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಈಗಾಗಲೇ ಭಾರತದ ಕಾನೂನುಗಳಲ್ಲಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಕೆಲ ಸಂದರ್ಭಗಳಲ್ಲಿ ಮರಣದಂಡನೆಗೂ ಅವಕಾಶವಿದೆ. ಆದರೆ ನ್ಯಾಯಾಂಗ ಪ್ರಕ್ರಿಯೆಯು ಅನಾವಶ್ಯಕವಾಗಿ ದೀರ್ಘವಾಗುತ್ತಿರುವುದರಿಂದ ಅಪರಾಧಿಗಳು…

ಮುಂದೆ ಓದಿ..
ಅಂಕಣ 

ಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ

Taluknewsmedia.com

Taluknewsmedia.comಫೀಚರ್: ಡಿಜಿಟಲ್ ಯುಗದಲ್ಲಿ ಯುವಕರ ಜೀವನ – ಅವಕಾಶಗಳೂ, ಆತಂಕಗಳೂ ಇಂದಿನ ಪೀಳಿಗೆಯನ್ನು “ಡಿಜಿಟಲ್ ಪೀಳಿಗೆ” ಎಂದು ಕರೆಯುತ್ತಾರೆ. ಸ್ಮಾರ್ಟ್‌ಫೋನ್, ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ಬದುಕಿನ ಪ್ರತಿಯೊಂದು ಹಂತವೂ ಬದಲಾಗುತ್ತಿದೆ. ವಿಶೇಷವಾಗಿ ಯುವಕರ ಜೀವನದಲ್ಲಿ ತಂತ್ರಜ್ಞಾನವು ಅವಕಾಶಗಳನ್ನೂ, ಆತಂಕಗಳನ್ನೂ ಒಟ್ಟಿಗೆ ತಂದಿದೆ. ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ ಆನ್‌ಲೈನ್ ಪಠ್ಯಕ್ರಮ, ಯೂಟ್ಯೂಬ್ ಕ್ಲಾಸ್‌ಗಳು, ಇ-ಲೈಬ್ರರಿ – ಇವು ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ನೀಡಿವೆ. ಬೆಂಗಳೂರು ಮೂಲದ ಶಿಕ್ಷಣ ತಜ್ಞೆ ಡಾ. ಶಿಲ್ಪಾ ಅವರು ಹೇಳುವಂತೆ, “ಗ್ರಾಮಾಂತರದ ವಿದ್ಯಾರ್ಥಿಗೂ ಇಂದಿಗೆ ವಿಶ್ವ ಮಟ್ಟದ ಪಾಠ ತಲುಪುತ್ತಿದೆ. ಆದರೆ ತಂತ್ರಜ್ಞಾನವನ್ನು ಸರಿಯಾಗಿ ಬಳಸಲು ಮಾರ್ಗದರ್ಶನ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉದ್ಯೋಗದ ಹೊಸ ದಾರಿಗಳು ಡಿಜಿಟಲ್ ಯುಗವು ಉದ್ಯೋಗದಲ್ಲಿ ಹೊಸ ಹಾದಿಗಳನ್ನು ತೆರೆದಿದೆ. ಫ್ರೀಲಾನ್ಸ್ ಬರಹಗಾರರು, ಡಿಜಿಟಲ್ ಮಾರ್ಕೆಟಿಂಗ್ ತಜ್ಞರು, ಆಪ್ ಡೆವಲಪರ್‌ಗಳು – ಇವು ಇಂದಿನ…

ಮುಂದೆ ಓದಿ..
ಅಂಕಣ 

ಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ

Taluknewsmedia.com

Taluknewsmedia.comಮಹಿಳಾ ಸಬಲೀಕರಣ – ಸಮಾಜದ ನಿಜವಾದ ಶಕ್ತಿ ಮಹಿಳಾ ಸಬಲೀಕರಣವೆಂಬ ಪದದನ್ನು ಇಂದು ಎಲ್ಲೆಡೆ ಕೇಳಬಹುದು. ಆದರೆ ಇದು ಕೇವಲ ಘೋಷಣೆಯಲ್ಲ. ಸಮಾಜದ ಪ್ರಗತಿಯ ಮೂಲ ಸತ್ಯ ಕುಟುಂಬ, ಆರ್ಥಿಕತೆ, ರಾಜಕೀಯ, ವಿಜ್ಞಾನ – ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಕೊಡುಗೆ ಅತ್ಯಂತ ಪ್ರಮುಖ ಅದರೂ, ಇತಿಹಾಸದಲ್ಲಿ ಅವರ ಶ್ರಮವನ್ನು ಆನೇಕ ಬಾರಿ ಕಡೆಗಣಿಸಲಾಗಿದೆ. ಪತ್ರಕರ್ತನಾಗಿ, ಈ ವಿಚಾರವನ್ನು ಅನ್ವೇಷಿಸುವುದು ಕೇವಲ ಲೇಖನ ಬರೆಯುವುದಲ್ಲ -ಸಮಾಜದ ಮುಂದೆ ನಿಜವನ್ನು ತೆರೆದಿಡುವುದಾಗಿದೆ ಶಿಕ್ಷಣವೇ ಮೊದಲ ಹೆಜ್ಜೆ ಶಿಕ್ಷಣ ಪಡೆದ ಹುಡುಗಿ ತನ್ನ ಜೀವನವನ್ನೇ ಬದಲಾಯಿಸಬಲ್ಲಳು. ಗ್ರಾಮೀಣ ಭಾರತದಲ್ಲಿ ಇನ್ನೂ ಅನೇಕ ಹೆಣ್ಣುಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ತಳ್ಳಲ್ಪಡುತ್ತಿದ್ದಾರೆ. ಬೆಟ್ಟಿ ಬಚಾವೋ, ಬೆಟ್ಟಿ ಪದಾವೋ ತರಹದ ಸರ್ಕಾರದ ಯೋಜನೆಗಳು ಶಿಕ್ಷಣದ ಹಕ್ಕನ್ನು ಬಲಪಡಿಸುತ್ತಿದ್ದರೂ, ಸಾಮಾಜಿಕ ಅಡೆತಡೆಗಳು ಇನ್ನೂ ಅಸ್ತಿತ್ವದಲ್ಲಿವೆ. ಆರ್ಥಿಕ ಸ್ವಾವಲಂಬನೆ ಮಹಿಳೆಯರು ಸ್ವಂತ ಆದಾಯ ಗಳಿಸಿದಾಗ, ಕುಟುಂಬದಲ್ಲಿಯೂ ಸಮಾಜದಲ್ಲಿಯೂ ನಿರ್ಧಾರ…

ಮುಂದೆ ಓದಿ..
ಅಂಕಣ 

ನೇಪಾಳದ ಪರಿಸ್ಥಿತಿ – ಸರ್ಕಾರ, ಯುವಜನತೆ ಮತ್ತು ಭವಿಷ್ಯದ ದಾರಿ

Taluknewsmedia.com

Taluknewsmedia.comನೇಪಾಳದ ಪರಿಸ್ಥಿತಿ – ಸರ್ಕಾರ, ಯುವಜನತೆ ಮತ್ತು ಭವಿಷ್ಯದ ದಾರಿ ಪರಿಚಯ ನೇಪಾಳವು ಹಿಮಾಲಯದ ಮಧ್ಯದಲ್ಲಿರುವ ಒಂದು ಸಣ್ಣ ದೇಶವಾದರೂ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳ ಹಾದಿಯಲ್ಲಿ ನಿರಂತರವಾಗಿ ಸಾಗುತ್ತಿದೆ. 2008ರಲ್ಲಿ ರಾಜತಂತ್ರ ಅಂತ್ಯಗೊಂಡು ಗಣರಾಜ್ಯ ಸ್ಥಾಪನೆಯಾದ ನಂತರ, ದೇಶವು ಸ್ಥಿರತೆಯತ್ತ ಸಾಗಬೇಕಿತ್ತು. ಆದರೆ ಇಂದಿಗೂ ರಾಜಕೀಯ ಅಸ್ಥಿರತೆ, ಆರ್ಥಿಕ ಕುಸಿತ, ಉದ್ಯೋಗಾವಕಾಶಗಳ ಕೊರತೆ ಮತ್ತು ಯುವಜನರ ವಲಸೆ ಎಂಬ ಸಮಸ್ಯೆಗಳು ನೇಪಾಳವನ್ನು ಕಾಡುತ್ತಿವೆ. ರಾಜಕೀಯ ಪರಿಸ್ಥಿತಿ ನೇಪಾಳದಲ್ಲಿ ಕಳೆದ 15 ವರ್ಷಗಳಲ್ಲಿ ಅನೇಕ ಸರ್ಕಾರಗಳು ಬಂದು ಹೋಗಿವೆ. ಪಾರ್ಟಿಗಳ ಒಳಹೊಸಾಟ, ಮೈತ್ರಿ ರಾಜಕೀಯದ ಒತ್ತಡ ಹಾಗೂ ಭ್ರಷ್ಟಾಚಾರದ ಆರೋಪಗಳು ಸರ್ಕಾರವನ್ನು ದುರ್ಬಲಗೊಳಿಸುತ್ತಿವೆ. 2015ರಲ್ಲಿ ಜಾರಿಗೆ ಬಂದ ಸಂವಿಧಾನವು ಜನರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸಿತು. ಆದರೆ ಕೇಂದ್ರ ಮತ್ತು ಪ್ರಾದೇಶಿಕ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ, ಆಡಳಿತದ ಜವಾಬ್ದಾರಿಗಳು ಇನ್ನೂ ಗೊಂದಲದಲ್ಲಿವೆ. ಚೀನಾ ಮತ್ತು ಭಾರತ…

ಮುಂದೆ ಓದಿ..
ಅಂಕಣ 

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

Taluknewsmedia.com

Taluknewsmedia.comಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ…… ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಪಾಡಿಗೆ ನಾವಿದ್ದರೆ ಖಂಡಿತವಾಗಲೂ ಮುಂದಿನ ದಿನಗಳು ನಮ್ಮ ಬುಡಕ್ಕೆ ಈ ಸಮಸ್ಯೆ ಬರಬಹುದು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಗಲಭೆಗಳು ಸಾಮಾನ್ಯವಾಗುತ್ತಿದೆ. ಅದರ ಅರ್ಥ ಮನಸ್ಸುಗಳು ಧರ್ಮದ ಆಧಾರದ ಮೇಲೆ ಒಡೆದು ಹೋಗುತ್ತಿದೆ. ಇದಕ್ಕೆ ಆ ಕ್ಷಣದ ಆ ಘಟನೆಯಾ ಮೇಲೆ ಚರ್ಚೆ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬರುವುದು ತೀರ ಬಾಲಿಶವಾದದ್ದು. ವ್ಯವಸ್ಥೆ ಮತ್ತು ಅದು ಸಾಗುತ್ತಿರುವ ದಿಕ್ಕನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ನಮ್ಮನ್ನು ಕಾಪಾಡಬೇಕಾಗಿದ್ದ ದೇವರು, ನಮ್ಮನ್ನು ರಕ್ಷಿಸಿ ಕ್ರಮಬದ್ಧ ಜೀವನಶೈಲಿ ರೂಪಿಸಬೇಕಾಗಿದ್ದ ಧರ್ಮಗಳು ಇಂದು ನಮ್ಮನ್ನು ವಿಭಜಿಸಿರುವುದು ಮಾತ್ರವಲ್ಲದೆ ದೇವರು ಧರ್ಮವನ್ನು ಉಳಿಸಬೇಕಾದ ಪರಿಸ್ಥಿತಿ…

ಮುಂದೆ ಓದಿ..
ಅಂಕಣ 

ಪೂರ್ಣ ಚಂದ್ರ ತೇಜಸ್ವಿ…………

Taluknewsmedia.com

Taluknewsmedia.comಪೂರ್ಣಚಂದ್ರತೇಜಸ್ವಿ………… ಕಾಡು ನೆನಪಾದಾಗ ಕಾಡುವ ತೇಜಸ್ವಿ……… ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಆ ಸ್ಥಾನಕ್ಕೆ ಬಂದಿದ್ದಾರೆ. ಹಾಗೆಯೇ ನನಗೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರು ಸಹ ಅದೇರೀತಿ ಓದುಗರಲ್ಲಿ ಮೋಡಿ ಮಾಡಿದ್ದಾರೆ. ಇದು ಅವರ ನಡುವಿನ ಹೋಲಿಕೆಯಲ್ಲ. ಇಬ್ಬರದೂ ಬೇರೆ ಬೇರೆ ಕ್ಷೇತ್ರ. ಜನಾಕರ್ಷಣೆಯ ದೃಷ್ಟಿಯಿಂದ ಮಾತ್ರ ಹೇಳಿದ್ದು. ಕನ್ನಡ ಸಾಹಿತ್ಯದಲ್ಲಿ ಆಗಿನ ಸಂದರ್ಭದಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದ, ಸ್ವತಃ ಉತ್ತಮ ಬರಹಗಾರರಾಗಿದ್ದರೂ ಲಂಕೇಶ್ ಅವರು ತೇಜಸ್ವಿ ಬರಹಗಳ ಬಗ್ಗೆ ಬರೆಯುತ್ತಾ, ಅವರ ಬರಹದ ಬಗ್ಗೆ ನನಗೆ ಈಗಲೂ ಅಸೂಯೆ ಕಾಡುತ್ತದೆ. ಹಾಗೆ ಬರೆಯಲು ನನಗೂ ಸಾಧ್ಯವಾಗುತ್ತಿಲ್ಲ ಎಂಬ ಅರ್ಥದಲ್ಲಿ ಅವರನ್ನು ಹೊಗಳುತ್ತಾರೆ. ಸಾಹಿತ್ಯದ ಸಹಜತೆ ಕಾಪಾಡುತ್ತಾ, ಬದುಕಿನ ಸ್ವಾಭಾವಿಕತೆಯನ್ನು ತನ್ನ ನಡವಳಿಕೆಯಾಗಿ ರೂಪಿಸಿಕೊಂಡು ಅದನ್ನು ಅಕ್ಷರಗಳಿಗೆ ಇಳಿಸಿ ಸಾಮಾನ್ಯ ಓದುಗರ ಮನದಲ್ಲಿ ಮನೆ ಮಾಡಿದ ಅಪರೂಪದ…

ಮುಂದೆ ಓದಿ..
ಅಂಕಣ 

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ……….

Taluknewsmedia.com

Taluknewsmedia.comಮನೆ ಖರೀದಿ ಬದುಕನ್ನೇ ಮಾರಾಟಮಾಡಿದಂತೆ………. ಸಾಲದ ಇನ್ನೊಂದು ಮುಖ….. ಸ್ವಂತ ಮನೆಯ ಸುಖ ಮತ್ತು ಸಾಲದ ಶೂಲ…… ಅಗತ್ಯವಾದಷ್ಟು ಹಣ ಇದ್ದವರಿಗೆ ಇದು ಅನ್ವಯಿಸುವುದಿಲ್ಲ…. ” 20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ ಆ ಮನೆಯನ್ನು ನೀವು ಖರೀದಿಸಿದ್ದೀರಿ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವದಲ್ಲಿ ಆ ಮನೆ ನಿಮ್ಮನ್ನು ಖರೀದಿಸಿರುತ್ತದೆ “ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರ ಅನುಭವದ ನುಡಿಗಳು…… ಭಾರತದ ಮಧ್ಯಮ ವರ್ಗದ ಜನರ ಬದುಕಿಗೆ ಇದು ಅತ್ಯಂತ ಹತ್ತಿರವಾಗಿದೆ. ಕೆಲವು ದಶಕಗಳ ಹಿಂದೆ ಸಾಮಾನ್ಯವಾಗಿ ಬಹುತೇಕ ಸರ್ಕಾರಿ ಉದ್ಯೋಗಿಗಳು ಮತ್ತು ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಹಾಗು ಕೆಲವು ಯಶಸ್ವಿ ಉದ್ಯಮಿಗಳು ಸುಮಾರು 50/60 ರ‌ ವಯಸ್ಸಿನ ಆಸುಪಾಸಿನಲ್ಲಿ ಅಂದರೆ ನಿವೃತ್ತಿಯ ಸಮೀಪದಲ್ಲಿ ಒಂದು…

ಮುಂದೆ ಓದಿ..
ಅಂಕಣ 

ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ………

Taluknewsmedia.com

Taluknewsmedia.comಎಚ್ಚರಿಕೆ…. ಎಚ್ಚರಿಕೆ…. ಎಚ್ಚರಿಕೆ…… ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ……… ಹೌದು,ರಕ್ತದ ಬಣ್ಣ ಕೆಂಪು,ಗ್ರಹಣದ ಪರಿಣಾಮ ಘೋರ,ರಕ್ತದ ಅರ್ಥ ಸಾವು ನೋವು.ಇದು ಭಯಂಕರ.ನಮ್ಮ ಕನಸಿನ ಚಂದಮಾಮ ರಕ್ತ ವರ್ಣದಲ್ಲಿ,ಇದು ಸಹಜ ಸ್ವಾಭಾವಿಕ ಅಲ್ಲ.ಇದು ಪ್ರಳಯದ ಮುನ್ಸೂಚನೆ….. ಅಲ್ಲೆಲ್ಲೋ ಭೂಕಂಪ, ಇನ್ನೆಲ್ಲೋ ಸುನಾಮಿ, ಮತ್ತೆಲ್ಲೋ ಅಗ್ನಿಯ ನರ್ತನ, ಮಗದೆಲ್ಲೋ ಮೇಘ ಸ್ಪೋಟ, ಅಪಘಾತ, ಅಪರಾಧ, ಅನಾರೋಗ್ಯ, ಬಾಂಬ್ ಸ್ಪೋಟ ಪ್ರಖ್ಯಾತರ ಸಾವು,ಅಬ್ಬಬ್ಬಾ………… ನಿಮ್ಮ ರಾಶಿ ಯಾವುದು,ಅದಕ್ಕೆ ಅನುಗುಣವಾಗಿ ಗ್ರಹಣದ ಪರಿಣಾಮ ನಿಮ್ಮ ಮೇಲೆ. ಭಯವಾಗುತ್ತಿದೆಯೇ……. ಆದರೂ ಇದಕ್ಕೆ ಪರಿಹಾರವೂ ಇದೆ.ಹೋಮ, ಹವನ, ಮಂತ್ರ ತಂತ್ರಗಳನ್ನು ಮಾಡಿ,ಜಪ ತಪ ವ್ರತಗಳನ್ನು ಮಾಡಿ,ನೇಮ ನಿಷ್ಠೆಗಳಿಂದ ಇದ್ದರೆ ಇದರ ಪರಿಣಾಮದ ತೀವ್ರತೆ ಕಡಿಮೆಯಾಗುತ್ತದೆ………. ಇದು ನಿಜವೇ ? ಸುಳ್ಳೇ ? ನಂಬಿಕೆಯೇ ? ಮೂಲ ನಂಬಿಕೆಯೇ ?…

ಮುಂದೆ ಓದಿ..