ಸುದ್ದಿ 

ಮರ ಮತ್ತು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಠಿಣ ಕ್ರಮ: ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಎಚ್ಚರಿಕೆ

Taluknewsmedia.com

Taluknewsmedia.comಮರ ಮತ್ತು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಠಿಣ ಕ್ರಮ: ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಎಚ್ಚರಿಕೆ ಬೆಂಗಳೂರು: ನಗರದ ಸೌಂದರ್ಯ ಹಾಳುಮಾಡುವ ರೀತಿಯಲ್ಲಿ ಮರಗಳು ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಅವರು ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ದೇವರಬೀಸನಹಳ್ಳಿ ಪ್ರದೇಶದಲ್ಲಿ ಮರಗಳ ಮೇಲಿನ ಪೋಸ್ಟರ್‌ಗಳನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಈ ಸಂಬಂಧ ಅಧಿಕಾರಿಗಳಿಗೆ ತಕ್ಷಣವೇ ಅಸ್ತಿತ್ವದಲ್ಲಿರುವ ಎಲ್ಲಾ ಪೋಸ್ಟರ್‌ಗಳನ್ನು ತೆರವುಗೊಳಿಸಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮರುಕಳಿಸಿದರೆ ಸಂಬಂಧಿಸಿದವರಿಗೆ ದಂಡ ವಿಧಿಸಲು ಸೂಚನೆ ನೀಡಿದರು. ಪರಿಶೀಲನೆಯ…

ಮುಂದೆ ಓದಿ..
ಅಂಕಣ 

ಒಂದು ಅಪಘಾತ……..

Taluknewsmedia.com

Taluknewsmedia.comಒಂದು ಅಪಘಾತ…….. ನಿನ್ನೆ ಒಂದು ಅಪಘಾತವಾದ ಸುದ್ದಿ ತಿಳಿಯಿತು. ಅದರಲ್ಲಿ 40 ವರ್ಷದ ಗಂಡ ಮತ್ತು ಆತನ 35 ವರ್ಷದ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿಗೆ ಐದು, ಏಳು ಮತ್ತು ಹತ್ತು ವರ್ಷದ ಮೂವರು ಮಕ್ಕಳಿದ್ದಾರೆ. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಬಟ್ಟೆ ಅಂಗಡಿ ಇಟ್ಟುಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವದು. ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ ನೋಡಿ, 5, 7 ಮತ್ತು 10 ವರ್ಷದ ಗಂಡು-ಹೆಣ್ಣು ಮಕ್ಕಳು ಮನೆಯಲ್ಲಿ ಶಾಲಾ ಪುಸ್ತಕ ಓದುತ್ತಲೋ, ಟಿವಿ ನೋಡುತ್ತಲೋ, ಆಟವಾಡುತ್ತಲೋ ತಮ್ಮ ಅಪ್ಪ ಅಮ್ಮ ರಾತ್ರಿ ಮನೆಗೆ ಬರುತ್ತಾರೆ ಎಂದು ನಿರೀಕ್ಷಿಸುತ್ತಾ ಅವರದೇ ಲೋಕದಲ್ಲಿ ಮುಳುಗಿರುತ್ತಾರೆ. ಕೆಲವರು ಮೊಬೈಲಿನಲ್ಲಿ ಆಟವಾಡುತ್ತಿರುತ್ತಾರೆ,ಕೆಲವರು ಟ್ಯೂಷನ್ ಗೂ ಹೋಗಿರಬಹುದು. ಒಟ್ಟಿನಲ್ಲಿ ಅಪ್ಪ-ಅಮ್ಮನನ್ನು ಮೊಬೈಲಿನಲ್ಲಿ ಸಂಪರ್ಕಿಸುತ್ತಾ ಅವರ ನಿರೀಕ್ಷೆಯಲ್ಲಿ ಇರುತ್ತಾರೆ. ಆಗ ಇದ್ದಕ್ಕಿದ್ದಂತೆ ಅವರಿಗೆ ಪೊಲೀಸರು ಮೂಲಕವೋ ಅಥವಾ ಅವರ ನೆಂಟರಿಷ್ಟರ…

ಮುಂದೆ ಓದಿ..
ಸುದ್ದಿ 

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ

Taluknewsmedia.com

Taluknewsmedia.comರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ವಿಚಾರಣೆ ನವೆಂಬರ್‌ 10ಕ್ಕೆ ಮುಂದೂಡಿಕೆ ಬೆಂಗಳೂರು, ನ.3: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಆರೋಪಿಗಳ ವಿಚಾರಣೆಯನ್ನು ಬೆಂಗಳೂರಿನ 57ನೇ ಸೆಷನ್ ಕೋರ್ಟ್ ನವೆಂಬರ್‌ 10ಕ್ಕೆ ಮುಂದೂಡಿದೆ. ಜಾಮೀನು ರದ್ದುಪಟ್ಟು ಮತ್ತೆ ಜೈಲಿನಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರು ಮಂದಿ ಆರೋಪಿಗಳು ನವೆಂಬರ್‌ 3ರಂದು ಭಾರೀ ಭದ್ರತೆಯ ಮಧ್ಯೆ ಖುದ್ದು ಕೋರ್ಟ್‌ಗೆ ಹಾಜರಾದರು. ಈ ಸಂಬಂಧ ಕೋರ್ಟ್ ಖುದ್ದು ಹಾಜರಾತಿ ನೀಡಲು ಸೂಚನೆ ನೀಡಿತ್ತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯ ವಿರುದ್ಧದ ವಿಚಾರಣೆಯು ಇಂದು ನಡೆಯಬೇಕಿದ್ದರೂ, ಕೋರ್ಟ್ ಮುಂದಿನ ದಿನಾಂಕ ನವೆಂಬರ್‌ 10ಕ್ಕೆ ಮುಂದೂಡಿದೆ. ಸುಪ್ರೀಂ ಕೋರ್ಟ್ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದುಪಡಿಸಿದ ನಂತರ, ಅವರು ಆಗಸ್ಟ್‌ 14ರಂದು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದರು. ಆ ನಂತರದಿಂದ ಕೋರ್ಟ್…

ಮುಂದೆ ಓದಿ..
ಸುದ್ದಿ 

ಟಿಪ್ಪರ್‌ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ

Taluknewsmedia.com

Taluknewsmedia.comಟಿಪ್ಪರ್‌ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ ಗುಡಿಬಂಡೆ: ಬೋಮ್ಮಗಾನಹಳ್ಳಿ ಕೆರೆಯ ಕಟ್ಟೆಯ ಮೇಲಿನ ರಸ್ತೆ ಮೇಲೆ ನಡೆದ ದುರ್ಘಟನೆಯಲ್ಲಿ ಮಹಿಳಾ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬತ್ತಲಹಳ್ಳಿ ಗ್ರಾಮದ ಸಮೀಪದ ಜಲ್ಲಿ ಕ್ರಷರ್‌ನಿಂದ ಚಿಕ್ಕಬಳ್ಳಾಪುರದ ದಿಕ್ಕಿಗೆ ತೆರಳುತ್ತಿದ್ದ ಟಿಪ್ಪರ್ ವಾಹನದಿಂದ ಆಕಸ್ಮಿಕವಾಗಿ ಬಿದ್ದ ದೊಡ್ಡ ಕಲ್ಲು, ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರಳ ಕಾಲಿಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಹಸೀನಾ (27) ಎಂದು ಗುರುತಿಸಲಾಗಿದ್ದು, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದಾರೆ. ಸ್ಥಳೀಯರು ಹಾಗೂ ಸಹೋದ್ಯೋಗಿಗಳು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯಿಂದ ಅವರ ಬೈಕ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಟಿಪ್ಪರ್ ವಾಹನದಿಂದ ಕಲ್ಲು ಹೇಗೆ ಬಿದ್ದಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟಿಪ್ಪರ್ ವಾಹನಗಳ ವೇಗದ ಓಟ ಹಾಗೂ…

ಮುಂದೆ ಓದಿ..
ಸುದ್ದಿ 

ಗ್ಯಾಸ್ ಸಬ್ಸಿಡಿ ಬಂದ್ ಆಗುತ್ತೆ ಎಚ್ಚರ! ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ

Taluknewsmedia.com

Taluknewsmedia.comಗ್ಯಾಸ್ ಸಬ್ಸಿಡಿ ಬಂದ್ ಆಗುತ್ತೆ ಎಚ್ಚರ! ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಕೇಂದ್ರ ಸರ್ಕಾರದ ಹೊಸ ಎಚ್ಚರಿಕೆ.. ದೇಶದಾದ್ಯಂತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಹೊಸ ಎಚ್ಚರಿಕೆ ನೀಡಲಾಗಿದೆ. ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ನೇರವಾಗಿ ಜಮೆಯಾಗುತ್ತಿದ್ದರೆ, ಈಗ ನೀವು ಒಂದು ಅಗತ್ಯ ಕಾರ್ಯವನ್ನು ತಕ್ಷಣ ಪೂರ್ಣಗೊಳಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ ಸೌಲಭ್ಯ ಸಂಪೂರ್ಣವಾಗಿ ನಿಂತು ಹೋಗಲಿದೆ. ಹೊಸ ನಿಯಮ ಏನು?.. ಭಾರತದ ಮೂರು ಪ್ರಮುಖ ತೈಲ ಕಂಪನಿಗಳಾದ.. ಇಂಡಿಯನ್ ಆಯಿಲ್ (IOC) ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಭಾರತ್ ಪೆಟ್ರೋಲಿಯಂ (BPCL) ಇವುಗಳು ಪೆಟ್ರೋಲಿಯಂ ಸಚಿವಾಲಯದ ನಿರ್ದೇಶನದಂತೆ ಎಲ್ಲ ಎಲ್‌ಪಿಜಿ ಗ್ರಾಹಕರಿಗೂ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಸೇರಿದಂತೆ ಸಬ್ಸಿಡಿ ಪಡೆಯುವ ಪ್ರತಿಯೊಬ್ಬರೂ ಈ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ!

Taluknewsmedia.com

Taluknewsmedia.comಬೆಂಗಳೂರು: ಮಂಗಳಮುಖಿಯರ ಅಟ್ಟಹಾಸ — ತಂಡ ಬದಲಾಯಿಸಿದಕ್ಕೆ ಕ್ರೂರ ಹಲ್ಲೆ! ಬೆಂಗಳೂರು ನಗರದ ಬೊಮ್ಮನಹಳ್ಳಿಯ ವಿರಾಟ್ ನಗರದಲ್ಲಿ ಮಂಗಳಮುಖಿಯರ ಗ್ಯಾಂಗ್ ನಡುವೆ ನಡೆದ ಘಟನೆ ಈಗ ಸಂಚಲನ ಸೃಷ್ಟಿಸಿದೆ. ಕೆಆರ್‌ಪುರದ ಗ್ಯಾಂಗ್‌ಗೆ ಸೇರಿದ್ದ ಸುಕನ್ಯಾ ಎಂಬ ಮಂಗಳಮುಖಿ ಮೇಲೆ, ಬೊಮ್ಮನಹಳ್ಳಿಯ ಪ್ರೀತಿ ಮತ್ತು ಚಿನ್ನಿ ನೇತೃತ್ವದ ಮಂಗಳಮುಖಿಯರ ತಂಡ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಮಂಗಳಮುಖಿ ಸುಕನ್ಯಾ ತಮ್ಮ ಹಳೆಯ ತಂಡ ಬಿಟ್ಟು ಹೊಸ ತಂಡ ಸೇರಿದ್ದಕ್ಕೆ ಕೋಪಗೊಂಡ ಪ್ರೀತಿ ಹಾಗೂ ಸಹಚರರು ಸುಕನ್ಯಾಳನ್ನು ಕೆಆರ್‌ಪುರದಿಂದ ಕಿಡ್ನ್ಯಾಪ್ ಮಾಡಿ ಬೊಮ್ಮನಹಳ್ಳಿಗೆ ಕರೆದುಕೊಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಹಿಟ್ಟಿನ ದೊಣ್ಣೆ, ಸೌಟು ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ತಲೆಯನ್ನು ಬೋಳಿಸಿ, ಕಾಲಿನಿಂದ ತಳ್ಳಿ, ಮನಸೋ ಇಚ್ಚೆ ಹೊಡೆದಿರುವ ವಿಡಿಯೋ ಕೂಡಾ ವೈರಲ್ ಆಗಿದೆ. ಹಲ್ಲೆಯ ವೇಳೆ ಮತ್ತೊಬ್ಬ ಮಂಗಳಮುಖಿಗೆ…

ಮುಂದೆ ಓದಿ..
ಸುದ್ದಿ 

ಇವರೆಂತಹ ಸ್ವಾಮಿಗಳು,

Taluknewsmedia.com

Taluknewsmedia.comಇವರೆಂತಹ ಸ್ವಾಮಿಗಳು, ಪರಿವರ್ತನೆಯ ಅಗತ್ಯವಿದೆ……. ಹಿಂದೂ ಧರ್ಮದ ಅಥವಾ ಮತದ ಅಥವಾ ಜೀವನ ವಿಧಾನದ ಅಥವಾ ಭಾರತೀಯ ಧಾರ್ಮಿಕ – ಆಧ್ಯಾತ್ಮಿಕ ಜೀವನದ ,ಸ್ವಾಮೀಜಿ – ಮಹರ್ಷಿ – ಗುರೂಜಿ – ಮಠಾಧಿಪತಿ – ಪೀಠಾಧಿಪತಿ – ಧರ್ಮಾಧಿಕಾರಿ ಎಂಬ ಪರಿಕಲ್ಪನೆಯನ್ನು ಬದಲಾಯಿಸೋಣವೇ ?ಅಥವಾಆ ರೀತಿಯ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪುನರ್ ರೂಪಿಸೋಣವೇ ? ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ಕಾವಿಧಾರಿ ಸ್ವಾಮಿಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ತುಂಬಾ ಗಾಬರಿ ಮೂಡಿಸಿದೆ……… ಕೆಲವೊಮ್ಮೆ ಅತಿಯಾದ ಕುಡುಕರು, ಅರೆ ಹುಚ್ಚರು, ತೀರಾ ಅಂಧಾಭಿಮಾನಿಗಳು, ಉಡಾಫೆ ವ್ಯಕ್ತಿತ್ವದವರು, ಭಟ್ಟಂಗಿಗಳು ಮಾತನಾಡುವುದನ್ನು ಕೇಳಿದ್ದೇವೆ. ಅವರು ಹಿಂದೆ ಮುಂದೆ ನೋಡದೆ ಬಾಯಿಗೆ ಬಂದಂತೆ ಯಾರನ್ನೋ ಇಂದ್ರ ಚಂದ್ರ ಎನ್ನುತ್ತಾರೆ ಇಲ್ಲವೇ ಕೆಟ್ಟ ಕೊಳಕು ಮಾತುಗಳಲ್ಲಿ ನಿಂದಿಸುತ್ತಾರೆ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರನ್ನು ಸಹಜ ಮನಸ್ಥಿತಿಯ ಆರೋಗ್ಯವಂತ ವ್ಯಕ್ತಿಗಳು ಎಂದು…

ಮುಂದೆ ಓದಿ..
ಅಂಕಣ 

ಒಂದಷ್ಟು ನೆಮ್ಮದಿಗಾಗಿ……….

Taluknewsmedia.com

Taluknewsmedia.comಒಂದಷ್ಟು ನೆಮ್ಮದಿಗಾಗಿ………. ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ? ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ? ಧರ್ಮ ಜಾತಿ ಭಾಷೆ ಹಣಕಾಸು ಪಕ್ಷ ಸಂಪ್ರದಾಯ ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತುಮಲವಾಗುತ್ತಿದೆಯೇ ? ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ????????? ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ…….. ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ…

ಮುಂದೆ ಓದಿ..
ಸಿನೆಮಾ ಸುದ್ದಿ 

ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ

Taluknewsmedia.com

Taluknewsmedia.comವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಭಜರಂಗ ಸಿನೆಮಾ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ಅವರ ನಿರ್ಮಾಣದಲ್ಲಿ, ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ “KITE ಬ್ರದರ್ಸ್” ಚಿತ್ರವು ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ. ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿತು. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, “ಇದು ಮಕ್ಕಳ ಚಿತ್ರವಾದರೂ ಎಲ್ಲ ವಯಸ್ಸಿನವರಿಗೂ ಹತ್ತಿರವಾಗುವಂತಹ ಸಾಮಾಜಿಕ ಸಂದೇಶ ಹೊಂದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಷ್ಟೇ ಅಲ್ಲ, ಆ ಶಾಲೆಗಳಲ್ಲಿ ಕಲಿತವರೂ ಮುಂದಾಗಿ ನೆರವಾಗಬೇಕು ಎಂಬ ಆಶಯವನ್ನು ಕಥೆಯಲ್ಲಿ ತೋರಿಸಿದ್ದೇವೆ” ಎಂದರು. ಕಥೆಯ ಹಿನ್ನಲೆ ಕುರಿತು ವಿವರಿಸುತ್ತಾ, “ರೈಟ್ ಬ್ರದರ್ಸ್ ಫ್ಲೈಟ್ ಇಂಜಿನಿಯರಿಂಗ್‌ನಲ್ಲಿ ಸಾಧನೆ ಮಾಡಿದಂತೆ, ನಮ್ಮ ಕಥೆಯ…

ಮುಂದೆ ಓದಿ..
ಸುದ್ದಿ 

ಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್‌ಹೋಲ್!

Taluknewsmedia.com

Taluknewsmedia.comಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್‌ಹೋಲ್! ಬೆಂಗಳೂರು ನೀಲಸಂಧ್ರದಲ್ಲಿ ನಡೆದ ದಾರುಣ ಘಟನೆ ಮತ್ತೊಮ್ಮೆ “ಮಾನವ ಜೀವದ ಮೌಲ್ಯ ಎಷ್ಟು?” ಎಂಬ ಪ್ರಶ್ನೆ ಎಬ್ಬಿಸಿದೆ. ವಿವೇಕನಗರ ಠಾಣೆ ವ್ಯಾಪ್ತಿಯ ಮ್ಯಾನ್‌ಹೋಲ್‌ನಲ್ಲಿ ಕ್ಲೀನಿಂಗ್ ಕೆಲಸ ನಡೆಸುತ್ತಿದ್ದ ಮೂವರು ಕಾರ್ಮಿಕರು ಪ್ರಜ್ಞೆ ತಪ್ಪಿ ಒಳಗೇ ಕುಸಿದು ಬಿದ್ದಿದ್ದಾರೆ. ಮ್ಯಾನ್‌ಹೋಲ್ ಒಳಗಿನ ವಿಷಕಾರಿ ಅನಿಲದಿಂದ ಕಾರ್ಮಿಕರು ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡರು. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ, ಆಮ್ಲಜನಕ ಮಾಸ್ಕ್ ಇಲ್ಲದೇ, ಕೇವಲ ಬಟ್ಟೆಯ ತೊಟ್ಟಿಯಲ್ಲಿ ಕೆಲಸ ಮಾಡಲು ಕಳಿಸಿದ ಈ ಕಾರ್ಮಿಕರು ನೇರವಾಗಿ ಜೀವದ ಹಂಗು ಹಾಕಿದ್ದಾರೆ.ಘಟನೆ ವೇಳೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಸ್ಥಳೀಯರು ಸಮಯಪ್ರಜ್ಞೆಯಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಅವರ ಶೌರ್ಯದಿಂದ ಮೂವರ ಜೀವ ಉಳಿದರೂ, ಜಲಮಂಡಳಿಯ ನಿರ್ಲಕ್ಷ್ಯದಿಂದ ಮತ್ತೆ ಕಾರ್ಮಿಕರ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ. ಅಡಿಗಟ್ಟಿ ಕೆಲಸ ಮಾಡುವವರ ಸುರಕ್ಷತೆಯ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಕಾಂಟ್ರಾಕ್ಟರ್‌ಗಳ…

ಮುಂದೆ ಓದಿ..