ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ
Taluknewsmedia.comಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ ನಂಜನಗೂಡು: ಪತಿಯನ್ನ ಕೊಲ್ಲಲು ಪತ್ನಿಯೇ ಸ್ಕೆಚ್ ಹಾಕಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪೊಲೀಸರ ಸೂಕ್ಷ್ಮ ತನಿಖೆಯಿಂದ ಸಿಕ್ಕಿಬಿದ್ದ ಈ ಕಿಲಾಡಿ ಪತ್ನಿಯ ಆಟ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದೆ. ಪತಿಯನ್ನ ಮುಗಿಸಲು ಪತ್ನಿ ತನ್ನ ಸಹೋದರನ ಸಹಾಯದಿಂದ ಸಂಚು ರೂಪಿಸಿದ್ದಾಳೆ. ಆದರೆ ನಂಜನಗೂಡು ಠಾಣೆ ಪೊಲೀಸರು ಬಲವಾದ ಸುಳಿವುಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಸಂಗೀತಾ, ಆಕೆಯ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ — ಈ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಪತಿಯನ್ನ ಕೊಲ್ಲಲು ಸಂಚು ರೂಪಿಸಿದರೂ, ಯೋಜನೆ ಪೂರ್ಣವಾಗಿ ಸಫಲವಾಗಲಿಲ್ಲ. ಗಾಯಗೊಂಡ ಪತಿ ರಾಜೇಂದ್ರ ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…
ಮುಂದೆ ಓದಿ..
