ಅಂಕಣ 

ರೇಷನ್ ಕಾರ್ಡ್ ಬಡವರು ಮತ್ತು ನಿಜ ನಿರ್ಗತಿಕರು ?

Taluknewsmedia.com

Taluknewsmedia.comರೇಷನ್ ಕಾರ್ಡ್ ಬಡವರು ಮತ್ತು ನಿಜ ನಿರ್ಗತಿಕರು ? ಬಡತನ ಎಂದರೇನು ? ಬಡವರು ಎಂದರೆ ಯಾರು ? ತಿನ್ನಲು ಊಟವಿಲ್ಲದೆ ಹಸಿವಿನಿಂದ ನರಳುತ್ತಿರುವವರು ಬಡವರೇ,ಊಟವಿದ್ದೂ ಮೈತುಂಬ ಬಟ್ಟೆ ಇಲ್ಲದೆ ಹರಿದ ಬಟ್ಟೆ ಹಾಕಿರುವ ಜನರು ಬಡವರೇ.ಊಟ, ಬಟ್ಟೆ ಇದ್ದು ವಾಸಿಸಲು ಸರಿಯಾದ ಜಾಗವಿಲ್ಲದ / ವಸತಿ ಇಲ್ಲದ ಜನರು ಬಡವರೇ,ಊಟ, ಬಟ್ಟೆ, ವಸತಿ ಇದ್ದು ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವವರು ಬಡವರೇ, ಊಟ, ಬಟ್ಟೆ, ವಸತಿ, ಶಿಕ್ಷಣ ಇದ್ದು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗದ ಜನರನ್ನು ಬಡವರು ಎನ್ನಬೇಕೇ ಅಥವಾ ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ ಇವುಗಳನ್ನು ಪಡೆದೂ ತನ್ನಿಷ್ಟದಂತೆ ಬದುಕಲು ಸಾಧ್ಯವಾಗದೇ ಇರುವವರು ಬಡವರೇ ಅಥವಾ ಇದೆಲ್ಲವೂ ಇದ್ದು ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಪಡೆದ ಮಾತ್ರಕ್ಕೆ ಅವರು ಬಡವರೇ, ನಿರ್ಧರಿಸಬೇಕಾಗಿರೋದು ಸರ್ಕಾರ, ಸಮಾಜ ಮತ್ತು ನಮ್ಮ ಆತ್ಮಸಾಕ್ಷಿ……. ಹಣ ಇದ್ದು ಗುಣ…

ಮುಂದೆ ಓದಿ..
ಸುದ್ದಿ 

ರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ..

Taluknewsmedia.com

Taluknewsmedia.comರೈತನ ಆರ್ಥಿಕ ಬಿಕ್ಕಟ್ಟು: ಸಾಲದ ಒತ್ತಡ ತಾಳಲಾರದೆ ಆತ್ಮಹತ್ಯೆ.. ಕೆಂಭಾವಿ : ಸಮೀಪದ ತಳ್ಳಳ್ಳಿ (ಬಿ) ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ, ಸಾಲಬಾಧೆಯಿಂದ ಕಂಗೆಟ್ಟ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ತಳ್ಳಳ್ಳಿ (ಬಿ) ಗ್ರಾಮದ ನಿವಾಸಿ ಹಣಮಂತ್ರಾಯ ಯಮನಪ್ಪ ಬಿರೆದಾರ್ (41) ಎನ್ನುವವರು ಬದುಕಿನ ಕಷ್ಟ ತಾಳಲಾರದೆ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ರೈತನಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆಂಭಾವಿ ಶಾಖೆಯಿಂದ ಸುಮಾರು ₹2.13 ಲಕ್ಷ ಸಾಲ ಬಾಕಿಯಾಗಿದ್ದು, ಜೊತೆಗೆ ಕೈಗಡ ಸಾಲದ ಒತ್ತಡವೂ ಇದ್ದು, ಇದರಿಂದ ಮಾನಸಿಕ ತೊಂದರೆಯಲ್ಲಿ ಸಿಲುಕಿದ್ದರು ಎಂಬ ಮಾಹಿತಿ ದೊರೆತಿದೆ. ಈ ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ. ಗ್ರಾಮದಲ್ಲಿ ಈ ಘಟನೆ ದುಃಖದ ವಾತಾವರಣ ನಿರ್ಮಿಸಿದೆ. ಸಹಗ್ರಾಮಸ್ಥರು ಸರ್ಕಾರವು ರೈತರ ಸಾಲಮನ್ನಾ ನೀತಿಯನ್ನು ಬಲಪಡಿಸಿ, ಇಂತಹ ದುರಂತಗಳು…

ಮುಂದೆ ಓದಿ..
ಸುದ್ದಿ 

PDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ!

Taluknewsmedia.com

Taluknewsmedia.comPDO ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ಆತ್ಮಹತ್ಯೆ – ಆಡಳಿತದ ಮಾನವೀಯತೆ ಪ್ರಶ್ನೆ! ಬೆಂಗಳೂರು: ಅಧಿಕಾರಿಗಳ ಕಿರುಕುಳ ಮತ್ತೊಮ್ಮೆ ಜೀವ ಬಲಿತೆಗೆದುಕೊಂಡಿದೆ. ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ PDO ಗೀತಾಮಣಿ ನೀಡಿದ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಬೇಸತ್ತು ಲೈಬ್ರೆರಿಯನ್ ರಾಮಚಂದ್ರಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರಯ್ಯ, ಕಳೆದ ಮೂರು ತಿಂಗಳಿಂದ ಸಂಬಳ ಕೊಡದೇ, ಅನಗತ್ಯ ಒತ್ತಡ ಹೇರಿದ PDO ಗೀತಾಮಣಿಯ ಕಿರುಕುಳದಿಂದ ಕಂಗೆಟ್ಟು ಜೀವ ತ್ಯಜಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗ್ರಂಥಾಲಯದ ಬಯೋಮೆಟ್ರಿಕ್ ಹಾಜರಾತಿ ಹಾಕದೇ ಹೋದ ಆರೋಪದ ಹೆಸರಲ್ಲಿ ಸತತ ಕಿರುಕುಳ ನೀಡುತ್ತಿದ್ದ PDO ಯ ವರ್ತನೆ ಮಾನವೀಯ ಮಿತಿಗಳನ್ನು ದಾಟಿದ್ದಂತೆ ಆರೋಪಗಳು ವ್ಯಕ್ತವಾಗಿವೆ. ದಿನದಿನಕ್ಕೂ ಹೀನಾಯ ಕಿರುಕುಳವನ್ನು ಎದುರಿಸಲು ಸಾಧ್ಯವಾಗದೆ, ರಾಮಚಂದ್ರಯ್ಯ ವಿಷ ಸೇವಿಸಿ ಬದುಕು ಮುಗಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಬೆಳಗಾವಿ: ಲಂಚ ಪ್ರಕರಣದಲ್ಲಿ ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ಅಶೋಕ್ ಶಿರೂರ ಬಂಧನ

Taluknewsmedia.com

Taluknewsmedia.comಬೆಳಗಾವಿ: ಲಂಚ ಪ್ರಕರಣದಲ್ಲಿ ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ಅಶೋಕ್ ಶಿರೂರ ಬಂಧನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಭೂಮಿ ಪರಿಹಾರ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಸುವಾಸನೆ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಶಿರೂರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಖೇಮಲಾಪುರದ ಯಾಸಿನ್ ಪೇಂಢಾರಿ ಎಂಬ ರೈತರ 14 ಗುಂಟೆ ಜಮೀನು ಮುಗಲಖೋಡ್ ಮತ್ತು ಹಾರೂಗೇರಿ ಪಟ್ಟಣಗಳ ಅಮೃತ ಯೋಜನೆಗೆ ಸರ್ಕಾರದಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಭೂಮಿಗೆ ಸರ್ಕಾರದಿಂದ ರೂ.18 ಲಕ್ಷ ಪರಿಹಾರ ಮಂಜೂರಾಗಿತ್ತು. ಆದರೆ, ಆ ಮೊತ್ತದ ಚೆಕ್ ನೀಡುವ ಮುನ್ನ ಅಶೋಕ್ ಶಿರೂರ ಅವರು ರೂ.1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಠಾಣೆ ಬೆಳಗಾವಿಯಲ್ಲಿ…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ

Taluknewsmedia.com

Taluknewsmedia.comಚಿತ್ರದುರ್ಗದಲ್ಲಿ ಮಧ್ಯರಾತ್ರಿ ಗ್ಯಾಂಗ್ ಅಟ್ಯಾಕ್ – ಯುವಕನ ಮೇಲೆ ದುಷ್ಕರ್ಮಿಗಳ ಅಮಾನುಷ ಹಲ್ಲೆ ನಗರದ ನಡು ರಸ್ತೆಯಲ್ಲೇ ಪುಂಡರ ಗುಂಪೊಂದು ಯುವಕನ ಮೇಲೆ ಅಟ್ಟಹಾಸ ನಡೆಸಿದ ಘಟನೆ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ 5ನೇ ಕ್ರಾಸ್‌ನಲ್ಲಿ ನಡೆದಿದೆ. ಗಾಂಧೀನಗರದ ನಿವಾಸಿ ಯಶವಂತ್ ಎಂಬ ಯುವಕನ ಮೇಲೆ ಗುರುವಾರ ಮಧ್ಯರಾತ್ರಿ ಸುಮಾರು 8ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಯ ದೃಶ್ಯಗಳು ಸಮೀಪದ CCTV ಕ್ಯಾಮೆರಾದಲ್ಲಿ ಸೆರೆ ಆಗಿವೆ. ಸ್ನೇಹಿತನ ಮನೆಗೆ ತೆರಳಿ ಮನೆಗೆ ಹಿಂದಿರುಗುತ್ತಿದ್ದ ಯಶವಂತನನ್ನು, ಆಟೋ ಹಾಗೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿ, ನಡುರಸ್ತೆಯಲ್ಲೇ ಏಲೆದಾಡಿ ಲಾಠಿ, ಕಡ್ಡಿಗಳಿಂದ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ. ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣವೇ ಹಲ್ಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.ಹಲ್ಲೆ ನಡೆಸಿದವರಾಗಿ ಕೃಷ್ಣ, ತರುಣ್ @ ತುಂಟ, ರಾಮ್ @ ಕಲ್ಕಿ, ರೇಣುಕಾ, ದಯಾ,…

ಮುಂದೆ ಓದಿ..
ಸಿನೆಮಾ ಸುದ್ದಿ 

ರಾಜಕೀಯ ಕಣಿವೆ ತಾಳುವ ಕರುನಾಡ ನಾಯಕ – ‘ಗುಮ್ಮಡಿ ನರಸಯ್ಯ’ ಫಸ್ಟ್ ಲುಕ್ ಬಿಡುಗಡೆ!

Taluknewsmedia.com

Taluknewsmedia.comರಾಜಕೀಯ ಕಣಿವೆ ತಾಳುವ ಕರುನಾಡ ನಾಯಕ – ‘ಗುಮ್ಮಡಿ ನರಸಯ್ಯ’ ಫಸ್ಟ್ ಲುಕ್ ಬಿಡುಗಡೆ! ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದೀಪಾವಳಿ ಹಬ್ಬದ ವಿಶೇಷವಾಗಿ ತಮ್ಮ ಹೊಸ ಚಿತ್ರವನ್ನು ಪರಿಚಯಿಸಿದ್ದಾರೆ. ಈ ಚಿತ್ರದ ಮೂಲಕ ಶಿವಣ್ಣ ರಾಜಕೀಯ ನಾಯಕನ ಪಾತ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆಂಧ್ರ ಮೂಲದ ಯಶಸ್ವೀ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಜೀವನಾಧಾರಿತ ಕಥಾನಕಕ್ಕೆ ಚಿತ್ರ ರೂಪ ಕೊಡಲಾಗಿದೆ. ತೆಲುಗು ಚಿತ್ರರಂಗದ “ಚಿರು ಗೋಡವಾಲು”, “ಲಾವಣ್ಯ ವಿತ್ ಲವ್ ಬಾಯ್ಸ್” ಮುಂತಾದ ಸಿನಿಮಾಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿರುವ ಪರಮೇಶ್ವರ ಹಿವ್ರಲೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣ ಸೈಕಲ್ ಓಡಿಸುತ್ತಾ, ಕೆಂಪು ಶಾಲು ತೋರಿ, ಸರ್ಕಾರಿ ಕಚೇರಿ ಎದುರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಬಂಡವಾಳ ಹಾಕಿರುವವರು ಎನ್. ಸುರೇಶ್ ರೆಡ್ಡಿ. ಗುಮ್ಮಡಿ ನರಸಯ್ಯ “ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ (CPI-ND)” ಸದಸ್ಯರಾಗಿದ್ದು, 1983–1994 ಮತ್ತು…

ಮುಂದೆ ಓದಿ..
ಸುದ್ದಿ 

ಯಮಕನಮರಡಿಯಲ್ಲಿ 5.50 ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.

Taluknewsmedia.com

Taluknewsmedia.comಯಮಕನಮರಡಿಯಲ್ಲಿ 5.50 ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ರೂ. 5.50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಾಯಿತು. ಗ್ರಾಮೀಣ ಪ್ರದೇಶದ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಕೈಗೊಳ್ಳಲಾದ ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸ್ಥಳೀಯರ ದೈನಂದಿನ ಪ್ರಯಾಣ, ವ್ಯಾಪಾರ, ಹಾಗೂ ಗ್ರಾಮೀಣ ಸಂಪರ್ಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡಲಿವೆ. ಕಾಮಗಾರಿಗಳ ವಿವರಗಳು: ರಾಹೆ-4 ಇಂದಿರಾನಗರದಿಂದ ರಾಹೆ-78 ನಾಗನೂರ ಕೆ.ಎಂ. ವರೆಗೆ ರಸ್ತೆ ಉದ್ದ: 4.00 ಕಿ.ಮೀ ಕಾಮಗಾರಿಯ ಪ್ರಕಾರ: ಗ್ರಾಮೀಣ ರಸ್ತೆ ಸುಧಾರಣೆ, ಡಾಂಬರೀಕರಣ ಹಾಗೂ 1 ಸಿ.ಡಿ. ನಿರ್ಮಾಣ ಅಂದಾಜು ಮೊತ್ತ: ₹400.00 ಲಕ್ಷ ಹಳೆವಂಟಮೂರಿ – ಯಮಕನಮರಡಿ – ದಾದಬಾನಟ್ಟಿ – ಇಂದಿರಾನಗರದಿಂದ ತೇರಣಿ (ಮಹಾರಾಷ್ಟ್ರ ಗಡಿ) ವರೆಗೆ ರಸ್ತೆ ಉದ್ದ: 1.42 ಕಿ.ಮೀ ಕಾಮಗಾರಿಯ ಪ್ರಕಾರ: ಅಗಲೀಕರಣ…

ಮುಂದೆ ಓದಿ..
ಸುದ್ದಿ 

ಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ

Taluknewsmedia.com

Taluknewsmedia.comಮುಡಾ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಅಮಾನತು — ಕರ್ತವ್ಯ ಲೋಪ ಸಾಬೀತು!RTI ಕಾರ್ಯಕರ್ತ ನಾಗೇಂದ್ರ ದೂರು ಆಧಾರದಲ್ಲಿ ಸರ್ಕಾರದ ಕ್ರಮ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ವಿಶೇಷ ತಹಸೀಲ್ದಾರ್ ಕೆ.ವಿ. ರಾಜಶೇಖರ್ ರವರನ್ನು ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತೆ ಲತಾ ರವರ ನಿರ್ದೇಶನದ ಮೇರೆಗೆ ಮುಡಾ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ. ಆರ್‌ಟಿಐ ಕಾರ್ಯಕರ್ತ ಬಿ.ಎನ್. ನಾಗೇಂದ್ರ ರವರು ದಾಖಲಾತಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರಿನ ಗೋಕುಲಂ 3ನೇ ಹಂತದ ಮನೆ ಸಂಖ್ಯೆ 867ಕ್ಕೆ 1982ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಅವರಿಗೆ 30×40 ಗಾತ್ರದ ನಿವೇಶನ ಮಂಜೂರಾಗಿತ್ತು. ಅವರು 1983ರಲ್ಲಿ ನಿಧನ ಹೊಂದಿದ್ದರೂ, ಆ ಸ್ವತ್ತು ದೀರ್ಘಕಾಲ ಯಾರ ಹೆಸರಿಗೆ ವರ್ಗವಾಗಿರಲಿಲ್ಲ. ಆದರೆ 2024ರ ಮಾರ್ಚ್ 26ರಂದು…

ಮುಂದೆ ಓದಿ..
ಸುದ್ದಿ 

ಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ!

Taluknewsmedia.com

Taluknewsmedia.comಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ! ಕೊಪ್ಪಳ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆ ಜನರನ್ನು ಕಂಗಾಲು ಮಾಡಿದೆ. ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಲಕ್ಷ್ಮವ್ವ ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ನಡೆಯುತ್ತಿದ್ದ ನಿರಂತರ ಕಲಹದಿಂದ ಬೇಸತ್ತ ಲಕ್ಷ್ಮವ್ವ ನಾಲ್ಕು ವರ್ಷದ ಮಗ ರಮೇಶ್ ಹಾಗೂ ಎರಡು ವರ್ಷದ ಮಗಳು ಜಾನು ಅವರನ್ನು ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಮುಂದೆ ಓದಿ..
ಸಿನೆಮಾ ಸುದ್ದಿ 

ಪ್ರಭಾಸ್-ಹನು ರಾಘವಪುಡಿ ಸಿನಿಮಾ ಟೈಟಲ್ ರಿವೀಲ್ – ‘ಫೌಜಿ’ನಲ್ಲಿ ರೆಬಲ್ ಸ್ಟಾರ್ ಸೇನೆಗೆ..

Taluknewsmedia.com

Taluknewsmedia.comಪ್ರಭಾಸ್-ಹನು ರಾಘವಪುಡಿ ಸಿನಿಮಾ ಟೈಟಲ್ ರಿವೀಲ್ – ‘ಫೌಜಿ’ನಲ್ಲಿ ರೆಬಲ್ ಸ್ಟಾರ್ ಸೇನೆಗೆ.. ಪ್ರಭಾಸ್ ಮತ್ತು ಹನು ರಾಘವಪುಡಿ ಜೋಡಿಯ ಹೊಸ ಪ್ಯಾನ್ ಇಂಡಿಯಾ ಚಿತ್ರ ಟೈಟಲ್ ಪೋಸ್ಟರ್ ಇದೀಗ ಬಹಿರಂಗವಾಗಿದೆ. ಬಹುನಿರೀಕ್ಷಿತ ಚಿತ್ರಕ್ಕೆ ‘ಫೌಜಿ’ ಎಂಬ ಹೆಸರಿಡಲಾಗಿದೆ, ಮತ್ತು ಪೋಸ್ಟರ್ ಬಿಡುಗಡೆಯಾಗುತ್ತಲೇ ಅಭಿಮಾನಿಗಳ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1940ರ ದಶಕದ ವಸಾಹತುಶಾಹಿ ಭಾರತದ ಹಿನ್ನೆಲೆಯನ್ನು ತೋರಿಸುತ್ತಿರುವ ಪೋಸ್ಟರ್‌ನಲ್ಲಿ ಬ್ರಿಟಿಷ್ ಧ್ವಜ ಉರಿಯುತ್ತಿರುವ ದೃಶ್ಯವಿದೆ, ಇದು ದೇಶಭಕ್ತಿ, ಹೋರಾಟ ಮತ್ತು ಪ್ರತಿರೋಧದ ಸಂಕೇತವಾಗಿ ಕಾಣಿಸುತ್ತದೆ. ಉರಿಯುತ್ತಿರುವ ಬೆಂಕಿಯ ದೃಶ್ಯ ಚಿತ್ರದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಪಾತ್ರದ ವ್ಯಕ್ತಿತ್ವವನ್ನು ಚುರುಕಾಗಿ ವಿವರಿಸಲಾಗಿದೆ. ಪಾರ್ಥ (ಅರ್ಜುನ)ನಂತಹ ಧೈರ್ಯ, ಕರ್ಣನಂತಹ ನ್ಯಾಯಪ್ರಿಯತೆಯನ್ನು, ಏಕಲವ್ಯನಂತಹ ಶೌರ್ಯವನ್ನು ಅವನು ಪ್ರತಿಫಲಿಸುತ್ತಾರೆ. ಬ್ರಾಹ್ಮಣ ಬುದ್ಧಿವಂತಿಕೆ ಹಾಗೂ ಕ್ಷತ್ರಿಯ ಕರ್ತವ್ಯ (ಧರ್ಮ) ಎರಡನ್ನೂ ಅವನು ಸಮನ್ವಯಗೊಳಿಸುತ್ತಾರೆ, ಇದು ನಾಯಕನ…

ಮುಂದೆ ಓದಿ..