ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ……….
Taluknewsmedia.comಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು……ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ ವ್ಯವಸ್ಥೆಗಳು, ಪ್ರೀತಿ ಪ್ರೇಮ ಪ್ರಣಯದ ಪಾವಿತ್ರ್ಯತೆ, ಕಾನೂನು ಸುವ್ಯವಸ್ಥೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯೇ ಕುಸಿದು ಬೀಳುವ ಹಂತಕ್ಕೆ ತಲುಪಬಹುದು ಎಂಬಷ್ಟು ವೇಗವಾಗಿ ಮತ್ತು ತೀವ್ರವಾಗಿ ವ್ಯಾಪಿಸುತ್ತಿದೆ……..ಬಹಳ ಹಿಂದೆ ಕಡಿಮೆ ಜನಸಂಖ್ಯೆ, ಸಂಪರ್ಕ ಮಾಧ್ಯಮಗಳ ಕೊರತೆ, ಕೌಟುಂಬಿಕ ಮೌಲ್ಯಗಳ ಗಾಢತೆ, ಹೆಣ್ಣು ಗಂಡು ಸಂಬಂಧಗಳ ಗೌಪ್ಯತೆ, ಆರ್ಥಿಕ ಅಸಮಾನತೆ, ಪುರುಷ ಕೇಂದ್ರಿತ ಸಮಾಜ ಮುಂತಾದ ಕಾರಣಗಳಿಂದ ಅಕ್ರಮ ಸಂಬಂಧಗಳು ಕಡಿಮೆ ಇದ್ದವು, ಹೆಚ್ಚು ಹೊರಗೆ ಬರುತ್ತಿರಲಿಲ್ಲ ಮತ್ತು ಅದಕ್ಕೆ ಬಹುತೇಕ ಪುರುಷರೇ ಹೆಚ್ಚು ಹೊಣೆಗಾರರಾಗಿದ್ದರು……..ಆದರೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಉದ್ಯೋಗ, ನಗರೀಕರಣ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿ, ಸಣ್ಣ ಕುಟುಂಬಗಳ ಅನಿವಾರ್ಯತೆ, ವಲಸೆ, ದೂರ…
ಮುಂದೆ ಓದಿ..
