ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ ಮಹಿಳೆ ಬಂಧನ
Taluknewsmedia.comಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ ಮಹಿಳೆ ಬಂಧನ ಅಪಾರ್ಟ್‌ಮೆಂಟ್‌ನ ಲಿಫ್ಟ್ ಒಳಗೆ ನಾಯಿಮರಿಯನ್ನು ಕ್ರೂರಿಯಾಗಿ ಬಡಿದು ಕೊಂದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನವೆಂಬರ್ 1ರಂದು ನಡೆದಿದ್ದು, ಲಿಫ್ಟ್‌ನಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ವೀಡಿಯೊ ದೃಶ್ಯಾವಳಿಯಲ್ಲಿ ಪುಷ್ಪಲತಾ ಎನ್ನುವ ಮಹಿಳೆ ನಾಯಿಯೊಂದಿಗೆ ಲಿಫ್ಟ್ ಒಳಗೆ ಪ್ರವೇಶಿಸುವುದು ಕಂಡುಬರುತ್ತದೆ. ಆದರೆ ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆಯೇ ಆಕೆ ನಾಯಿಯನ್ನು ನೆಲಕ್ಕೆ ಬಡಿದು ಕೊಂದಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಾಯಿ ಮಾಲಕಿ, 23 ವರ್ಷದ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಪ್ರಕಾರ, ತಾನು ತನ್ನ ನಾಲ್ಕು ವರ್ಷದ ಪೆಟ್ ನಾಯಿ ‘ಗೋಫಿ’ಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಸೆಪ್ಟೆಂಬರ್ 11ರಿಂದ ತಿಂಗಳಿಗೆ ರೂ.23,000 ಸಂಬಳಕ್ಕೆ ನೇಮಿಸಿದ್ದರು. ನವೆಂಬರ್ 1ರಂದು ನಾಯಿ ಅಕಸ್ಮಿಕವಾಗಿ ಸಾವನ್ನಪ್ಪಿದ್ದರಿಂದ ಕಾರಣ ವಿಚಾರಿಸಿದಾಗ,…
ಮುಂದೆ ಓದಿ..
