ಅಂಕಣ 

ಮಾನವೀಯತೆ ಕಳೆದು ಹೋಗುವ ಮುನ್ನ…….

Taluknewsmedia.com

Taluknewsmedia.comಮಾನವೀಯತೆ ಕಳೆದು ಹೋಗುವ ಮುನ್ನ……. ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ, ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ…….. ಅಭಿವೃದ್ಧಿಯ, ಆಧುನಿಕತೆಯ, ತಾಂತ್ರಿಕ ಪ್ರಗತಿಯ ಲಾಭಗಳನ್ನು ನಾವು ಪಡೆಯಬೇಕಾದರೆ ಮಾನವೀಯ ಮೌಲ್ಯಗಳ ಉಳಿವು ಮತ್ತು ಬೆಳವಣಿಗೆ ಬಹುಮುಖ್ಯ ಅಂಶ. ಇಲ್ಲದಿದ್ದರೆ ಎಲ್ಲಾ ಪ್ರಗತಿಯು ನಮ್ಮನ್ನು ನಿಧಾನವಾಗಿ ವಿನಾಶದ ಅಂಚಿಗೆ ಕೊಂಡೊಯ್ಯಬಹುದು. ಬಹುಶಃ ಈಗ ಆ ಹಂತದಲ್ಲಿ ನಾವಿದ್ದೇವೆ………. ಆಹಾರದ ಕಲಬೆರಕೆ ಹಣಕ್ಕಾಗಿ,ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಹಣಕ್ಕಾಗಿ,ಮೌಲ್ವಿ, ಫಾದರ್, ಸ್ವಾಮಿಗಳ ವೇಷ ಹಣಕ್ಕಾಗಿ,ಡಾಕ್ಟರುಗಳು, ಮೇಷ್ಟ್ರುಗಳ ಆದ್ಯತೆ ಹಣಕ್ಕಾಗಿ,ರಾಜಕಾರಣಿಗಳು, ಸಮಾಜ ಸೇವಕರ ಮುಖವಾಡ ಹಣಕ್ಕಾಗಿ,ಅಧಿಕಾರಿಗಳ ಓದು ಬರಹ ಹಣಕ್ಕಾಗಿ,ಸಾಹಿತಿಗಳ ಹೋರಾಟಗಾರ ಮಾತು, ಅಕ್ಷರಗಳು ಹಣಕ್ಕಾಗಿ,…… ಕೊನೆಗೆ ಹೆಣ್ಣು ಗಂಡಿನ ಮದುವೆ ಸಂಬಂಧಗಳು ಸಹ ಹಣಕ್ಕಾಗಿ ಎಂಬಲ್ಲಿಗೆ…

ಮುಂದೆ ಓದಿ..
ಅಂಕಣ 

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

Taluknewsmedia.com

Taluknewsmedia.comಮುಗಿಲು ಮುಟ್ಟಿದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ…….ಎಲ್ಲರಿಗೂ ಅಭಿನಂದನೆಗಳು,ಆದರೆ……….ಕ್ರೀಡಾ ಘನತೆಯನ್ನು – ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ……….ಕ್ರಿಕೆಟ್ ಒಂದು ಜೂಜಾಟವಲ್ಲ,ಮೋಜಿನಾಟವೂ ಅಲ್ಲ,ಮನರಂಜನೆಯೂ ಅಲ್ಲ,ವ್ಯಾಪಾರವು ಅಲ್ಲ,ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ,,ಅದೊಂದು ಕ್ರೀಡೆ, ಕೇವಲ ಕ್ರೀಡೆ ಮಾತ್ರ……..ಅಂತಹ ಒಂದು ಸ್ಪರ್ದೆಯಲ್ಲಿ ನಿನ್ನೆ RCB ಗೆದ್ದಿದೆ. ಅದಕ್ಕೆ ನಮಗೂ ಸಂತೋಷವಾಯಿತು. ಅದು ಅಷ್ಟಕ್ಕೆ ಮಾತ್ರ ಸೀಮಿತವಾಗಿರಬೇಕಿತ್ತು. ಆದರೆ……ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಠ ಶೇಕಡಾ 30/40% ಜನರಿಗೆ ಕ್ರಿಕೆಟ್ ಬಗ್ಗೆ ಮಾಹಿತಿ ಇದೆ. ಅದನ್ನು ಇಷ್ಟಪಟ್ಟು ನೋಡುತ್ತಾರೆ. ಆ ಕಾರಣದಿಂದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಎಂದು ಹೆಸರು ಗಳಿಸಿದೆ….ಕ್ರಿಕೆಟ್ ನೆರಳಲ್ಲಿ ಭಾರತದ ಇತರ ಕ್ರೀಡೆಗಳು ಸೊರಗಿವೆ ಎಂಬ ಆರೋಪವೂ ಇದೆ. ಅಷ್ಟು ವ್ಯಾಪಕವಾಗಿ ಕ್ರಿಕೆಟ್ ಆವರಿಸಿದೆ.ದುರಾದೃಷ್ಟವಶಾತ್ ಭಾರತದಲ್ಲಿ ಕ್ರಿಕೆಟ್ ಒಂದು ಕ್ರೀಡೆ ಎಂಬುದನ್ನು ಮೀರಿ ತೀರಾ ಅತಿರೇಕದ ಭಾವನೆಗಳನ್ನು ಮಾಧ್ಯಮಗಳು ಕೆರಳಿಸುತ್ತಿವೆ. ಅದೊಂದು…

ಮುಂದೆ ಓದಿ..
ಅಂಕಣ 

ನಮಗಾಗಿ ಪರಿಸರ ಮುಗಿದು,ಪರಿಸರಕ್ಕಾಗಿ ನಾವು ಎಂಬ ದುಸ್ಥಿತಿಯಲ್ಲಿ………

Taluknewsmedia.com

Taluknewsmedia.comಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ………ಈ ವರ್ಷದ World environment day ಜೂನ್ 5………ಕಳೆದ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ….ಅದರಲ್ಲೂ ಉತ್ತರ ಭಾರತದ ಒಂದು ಸ್ಥಳದಲ್ಲಿ ಗರಿಷ್ಠ ತಾಪಮಾನ 56 ಡಿಗ್ರಿ ಸೆಲ್ಸಿಯಸ್ ಎಂದು ಕೇಳಿಯೇ ತಲೆ ತಿರುಗುತ್ತಿದೆ…..ವಿಶ್ವ ಪರಿಸರ ದಿನ ಎಂಬ ನಾಟಕ,ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ,ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್,ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ…..ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ, ಆತನ ಅಸ್ತಿತ್ವವದ ಮೂಲವೇ ಪರಿಸರ, ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ ಮನುಷ್ಯನಿಗೆ ಪರಿಸರ ದಿನ ಆಚರಿಸುವ ನೈತಿಕತೆಯೇ ಇಲ್ಲ, ಅದೊಂದು ಆತ್ಮವಂಚನೆ – ಬೂಟಾಟಿಕೆ….ಸ್ವತಃ ತನ್ನ ಕಣ್ಣನ್ನು ತಾನೇ ತಿವಿದುಕೊಂಡು ನನ್ನ ಕಣ್ಣನ್ನು ಉಳಿಸಿ ಎಂದು ಗೋಗರೆಯುವ ನಾಟಕವೇಕೆ,….ಹೃದಯವನ್ನು ಇರಿದುಕೊಂಡು…

ಮುಂದೆ ಓದಿ..
ಅಂಕಣ 

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು…

Taluknewsmedia.com

Taluknewsmedia.comಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಕೊಲೆ ಆರೋಪಿ ಯಾವ ರೀತಿ ಕೊಲೆ ಮಾಡಿದ ಎಂಬುದನ್ನು ಬಹುತೇಕ ಮಾಧ್ಯಮಗಳು ತಮಗೆ ತೋಚಿದಂತೆ ಹೇಳುತ್ತವೆ. ಪೋಲಿಸ್ ತನಿಖಾ ವರದಿ ತುಂಬಾ ಸ್ಪಷ್ಟವಾಗಿ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಆದರೂ ಆರೋಪಿಯ ಪರ ವಕೀಲರ ಚಾಣಾಕ್ಷತೆಯಿಂದ ಕಾನೂನಿನ ಇತಿಮಿತಿಗಳನ್ನು ಮೀರಿ ಸುಮಾರು ಆರು ತಿಂಗಳು ಮುಗಿಯುವ ಮೊದಲೇ ಆರೋಪಿಯು ಬೆನ್ನು ನೋವಿನ ಸಮಸ್ಯೆ, ಅದರಿಂದ ಅವರ ಆರೋಗ್ಯದ ಮೇಲೆ ತುಂಬಾ ಗಂಭೀರ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬ ಕಲ್ಪಿತ ವೈದ್ಯಕೀಯ ಆಧಾರದ ಮೇಲೆ ನಿಜಕ್ಕೂ ಸಾಮಾನ್ಯ ಜನರಿಗೆ ಸಿಗದಂತಹ ವಿಶೇಷ ಸವಲತ್ತು ಸಿಕ್ಕಿ ಶಸ್ತ್ರ ಚಿಕಿತ್ಸೆಗೆಂದು ಆರೋಪಿಗೆ ಜಾಮೀನು ಸಿಗುತ್ತದೆ. ಆದರೆ…

ಮುಂದೆ ಓದಿ..
ಅಂಕಣ 

ಭಾನುವಾರದ ನಮ್ಮ ಕುಟುಂಬದ ದಿನಚರಿ…….

Taluknewsmedia.com

Taluknewsmedia.comತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ. ಮಧ್ಯದಲ್ಲಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದ ನಮ್ಮ ಪುಟ್ಟ ಕಂದ ಈ ಕದಲುವಿಕೆಯಿಂದ ಕಣ್ಣು ಬಿಟ್ಟಿತು. ತನ್ನ ಕತ್ತನ್ನು ಪಕ್ಕಕ್ಕೆ ಹೊರಳಿಸಿ ಅವರ ಅಮ್ಮನನ್ನು ತದೇಕಚ್ಚಿತ್ತದಿಂದ ನೋಡಿತು. ಅಮ್ಮ ಆ ಮಗುವಿಗೂ ಒಂದು ಮುತ್ತು ನೀಡಿ ಎದ್ದು ಹೊರ ನಡೆಯಿತು. ಪುಟ್ಟ ಕಂದ ಮತ್ತೆ ನನ್ನನ್ನು ಬಾಚಿ ತಬ್ಬಿಕೊಂಡು ನಿದ್ದೆಗೆ ಜಾರಿತು. ಇಂದು ಭಾನುವಾರ. ಹಾಗೇ ಆ ಮಗುವನ್ನೂ, ಕಿಟಕಿಯಾಚೆಯ ತುಂತುರು ಸೋನೆ ಮಳೆಯನ್ನು ದಿಟ್ಟಿಸುತ್ತಾ…

ಮುಂದೆ ಓದಿ..