ಸುದ್ದಿ 

ಯಲಹಂಕದಲ್ಲಿ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು: 21ಆಗಸ್ಟ್ 2025ಯಲಹಂಕ ಪ್ರದೇಶದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಯಲಹಂಕ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ರೀಟಾ ಎಸ್ ಅವರು ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಯಲಹಂಕದಲ್ಲಿ ವಾಸವಾಗಿದ್ದು, ದಿನಾಂಕ 18-08-2025 ರಾತ್ರಿ ಸುಮಾರು 9 ಗಂಟೆಗೆ ತಮ್ಮ ಗಂಡನವರು ಸ್ಕೂಟರ್ ಅನ್ನು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ನಂತರ 19-08-2025 ಬೆಳಿಗ್ಗೆ 7:30 ಗಂಟೆಗೆ ಪರಿಶೀಲಿಸಿದಾಗ, ವಾಹನ ಅಲ್ಲಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಪೀಡಿತರು ಸುತ್ತಮುತ್ತ ಹುಡುಕಿದರೂ ಸ್ಕೂಟರ್ ಪತ್ತೆಯಾಗದ ಕಾರಣ, ಯಾರೋ ಅಜ್ಞಾತ ಕಳ್ಳರು ತಮ್ಮ ರೂ. 86,000 ಮೌಲ್ಯದ ಸ್ಕೂಟರ್ ಕಳವು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳತನವಾದ ವಾಹನ ಪತ್ತೆ ಹಾಗೂ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರಿದಿದೆ

ಮುಂದೆ ಓದಿ..
ಸುದ್ದಿ 

24 ವರ್ಷದ ಮಹಿಳೆ ಕಾಣೆಯಾದ ಪ್ರಕರಣ: ಪೊಲೀಸರು ತನಿಖೆ ಆರಂಭಿಸಿದ್ದಾರೆ

Taluknewsmedia.com

Taluknewsmedia.com ಬೆಂಗಳೂರು: 21ಆಗಸ್ಟ್ 2025ಹೆಸರಘಟ್ಟ ಗ್ರಾಮಾಂತರದಲ್ಲಿ 24 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 20 ಆಗಸ್ಟ್ 2025 ರಂದು ಮಧ್ಯಾಹ್ನ 12:10ಕ್ಕೆ ರಾಜನಕುಂಟೆ ಪೊಲೀಸ್ ಠಾಣೆಗೆ ಹಾಜರಾದ ಲಕ್ಷಣ ಬಿನ್ ಲೇಟ್ ನಾಗಪ್ಪ ಅವರು, ತಮ್ಮ ಸೊಸೆ ಸುಮಾ (24 ವರ್ಷ) ದಿನಾಂಕ 19 ಆಗಸ್ಟ್ 2025, ಬೆಳಿಗ್ಗೆ 11:30ಕ್ಕೆ ತನ್ನ ಮೂರು ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು, ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಪಿರ್ಯಾದಿದಾರರ ಪ್ರಕಾರ, ಸುಮಾ ಇತ್ತೀಚಿನ ದಿನಗಳಲ್ಲಿ ಮನೆಯಿಂದ 3-4 ಬಾರಿ ಹೊರಟು ಹೋಗಿ ಬಳಿಕ ಮರಳಿ ಬಂದಿರುವುದು ಕಂಡುಬಂದಿತ್ತು. ಆದರೆ ಈ ಬಾರಿ ಇನ್ನೂ ಹಿಂದಿರುಗದ ಕಾರಣ ಕುಟುಂಬದವರು ಆತಂಕಗೊಂಡಿದ್ದಾರೆ. ಕಾಣೆಯಾದ ಮಹಿಳೆಯ ವಿವರಗಳು: ಹೆಸರು: ಸುಮಾ ವಯಸ್ಸು: 24 ವರ್ಷ ಎತ್ತರ: ಸುಮಾರು 4.5 ಅಡಿ ಇತರ ಗುರುತು ಚಿಹ್ನೆಗಳು: ಕುಟುಂಬದಿಂದ…

ಮುಂದೆ ಓದಿ..
ಸುದ್ದಿ 

ಗಂಗರಾಜು ಕಾಣೆಯಾದ ಪ್ರಕರಣ –ರಾಜನಕುಂಟೆ ಪೊಲೀಸರು ತನಿಖೆ ಪ್ರಾರಂಭಿಸಿದರು

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ:21 ಆಗಸ್ಟ್ 2025ಚಾಲಕರಾಗಿ ಕೆಲಸ ಮಾಡುತ್ತಿದ್ದ ಗಂಗರಾಜು (33) ಎಂಬ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಗರಾಜು ಆಗಸ್ಟ್ 15, 2025 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಹೋದವರು. ನಂತರ ಅವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಬಂಧುಗಳು ಹಲವೆಡೆ ಹುಡುಕಿದರೂ ಪತ್ತೆಯಾಗದೆ, ಪತ್ನಿ ರಾಜನಕುಂಟೆ ಪೊಲೀಸ್ ಠಾಣೆಗೆ ಬಂದು ಅಧಿಕೃತವಾಗಿ ದೂರು ನೀಡಿದ್ದಾರೆ. ಪತ್ನಿಯ ಹೇಳಿಕೆಯ ಪ್ರಕಾರ, ಗಂಗರಾಜು ಸಾದೇನಹಳ್ಳಿ ಗ್ರಾಮದ ಅನಿತಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮನೆಯಿಂದ ತೆರಳಿರುವ ಶಂಕೆ ವ್ಯಕ್ತವಾಗಿದೆ. ಕಾಣೆಯಾದ ಗಂಗರಾಜು ಅವರ ಗುರುತು ವಿವರಗಳು: ವಯಸ್ಸು: 33 ವರ್ಷ ಎತ್ತರ: 5.9 ಅಡಿ ಬಣ್ಣ: ಎಣ್ಣೆಗೆಂಪು ದೇಹದ ಬಗೆ: ದೃಢಕಾಯ ಮುಖ: ಗುಂಡು ಮುಖ, ಗಡ್ಡ ಮತ್ತು ಮೀಸೆ ಭಾಷೆಗಳು: ಕನ್ನಡ,…

ಮುಂದೆ ಓದಿ..
ಸುದ್ದಿ 

ಬೆಂಗಳೂರುದಲ್ಲಿ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು:21 ಆಗಸ್ಟ್ 2025ವಿದ್ಯಾನಗರ ಕ್ರಾಸ್ ನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಜಾಲ ಪೊಲೀಸರ ಮಾಹಿತಿ ಪ್ರಕಾರ, ದೂರುದಾರರು ತಮ್ಮ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕೆಎ50 ಹೆಚ್ 7347 ನಂಬರಿನ Hero Honda Splendor ಬೈಕ್‌ನ್ನು ಅಜ್ಞಾತರು ಕಳವು ಮಾಡಿಕೊಂಡಿದ್ದಾರೆ. ಈ ಘಟನೆ 17 ಆಗಸ್ಟ್ 2025ರಂದು ಬೆಳಿಗ್ಗೆ 5.30 ಗಂಟೆ ಸುಮಾರಿಗೆ ನಡೆದಿದೆ. ದೂರುದಾರರು ತಮ್ಮ ವಾಹನವನ್ನು ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದರೂ, ಸಂಜೆ 7.30ರ ವೇಳೆಗೆ ಪರಿಶೀಲಿಸಿದಾಗ ಬೈಕ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ದೂರುದಾರರು ಎಲ್ಲೆಡೆ ಹುಡುಕಿದರೂ ವಾಹನ ಪತ್ತೆಯಾಗಲಿಲ್ಲ. ಕಳವಾದ ವಾಹನದ ಚ್ಯಾಸಿಸ್ ನಂ: DHA10EA89K00954 ಹಾಗೂ ಎಂಜಿನ್ ನಂ: MBLHA10EE89K05878 ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ನ ಅಂದಾಜು ಮೌಲ್ಯ ಸುಮಾರು ರೂ.20,000 ಆಗಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಆರೋಪಿಗಳ…

ಮುಂದೆ ಓದಿ..
ಸುದ್ದಿ 

ಬಾಗಲೂರು: ಮನೆ ಹಕ್ಕು ತಕರಾರು – ಕುಟುಂಬಕ್ಕೆ ಜೀವ ಬೆದರಿಕೆ, ಮನೆ ನೆಲಸಮ

Taluknewsmedia.com

Taluknewsmedia.comಬೆಂಗಳೂರು 21 ಆಗಸ್ಟ್ 2025ಬಾಗಲೂರು ಗ್ರಾಮದಲ್ಲಿ ಆಸ್ತಿ ಹಕ್ಕು ಹಂಚಿಕೆ ವಿಚಾರದಲ್ಲಿ ಉಂಟಾದ ತಕರಾರು ತೀವ್ರ ಗಲಾಟೆಗೆ ತಿರುಗಿ, ಮನೆಯನ್ನೇ ನೆಲಸಮ ಮಾಡುವ ಮಟ್ಟಿಗೆ ಪ್ರಕರಣ ತಲುಪಿದೆ. ದಿವಂಗತ ಮುನಿಕೃಷ್ಣಪ್ಪ ಅವರ ಪತ್ನಿ ಮೀನಾಕ್ಷಿ ಅವರು ಬಾಗಲೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ – ತಮ್ಮ ಪತಿಯ ಮರಣದ ಬಳಿಕ ಕುಟುಂಬವು 30 ವರ್ಷಗಳಿಂದ ಬಾಗಲೂರಿನಲ್ಲಿರುವ ಸೈಟಿನಲ್ಲಿ ವಾಸಿಸುತ್ತಿತ್ತು. ಈ ನಡುವೆ ಸಾಲಕ್ಕಾಗಿ ಮನೆಯ ದಾಖಲೆಗಳನ್ನು ರಂಗಪ್ಪ ಎಂಬವರ ಬಳಿ ಇಡಲಾಗಿತ್ತು. ನಂತರ ದಾಖಲೆಗಳು ಸಂಬಂಧಿಯಾದ ಸುರೇಶ್ ಅವರ ಕೈಗೆ ಹೋಗಿದ್ದು, ಅವರು ದಾಖಲೆಗಳನ್ನು ಮರಳಿ ನೀಡದೇ, “ನಿಮ್ಮ ಹೆಸರಿನಲ್ಲಿ ₹2.60 ಲಕ್ಷ ಸಾಲವಿದೆ” ಎಂದು ಹೇಳಿಕೊಂಡಿದ್ದಾರೆ. ಬಳಿಕ ಸುರೇಶ್ ಅವರು ದಾಖಲೆಗಳನ್ನು ಅನಿಲ್ ಎಂಬುವವರಿಗೆ ಹಸ್ತಾಂತರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೀನಾಕ್ಷಿ ಅವರು ಹೃದಯ ಸಂಬಂಧಿತ ಕಾಯಿಲೆಯಿಂದ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಆರೋಪಿಗಳಾದ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಸರ್ಕಾರಿ ಜಮೀನಿನಲ್ಲಿನ ನೀಲಗಿರಿ ಮರಗಳ ಅಕ್ರಮ ಕಡಿತ

Taluknewsmedia.com

Taluknewsmedia.comಯಲಹಂಕದಲ್ಲಿ ಸರ್ಕಾರಿ ಜಮೀನಿನಲ್ಲಿನ ನೀಲಗಿರಿ ಮರಗಳ ಅಕ್ರಮ ಕಡಿತ ಬೆಂಗಳೂರು: 21 ಆಗಸ್ಟ್ 2025ಯಲಹಂಕ ಉಪವಿಭಾಗದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನೀಲಗಿರಿ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರೆವೆನ್ಯೂ ಇನ್ಸ್‌ಪೆಕ್ಟರ್ ಶ್ರೀಮತಿ ಉಷಾ ಎಲ್. ಅವರ ವರದಿ ಪ್ರಕಾರ, ಚಂದ್ರಶೇಖರ್ ಬಿನ್ ಲೇಟ್ ಪಿಳ್ಳಪ್ಪ ಮತ್ತು ತುಳಸಿರಾಮ್ ಬಿನ್ ಲೇಟ್ ಹಿಪ್ ಎಂಬುವವರು ಯಾವುದೇ ಅನುಮತಿ ಇಲ್ಲದೆ ಸರ್ಕಾರಿ ಜಮೀನಿನಲ್ಲಿದ್ದ ಸುಮಾರು 200–250 ನೀಲಗಿರಿ ಮರಗಳನ್ನು 2 ಎಕರೆ ಪ್ರದೇಶದಲ್ಲಿ ರಾತ್ರಿ ವೇಳೆ ಕಡಿದು ಸಾಗಿಸಿದ್ದಾರೆ. ದಾಖಲೆಗಳ ಪ್ರಕಾರ, ಡ/340/15-16, ದಿನಾಂಕ 30/11/2015 ರಂದು ಸುಮಾರು 12 ಎಕರೆ ಜಮೀನನ್ನು ಅನಧಿಕೃತವಾಗಿ ದಾಖಲಾಗಿದ್ದರಿಂದ, ಆ ಪಹಣಿಯನ್ನು ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ನಂತರ ಈ ಜಮೀನನ್ನು ಶ್ಯಾಸಾ ಫೌಂಡೇಶನ್ ಗೆ ಮಂಜೂರು ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೂ ಯಾರಿಗೂ ಮಂಜೂರಾಗಿಲ್ಲ. ಇದರಿಂದ ಸರ್ಕಾರಿ ಜಮೀನಿನಲ್ಲಿರುವ…

ಮುಂದೆ ಓದಿ..
ಸುದ್ದಿ 

ಮಾನ್ಯತಾ ಟೆಕ್ ಪಾರ್ಕ್ ಬಳಿ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.com ಬೆಂಗಳೂರು:21 ಆಗಸ್ಟ್ 2025ನಗರದ ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಟಾರ್‌ಸೈಕಲ್ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ದೂರುದಾರರು ಪ್ರಂಬರ್ ಕೆಲಸ ಮಾಡಿಕೊಂಡಿದ್ದು, ಆಗಸ್ಟ್ 18, 2025ರಂದು ಮಧ್ಯಾಹ್ನ 12:30ರ ಸಮಯದಲ್ಲಿ ತಮ್ಮ TVS Raider (ವಾಹನ ಸಂಖ್ಯೆ: AP40C1085) ಮೋಟಾರ್‌ಸೈಕಲ್‌ನ್ನು ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಆದರೆ, ಮಧ್ಯಾಹ್ನ 3 ಗಂಟೆಗೆ ವಾಪಸ್ಸಾದಾಗ ವಾಹನ ಸ್ಥಳದಲ್ಲಿರದೆ ಕಾಣೆಯಾಗಿದೆ. ಕಳ್ಳತನವಾದ ಮೋಟಾರ್‌ಸೈಕಲ್ ವಿವರಗಳು: ಮಾದರಿ: TVS Raider (2023) ವಾಹನ ಸಂಖ್ಯೆ: AP40C1085 ಎಂಜಿನ್ ಸಂಖ್ಯೆ: AF9DP1707709 ಚ್ಯಾಸಿಸ್ ಸಂಖ್ಯೆ: MD625AF94P1D08312 ಬಣ್ಣ: ನೀಲಿ ಮೌಲ್ಯ: ಸುಮಾರು ₹80,000 ಎಲ್ಲೆಡೆ ಹುಡುಕಿದರೂ ವಾಹನ ಪತ್ತೆಯಾಗದೆ, ಯಾರೋ ಕಳ್ಳರು ಮೋಟಾರ್‌ಸೈಕಲ್ ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರುದಾರರು ಸಂಪಿಗೆಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ

ಮುಂದೆ ಓದಿ..
ಸುದ್ದಿ 

ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಯ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು: 21 ಆಗಸ್ಟ್ 2025ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ರತ್ನಮ್ಮ ಅವರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕ್ಷೇಮ-18 O-4544 ಸಂಖ್ಯೆಯ ದ್ವಿಚಕ್ರ ವಾಹನವನ್ನು ಆಗಸ್ಟ್ 9ರ ರಾತ್ರಿ 10 ಗಂಟೆ ಸುಮಾರಿಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಆಗಸ್ಟ್ 10ರ ಬೆಳಿಗ್ಗೆ 8:30ಕ್ಕೆ ವಾಹನವನ್ನು ಪರಿಶೀಲಿಸಿದಾಗ ಅದು ಕಾಣಿಸದೆ ಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ವಾಹನ ಪತ್ತೆಯಾಗದ ಕಾರಣ, ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲಸಗಳಿಗೆ ಅಗತ್ಯವಾದ ಈ ವಾಹನವನ್ನು ಶೀಘ್ರ ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರತ್ನಮ್ಮ ಅವರು ಪೊಲೀಸರನ್ನು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಮಾನ್ಯತಾ ಟೆಕ್ ಪಾರ್ಕ್ ಉದ್ಯೋಗಿಯ ದ್ವಿಚಕ್ರ ವಾಹನ ಕಳ್ಳತನ

Taluknewsmedia.com

Taluknewsmedia.comಬೆಂಗಳೂರು:21 ಆಗಸ್ಟ್ 2025ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ಪೊಲೀಸರ ಬಳಿ ನೀಡಿದ ದೂರಿನ ಪ್ರಕಾರ, ಪಿರ್ಯಾದುದಾರರು ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕೆಲಸಗಳಿಗೆ ಬಳಸುತ್ತಿದ್ದ ಕ್ಷೇಮ-18 0-4544 ಸಂಖ್ಯೆಯ ದ್ವಿಚಕ್ರ ವಾಹನವನ್ನು ಆಗಸ್ಟ್ 09 ರಂದು ರಾತ್ರಿ 10 ಗಂಟೆಗೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಆದರೆ, ಆಗಸ್ಟ್ 10 ರಂದು ಬೆಳಿಗ್ಗೆ 8:30ಕ್ಕೆ ವಾಹನವನ್ನು ಪರಿಶೀಲಿಸಿದಾಗ ಅದು ಕಾಣಿಸದೆ ಹೋಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ಎಲ್ಲಾ ಕಡೆ ಹುಡುಕಿದರೂ ವಾಹನ ಪತ್ತೆಯಾಗದ ಕಾರಣ, ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪಿರ್ಯಾದುದಾರರು ತಮ್ಮ ಕೆಲಸಗಳಿಗೆ ಅಗತ್ಯವಾದ ಈ ವಾಹನವನ್ನು ಶೀಘ್ರ ಪತ್ತೆಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ವಾಟ್ಸಾಪ್ ನಂಬರ ಹ್ಯಾಕ್ ಮಾಡಿ ₹60,000 ವಂಚನೆ

Taluknewsmedia.com

Taluknewsmedia.comಬೆಂಗಳೂರು:21 ಆಗಸ್ಟ್ 2025ನಗರದಲ್ಲಿ ದೊಡ್ಡ ಬೆಟ್ಟಳ್ಳಿ ಯಲ್ಲಿ ಮತ್ತೊಂದು ವಾಟ್ಸಾಪ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. 18-08-2025 ರಂದು, ಒಬ್ಬ ವ್ಯಕ್ತಿಯ ಸ್ನೇಹಿತನ ವಾಟ್ಸಾಪ್ ನಂಬರವನ್ನು ಅಪರಿಚಿತರು ಹ್ಯಾಕ್ ಮಾಡಿಕೊಂಡು “ಹಣದ ಅವಶ್ಯಕತೆ ಇದೆ” ಎಂದು ಸಂದೇಶ ಕಳುಹಿಸಿದ್ದಾರೆ. ಕೃಷ್ಣಮೂರ್ತಿ ಅವರು ಅದನ್ನು ನಂಬಿ, ನೀಡಲಾದ ಖಾತೆ ಸಂಖ್ಯೆ 3862002101011780 (PUNB0004100) ಹಾಗೂ ಫೋನ್‌ಪೇ/ಜಿಪೇ ನಂಬರುಗಳಾದ 7763048771, 8409465877ಗಳಿಗೆ ಒಟ್ಟು ₹60,000 ರು. ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನಗೊಂಡ ಅವರು ನೇರವಾಗಿ ತಮ್ಮ ಸ್ನೇಹಿತನಿಗೆ ಕರೆ ಮಾಡಿದಾಗ, ಅವರ ವಾಟ್ಸಾಪ್ ನಂಬರವನ್ನು ಹ್ಯಾಕ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಈ ಕುರಿತು ತಕ್ಷಣವೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ವಂಚನೆ ಮಾಡಿದವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೀಡಿತರು ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಟ್ಸಾಪ್ ನಂಬರ ಹ್ಯಾಕ್ ಮಾಡಿ…

ಮುಂದೆ ಓದಿ..