ವೈದ್ಯ ಶಾಸಕರ ಕ್ಷೇತ್ರದಲ್ಲೇ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ! ಕುಣಿಗಲ್ ಆಸ್ಪತ್ರೆಗಳ ಆಘಾತಕಾರಿ ಸತ್ಯಗಳು…
Taluknewsmedia.comವೈದ್ಯ ಶಾಸಕರ ಕ್ಷೇತ್ರದಲ್ಲೇ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ! ಕುಣಿಗಲ್ ಆಸ್ಪತ್ರೆಗಳ ಆಘಾತಕಾರಿ ಸತ್ಯಗಳು… ಒಬ್ಬ ವೈದ್ಯರೇ ಶಾಸಕರಾಗಿರುವ ಕ್ಷೇತ್ರದಲ್ಲಿ ಸರ್ಕಾರಿ ಆರೋಗ್ಯ ಸೌಲಭ್ಯಗಳು ಅತ್ಯುತ್ತಮವಾಗಿರಬೇಕು ಎಂಬುದು ಸಾರ್ವಜನಿಕರ ಸಾಮಾನ್ಯ ನಿರೀಕ್ಷೆ. ಕುಣಿಗಲ್ ತಾಲೂಕನ್ನು ಪ್ರತಿನಿಧಿಸುತ್ತಿರುವ ಶಾಸಕ ಡಾ. ರಂಗನಾಥ್ (ಡಿ.ಕೆ. ಶಿವಕುಮಾರ್ ಅವರ ಸೋದರ ಸಂಬಂಧಿ) ಸ್ವತಃ ವೈದ್ಯರಾಗಿರುವುದರಿಂದ ಈ ನಿರೀಕ್ಷೆ ಇನ್ನಷ್ಟು ಹೆಚ್ಚುತ್ತದೆ. ಆದರೆ, ವಾಸ್ತವ ಮಾತ್ರ ಆಘಾತಕಾರಿಯಾಗಿದೆ. ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಗಳ ನಿಜಸ್ಥಿತಿಯನ್ನು ಪರಿಶೀಲಿಸಿದಾಗ ಬಯಲಾದ ಕರಾಳ ಸತ್ಯಗಳು, ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಮತ್ತು ಸಾರ್ವಜನಿಕರ ನಂಬಿಕೆಗೆ ಬಗೆದ ದ್ರೋಹವನ್ನು ಬಯಲುಮಾಡುತ್ತವೆ. ಪರಿಸ್ಥಿತಿ: ಆಸ್ಪತ್ರೆಯೋ ಅಥವಾ ಹಂದಿಗೂಡೋ?.. ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಗಳ ಭೌತಿಕ ಸ್ಥಿತಿ ಎದೆನಡುಗಿಸುವಂತಿದೆ. ಕೊಳೆತು ನಾರುತ್ತಿರುವ ಹಾಸಿಗೆಗಳು, ಹರಿದು ಜೀರ್ಣವಾದ ಗಾದಿಗಳು, ಬಿರುಕು ಬಿಟ್ಟಿರುವ ಗೋಡೆಗಳು ಮತ್ತು ಎಲ್ಲೆಂದರಲ್ಲಿ ಸೋರುತ್ತಿರುವ ನೀರು ರೋಗಿಗಳನ್ನು ಸ್ವಾಗತಿಸುತ್ತವೆ. ಆಸ್ಪತ್ರೆಯ ಆವರಣವೆಲ್ಲ ದುರ್ವಾಸನೆಯಿಂದ ಕೂಡಿದ್ದು, ಇದು…
ಮುಂದೆ ಓದಿ..
