ಸಂನ್ಯಾಸಿ ಅಧಿಕಾರಿಗೆ ಬಡ್ತಿ? ಕರ್ನಾಟಕ ಸರ್ಕಾರದ ಈ ‘ಮಹಾ ಎಡವಟ್ಟು’ ನಮಗೆ ತಿಳಿಸುವ ಆಘಾತಕಾರಿ ಸತ್ಯಗಳು..
ಸಂನ್ಯಾಸಿ ಅಧಿಕಾರಿಗೆ ಬಡ್ತಿ? ಕರ್ನಾಟಕ ಸರ್ಕಾರದ ಈ ‘ಮಹಾ ಎಡವಟ್ಟು’ ನಮಗೆ ತಿಳಿಸುವ ಆಘಾತಕಾರಿ ಸತ್ಯಗಳು.. ಕಾವಿಧಾರಿಗಳಾಗಿ, ಲೌಕಿಕ ಜಗತ್ತನ್ನು ಸಂಪೂರ್ಣವಾಗಿ ತ್ಯಜಿಸಿ, ಅಧ್ಯಾತ್ಮದ ಹಾದಿಯಲ್ಲಿ ಮೌನವಾಗಿ ಧ್ಯಾನಿಸುತ್ತಿರುವ ಸನ್ಯಾಸಿಯೊಬ್ಬರಿಗೆ ಹಠಾತ್ತನೆ ಸರ್ಕಾರದ ಆದೇಶವೊಂದು ಬರುತ್ತದೆ – “ಅಭಿನಂದನೆಗಳು, ನಿಮಗೆ ಕೆಎಎಸ್ ಹಿರಿಯ ಶ್ರೇಣಿಗೆ ಬಡ್ತಿ ನೀಡಲಾಗಿದೆ, ಕೂಡಲೇ ಅಧಿಕಾರ ವಹಿಸಿಕೊಳ್ಳಿ!” ಇದು ಯಾವುದೋ ಕಾಲ್ಪನಿಕ ಕತೆಯಲ್ಲ ಅಥವಾ ಸಮಾಜದ ವ್ಯಂಗ್ಯಚಿತ್ರವಲ್ಲ; ಆಧುನಿಕ ‘ಡಿಜಿಟಲ್ ಆಡಳಿತ’ದ ಬಡಾಯಿ ಕೊಚ್ಚಿಕೊಳ್ಳುವ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ಸಚಿವಾಲಯದಲ್ಲಿ ಇತ್ತೀಚೆಗೆ ನಡೆದ ಅಪ್ಪಟ ವಾಸ್ತವ. ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು, ಮಠದ ಪೀಠ ಅಲಂಕರಿಸಿರುವ ವ್ಯಕ್ತಿಯೊಬ್ಬರಿಗೆ ಸರ್ಕಾರ ಬಡ್ತಿ ನೀಡಿದೆ ಎಂದರೆ, ರಾಜ್ಯದ ಆಡಳಿತ ಯಂತ್ರ ಎಷ್ಟು ಗಾಢ ನಿದ್ರೆಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ನಿವೃತ್ತಿ ನಂತರವೂ ನಿಲ್ಲದ ‘ಸರ್ಕಾರಿ’ ಸೇವೆ! ಸನ್ಯಾಸಿಗೂ ಸಿಕ್ಕಿತು ಬಡ್ತಿಯ ಭಾಗ್ಯ..…
ಮುಂದೆ ಓದಿ..
