ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಹಣ ಬಿಡುಗಡೆ : ಚಾಮರಾಜನಗರದ 4,433 ಹೆಣ್ಣುಮಕ್ಕಳಿಗೆ ಲಾಭ
ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಹಣ ಬಿಡುಗಡೆ : ಚಾಮರಾಜನಗರದ 4,433 ಹೆಣ್ಣುಮಕ್ಕಳಿಗೆ ಲಾಭ ಚಾಮರಾಜನಗರ ಜಿಲ್ಲೆಯಲ್ಲಿ 2006-07ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಹೆಣ್ಣುಮಕ್ಕಳಿಗೆ ಈಗ ಪರಿಪಕ್ವ ಮೊತ್ತವಾಗಿ 30 ಸಾವಿರ ರೂ. ಜಮೆಯಾಗಲು ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,941 ಹೆಣ್ಣು ಮಗುಗಳ ಹೆಸರಲ್ಲಿ ಬಾಂಡ್ ನೀಡಲಾಗಿದ್ದರೆ, ಅವರಲ್ಲಿ ನಿಯಮಾನುಸಾರ ಅರ್ಹರಾದ 4,433 ಮಂದಿ ಫಲಾನುಭವಿಗಳಿಗೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಸೇರುತ್ತಿದೆ. 2006-07ರಲ್ಲಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್‌ಗಳು ಈಗ ಪರಿಪಕ್ವ ಹಂತ ತಲುಪಿವೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರತಿ ಫಲಾನುಭವಿಗೆ 30,000 ರೂ. ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. 18 ವರ್ಷ ಪೂರೈಸಿದ ಬಳಿಕ ಸರ್ಕಾರದಲ್ಲಿನ ಬದಲಾವಣೆ ಏನೇ ಆಗಿರಲಿ, ಬಾಂಡ್ ಹಣ ಪಾವತಿ ಖಚಿತ ಎಂಬ ಭರವಸೆಯನ್ನು ಸರ್ಕಾರ ಎಂದಿಗೂ ಉಳಿಸಿಕೊಂಡಿದೆ. ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು, ಅವರ ಭವಿಷ್ಯದಲ್ಲಿ…
ಮುಂದೆ ಓದಿ..
