ಸುದ್ದಿ 

ಬೆಂಗಳೂರು: ಮಾಜಿ ಕಾರ್ ಚಾಲಕನ ಮೇಲೆ ಕನ್‌ಸ್ಟ್ರಕ್ಷನ್ ಕಂಪನಿಯ ಗೋಡೌನ್ ಕಳ್ಳತನ ಪ್ರಕರಣ

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಿಯಾ ಎಸ್ಮಸ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾದಪ್ಪನಹಳ್ಳಿಯಲ್ಲಿರುವ ಗೋಡೌನ್‌ನಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ರಾಜನಕುಂಟೆ ಪೊಲೀಸರ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಶಂಕಿತನಾಗಿ ತಮಿಳುನಾಡು ಮೂಲದ ಜೈ ಕೃಷ್ಣನ್ ಎಂಬ ವ್ಯಕ್ತಿಯ ವಿರುದ್ಧ FIR ದಾಖಲಾಗಿದೆ. ಆತ ಹಿಂದಿನ ದಿನಗಳಲ್ಲಿ ಕಂಪನಿಯ ಮಾಲೀಕರ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನಂತರ ಕಂಪನಿಗೆ ಕಾರ್ಮಿಕರನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದ. ಕಂಪನಿಯ ದೂರು ಪ್ರಕಾರ, ಕಾರ್ಮಿಕರಿಗೆ ಅಡ್ವಾನ್ಸ್ ಹಣ ಪಾವತಿಸುವ ವಿಚಾರದಲ್ಲಿ ಜೈ ಕೃಷ್ಣನ್ ಮತ್ತು ಕಾರ್ಮಿಕರ ನಡುವೆ ವಾದ-ವಿವಾದ ಉಂಟಾಗಿತ್ತು. ನಂತರ ಆತ ಕೆಲಸ ಬಿಟ್ಟು ಹೋದರೂ, 2025ರ ಜೂನ್ 19ರಂದು ಮಾದಪ್ಪನಹಳ್ಳಿಯ ಗೋಡೌನ್ ಒಳಗೆ ಪ್ರವೇಶಿಸಿ ಸುಮಾರು ₹3.5 ಲಕ್ಷ ಮೌಲ್ಯದ ಕಾನ್ಸ್ಟ್ರಕ್ಷನ್ ಸಾಮಾನುಗಳನ್ನು ಕದ್ದುಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಗೋಡೌನ್ ಬಾಗಿಲಿನ ಚಿಲಕ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಕಲಿ ಕೀ…

ಮುಂದೆ ಓದಿ..
ಸುದ್ದಿ 

ರಾಜಾನುಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ – ಒಬ್ಬನ ಬಂಧನ

ಬೆಂಗಳೂರು ಗ್ರಾಮಾಂತರ 18 ಆಗಸ್ಟ್ 2025ಯಲಹಂಕ ತಾಲೂಕು ಭೈರಾಪುರ ಗ್ರಾಮದಲ್ಲಿ ರಾಜನಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆಗಸ್ಟ್ 16ರಂದು ಸಂಜೆ ಎ.ಎಸ್.ಐ ಗಂಗಯ್ಯ ನೇತೃತ್ವದ ತಂಡ ಗಸ್ತಿನ ವೇಳೆ ಭೈರಾಪುರದಲ್ಲಿ ಗೋವಿಂದಪ್ಪ (70) ತಮ್ಮ ಮನೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿತು. ಸ್ಥಳದಲ್ಲಿ 90 ಎಂ.ಎಲ್ ಒರಿಜಿನಲ್ ಚಾಯ್ಸ್ ಮದ್ಯದ 6 ಪ್ಯಾಕ್‌ಗಳು, 6 ಡಿಸ್ಪೋಜಬಲ್ ಗ್ಲಾಸ್‌ಗಳು ಹಾಗೂ 500 ಎಂ.ಎಲ್ ನೀರಿನ 6 ಬಾಟಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಗೋವಿಂದಪ್ಪನು ಮದ್ಯದ ಪ್ಯಾಕ್ ಹಾಗೂ ತಿಂಡಿ ಸಾಮಾನುಗಳನ್ನು ಹೆಚ್ಚುವರಿ ಬೆಲೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದನೆಂದು ರಾಜನಕುಂಟೆ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ KE Act 15(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದ ಮಾರನಾಯಕನಹಳ್ಳಿ ವ್ಯಕ್ತಿ ಕಾಣೆಯಾದ ಪ್ರಕರಣ

ಬೆಂಗಳೂರು:18 ಆಗಸ್ಟ್ 2025ನಗರದ ಮಾರನಾಯಕನಹಳ್ಳಿ ಒಂದು ಪ್ರದೇಶದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿ ಕಾಣೆಯಾದ ಘಟನೆ ವರದಿಯಾಗಿದೆ. ಚಿಕ್ಕಜಾಲ ಪೊಲೀಸರಿಗೆ ನೀಡಿದ ದೂರು ಪ್ರಕಾರ, ಆಗಸ್ಟ್ 2, 2025ರಂದು ರಾತ್ರಿ ಸುಮಾರು 9 ಗಂಟೆಗೆ ಮದ್ಯಪಾನ ಮಾಡಿದ ವೆಂಕಟೇಶ್ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಟಿದ್ದಾರೆ. ನಂತರದಿಂದ ಅವರು ಮನೆಗೆ ಮರಳಿಲ್ಲ ಮತ್ತು ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹಿಂದೆ ಜಗಳವಾದ ಸಂದರ್ಭದಲ್ಲಿ ಅವರು ಮನೆ ಬಿಟ್ಟು ಹೋಗಿ ಮತ್ತೆ ವಾಪಸ್ಸಾದ ಘಟನೆಗಳಿದ್ದರೂ, ಈ ಬಾರಿ ಹಿಂತಿರುಗದಿರುವುದರಿಂದ ಕುಟುಂಬವು ಚಿಂತೆಗೆ ಒಳಗಾಗಿದೆ. ಕಾಣೆಯಾದ ವ್ಯಕ್ತಿಯ ವಿವರಗಳು: ಹೆಸರು: ವೆಂಕಟೇಶ್ ಧರಿಸಿದ್ದ ಉಡುಪು: ಬಿಳಿ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್, ಬೂದು ಬಣ್ಣದ ಹ್ಯಾಂಡ್ ಶಾರೀರಿಕ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯ ಮುಂಭಾಗ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ

ಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ ಬೆಂಗಳೂರು:18 ಆಗಸ್ಟ್ 2025ಆನ್‌ಲೈನ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೂಪ ಸಿ ಕಾಲಹವರಿಗೆ ಅಪರಿಚಿತರಿಂದ ಸಂದೇಶ ಬಂದು, ತಮ್ಮ ಖಾತೆಗೆ ಹಣ ಹಾಕಲು ಹೇಳಲಾಗಿದೆ. ರೂಪ ಅವರು ಸಂದೇಶವನ್ನು ನಂಬಿ, ಎನ್‌ಒಐ ಬ್ಯಾಂಕ್ ಖಾತೆ ಸಂಖ್ಯೆ 20407719457 ಹಾಗೂ ಇನ್ನೊಂದು 250100048700002 ಸೇರಿ ಹಲವು ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹1,94,980 ಮೊತ್ತವನ್ನು ಜಮೆ ಮಾಡಿದ್ದಾರೆ. ಅನಂತರ ತಾನು ಮೋಸಗೀಡಾದ ವಿಷಯ ತಿಳಿದುಕೊಂಡ ಪೀಡಿತರು ಅಮೃತ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು 9211930221, 7992050376, 8545822947, 9211938864 ಸೇರಿದಂತೆ ಹಲವು ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಹಣ ವರ್ಗಾಯಿಸಲು ಒತ್ತಾಯಿಸಿದ್ದರೆಂಬುದು ಪತ್ತೆಯಾಗಿದೆ.

ಮುಂದೆ ಓದಿ..
ಸುದ್ದಿ 

ಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ

ಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ ಬೆಂಗಳೂರು, 18 ಆಗಸ್ಟ್ 2025:ಸಂಪಿಗೆಹಳ್ಳಿ ಪೊಲೀಸ್ ಠಾಣೆಯ PSI ಕುಪೇಂದ್ರ ಹೆಚ್.ಸಿ. ಅವರ ತಂಡ ಇಂದು ಮಧ್ಯಾಹ್ನ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಹತ್ತಿರ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದೆ. ಸಂಪಿಗೆಹಳ್ಳಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದಾಗ, ನಂಬರ್ ಪ್ಲೇಟ್ ಇಲ್ಲದ Pulsor NS-400 ಬೈಕ್ ಸೀಟ್ ಕೆಳಗಡೆ ಅಡಗಿಸಿದ್ದ 30 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಕಪ್ಪು ಬಣ್ಣದ ಪೌಚ್ ಹಾಗೂ ಒಪ್ಪೋ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಯಿತು. ಬಂಧಿತನನ್ನು ವಸೀಂ ಆಕ್ರಮ್ ಅಕಾ ಆರ್ಯನ್ ಎಂದು ಗುರುತಿಸಲಾಗಿದ್ದು, ಆತ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನೆಂಬ ಶಂಕೆ ಇದೆ. ಸ್ಥಳಕ್ಕೆ ಬಂದ ತಜ್ಞರು ವಶಕ್ಕೆ ಪಡೆದ ವಸ್ತುಗಳನ್ನು ಪರೀಕ್ಷಿಸಿ…

ಮುಂದೆ ಓದಿ..
ಸುದ್ದಿ 

ತಿರುಮೇನಹಳ್ಳಿಯಲ್ಲಿ ಮನೆ ಕಳ್ಳತನ – ಚಿನ್ನ, ಬೆಳ್ಳಿ ಆಭರಣ ದೋಚಾಟ

ಬೆಂಗಳೂರು: ಆಗಸ್ಟ್ 18 2025ತಿರುಮೇನಹಳ್ಳಿ ಅಗ್ರಹಾರ ಲೇಔಟ್ ಪ್ರದೇಶದಲ್ಲಿ 15 ಆಗಸ್ಟ್ ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ ಮನೆಗೆ ವಾಪಸ್ಸು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ಮಧ್ಯಾಹ್ನ 12.30 ಗಂಟೆಗೆ ಕುಟುಂಬ ಮನೆಯನ್ನು ಲಾಕ್ ಹಾಕಿಕೊಂಡು ಹೊರಟಿದ್ದು, ಸಂಜೆ 4 ಗಂಟೆಗೆ ವಾಪಸ್ಸು ಬಂದಾಗ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಬೀರುವನ್ನು ಕಬ್ಬಿಣದ ರಾಡ್ ಬಳಸಿ ಒಡೆದು, ಆಭರಣಗಳನ್ನು ಕಳವು ಮಾಡಿದ್ದಾರೆ. ಕಳುವಾದ ವಸ್ತುಗಳ ವಿವರ: 4 ಚಿನ್ನದ ಉಂಗುರಗಳು 4 ಮಕ್ಕಳ ಚಿನ್ನದ ಉಂಗುರಗಳು ಚಿನ್ನದ ತಾಳಿ ಮಾದರಿಯ ಡಾಲರ್ – 1 ಬೆಳ್ಳಿಯ ಉಂಗುರಗಳು – 5 ಬೆಳ್ಳಿಯ ಚೈನ್ – 1 ಒಟ್ಟಾರೆ ಸುಮಾರು 17 ಗ್ರಾಂ ಚಿನ್ನ ಹಾಗೂ 20 ಗ್ರಾಂ ಬೆಳ್ಳಿ,…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 23 ವರ್ಷದ ಯುವತಿ ಕಾಣೆಯಾದ ಪ್ರಕರಣ

ಬೆಂಗಳೂರುತಿಂಡ್ಲು ವಿದ್ಯಾರಣ್ಯಪುರದಲ್ಲಿ ವಾಸವಿರುವ ಸುಮಾರು 23 ವರ್ಷದ ಯುವತಿ ಚಾಂದಿನಿ ಕಾಣೆಯಾದ ಪ್ರಕರಣ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ ಮಹಿಳೆಯ ಪ್ರಕಾರ, ಅವರು ಯುಪಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಗಂಡ ಆಟೋ ಚಾಲಕರಾಗಿದ್ದಾರೆ. ಇವರಿಗೆ ಮೂರು ಮಂದಿ ಮಕ್ಕಳು ಇದ್ದಾರೆ. 2025ರ ಆಗಸ್ಟ್ 14ರಂದು ಸಂಜೆ ಸುಮಾರು 4.30ರ ಹೊತ್ತಿಗೆ, ಚಾಂದಿನಿ ಮನೆಯಲ್ಲಿಯೇ ಇದ್ದಳು. ನಂತರ ಸಂಜೆ 5 ಗಂಟೆಯ ವೇಳೆಗೆ ಆಕೆ ಹೊರಗೆ ಹೋದರು ಎಂದು ತಮ್ಮ ತಂಗಿ ಕೀರ್ತಿ ತಿಳಿಸಿದ್ದಾಳೆ. ಕುಟುಂಬದವರು ಹಲವಾರು ಬಾರಿ ಕರೆ ಮಾಡಿದರೂ, ಚಾಂದಿನಿ ಫೋನ್ ಸ್ವೀಕರಿಸಲಿಲ್ಲ. ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ಚಾಂದಿನಿ ತನ್ನ ಸ್ನೇಹಿತೆ ರಾಣಿಯೊಂದಿಗೆ ಜೆಪಿ ನಗರಕ್ಕೆ ತೆರಳುತ್ತಿದ್ದೇನೆ, ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದರೂ, ಆಕೆ ಮನೆಗೆ…

ಮುಂದೆ ಓದಿ..
ಅಂಕಣ 

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ……..

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ…….. ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ? ಅವರು ಅಷ್ಟೊಂದು ಆಳವಾಗಿ ಬೀದಿ ನಾಯಿಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆಯೇ ಅಥವಾ ಕಾನೂನಿನ ಪ್ರಕಾರ ಏನಾದರೂ ಪರಿಹಾರ ಸಿಗಬಹುದು ಎಂದು ಅರ್ಜಿದಾರರು ಭಾವಿಸಿರಬಹುದೇ ? ಇದು ತುಂಬಾ ಸಣ್ಣ ವಿಷಯ ಎನಿಸುವುದಿಲ್ಲವೇ ? ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಬೀದಿ ನಾಯಿಗಳ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು ಎನ್ನುವ ಅರಿವಿರುವುದಿಲ್ಲವೇ ? ದೇಶದ ಅತ್ಯಂತ ಪುಟ್ಟ ಹಳ್ಳಿಯಿಂದ ರಾಷ್ಟ್ರದ ರಾಜಧಾನಿಯವರೆಗೂ ಈ ಬೀದಿ ನಾಯಿಗಳ ಬಗ್ಗೆ ಚರ್ಚಿಸುವಂತಹುದೇನಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ, ಪಿಡಿಒ ಇಂದ ಹಿಡಿದು…

ಮುಂದೆ ಓದಿ..
ಸುದ್ದಿ 

ಹುಚ್ಚರ ಸಂತೆಯಲ್ಲಿ ನಿಂತು……

ಹುಚ್ಚರ ಸಂತೆಯಲ್ಲಿ ನಿಂತು…… ಕಾಲ ಬದಲಾಗಿದೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರ ಬಾಯಿ ಮತ್ತು ಮನಸ್ಸು ದೊಡ್ಡದಾಗಿದೆ. ಜ್ಞಾನ ಅಪಾರವಾಗಿ ಬೆಳೆದು ಮೆದುಳಿನಿಂದ ಆಚೆ ಹೊರಚಾಚುತ್ತಿದೆ. ಆದ್ದರಿಂದ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಯಾವುದೇ ದೊಡ್ಡ ಅಪರಾಧಿಗಳಿಗೆ ಪೊಲೀಸ್ ತನಿಖೆಯಾಗಲಿ, ಸಿಐಡಿ, ಸಿಓಡಿ ತನಿಖೆಯಾಗಲಿ ಅಥವಾ ವಿಶೇಷ ತನಿಖಾ ತಂಡಗಳ ಅವಶ್ಯಕತೆಯೇ ಇಲ್ಲ. ಜೊತೆಗೆ ಅಪರಾಧಿಗಳನ್ನು ಶಿಕ್ಷಿಸಲು ನ್ಯಾಯಾಲಯಗಳ ಅವಶ್ಯಕತೆಯೂ ಇಲ್ಲ. ಏಕೆಂದರೆ ಅದು ತುಂಬಾ ತಡವಾಗಿ ತೀರ್ಪು ನೀಡುತ್ತದೆ ಮತ್ತು ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಅದು ಯಾರಿಗೂ ಬೇಕಾಗಿಲ್ಲ. ಅದಕ್ಕಾಗಿ ಖರ್ಚು ಮಾಡುವ ಹಣ, ಶ್ರಮ ಮತ್ತು ಬುದ್ಧಿವಂತಿಕೆಯೂ ಬೇಕಾಗಿಲ್ಲ. ಅದೆಲ್ಲ ಈಗ ಹಳೆಯದಾಗಿದೆ. ಯಾರಿಗೂ ಅಷ್ಟು ಸಮಯ ಮತ್ತು ತಾಳ್ಮೆಯೂ ಇಲ್ಲ. ಆದ್ದರಿಂದ ಇನ್ನು ಮುಂದೆ ಎಂತಹುದೇ ದೊಡ್ಡ ಅಪರಾಧಗಳಾಗಲಿ ಅಥವಾ ಹಿಂದೆ ನಡೆದಿರಬಹುದಾದ ಆದರೆ ಇಂದಿಗೂ ಪತ್ತೆಯಾಗದ ಅಪರಾಧಗಳೇ ಆಗಿರಲಿ, ಟೆಲಿವಿಜನ್ ಸುದ್ದಿ…

ಮುಂದೆ ಓದಿ..
ಸುದ್ದಿ 

ಊಟಿಗೆ ಪ್ರವಾಸಕ್ಕೆ ರೂಂ ಬುಕ್ಕಿಂಗ್ ನೆಪದಲ್ಲಿ ₹48,013 ವಂಚನೆ

ಬೆಂಗಳೂರು ಆಗಸ್ಟ್ 16 2025ಬೆಂಗಳೂರು: ಏರ್‌ಬಿಎನ್‌ಬಿ ಮೂಲಕ ಊಟಿಗೆ ಪ್ರವಾಸಕ್ಕಾಗಿ ಹೋಟೆಲ್ ರೂಂ ಬುಕ್ ಮಾಡುವ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ ವಂಚನೆ ನಡೆದಿದೆ.ಅರವಿಂದ್ ಕುಮಾರ್ ಅವರು ಹಾಗೂ ಅವರ ಸ್ನೇಹಿತರು 14.08.2025 ರಂದು ಬೆಳಗ್ಗೆ 8.30ಕ್ಕೆ ಊಟಿಗೆ ಪ್ರಯಾಣಿಸಲು ಏರ್‌ಬಿಎನ್‌ಬಿ ಆಪ್ ಮೂಲಕ ಎರಡು ಬೆಡ್‌ಗಳಿರುವ ರೂಂ ಬುಕ್ ಮಾಡಲು ಪ್ರಯತ್ನಿಸಿದರು. ಆದರೆ ಬುಕಿಂಗ್ ರಸೀದಿಯಲ್ಲಿ ಒಂದೇ ಬೆಡ್ ಇರುವ ರೂಂ ತೋರಿಸಿದ್ದರಿಂದ, ಅವರು ಗೂಗಲ್‌ನಲ್ಲಿ ಹುಡುಕಿ ಹೋಟೆಲ್ ಕಸ್ಟಮರ್ ಕೇರ್ ಸಂಖ್ಯೆಗೆ ಸಂಪರ್ಕಿಸಿದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, “ನಿಮಗೆ ಎರಡು ಬೆಡ್‌ಗಳಿರುವ ರೂಂ ಮಾಡಿಕೊಡುತ್ತೇನೆ” ಎಂದು ಹೇಳಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದರು. ಆರೋಪಿಯ ಸೂಚನೆಂತೆ ಪೇಮೆಂಟ್ ಪ್ರಕ್ರಿಯೆ ನಡೆಸಿದ ನಂತರ, ದೂರುದಾರರ ಖಾತೆಯಿಂದ ಒಟ್ಟು ₹48,013 ಹಣ ಡೆಬಿಟ್‌ ಆಗಿದೆ. ವಂಚನೆಯಿಂದ ಹಣ ಕಳೆದುಕೊಂಡ ದೂರುದಾರರು ಬಾಗಲೂರು ಪೊಲೀಸರಿಗೆ…

ಮುಂದೆ ಓದಿ..