ಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್ಹೋಲ್!
ಜಲಮಂಡಳಿ ನಿರ್ಲಕ್ಷ್ಯ – ಮೂವರು ಕಾರ್ಮಿಕರ ಪ್ರಾಣಕ್ಕೆ ಆಟ ಆಡಿದ ಮ್ಯಾನ್ಹೋಲ್! ಬೆಂಗಳೂರು ನೀಲಸಂಧ್ರದಲ್ಲಿ ನಡೆದ ದಾರುಣ ಘಟನೆ ಮತ್ತೊಮ್ಮೆ “ಮಾನವ ಜೀವದ ಮೌಲ್ಯ ಎಷ್ಟು?” ಎಂಬ ಪ್ರಶ್ನೆ ಎಬ್ಬಿಸಿದೆ. ವಿವೇಕನಗರ ಠಾಣೆ ವ್ಯಾಪ್ತಿಯ ಮ್ಯಾನ್ಹೋಲ್ನಲ್ಲಿ ಕ್ಲೀನಿಂಗ್ ಕೆಲಸ ನಡೆಸುತ್ತಿದ್ದ ಮೂವರು ಕಾರ್ಮಿಕರು ಪ್ರಜ್ಞೆ ತಪ್ಪಿ ಒಳಗೇ ಕುಸಿದು ಬಿದ್ದಿದ್ದಾರೆ. ಮ್ಯಾನ್ಹೋಲ್ ಒಳಗಿನ ವಿಷಕಾರಿ ಅನಿಲದಿಂದ ಕಾರ್ಮಿಕರು ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡರು. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ, ಆಮ್ಲಜನಕ ಮಾಸ್ಕ್ ಇಲ್ಲದೇ, ಕೇವಲ ಬಟ್ಟೆಯ ತೊಟ್ಟಿಯಲ್ಲಿ ಕೆಲಸ ಮಾಡಲು ಕಳಿಸಿದ ಈ ಕಾರ್ಮಿಕರು ನೇರವಾಗಿ ಜೀವದ ಹಂಗು ಹಾಕಿದ್ದಾರೆ.ಘಟನೆ ವೇಳೆ ಒದ್ದಾಡುತ್ತಿದ್ದ ಕಾರ್ಮಿಕರನ್ನು ಸ್ಥಳೀಯರು ಸಮಯಪ್ರಜ್ಞೆಯಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಅವರ ಶೌರ್ಯದಿಂದ ಮೂವರ ಜೀವ ಉಳಿದರೂ, ಜಲಮಂಡಳಿಯ ನಿರ್ಲಕ್ಷ್ಯದಿಂದ ಮತ್ತೆ ಕಾರ್ಮಿಕರ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ. ಅಡಿಗಟ್ಟಿ ಕೆಲಸ ಮಾಡುವವರ ಸುರಕ್ಷತೆಯ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಕಾಂಟ್ರಾಕ್ಟರ್ಗಳ…
ಮುಂದೆ ಓದಿ..
