ಸುದ್ದಿ 

ಕಬ್ಬಿನ ಎಂಆರ್‌ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಕಬ್ಬಿನ ಎಂಆರ್‌ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೋಲಾರ: ರಾಜ್ಯದಲ್ಲಿ ಕಬ್ಬು ದರ ಹೆಚ್ಚಿಸಬೇಕೆಂಬ ಬೇಡಿಕೆಯಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಕಬ್ಬಿನ ಕನಿಷ್ಠ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಇದು ಕೇಂದ್ರ ಸರ್ಕಾರದ ಅಧೀನ ಎಂದು ಅವರು ಹೇಳಿದರು. ಕೋಲಾರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಕಬ್ಬಿಗೆ ನೀಡಬೇಕಾದ ಎಂಆರ್‌ಪಿ ಅಥವಾ ಕನಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪಾವತಿ ನೀಡಲಾಗುತ್ತಿದೆ ಎನ್ನುವ ಕಾರಣದಿಂದ ಕೃಷಿಕರು ಅದೇ ಮಟ್ಟದ ದರ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದರು. ಈ ಕುರಿತಂತೆ ರೈತರ ಬೇಡಿಕೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳಲು ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ತಿಮ್ಮಾಪುರ್, ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಸಂಬಂಧಿತ…

ಮುಂದೆ ಓದಿ..
ಸುದ್ದಿ 

ಕೆಎಂಎಫ್ ಮತ್ತೆ ಜನರನ್ನು ‘ತುಪ್ಪ’ದಲ್ಲಿ ಜಾರಿಸಿದೆ!

ಕೆಎಂಎಫ್ ಮತ್ತೆ ಜನರನ್ನು ‘ತುಪ್ಪ’ದಲ್ಲಿ ಜಾರಿಸಿದೆ! ನಂದಿನಿ ತುಪ್ಪದ ದರಕ್ಕೆ ಗಗನಕ್ಕೇ ಏರಿಕೆ – ಸಾಮಾನ್ಯ ಜನರ ಮೇಲೆ ಮತ್ತೋಮ್ಮೆ ಹೊಡೆತ ರಾಜ್ಯದ ಜನತೆಗೆ ಕೆಎಂಎಫ್ ಮತ್ತೊಂದು ‘ಶಾಕ್’ ಗಿಫ್ಟ್ ನೀಡಿದೆ. ಇತ್ತೀಚೆಗೆ ದರ ಇಳಿಕೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ನಂದಿನಿ, ಈಗ ಹಠಾತ್ ಆಗಿ ತುಪ್ಪದ ದರಕ್ಕೆ ಗಗನಕ್ಕೇ ಏರಿಕೆ ಮಾಡಿ ಮತ್ತೊಮ್ಮೆ ಹೊಡೆತ ನೀಡಿದೆ.ಸಾಮಾನ್ಯ ಜನರು ಪದ್ದತಿ ಬದಲಿಸಿ ಅಚ್ಚುಕಟ್ಟಾಗಿ ಖರ್ಚು ನಡೆಸುತ್ತಿದ್ದಾ ಕ್ಷಣ… ಮತ್ತೆ ಕೆಎಂಎಫ್ “ಇಲ್ಲ್ರಿ! ನೀವು ಸಂತೋಷವಾಗಬಾರದು” ಎಂದು ದರ ಏರಿಕೆ ಮಾಡಿ ಬಿಡಿದೆ. ಹೆಚ್ಚಿದ ದರ ಎಷ್ಟು? ಒಂದು ಲೀಟರ್ ನಂದಿನಿ ತುಪ್ಪಕ್ಕೆ 610 ರೂ. ಇದ್ದ ದರವನ್ನು ಸೋಲು–ಮಾತಿಲ್ಲದೆ 700 ರೂ. ಗೆ ಏರಿಸಲಾಗಿದೆ.ಇದೂ ಸಾಕ್ಕಿಲ್ಲವೆಂಬಂತೆ, ಕೆಲವು ಪ್ರದೇಶಗಳಲ್ಲಿ 720 ರೂ.ಗೂ ಮಾರಾಟದ ಸಾಧ್ಯತೆ! ಕೆಲವೇ ವಾರಗಳ ಹಿಂದೆ, ಜಿಎಸ್‍ಟಿ ಇಳಿಕೆ ನಂತರ 40…

ಮುಂದೆ ಓದಿ..
ಸುದ್ದಿ 

ಶಿವಮೊಗ್ಗ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಶಿವಮೊಗ್ಗ ನಗರದಲ್ಲಿ ಮತ್ತೊಂದು ದುಃಖಕರ ಘಟನೆ ಬೆಳಕಿಗೆ ಬಂದಿದೆ. ನಗರದ ಕೋಟೆ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಓದುತ್ತಿದ್ದ 21 ವರ್ಷದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿ ಭದ್ರಾವತಿ ತಾಲೂಕು ದೊಡ್ಡೇರಿ ಗಂಗೂರು ಗ್ರಾಮದ ಮನೀಷಾ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎಸ್.ಸಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಸುಮಾರು 10:15ರ ವೇಳೆಯಲ್ಲಿ ಹಾಸ್ಟೆಲ್‌ನ ಟೆರೇಸ್‌ಗೆ ತೆರಳಿದ್ದ ಮನೀಷಾ, ಅಲ್ಲಿರುವ ಆ್ಯಂಗ್ಲರ್‌ಗೆ ಬೇಣ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ವಿಶೇಷವಾಗಿ ಆತ್ಮಹತ್ಯೆಯ ಮೊದಲು ಮನೀಷಾ ಬೆಳಗ್ಗೆಯ ತಿಂಡಿ ಸೇವಿಸಿದ್ದಾಳೆ ಎನ್ನುವುದು ಪ್ರಾಥಮಿಕ ಮಾಹಿತಿ. ಘಟನೆಯ ಸುದ್ದಿಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ನಿಖರ ಕಾರಣ…

ಮುಂದೆ ಓದಿ..
ಸುದ್ದಿ 

ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ ಮಹಿಳೆ ಬಂಧನ

ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ ಮಹಿಳೆ ಬಂಧನ ಅಪಾರ್ಟ್‌ಮೆಂಟ್‌ನ ಲಿಫ್ಟ್ ಒಳಗೆ ನಾಯಿಮರಿಯನ್ನು ಕ್ರೂರಿಯಾಗಿ ಬಡಿದು ಕೊಂದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನವೆಂಬರ್ 1ರಂದು ನಡೆದಿದ್ದು, ಲಿಫ್ಟ್‌ನಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ವೀಡಿಯೊ ದೃಶ್ಯಾವಳಿಯಲ್ಲಿ ಪುಷ್ಪಲತಾ ಎನ್ನುವ ಮಹಿಳೆ ನಾಯಿಯೊಂದಿಗೆ ಲಿಫ್ಟ್ ಒಳಗೆ ಪ್ರವೇಶಿಸುವುದು ಕಂಡುಬರುತ್ತದೆ. ಆದರೆ ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆಯೇ ಆಕೆ ನಾಯಿಯನ್ನು ನೆಲಕ್ಕೆ ಬಡಿದು ಕೊಂದಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಾಯಿ ಮಾಲಕಿ, 23 ವರ್ಷದ ಯುವತಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಪ್ರಕಾರ, ತಾನು ತನ್ನ ನಾಲ್ಕು ವರ್ಷದ ಪೆಟ್ ನಾಯಿ ‘ಗೋಫಿ’ಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಸೆಪ್ಟೆಂಬರ್ 11ರಿಂದ ತಿಂಗಳಿಗೆ ರೂ.23,000 ಸಂಬಳಕ್ಕೆ ನೇಮಿಸಿದ್ದರು. ನವೆಂಬರ್ 1ರಂದು ನಾಯಿ ಅಕಸ್ಮಿಕವಾಗಿ ಸಾವನ್ನಪ್ಪಿದ್ದರಿಂದ ಕಾರಣ ವಿಚಾರಿಸಿದಾಗ,…

ಮುಂದೆ ಓದಿ..
ಸುದ್ದಿ 

ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಗೆ ಹತ್ಯೆ ಪ್ರಕರಣದಲ್ಲಿ ಕೋರ್ಟ್ ಆರೋಪ

ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಗೆ ಹತ್ಯೆ ಪ್ರಕರಣದಲ್ಲಿ ಕೋರ್ಟ್ ಆರೋಪ ಬೆಂಗಳೂರು: ಚಿತ್ರದುರ್ಗದ ಯುವ ಅಭಿಮಾನಿ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ 15 ಆರೋಪಿಗಳ ವಿರುದ್ಧ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಗಂಭೀರ ಆರೋಪಗಳನ್ನು ಹೊರಿಸಿದೆ. ಕೋರ್ಟ್ ದಾಖಲಿಸಿದ ಪ್ರಕಾರ, ಆರೋಪಿಗಳ ವಿರುದ್ಧ ಹತ್ಯೆ, ಅಪಹರಣ, ಕ್ರಿಮಿನಲ್ ಪಿತೂರಿ ಹಾಗೂ ಕಾನೂನುಬಾಹಿರ ಸಭೆ ಆರೋಪಗಳು ದಾಖಲಾಗಿವೆ. ಆದರೆ ಎಲ್ಲಾ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಆರೋಪಿಗಳನ್ನು ಕೋರ್ಟ್‌ಗೆ ತರಲಾಯಿತು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಸಭಾಂಗಣ ವಕೀಲರು ಹಾಗೂ ಸಾರ್ವಜನಿಕರಿಂದ ತುಂಬಿ ಹೋಗಿತ್ತು. ಜನಸಂದಣಿಯನ್ನು ನೋಡಿ ನ್ಯಾಯಾಧೀಶ ಐ.ಪಿ. ನಾಯಕ್ ಅವರು ಸವಿನಯವಾಗಿ, “ಈ ರೀತಿ ಜನ ತುಂಬಿರುವಾಗ ವಿಚಾರಣೆ ನಡೆಸುವುದು…

ಮುಂದೆ ಓದಿ..
ಸುದ್ದಿ 

ಕಲಬುರಗಿ ಬ್ಯಾಂಕ್‌ ಚುನಾವಣೆ: ವಿಜಯೇಂದ್ರ ಮಾವನ ನಾಮಪತ್ರ ತಿರಸ್ಕೃತ — ಕಾಂಗ್ರೆಸ್‌ಗೆ ಮೊದಲ ಗೆಲುವಿನ ಸಂಭ್ರಮ

ಕಲಬುರಗಿ ಬ್ಯಾಂಕ್‌ ಚುನಾವಣೆ: ವಿಜಯೇಂದ್ರ ಮಾವನ ನಾಮಪತ್ರ ತಿರಸ್ಕೃತ — ಕಾಂಗ್ರೆಸ್‌ಗೆ ಮೊದಲ ಗೆಲುವಿನ ಸಂಭ್ರಮ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್‌ ನಿರ್ದೇಶಕರ ಚುನಾವಣೆಗಾಗಿ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ 33 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯಗೊಂಡಿವೆ ಎಂದು ಚುನಾವಣಾಧಿಕಾರಿ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಪ್ರಕಾಶ್ ಕುದರಿ ತಿಳಿಸಿದ್ದಾರೆ. ವಿಜಯೇಂದ್ರ ಮಾವನ ನಾಮಪತ್ರ ಅನರ್ಹ:ಬ್ಯಾಂಕ್‌ನ ಪ್ರಸ್ತುತ ನಿರ್ದೇಶಕರಾದ ಶಿವಾನಂದ ಅಪ್ಪಾಸಾಬ ಮಾನಕರ ಅವರು ಟಿಎಪಿಸಿಎಂನ ಬಿ ಕ್ಷೇತ್ರದಿಂದ ಪುನರಾಯ್ಕೆಗಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅಫಜಲಪುರ ಟಿಎಪಿಸಿಎಂ ಪ್ರದೇಶಕ್ಕೆ ಆಡಳಿತಾಧಿಕಾರಿ ನೇಮಕಗೊಂಡಿದ್ದ ಕಾರಣದಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಶಿವಾನಂದ ಮಾನಕರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮಾವರಾಗಿದ್ದಾರೆ ಎನ್ನುವುದು ವಿಶೇಷ. ಅವಿರೋಧ ಆಯ್ಕೆಗಳ ಸಂಭ್ರಮ:ಬ್ಯಾಂಕ್‌ನ ಅಧ್ಯಕ್ಷರಾಗಿರುವ ಸೋಮಶೇಖರ ಗೋನಾಯಕ (ಪಟ್ಟಣ…

ಮುಂದೆ ಓದಿ..
ಸುದ್ದಿ 

ಅಕ್ಕಾ ಪಡೆ ರಚನೆಗೆ ಪೂರ್ವಭಾವಿ ಸಭೆ: ನವೆಂಬರ್‌ 19ರಂದು ಅಧಿಕೃತ ಚಾಲನೆ

ಅಕ್ಕಾ ಪಡೆ ರಚನೆಗೆ ಪೂರ್ವಭಾವಿ ಸಭೆ: ನವೆಂಬರ್‌ 19ರಂದು ಅಧಿಕೃತ ಚಾಲನೆ ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ “ಅಕ್ಕಾ ಪಡೆ” ರಚನೆಗೆ ಸಿದ್ಧತೆಗಳು ಅಂತಿಮ ಹಂತಕ್ಕೆ ಕಾಲಿಟ್ಟಿವೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ನಡೆಸಲಾಯಿತು. ನವೆಂಬರ್‌ 19ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇಳೆ ಅಕ್ಕಾ ಪಡೆಗೆ ಅಧಿಕೃತ ಚಾಲನೆ ನೀಡಲಾಗುವ ನಿರೀಕ್ಷೆಯಿದ್ದು, ಅದರ ಪೂರ್ವಸಿದ್ಧತೆ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ವಿನಿಮಯ ನಡೆಯಿತು. ಈ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪಿ. ಹರಿಶೇಖರನ್, ಶರತ್ ಚಂದ್ರ, ಕಲಾ ಕೃಷ್ಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ನಿರ್ದೇಶಕ ಮಹೇಶ್ ಬಾಬು, ಆಪ್ತ ಕಾರ್ಯದರ್ಶಿ ಡಾ. ಟಿ.ಎಚ್. ವಿಶ್ವನಾಥ್, ವಿಶೇಷ…

ಮುಂದೆ ಓದಿ..
ಸುದ್ದಿ 

ಮಂಟೂರ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಉದ್ಘಾಟನೆ – ಗ್ರಾಮೀಣ ಶಿಕ್ಷಣದ ಹೊಸ ಅಧ್ಯಾಯಕ್ಕೆ ಚಾಲನೆ

ಮಂಟೂರ ಗ್ರಾಮದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಉದ್ಘಾಟನೆ – ಗ್ರಾಮೀಣ ಶಿಕ್ಷಣದ ಹೊಸ ಅಧ್ಯಾಯಕ್ಕೆ ಚಾಲನೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 9ನೇ ಮತ್ತು 10ನೇ ತರಗತಿಗಳನ್ನು ಉನ್ನತೀಕರಿಸಿ ಪ್ರೌಢ ಶಾಲೆಯಾಗಿ ಪರಿವರ್ತಿಸಿದ ಹೊಸ ಶಾಖೆಯನ್ನು ಇಂದು ಭವ್ಯವಾಗಿ ಉದ್ಘಾಟಿಸಲಾಯಿತು. ಗ್ರಾಮದ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗೆ ಹೊಸ ಆಶಾಕಿರಣವಾಗಿ ಪರಿಣಮಿಸಿರುವ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮ.ನಿ.ಪ್ರಸ್ವ. ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು (ರಕ್ತಮಠ, ಬೆಂಡವಾಡ) ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪ್ರಿಯಾಂಕ ಜಾಕಿರೋಳಿ  ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಎಸ್‌.ಡಿ‌.ಎಂ‌.ಸಿ ಅಧ್ಯಕ್ಷರು ಶ್ರೀ ರಾಮಚಂದ್ರ ಉಪ್ಪಾರ, ಮಂಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶೋಭಾ ರಾವಸಾಬ ಮೇಗಾಡ್ಡೆ, ಉಪನಿರ್ದೇಶಕರು (ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ) ಶ್ರೀ ಸೀತಾರಾಮ್ ಆರ್‌.ಎಸ್‌., ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ…

ಮುಂದೆ ಓದಿ..
ಸುದ್ದಿ 

ಪಿಕೆಪಿಎಸ್ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಭೆ: ರನ್ನಬೆಳಗಲಿಯಲ್ಲಿ ಉದ್ವಿಗ್ನತೆ

ಪಿಕೆಪಿಎಸ್ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಭೆ: ರನ್ನಬೆಳಗಲಿಯಲ್ಲಿ ಉದ್ವಿಗ್ನತೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಭೆಯಿಂದ ಗ್ರಾಮದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ. ಮಾಹಿತಿಯ ಪ್ರಕಾರ, ಅಕ್ಟೋಬರ್ 29ರಂದು ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ವಾಗ್ವಾದ ತೀವ್ರಗೊಂಡು, ಅದು ಬಳಿಕ ಕೈಕಾಲು ಬೀಸಿ ಹೊಡೆದಾಟಕ್ಕೆ ತಿರುಗಿದೆ. ಎರಡು ಪಕ್ಷದ ಕಾರ್ಯಕರ್ತರು ಪರಸ್ಪರಕ್ಕೆ ಕೋಲುಗಳಿಂದ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪಿಕೆಪಿಎಸ್ ಕಚೇರಿ ಮುಂದೆ ನಡೆದ ಈ ಘಟನೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಪೊಲೀಸರ ಸಮಯೋಚಿತ ಕ್ರಮದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಚುನಾವಣೆಯಲ್ಲಿ ಒಟ್ಟು 13 ಸದಸ್ಯರ ಪೈಕಿ 6…

ಮುಂದೆ ಓದಿ..
ಸುದ್ದಿ 

ಹಾವೇರಿ: ದಂಪತಿಗೆ ಮಣ್ಣು ಎರಚಿ ಆಭರಣ ಕಳ್ಳತನ – ಖದೀಮರ ಧೈರ್ಯಶಾಲಿ ಕೃತ್ಯ!

ಹಾವೇರಿ: ದಂಪತಿಗೆ ಮಣ್ಣು ಎರಚಿ ಆಭರಣ ಕಳ್ಳತನ – ಖದೀಮರ ಧೈರ್ಯಶಾಲಿ ಕೃತ್ಯ! ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಾವಣಗಿ ಗ್ರಾಮದ ಬಳಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಕ್ಕಿಆಲೂರಿನ ನಾಗಪ್ಪ ಕುಬಸದ ಹಾಗೂ ಅವರ ಪತ್ನಿ ಪುಷ್ಪಾ ಇವರಿಂದ ಖದೀಮರು ಅಮೂಲ್ಯ ಆಭರಣ ಕಳವು ಮಾಡಿದ್ದಾರೆ. ದಂಪತಿ ಹಾವಣಗಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ನಡೆದ ಗೃಹ ಪ್ರವೇಶ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ, ಮುಖಕ್ಕೆ ಮಾಸ್ಕ್ ಧರಿಸಿದ ಇಬ್ಬರು ಬೈಕ್ ಸವಾರರು ಹಠಾತ್‌ ಬಂದು ಬೈಕ್ ಅಡ್ಡಹಾಕಿ ದಂಪತಿಯ ಕಣ್ಣಿಗೆ ಮಣ್ಣು ಎರಚಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡ ಖದೀಮರು 40 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ 15 ಗ್ರಾಂ ತೂಕದ ಚೈನ್‌ನ್ನು ಕಳವು ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಬೆಚ್ಚಿಬಿದ್ದ ನಾಗಪ್ಪ ಕುಬಸದ ದಂಪತಿ ತಕ್ಷಣವೇ ಆಡೂರು ಪೊಲೀಸ್ ಠಾಣೆಯಲ್ಲಿ ದೂರು…

ಮುಂದೆ ಓದಿ..