ಕಬ್ಬಿನ ಎಂಆರ್ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಕಬ್ಬಿನ ಎಂಆರ್ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೋಲಾರ: ರಾಜ್ಯದಲ್ಲಿ ಕಬ್ಬು ದರ ಹೆಚ್ಚಿಸಬೇಕೆಂಬ ಬೇಡಿಕೆಯಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಕಬ್ಬಿನ ಕನಿಷ್ಠ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಇದು ಕೇಂದ್ರ ಸರ್ಕಾರದ ಅಧೀನ ಎಂದು ಅವರು ಹೇಳಿದರು. ಕೋಲಾರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಕಬ್ಬಿಗೆ ನೀಡಬೇಕಾದ ಎಂಆರ್ಪಿ ಅಥವಾ ಕನಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪಾವತಿ ನೀಡಲಾಗುತ್ತಿದೆ ಎನ್ನುವ ಕಾರಣದಿಂದ ಕೃಷಿಕರು ಅದೇ ಮಟ್ಟದ ದರ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದರು. ಈ ಕುರಿತಂತೆ ರೈತರ ಬೇಡಿಕೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳಲು ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ತಿಮ್ಮಾಪುರ್, ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಸಂಬಂಧಿತ…
ಮುಂದೆ ಓದಿ..
