ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯೋಗಿಗೆ ಮಾರಣಾಂತಿಕ ಹಲ್ಲೆ: ಏಳು ಮಂದಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜುಲೈ 29:2025ನಗರದ ಹೊರವಲಯದಲ್ಲಿ ಬೆಳಗಿನ ವಾಕ್‌ಗೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯೋಗಿಯೊಬ್ಬರ ಮೇಲೆ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯ ಬಳಿಕ ಗಾಯಾಳು ಮಾರುತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿಯ ಪ್ರಕಾರ, ಜುಲೈ 26ರಂದು ಬೆಳಗ್ಗೆ ಸುಮಾರು 7:45ರ ವೇಳೆಗೆ ದೂರುದಾರರು ಊಟ ಮುಗಿಸಿ ವಾಕಿಂಗ್‌ಗೆ ತೆರಳಿದ್ದಾಗ ಪಕ್ಕದ ಶೆಡ್‌ನಲ್ಲಿದ್ದ ಶಿವಕುಮಾರ್ ಮತ್ತು ರವಿಚಂದ್ರನ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅವರ ಮೇಲೆ ಪ್ರಾಣ ಬೆದರಿಕೆಯ ಉದ್ದೇಶದಿಂದ ಹಲ್ಲೆ ನಡೆಸಲಾಗಿದೆ. ಘಟನೆಯ ಬಳಿಕ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರುತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಮರುದಿನದಂದು (ಜುಲೈ 27) ಬೆಳಗ್ಗೆ ಸುಮಾರು 8:30ರ ಹೊತ್ತಿಗೆ ಕಿರಣ್, ಹರೀಶ, ಮನೋಜ್ ಸೇರಿದಂತೆ ಏಳು ಮಂದಿ ಆಸ್ಪತ್ರೆಗೆ ಬಂದು, ಚಿಕಿತ್ಸೆ ಪಡೆಯುತ್ತಿದ್ದ ದೂರುದಾರರ ಮೇಲೆ ಪುನಃ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ…
ಮುಂದೆ ಓದಿ..
