ಜಮೀನು ವಿವಾದ ಹಿನ್ನೆಲೆ ಗಲಾಟೆ: ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಗದಲ್ಲಿ ಜೆ.ಸಿ.ಬಿ. ಕೆಲಸ – ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ
ತಿಪ್ಪಸಂದ್ರ, ಜುಲೈ 29:ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ತಿಪ್ಪಸಂದ್ರ ಗ್ರಾಮದ ಸರ್ವೆ ನಂಬರ್ 71 ರಲ್ಲಿನ 3.24 ಎಕರೆ ಜಮೀನಿಗೆ ಸಂಬಂಧಿಸಿದ ಖಾತೆಯ ವಿವಾದ ಪ್ರಕರಣ ಮತ್ತೊಮ್ಮೆ ಗಂಭೀರ ತಿರುವು ಪಡೆದಿದೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ಭಾಗಹಕ್ಕಿಗಾಗಿ ರತ್ನಮ್ಮನವರ ಕುಟುಂಬ ಆನೇಕಲ್ ಸಿವಿಲ್ ನ್ಯಾಯಾಲಯದಲ್ಲಿ OS ನಂ. 498/2025 ಮೂಲಕ ದಾವೆ ಹೂಡಿದ್ದು, ತಡೆಯಾಜ್ಞೆ ಪಡೆಯಲಾಗಿತ್ತು. ರತ್ನಮ್ಮನವರು ನೀಡಿದ ಮಾಹಿತಿಯಂತೆ, ಈ ಜಮೀನಿಗೆ ಸಂಬಂಧಿಸಿದಂತೆ ತಿಗಳಚೌಡದೇನಹಳ್ಳಿಯ ಟಿ.ವಿ. ಬಾಬು, ತಿಪ್ಪಸಂದ್ರದ ಸುರೇಶ್ ಹಾಗೂ ಇತರರು, ಬಿಲ್ವರ್ ವಿವೇಕ್ ಗಾರ್ಗ್ ಪರವಾಗಿ ತಕರಾರು ತಂದು, ದಿನಾಂಕ 26-07-2025 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಜಮೀನಿಗೆ ಜೆ.ಸಿ.ಬಿ. ಯಂತ್ರಗಳನ್ನು ತಂದು ಜಮೀನನ್ನು ಸಮಕರಿಸುತ್ತಿದ್ದರು. ಈ ದೃಶ್ಯವನ್ನು ನೋಡಿ ಪ್ರಶ್ನಿಸಿದಾಗ ಟಿ.ವಿ. ಬಾಬು ಅವರು ಬಾಯಿಗೆ ಬಂದಂತೆ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿ, ಎಳೆದಾಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ,…
ಮುಂದೆ ಓದಿ..
