ಸುದ್ದಿ 

ಬೆಂಗಳೂರು: 23 ವರ್ಷದ ಯುವತಿ ಕಾಣೆಯಾದ ಪ್ರಕರಣ

ಬೆಂಗಳೂರುತಿಂಡ್ಲು ವಿದ್ಯಾರಣ್ಯಪುರದಲ್ಲಿ ವಾಸವಿರುವ ಸುಮಾರು 23 ವರ್ಷದ ಯುವತಿ ಚಾಂದಿನಿ ಕಾಣೆಯಾದ ಪ್ರಕರಣ ವರದಿಯಾಗಿದೆ. ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ ಮಹಿಳೆಯ ಪ್ರಕಾರ, ಅವರು ಯುಪಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಗಂಡ ಆಟೋ ಚಾಲಕರಾಗಿದ್ದಾರೆ. ಇವರಿಗೆ ಮೂರು ಮಂದಿ ಮಕ್ಕಳು ಇದ್ದಾರೆ. 2025ರ ಆಗಸ್ಟ್ 14ರಂದು ಸಂಜೆ ಸುಮಾರು 4.30ರ ಹೊತ್ತಿಗೆ, ಚಾಂದಿನಿ ಮನೆಯಲ್ಲಿಯೇ ಇದ್ದಳು. ನಂತರ ಸಂಜೆ 5 ಗಂಟೆಯ ವೇಳೆಗೆ ಆಕೆ ಹೊರಗೆ ಹೋದರು ಎಂದು ತಮ್ಮ ತಂಗಿ ಕೀರ್ತಿ ತಿಳಿಸಿದ್ದಾಳೆ. ಕುಟುಂಬದವರು ಹಲವಾರು ಬಾರಿ ಕರೆ ಮಾಡಿದರೂ, ಚಾಂದಿನಿ ಫೋನ್ ಸ್ವೀಕರಿಸಲಿಲ್ಲ. ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ಚಾಂದಿನಿ ತನ್ನ ಸ್ನೇಹಿತೆ ರಾಣಿಯೊಂದಿಗೆ ಜೆಪಿ ನಗರಕ್ಕೆ ತೆರಳುತ್ತಿದ್ದೇನೆ, ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದರೂ, ಆಕೆ ಮನೆಗೆ…

ಮುಂದೆ ಓದಿ..
ಅಂಕಣ 

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ……..

ಬೀದಿ ನಾಯಿಗಳ ಸಮಸ್ಯೆ ಮತ್ತು ನಿಯಂತ್ರಣ…….. ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅಷ್ಟೊಂದು ಮಾಹಿತಿ ಇರುತ್ತದೆಯೇ ? ಅವರು ಅಷ್ಟೊಂದು ಆಳವಾಗಿ ಬೀದಿ ನಾಯಿಗಳ ಬಗ್ಗೆ ಅಧ್ಯಯನ ಮಾಡಿರುತ್ತಾರೆಯೇ ಅಥವಾ ಕಾನೂನಿನ ಪ್ರಕಾರ ಏನಾದರೂ ಪರಿಹಾರ ಸಿಗಬಹುದು ಎಂದು ಅರ್ಜಿದಾರರು ಭಾವಿಸಿರಬಹುದೇ ? ಇದು ತುಂಬಾ ಸಣ್ಣ ವಿಷಯ ಎನಿಸುವುದಿಲ್ಲವೇ ? ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ಬೀದಿ ನಾಯಿಗಳ ಸಮಸ್ಯೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ್ದು ಎನ್ನುವ ಅರಿವಿರುವುದಿಲ್ಲವೇ ? ದೇಶದ ಅತ್ಯಂತ ಪುಟ್ಟ ಹಳ್ಳಿಯಿಂದ ರಾಷ್ಟ್ರದ ರಾಜಧಾನಿಯವರೆಗೂ ಈ ಬೀದಿ ನಾಯಿಗಳ ಬಗ್ಗೆ ಚರ್ಚಿಸುವಂತಹುದೇನಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ, ಪಿಡಿಒ ಇಂದ ಹಿಡಿದು…

ಮುಂದೆ ಓದಿ..
ಸುದ್ದಿ 

ಹುಚ್ಚರ ಸಂತೆಯಲ್ಲಿ ನಿಂತು……

ಹುಚ್ಚರ ಸಂತೆಯಲ್ಲಿ ನಿಂತು…… ಕಾಲ ಬದಲಾಗಿದೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರ ಬಾಯಿ ಮತ್ತು ಮನಸ್ಸು ದೊಡ್ಡದಾಗಿದೆ. ಜ್ಞಾನ ಅಪಾರವಾಗಿ ಬೆಳೆದು ಮೆದುಳಿನಿಂದ ಆಚೆ ಹೊರಚಾಚುತ್ತಿದೆ. ಆದ್ದರಿಂದ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಯಾವುದೇ ದೊಡ್ಡ ಅಪರಾಧಿಗಳಿಗೆ ಪೊಲೀಸ್ ತನಿಖೆಯಾಗಲಿ, ಸಿಐಡಿ, ಸಿಓಡಿ ತನಿಖೆಯಾಗಲಿ ಅಥವಾ ವಿಶೇಷ ತನಿಖಾ ತಂಡಗಳ ಅವಶ್ಯಕತೆಯೇ ಇಲ್ಲ. ಜೊತೆಗೆ ಅಪರಾಧಿಗಳನ್ನು ಶಿಕ್ಷಿಸಲು ನ್ಯಾಯಾಲಯಗಳ ಅವಶ್ಯಕತೆಯೂ ಇಲ್ಲ. ಏಕೆಂದರೆ ಅದು ತುಂಬಾ ತಡವಾಗಿ ತೀರ್ಪು ನೀಡುತ್ತದೆ ಮತ್ತು ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಅದು ಯಾರಿಗೂ ಬೇಕಾಗಿಲ್ಲ. ಅದಕ್ಕಾಗಿ ಖರ್ಚು ಮಾಡುವ ಹಣ, ಶ್ರಮ ಮತ್ತು ಬುದ್ಧಿವಂತಿಕೆಯೂ ಬೇಕಾಗಿಲ್ಲ. ಅದೆಲ್ಲ ಈಗ ಹಳೆಯದಾಗಿದೆ. ಯಾರಿಗೂ ಅಷ್ಟು ಸಮಯ ಮತ್ತು ತಾಳ್ಮೆಯೂ ಇಲ್ಲ. ಆದ್ದರಿಂದ ಇನ್ನು ಮುಂದೆ ಎಂತಹುದೇ ದೊಡ್ಡ ಅಪರಾಧಗಳಾಗಲಿ ಅಥವಾ ಹಿಂದೆ ನಡೆದಿರಬಹುದಾದ ಆದರೆ ಇಂದಿಗೂ ಪತ್ತೆಯಾಗದ ಅಪರಾಧಗಳೇ ಆಗಿರಲಿ, ಟೆಲಿವಿಜನ್ ಸುದ್ದಿ…

ಮುಂದೆ ಓದಿ..
ಸುದ್ದಿ 

ಊಟಿಗೆ ಪ್ರವಾಸಕ್ಕೆ ರೂಂ ಬುಕ್ಕಿಂಗ್ ನೆಪದಲ್ಲಿ ₹48,013 ವಂಚನೆ

ಬೆಂಗಳೂರು ಆಗಸ್ಟ್ 16 2025ಬೆಂಗಳೂರು: ಏರ್‌ಬಿಎನ್‌ಬಿ ಮೂಲಕ ಊಟಿಗೆ ಪ್ರವಾಸಕ್ಕಾಗಿ ಹೋಟೆಲ್ ರೂಂ ಬುಕ್ ಮಾಡುವ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ ವಂಚನೆ ನಡೆದಿದೆ.ಅರವಿಂದ್ ಕುಮಾರ್ ಅವರು ಹಾಗೂ ಅವರ ಸ್ನೇಹಿತರು 14.08.2025 ರಂದು ಬೆಳಗ್ಗೆ 8.30ಕ್ಕೆ ಊಟಿಗೆ ಪ್ರಯಾಣಿಸಲು ಏರ್‌ಬಿಎನ್‌ಬಿ ಆಪ್ ಮೂಲಕ ಎರಡು ಬೆಡ್‌ಗಳಿರುವ ರೂಂ ಬುಕ್ ಮಾಡಲು ಪ್ರಯತ್ನಿಸಿದರು. ಆದರೆ ಬುಕಿಂಗ್ ರಸೀದಿಯಲ್ಲಿ ಒಂದೇ ಬೆಡ್ ಇರುವ ರೂಂ ತೋರಿಸಿದ್ದರಿಂದ, ಅವರು ಗೂಗಲ್‌ನಲ್ಲಿ ಹುಡುಕಿ ಹೋಟೆಲ್ ಕಸ್ಟಮರ್ ಕೇರ್ ಸಂಖ್ಯೆಗೆ ಸಂಪರ್ಕಿಸಿದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, “ನಿಮಗೆ ಎರಡು ಬೆಡ್‌ಗಳಿರುವ ರೂಂ ಮಾಡಿಕೊಡುತ್ತೇನೆ” ಎಂದು ಹೇಳಿ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದರು. ಆರೋಪಿಯ ಸೂಚನೆಂತೆ ಪೇಮೆಂಟ್ ಪ್ರಕ್ರಿಯೆ ನಡೆಸಿದ ನಂತರ, ದೂರುದಾರರ ಖಾತೆಯಿಂದ ಒಟ್ಟು ₹48,013 ಹಣ ಡೆಬಿಟ್‌ ಆಗಿದೆ. ವಂಚನೆಯಿಂದ ಹಣ ಕಳೆದುಕೊಂಡ ದೂರುದಾರರು ಬಾಗಲೂರು ಪೊಲೀಸರಿಗೆ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಚರ್ಚ್ ಪಾಸ್ಟರ್‌ಗಳ ವಿರುದ್ಧ ಸದಸ್ಯನಿಗೆ ಕಿರುಕುಳ, ಬೆದರಿಕೆ ಆರೋಪ

ಬೆಂಗಳೂರು: ಚರ್ಚ್ ಪಾಸ್ಟರ್‌ಗಳ ವಿರುದ್ಧ ಸದಸ್ಯನಿಗೆ ಕಿರುಕುಳ, ಬೆದರಿಕೆ ಆರೋಪ ಬೆಂಗಳೂರು ಆಗಸ್ಟ್ 16 2025 ಬೆಂಗಳೂರು ಮೂಲದ ಸಂತೋಷ್ ಕುಮಾರ್ ಎಂಬ ವ್ಯಕ್ತಿ ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್‌ (CFC) ಪಾಸ್ಟರ್‌ಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂತೋಷ್ ಕುಮಾರ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಪ್ರಕಾರ, 2002 ರಿಂದ ಚರ್ಚ್ ಸದಸ್ಯರಾಗಿದ್ದ ಸಂತೋಷ್ ಕುಮಾರ್, ಸೆಪ್ಟೆಂಬರ್ 2024ರಿಂದ ಯಾವುದೇ ಕಾರಣವಿಲ್ಲದೆ ಭಾನುವಾರದ ಪೂಜೆ ಮತ್ತು ಇತರ ಕ್ರಿಶ್ಚಿಯನ್ ಸಭೆಗಳಲ್ಲಿ ಭಾಗವಹಿಸಲು ತಡೆಯಲ್ಪಟ್ಟಿದ್ದಾರೆ. 08 ಜೂನ್ 2025ರಂದು ಚರ್ಚ್‌ಗೆ ಹೋದಾಗ, ಪಾಸ್ಟರ್‌ಗಳು ಪ್ರವೇಶ ನಿರಾಕರಿಸಿ ಅವಮಾನಕಾರಿ ಪದಗಳನ್ನು ಬಳಸಿದ್ದಲ್ಲದೆ, ದೇಹದ ಮೇಲೆ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ದೂರು ಹೇಳುತ್ತದೆ. ಇದಲ್ಲದೆ, ಮಹಿಳೆಯರ ಮೇಲೆ ಅಪರಾಧ ಅಥವಾ ಕೊಲೆ ಮಾಡಲು ಪ್ರೇರೇಪಿಸುವಂತ ಅಸಭ್ಯ ಹೇಳಿಕೆಗಳನ್ನು ತಮ್ಮ ಹೆಂಡತಿ ಮತ್ತು ಮಕ್ಕಳ ಮುಂದೆ…

ಮುಂದೆ ಓದಿ..
ಸುದ್ದಿ 

ಗೋದ್ರೇಜ್ ಆನಂದ ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ವೈರ್ ಕಳ್ಳತನ

ಬೆಂಗಳೂರು ಆಗಸ್ಟ್ 16 2025 ಯಲಹಂಕ ನ್ಯೂಟೌನ್‌ನ ಜಲದಿ ಎಲೆಕ್ಟ್ರಿಕಲ್ (ಜಿ.ಇ. ಪ್ರಾಜೆಕ್ಟ್) ಕಂಪನಿಯಲ್ಲಿ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ದೂರು ಆಧಾರವಾಗಿ ಬಾಗಲೂರು ಸಮೀಪದ ಗೋದ್ರೇಜ್ ಆನಂದ ಫೇಸ್–2 ಅಪಾರ್ಟ್‌ಮೆಂಟ್‌ನಲ್ಲಿ ಕಾಪರ್ ಎಲೆಕ್ಟ್ರಿಕಲ್ ವೈರ್ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ, ಬಿ ಮತ್ತು ಸಿ ಟವರ್‌ಗಳ 2ನೇ ಮಹಡಿಯಲ್ಲಿ (ಪಾಟ್ ನಂ. 203 ಮತ್ತು 209) ಕೆಲಸಕ್ಕಾಗಿ ಇಟ್ಟಿದ್ದ ಕಾಪರ್ ವೈರ್ ಕಾಯಿಲ್ ಬಾಕ್ಸ್‌ಗಳನ್ನು ಆಗಸ್ಟ್ 6ರಂದು ಸಂಜೆ ಲಾಕ್ ಹಾಕಿ ಬಿಟ್ಟು ಹೋಗಿದ್ದರು. ಆದರೆ, ಆಗಸ್ಟ್ 7ರಂದು ಬೆಳಿಗ್ಗೆ ಬಂದು ನೋಡಿದಾಗ ಲಾಕ್ ಮುರಿದು ಕಾಯಿಲ್‌ಗಳು ಕಳ್ಳತನವಾಗಿರುವುದು ಪತ್ತೆಯಾಯಿತು. ಕಂಪನಿಯವರು ಕಳ್ಳತನವಾದ ಸಾಮಗ್ರಿಗಳ ನಿಖರ ಪ್ರಮಾಣ ಮತ್ತು ಮೌಲ್ಯದ ಮಾಹಿತಿಯನ್ನು ನಂತರ ನೀಡುವುದಾಗಿ ತಿಳಿಸಿದ್ದಾರೆ. ಪ್ರಕರಣ ಬಾಗಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಜಮೀನು ವಿವಾದ – ಬೆಳೆ ನಾಶ, ರೈತನಿಗೆ ಬೆದರಿಕೆ

ಬೆಂಗಳೂರು ಆಗಸ್ಟ್ 16 2025ಯಲಹಂಕದಲ್ಲಿ ಜಮೀನು ವಿವಾದ ತೀವ್ರಗೊಂಡಿದ್ದು, ರೈತನ ಬೆಳೆಗಳನ್ನು ನಾಶಪಡಿಸಿ, ಜೀವ ಬೆದರಿಕೆ ಹಾಕಿದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ದೂರುದಾರರು 2010ರಲ್ಲಿ 2 ಎಕರೆ 39 ಗುಂಟೆ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದರು. ನ್ಯಾಯಾಲಯ ತೀರ್ಪು ತಮ್ಮ ಪರವಾಗಿ ಬಂದಿದ್ದರೂ, ಜುಲೈ 31ರಂದು ಆರೋಪಿಗಳು ಜಮೀನಿಗೆ ಬಂದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 1ರ ರಾತ್ರಿ ಆರೋಪಿಗಳು JCB ಯಂತ್ರದಿಂದ ಹಲಸಿನ ಗಿಡ, ಬಟರ್‌ಫ್ರೂಟ್, ನಿಂಬೆ, ಹೊನ್ನೆ, ಮಹಾಗಣಿ, ಟೀಕ್‌ ಸೇರಿದಂತೆ ಹಲವು ಗಿಡಗಳನ್ನು ನೆಲಸಮಗೊಳಿಸಿದ್ದು, ₹5 ಲಕ್ಷ ನಷ್ಟ ಉಂಟಾಗಿದೆ. ಬಾಗಲೂರು ಪೊಲೀಸರು ಆರೋಪಿಗಳ ವಿರುದ್ಧ ಹಲ್ಲೆ, ಪ್ರಾಣಬೆದರಿಕೆ ಮತ್ತು ಆಸ್ತಿ ಹಾನಿ ಪ್ರಕರಣ ದಾಖಲಿಸಿದ್ದಾರೆ

ಮುಂದೆ ಓದಿ..
ಸುದ್ದಿ 

ಜಮೀನು ಹಕ್ಕು ವಿವಾದ – ನಕಲಿ ದಾಖಲೆ ಸೃಷ್ಟಿ ಪ್ರಕರಣ

ಬೆಂಗಳೂರು: ಆಗಸ್ಟ್ 16 2025ಬಿದರಹಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಸರ್ವೇ ನಂ.167 ರ 4 ಎಕರೆ 36 ಗುಂಟೆ ಜಮೀನು ಹಕ್ಕು ಸಂಬಂಧಿ ವಿವಾದ ಪ್ರಕರಣದಲ್ಲಿ, ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ ಪ್ರಕರಣ ದಾಖಲೆಯಾಗಿದೆ. ದೂರಿನಲ್ಲಿ, ಜಮೀನಿನ ಮಾಲಕಿ ಶಾಂತಕುಮಾರಿ ಆರ್. (ಆಸ್ಟ್ರೇಲಿಯಾದಲ್ಲಿ ವಾಸ) ರವರ ಸಹಿಯನ್ನು ನಕಲಿ ಮಾಡಿ, 20-12-2017 ರಂದು ಬೋಗಸ್ GPA ಸೃಷ್ಟಿಸಿ, ಜಮೀನು ಕಬಳಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಲಾಗಿದೆ. ದೂರಿದಾರ ವಿನೋದ್ ಕುಮಾರ್ ಎಂ.ಎಲ್. ಅವರು, ಶಾಂತಕುಮಾರಿಯ ಪರವಾಗಿ ಜಮೀನು ನೋಡಿಕೊಳ್ಳುತ್ತಿದ್ದಾಗ, ರೇವತಿ ರಾಜ್ ಸೇರಿದಂತೆ ಕೆಲವು ಮಂದಿ ನಕಲಿ GPA ಹಾಗೂ ಸೇಲ್ ಡೀಡ್ ಸೃಷ್ಟಿಸಿ ನ್ಯಾಯಾಲಯಕ್ಕೂ ತಪ್ಪು ದಾಖಲೆ ಸಲ್ಲಿಸಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಮುಂಚೆ ಜಯನಗರ ಉಪನೋಂದಣಾಧಿಕಾರಿ ಹಾಗೂ ಕೊರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ವಿರುದ್ಧ IPC ಅಡಿಯಲ್ಲಿ ಮೋಸ, ನಕಲಿ…

ಮುಂದೆ ಓದಿ..
ಸುದ್ದಿ 

ಹೆಂಡತಿ ಮತ್ತು ಗಂಡನಿಗೆ ಜೀವ ಬೆದರಿಕೆ: ಖಾಸಗಿ ಫೋಟೋಗಳಿಂದ ಬ್ಲಾಕ್‌ಮೇಲ್ ಆರೋಪ

ಬೆಂಗಳೂರು: ಆಗಸ್ಟ್ 16 2025ಹೆಗಡೆನಗರ ತಿರುಮೇನಹಳ್ಳಿಯ ದಂಪತಿಗೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಗಲೂರು ಪೊಲೀಸರ ಮಾಹಿತಿಯಂತೆ, ದೂರುದಾರರು ವೈಟ್ರಿಲ್ಯ ಬ್ರಾಂಚ್ ರಿಸರ್ಚ್ & ಡೆವಲಪ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2021ರಲ್ಲಿ ದಿವ್ಯಜ್ಯೋತಿ ಕಾಲೇಜಿನಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಾಧ್ಯಾಪಕರಾದ ಘನಲಿಂಗಮೂರ್ತಿ ಡಿ.ಬಿ. ಅವರನ್ನು ಪರಿಚಯ ಮಾಡಿಕೊಂಡಿದ್ದರು. ಸ್ನೇಹ ಬೆಳೆದ ಬಳಿಕ ಅವರು ದೂರುದಾರರ ಮನೆಯಲ್ಲಿ ಆಗಾಗ 2-3 ದಿನಗಳ ಕಾಲ ತಂಗುತ್ತಿದ್ದರು. ವೈಯಕ್ತಿಕ ಸಮಸ್ಯೆಯ ಹಿನ್ನೆಲೆಯಲ್ಲಿ ದೂರುದಾರರು ಹಂತ ಹಂತವಾಗಿ ಒಟ್ಟು ₹11,75,000/- ರೂಪಾಯಿ ಘನಲಿಂಗಮೂರ್ತಿಗೆ ನೀಡಿದ್ದರು. ನಂತರ, ಅವರು ಹಣವನ್ನು ಬಡ್ಡಿ ಸಹಿತವಾಗಿ ಹಿಂತಿರುಗಿಸಿದರೂ, ಇನ್ನೂ ಹಣ ಕೊಡಬೇಕೆಂದು ಘನಲಿಂಗಮೂರ್ತಿ ಒತ್ತಾಯಿಸಿದ್ದಾಗಿ ದೂರು ಹೇಳುತ್ತದೆ. ಆಗಸ್ಟ್ 8ರಂದು, ಬಾಗಲೂರು ಕಾಲೋನಿಯಲ್ಲಿರುವ ದೂರುದಾರರ ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ದಂಪತಿಗೆ ಜೀವ ಬೆದರಿಕೆ…

ಮುಂದೆ ಓದಿ..
ಸುದ್ದಿ 

ಮದುವೆ ನಂತರ ಪತ್ನಿಯಿಂದ ಸುಳ್ಳು ದೂರಿನ ಕಿರುಕುಳ – ಸೇನಾ ಅಧಿಕಾರಿಯ ಕುಟುಂಬದಿಂದ ಪೊಲೀಸ್ ದೂರು

ಬೆಂಗಳೂರು: ಆಗಸ್ಟ್ 16 2025ಸೇನಾ ಮೇಜರ್ ಗೌರಿ ಶಂಕರ್ ಪೌಲ್ ಅವರ ಕುಟುಂಬವು, ಪತ್ನಿಯಿಂದ ಮದುವೆಯ ಕೆಲವೇ ದಿನಗಳಲ್ಲಿ ಆರಂಭವಾದ ಕಿರುಕುಳ ಹಾಗೂ ಸುಳ್ಳು ದೂರಿನ ಆರೋಪದ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದೆ. 2021ರ ಜುಲೈ 2ರಂದು ಪಂಜಾಬ್ ರಾಜ್ಯದ ಪಠಾಣ್‌ಕೋಟ್‌ನಲ್ಲಿ ಮದುವೆಯಾದ ದಂಪತಿಗಳ ಜೀವನದಲ್ಲಿ, ಒಂದು ವಾರದೊಳಗೇ ವೈಮನಸ್ಸು ಶುರುವಾಗಿದೆ. ಪತ್ನಿ ವಿನಿತಾ ಬಸ್ಸಾ ಅವರ ಬಗ್ಗೆ, ಹಿಂದೆಯೇ ಮತ್ತೊಬ್ಬರೊಂದಿಗೆ ಮದುವೆಯಾಗಿದ್ದಾರೆಯೆಂಬ ಅನುಮಾನ ವ್ಯಕ್ತವಾಗಿದ್ದು, ಇದರ ಕುರಿತು ಕೇಳಿದಾಗ ಆಕೆ ಕೋಪಗೊಂಡು ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ನೀಡಿದ್ದಾಳೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಅದಾದ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ — ಮಣಿಪುರ, ಹರಿಯಾಣ, ಪಂಜಾಬ್ — ದೂರು-ಪ್ರತಿದೂರುಗಳ ಸರಮಾಲೆ ಮುಂದುವರಿದಿದ್ದು, ಆರೋಪಿಯು 50 ಲಕ್ಷ ರೂ. ಬೇಡಿಕೆ, ಕೆಲಸದ ಸ್ಥಳದಲ್ಲಿ ಗಲಾಟೆ, ಸ್ವಯಂ ಹಾನಿ ಮಾಡುವ ಬೆದರಿಕೆ, ಹಾಗೂ…

ಮುಂದೆ ಓದಿ..