ಸುದ್ದಿ 

ಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ……….

ಸಾಂಕೇತಿಕವಾಗಿ ನಾಯಿಗಳು ಯಾರು ?ಊಹಿಸಿ………. ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ…… ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ…. ‌.‌‌‌‌‌…….‌ ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡಿನಲ್ಲಿ ಆಹಾರದ ಕೊರತೆ ಕಾಡಿತು. ಬಹುತೇಕ ಮಾಂಸಹಾರಿ ಪ್ರಾಣಿ ನಾಯಿ……….. ರಾತ್ರಿಯೆಲ್ಲಾ ಸಂಚರಿಸುತ್ತಾ ಯಾವುದೋ ಹಾದಿ ಹಿಡಿದು ಸಾಗುತ್ತಿರುವಾಗ ಆಕಸ್ಮಿಕವಾಗಿ ಕಾಡು ಕೊನೆಯಾಗಿ ಬೆಳಗಿನ ಹೊತ್ತಿಗೆ ತನಗರಿವಿಲ್ಲದೆ ಮತ್ತು ತಾನೆಂದೂ ನೋಡಿರದ ನಗರ ಪ್ರವೇಶಿಸಿತು…………. ಕಾಡ ನಾಯಿಯಾದರೂ ಇತ್ತೀಚಿನ ವರ್ಷಗಳಲ್ಲಿ ಆಹಾರ ಸರಿಯಾಗಿ ಸಿಗದೆ ಸ್ವಲ್ಪ ಬಡಕಲು ದೇಹದ ನಾಯಿ ಆಟದ ಮೈದಾನದಲ್ಲಿ ತನ್ನದೇ ನಾಯಿ ಪಂಗಡದ ವಿವಿಧ ಆಕಾರದ ದಷ್ಟಪುಷ್ಟ ನಾಯಿಗಳು ಸಂಚರಿಸುತ್ತಿರುವುದನ್ನು ನೋಡಿ ಖುಷಿಯಾಯಿತು. ತಾನು ಸರಿಯಾದ ದಾರಿಯಲ್ಲೇ ಇದ್ದೇನೆ ಎಂದು ಭಾವಿಸಿ ಅದರ ಹತ್ತಿರ ಹೋಗುತ್ತಿದ್ದಂತೆ ಅದರ ಮಾಲೀಕರು ಕಿರುಚುತ್ತಾ ಕೈಯಲ್ಲಿದ್ದ ಕೋಲಿನಿಂದ…

ಮುಂದೆ ಓದಿ..
ಸುದ್ದಿ 

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ……..

ತಾಯ್ನೆಲ……. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ…….. 78 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,……. ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ.ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ….. ಸ್ವಾತಂತ್ರ್ಯ ಪಡೆದ 78 ವರ್ಷಗಳು …… ಸಂವಿಧಾನ ಸ್ವೀಕರಿಸಿ 75 ವರ್ಷಗಳು…… ಆದರೆ,ನಿನ್ನ ಅಸ್ತಿತ್ವ ಸಹಸ್ರಾರು ವರ್ಷಗಳ ನಿರಂತರ ಚಲನೆಯಿಂದ ಕೂಡಿದೆ…… ನನ್ನ ಭರತ ಖಂಡವೇ ಏನೆಂದು ವರ್ಣಿಸಲಿ – ಎಷ್ಟೆಂದು ವರ್ಣಿಸಲಿ ನಿನ್ನನ್ನು …… ಪದಗಳು – ಭಾವಗಳು – ಕಲ್ಪನೆಗಳಿಗೂ ನಿಲುಕದ ನಿನ್ನನ್ನು ಹೇಗೆಂದು ಹಿಡಿದಿಡಲಿ ಈ ಪುಟ್ಟ ಹೃದಯದಲಿ…. ರಾಮಾಯಣ – ಮಹಾಭಾರತ – ಭಗವದ್ಗೀತೆಗಳೆಂಬ – ಅಸಾಮಾನ್ಯ ಬೃಹತ್ ಗ್ರಂಥಗಳು ನಿನ್ನಲ್ಲೇ ಸೃಷ್ಟಿಯಾದವು…….. ಗೌತಮ ಬುದ್ಧ – ಮಹಾವೀರರೆಂಬ ಚಿಂತನ ಚಿಲುಮೆಗಳಿಗೆ ಜನ್ಮ ನೀಡಿದ್ದು ನೀನೇ……. ಹಿಮಗಿರಿಯ ಸೌಂದರ್ಯ – ನಿತ್ಯ ಹರಿದ್ವರ್ಣದ ಕಾಡುಗಳು – ತುಂಬಿ ತುಳುಕುವ ನದಿಗಳು…

ಮುಂದೆ ಓದಿ..
ಸುದ್ದಿ 

ಪ್ರಜಾಪ್ರಭುತ್ವ — ಸ್ವಾತಂತ್ರ್ಯ – ಸ್ವೇಚ್ಛೆ – ಗುಲಾಮಿತನ……..

ಪ್ರಜಾಪ್ರಭುತ್ವ — ಸ್ವಾತಂತ್ರ್ಯ – ಸ್ವೇಚ್ಛೆ – ಗುಲಾಮಿತನ…….. ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಒಂದು ಹುಚ್ಚರ ಸಂತೆಯಂತೆ ಭಾಸವಾಗುತ್ತದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಇವುಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎನಿಸುತ್ತದೆ. ಈ ವಿಫಲತೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕುಳಗಳು ಬಹಳ ಯಶಸ್ವಿಯಾಗಿ ಉಪಯೋಗಿಸಿಕೊಂಡು ಜನರನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಂಡಿದೆ. ಒಂದು ರೀತಿ ಶ್ವಾನಗಳಿಗೆ ಬಿಸ್ಕೆಟ್ ಹಾಕುವಂತೆ ಜನರ ಮನೋಭಾವವನ್ನೇ ದಿವಾಳಿತನದತ್ತ ದೂಡಿ ಜೀತದಾಳುಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ತಿನ್ನುವುದಕ್ಕಾಗಿ ಬದುಕಬೇಕೋ, ಬದುಕುವುದಕ್ಕಾಗಿ ತಿನ್ನಬೇಕೋ ಎಂಬ ಗೊಂದಲ ಸೃಷ್ಟಿ ಮಾಡಿದೆ. ಆದರೆ ತಿನ್ನುವುದಕ್ಕೂ, ಬದುಕುವುದಕ್ಕೂ ಜೀವನ ಪರ್ಯಂತ ದುಡಿಯಲೇ ಬೇಕಾದ ಅನಿವಾರ್ಯತೆಯಂತು ಸೃಷ್ಟಿಯಾಗಿದೆ. ಬಹುತೇಕ…

ಮುಂದೆ ಓದಿ..
ಸುದ್ದಿ 

ವೀರಸಾಗರದಲ್ಲಿ ಗಣೇಶ ಹಬ್ಬದ ಚರ್ಚೆ ವೇಳೆ ಯುವಕನ ಮೇಲೆ ಹಲ್ಲೆ

ಬೆಂಗಳೂರು ಆಗಸ್ಟ್ 12 2025ವೀರಸಾಗರ ಮುಖ್ಯರಸ್ತೆಯ ಹತ್ತಿರ ಗಣೇಶ ಹಬ್ಬದ ವ್ಯವಸ್ಥೆ ಕುರಿತು ಚರ್ಚಿಸುತ್ತಿದ್ದ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ 9 ಆಗಸ್ಟ್ ರಾತ್ರಿ ನಡೆದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯಂತೆ, ರಾತ್ರಿ 11:30ರ ಸುಮಾರಿಗೆ ನಾಗು ಎಂಬಾತ ತನ್ನ ಸಹೋದರ ಹಾಗೂ ರಾಜು ಎಂಬಾತನೊಂದಿಗೆ ಕಾರಿನಲ್ಲಿ ಬಂದು, ಆನಂದ ಅವರ ತಮ್ಮನನ್ನು ಹೊಡೆದಿದ್ದಾನೆ. ಮಧ್ಯ ಪ್ರವೇಶ ಮಾಡಿದ ಆನಂದ್ ಅವರಿಗೂ ಹೊಡೆದು ಬಾಯಿ ಮತ್ತು ಕಣ್ಣಿನ ಹತ್ತಿರ ಗಾಯಪಡಿಸಲಾಗಿದೆ. ಗಾಯಗೊಂಡವರು ಮೈತ್ರಿ ಕ್ಲಿನಿಕ್ ಕಡೆ ತೆರಳುತ್ತಿದ್ದಾಗ, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರುಣ ಅಪಾರ್ಟ್ಮೆಂಟ್ ಹತ್ತಿರ ನಾಗು, ರಾಜು, ಅನೀಲ್ ಮತ್ತು ಇತರರು ಚಾಕು ಹಾಗೂ ಬ್ಯಾಟ್ ಹಿಡಿದು ಮತ್ತೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರೆಂದು ಯಲಂಕ ಸಂಚಾರಿ ಪೊಲೀಸ್ ಠಾಣೆಯ ದೂರಿನಲ್ಲಿ ಹೇಳಲಾಗಿದೆ. ಗಾಯಗೊಂಡ ಪೀಡಿತನನ್ನು ಕುಟುಂಬಸ್ಥರು ಯಲಹಂಕ ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಜೆ.ಪಿ.ನಗರದಲ್ಲಿ ಯುವಕ ಕಾಣೆ – ಪೊಲೀಸರ ಶೋಧ ಮುಂದುವರಿಕೆ

ಬೆಂಗಳೂರು ಆಗಸ್ಟ್ 12 2025ಬೆಂಗಳೂರು: ಜೆ.ಪಿ.ನಗರದಲ್ಲಿ 19 ವರ್ಷದ ಯುವಕ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಯಲಹಂಕ ಉಪನಗರ ಪೊಲೀಸರ ಪ್ರಕಾರ, ವೆಂಕಟೇಶ್ ಹಾಗೂ ಅವರ ಮಗ ಕಿಶೋರ್ (19)ರ ನಡುವೆ ಆಗಸ್ಟ್ 8ರಂದು ಆಂಜಿನೇಯ ದೇವಾಸಾನದ ಹತ್ತಿರ ಕುಟುಂಬ ಸಂಬಂಧಿತ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಮಧ್ಯಾಹ್ನ ಸುಮಾರು 3 ಗಂಟೆಗೆ ಕಿಶೋರ್ ಮನೆಯಿಂದ ಹೊರಗೆ ಹೋಗಿ ವಾಪಸು ಬಂದಿಲ್ಲ. ಕುಟುಂಬದವರು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ಸಿಗದ ಕಾರಣ, ವೆಂಕಟೇಶ್ ಅವರು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ ಪತ್ತೆ ಕಾರ್ಯ ಕೈಗೊಂಡಿದ್ದು, ಯಾರಾದರೂ ಮಾಹಿತಿ ತಿಳಿದಿದ್ದರೆ ಕೂಡಲೇ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಅತಿವೇಗ ಬೈಕ್ ಡಿಕ್ಕಿ – 78 ವರ್ಷದ ಹಿರಿಯನಿಗೆ ಗಂಭೀರ ಗಾಯ

ಬೆಂಗಳೂರು, ಆ. 12:2025ನಗರದ ಅಂಭಾ ಭವಾನಿ ದೇವಸ್ಥಾನ ಮುಖ್ಯರಸ್ತೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ 78 ವರ್ಷದ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ ಸುಮಾರು 7.40 ಗಂಟೆಯ ಸುಮಾರಿಗೆ ಸಿ.ಪಿ. ಶಿವನ್ (78) ಅವರು ಶಶಾಂಕ ಅಪಾರ್ಟ್ಮೆಂಟ್ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ-41-ಇಎಫ್-7518 ನಂಬರಿನ ಬೈಕ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ಪರಿಣಾಮ ಶಿವನ್ ನೆಲಕ್ಕೆ ಬಿದ್ದು ತಲೆಗೆ ಭಾರೀ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದಾರೆ. ಅಪಘಾತ ಮಾಡಿದ ಬೈಕ್ ಸವಾರನು ತಕ್ಷಣವೇ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ಅವರ ಪುತ್ರ ವಿನೀಶ್ ಎಸ್. ನಾಯರ್ (37) ತಕ್ಷಣವೇ ಆವೇಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಬೈಕ್ ಸವಾರನ ಪತ್ತೆಗೆ…

ಮುಂದೆ ಓದಿ..
ಸುದ್ದಿ 

ಬಿಬಿ ಸರ್ವಿಸ್ ರಸ್ತೆಯಲ್ಲಿ ಟಿವಿಎಸ್ ಸ್ಕೂಟರ್ ಡಿಕ್ಕಿ – ವ್ಯಕ್ತಿಗೆ ಗಾಯ

ಬೆಂಗಳೂರು, ಆಗಸ್ಟ್ 12:2025ಬಿಬಿ ಸರ್ವಿಸ್ ರಸ್ತೆ, ಜಿಕೆವಿಕೆ ಬಸ್ ನಿಲ್ದಾಣದ ಹತ್ತಿರ ನಡೆದಿದ್ದ ವೇಳೆ ಟಿವಿಎಸ್ ಸ್ಕೂಟರ್ ಡಿಕ್ಕಿ ಹೊಡೆದು ವ್ಯಕ್ತಿಗೆ ಗಾಯವಾದ ಘಟನೆ ನಡೆದಿದೆ. ಆಶಿಶ್ ಅವರ ತಂದೆಯಾದ ಆನಂದ ಪೂಜಾರಿ ಅವರು ತಮ್ಮ ಹೆಂಡತಿ ಜಯಂತಿ ಅವರೊಂದಿಗೆ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಕಂಸಂದ್ರ ದಿಕ್ಕಿನಿಂದ ಬಂದ ಟಿವಿಎಸ್ ಸ್ಕೂಟರ್ (ನಂ KA-02-52-8215) ಅವರ ಎಡ ಕಾಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆನಂದ ಪೂಜಾರಿ ಅವರ ಎಡ ಕಾಲಿಗೆ ಬಲವಾದ ಪೆಟ್ಟು ಬಿದ್ದು ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಅವರ ಮಗ ಆಶೀಶ್ (23) ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಕುಟುಂಬ ಜಮೀನು ಗಲಾಟೆ – ವ್ಯಕ್ತಿಗೆ ಗಂಭೀರ ಗಾಯ

ಬೆಂಗಳೂರು: ಆಗಸ್ಟ್ 12 2025ಕುಟುಂಬ ಜಮೀನು ವಿಚಾರದಲ್ಲಿ ಉಂಟಾದ ವೈಷಮ್ಯ ತೀವ್ರಗೊಂಡು ಗಲಾಟೆಗೆ ತಿರುಗಿದ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಾಜು ಅವರ ಹೇಳಿಕೆಯಂತೆ, ಆಗಸ್ಟ್ 5ರಂದು ಬೆಳಗ್ಗೆ 8.30ರ ಸುಮಾರಿಗೆ, ಪಕ್ಕದ ಮನೆಯಲ್ಲಿದ್ದ ದೊಡ್ಡಮ್ಮ ಮುನಿಯಮ್ಮ ಅವರು ನಾಗರಾಜು ಅವರ ತಮ್ಮನಾದ ಕೃಷ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಉಂಟಾದ ವಾಗ್ವಾದಕ್ಕೆ, ಶ್ರೀನಿವಾಸ, ಕಿಶೋರ್, ಹರೀಶ್ ಹಾಗೂ ಚಂದ್ರಕಲಾ ಸೇರಿಕೊಂಡು ನಾಗರಾಜು ಮತ್ತು ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಘಟನೆಯ ವೇಳೆ, ಶ್ರೀನಿವಾಸ ಅವರು ನಾಗರಾಜ ಅವರ ಕುತ್ತಿಗೆಯ ಪಟ್ಟಿಯನ್ನು ಹಿಡಿದು ಮುಖಕ್ಕೆ ಹೊಡೆದಿದ್ದು, ಹರೀಶ್ ಅವರು ನೀಲಗಿರಿ ದೊಣ್ಣೆಯಿಂದ ನಾಗರಾಜು ತಲೆಗೆ ಬಲವಾದ ಹೊಡೆತ ನೀಡಿದ್ದಾರೆ. ಚಂದ್ರಕಲಾ ಮತ್ತು ಕಿಶೋರ್ ಕೃಷ್ಣನಿಗೆ ಕೈಯಿಂದ ಹೊಡೆದಿದ್ದಾರೆ. ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿದ ನಾಗರಾಜು ಪತ್ನಿ ಲಕ್ಷ್ಮೀದೇವಿಯವರಿಗೂ ಹೊಡೆತ ಬಿದ್ದಿದೆ. ಸ್ಥಳೀಯ ವೆಂಕಟೇಶ್…

ಮುಂದೆ ಓದಿ..
ಸುದ್ದಿ 

ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಪ್ರಕರಣ

ಬೆಂಗಳೂರು: ಆಗಸ್ಟ್ 12 2018ನಗರದ ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಘಟನೆ ನಡೆದಿದೆ. ಕಾಣೆಯಾದ ಯುವತಿ ಅನ್ನಪೂರ್ಣ ಅವರು ನವಾಮಿ ಅಪಾರ್ಟ್‌ಮೆಂಟ್‌ನಲ್ಲಿ ಪ್ರವೀಣ ಎಂಬವರ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಸಂಪಿಗೆಹಳ್ಳಿ ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 9ರಂದು ಸಂಜೆ 4 ಗಂಟೆಯ ವೇಳೆಗೆ ತಾಯಿಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಟ್ಟ ಅನ್ನಪೂರ್ಣ, ರಾತ್ರಿ ವಾಪಸ್ ಬರಲಿಲ್ಲ. ಕುಟುಂಬದವರು ಮೊಬೈಲ್‌ಗೆ ಕರೆ ಮಾಡಿದರೂ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಕಾಣೆಯಾದ ಯುವತಿಯ ಎತ್ತರ ಸುಮಾರು 5 ಅಡಿ 2 ಇಂಚು, ಗೋಧಿ ಮೈಬಣ್ಣ, ಕಪ್ಪು ಕೂದಲು, ವಿಶೇಷ ಗುರುತು ಇಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡಬಲ್ಲ ಅವರು ಕಾಣೆಯಾದಾಗ ಹಳದಿ ಬಣ್ಣದ ಚೂಡಿದಾರ ಧರಿಸಿದ್ದರು. ಈ ಸಂಬಂಧ…

ಮುಂದೆ ಓದಿ..
ಸುದ್ದಿ 

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ಯತ್ನ

ಬೆಂಗಳೂರು: ಆಗಸ್ಟ್ 12 2025ಚಿಕ್ಕ ಬೆಟ್ಟಹಳ್ಳಿ ಗ್ರಾಮದಲ್ಲಿ ನಿವೇಶನ ಸಂಖ್ಯೆ 8ನ್ನು ನಕಲಿ ದಾಖಲೆ ಮೂಲಕ ಕಬಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೀಡಿತ ರಮೇಶ್ ಅವರು 2017ರಲ್ಲಿ ನಿವೇಶನವನ್ನು ಕಾನೂನುಬದ್ದವಾಗಿ ಖರೀದಿ ಮಾಡಿ, ಶೆಡ್ ನಿರ್ಮಿಸಿ ವಾಸಿಸುತ್ತಿದ್ದರು. ಆದರೆ ಕೆ. ವೇಣುಗೋಪಾಲ್ ಎಂಬಾತ, ನಕಲಿ ಕೆ. ನಾಗರಾಜ್ ಮತ್ತು ಜಯಲಕ್ಷ್ಮಿ ಎಂದು ತೋರಿಸಿದವರ ಸಹಾಯದಿಂದ 2015ರಲ್ಲಿ ನಕಲಿ ಗಿಫ್ಟ್ ಡೀಡ್ ಸೃಷ್ಟಿಸಿ, ಅದನ್ನು ಎ. ಅಮರನಾಥ ರೆಡ್ಡಿಗೆ ಹಸ್ತಾಂತರ ಮಾಡಿದ್ದಾನೆ. ಅಮರನಾಥ ರೆಡ್ಡಿ ಆ ನಕಲಿ ದಾಖಲೆ ಆಧರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ಸಾಲ ಪಡೆದಿದ್ದಾನೆ. ಬ್ಯಾಂಕ್ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡದೇ ಸಾಲ ನೀಡಿರುವ ಆರೋಪ ಇದೆ. ಪೀಡಿತರು ಆರೋಪಿಗಳೊಂದಿಗೆ ಬ್ಯಾಂಕ್ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..