ಹೆಬ್ಬಗೋಡಿನಲ್ಲಿ ದ್ವಿಚಕ್ರ ವಾಹನ ಕಳವು – ಪ್ರಕರಣ ದಾಖಲಾದ ಬಳಿಕ ತನಿಖೆ ಆರಂಭ
ಹೆಬ್ಬಗೋಡಿ ಟೌನ್ನಲ್ಲಿ ದ್ವಿಚಕ್ರ ವಾಹನ ಕಳವಾದ ಘಟನೆ ನಡೆದಿದೆ. ಪೀಡಿತ ವ್ಯಕ್ತಿಯು Splendor Plus ಬೈಕ್ ಕಳವಾಗಿದ್ದು, ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನಿಲ್ ಕುಮಾರ್ ರವರು ನೀಡಿದ ದೂರಿನ ಪ್ರಕಾರ, ಅವರು ದಿನಾಂಕ 21/06/2025 ರಂದು ಆರ್ ಟಿ ಕೃಷ್ಣ ಮೋಟಾರ್ಸ್ ನಿಂದ ಹೊಸದಾಗಿ ಖರೀದಿಸಿದ KA59L2680 ನೋಂದಾಯಿತ ನಂಬರಿನ ಬೈಕ್ ಅನ್ನು ಬಳಸಿ zomato ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಿನಾಂಕ 24/06/2025 ರಂದು ಮಧ್ಯರಾತ್ರಿ ಸುಮಾರು 2:00 ಗಂಟೆ ವೇಳೆಗೆ ಕೆಲಸ ಮುಗಿಸಿ ತಮ್ಮ ನಿವಾಸವಾದ ದೊರೆಸ್ವಾಮಿ ಬಿಲ್ಡಿಂಗ್ ಬಳಿ ಬೈಕ್ ನಿಲ್ಲಿಸಿ ಒಳಗೆ ಹೋಗಿದ್ದರು. ಆದರೆ, ಅದೇ ದಿನ ಮಧ್ಯಾಹ್ನ 4:00 ಗಂಟೆಗೆ ಕೆಲಸಕ್ಕೆ ಹೋಗಲು ಬಂದು ನೋಡಿದಾಗ, ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಕಾಣಿಸದಿರುವುದನ್ನು ಗಮನಿಸಿದರು. ತಕ್ಷಣದಂತೆ ಸುತ್ತಮುತ್ತ ಮತ್ತು ಪರಿಚಿತ ಪ್ರದೇಶಗಳಲ್ಲಿ ಶೋಧನೆ ನಡೆಸಿದರೂ ಬೈಕ್…
ಮುಂದೆ ಓದಿ..
