ಸುದ್ದಿ 

ಶಿಗ್ಗಾಂವಿ ತಾಲೂಕ್ ಬಂಕಾಪುರದಲ್ಲಿ 18 ವರ್ಷದ ವಿದ್ಯಾರ್ಥಿನಿ ಕಾಣೆ..

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಕೊಟ್ಟಿಗೇರಿ ಓಣಿಯಲ್ಲಿ 18 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಪೊಲೀಸರ ಪ್ರಕಾರ, ಪ್ರತಿಕ್ಷಾ ಕಟ್ಟಿಮಣಿ ತಂದೆ ಜಗದೀಶ ಕಟ್ಟಿಮಣಿ, ವಯಸ್ಸು 18 ವರ್ಷ ಎಂಬ ವಿದ್ಯಾರ್ಥಿನಿ ಆಗಸ್ಟ್ 11 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಮನೆಯಿಂದ “ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್ ಝರಾಕ್ಸ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು ಮನೆಯಿಂದ ಹೊರಟಿದ್ದಾಳೆ. ಆದರೆ ಅವಳು ಮನೆಗೆ ಮರಳಿಲ್ಲ ಕುಟುಂಬಸ್ಥರು ತುಂಬಾ ಆತಂಕಕ್ಕೊಳಗಾಗಿದ್ದಾರೆತಾಯಿ ವೀಣಾ ಕಟ್ಟಿಮಣಿ ಅವರು ತಮ್ಮ ಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ 13 ಆಗಸ್ಟ್ ರಂದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ : ವರದಿ ಪ್ರಮೋದ್ ಜನಗೇರಿ ಹಾನಗಲ್ ತಾಲೂಕ್ ಆಲದಕಟ್ಟಿ ತಾಲೂಕ್ ನ್ಯೂಸ್ .ಹಾವೇರಿ 6360821691 https://taluknewsmedia.com/PRAMODJANAGERI.html

ಮುಂದೆ ಓದಿ..
ಸುದ್ದಿ 

ಶಿಗ್ಗಾಂವಿ ತಾಲೂಕ್ ಬಂಕಾಪುರದಲ್ಲಿ 18 ವರ್ಷದ ವಿದ್ಯಾರ್ಥಿನಿ ಕಾಣೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಕೊಟ್ಟಿಗೇರಿ ಓಣಿಯಲ್ಲಿ 18 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಪ್ರತಿಕ್ಷಾ ಕಟ್ಟಿಮಣಿ ತಂದೆ ಜಗದೀಶ ಕಟ್ಟಿಮಣಿ, ವಯಸ್ಸು 18 ವರ್ಷ ಎಂಬ ವಿದ್ಯಾರ್ಥಿನಿ ಆಗಸ್ಟ್ 11 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಮನೆಯಿಂದ “ಆಧಾರ್ ಕಾರ್ಡ್ ಮತ್ತು SSLC ಮಾರ್ಕ್ಸ್ ಕಾರ್ಡ್ ಝರಾಕ್ಸ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿಕೊಂಡು ಮನೆಯಿಂದ ಹೊರಟಿದ್ದಾಳೆ. ಆದರೆ ಅವಳು ಮನೆಗೆ ಮರಳಿಲ್ಲ ಕುಟುಂಬಸ್ಥರು ತುಂಬಾ ಆತಂಕಕ್ಕೊಳಗಾಗಿದ್ದಾರೆ ತಾಯಿ ವೀಣಾ ಕಟ್ಟಿಮಣಿ ಅವರು ತಮ್ಮ ಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ 13 ಆಗಸ್ಟ್ ರಂದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಹುಡುಕಾಟ ಮುಂದುವರೆಸಿದ್ದಾರೆ : ವರದಿ ಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691

ಮುಂದೆ ಓದಿ..
ಅಂಕಣ 

ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು.

ಸ್ವಚ್ಚಂದ – ಸ್ವತಂತ್ರ – ಮುಕ್ತ – ಬದುಕು. ” Looking ugly and madness is the ultimate status (Freedom ) of mind “ ” ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ “ಎಂಬ ಅರ್ಥದ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ ಹಿಂದೆ ಓದಿದ ನೆನಪು….. ವ್ಯಾವಹಾರಿಕ ಜಗತ್ತಿನಲ್ಲಿ ಇದು ಅಷ್ಟಾಗಿ ಅನ್ವಯವಾಗುವುದಿಲ್ಲ. ಏಕೆಂದರೆ ಇಲ್ಲಿ ಮುಖವಾಡಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ನಮ್ಮ ಎಲ್ಲ ಭಾವನೆಗಳನ್ನು ಸಹ ಮುಖವಾಡದ ಮರೆಯಲ್ಲಿಯೇ ವ್ಯಕ್ತಪಡಿಸಬೇಕು. ಕಾನೂನು, ನೈತಿಕತೆ, ಸಂಬಂಧಗಳು, ವ್ಯವಹಾರ, ಶಿಷ್ಟಾಚಾರ, ಕೊಳ್ಳುಬಾಕ ಸಂಸ್ಕೃತಿ ಎಲ್ಲವೂ ನಮ್ಮನ್ನು ಮುಖವಾಡದಲ್ಲಿ ಮರೆಮಾಚಿಕೊಳ್ಳಲು ಒತ್ತಡ ಹೇರುತ್ತದೆ. ಇಲ್ಲದಿದ್ದರೆ ಬದುಕು ನಡೆಯುವುದೇ ಇಲ್ಲ…. ಆದರೆ ನಿಜವಾದ ಸ್ವಚ್ಛಂದ ಮಾನಸಿಕ ಸ್ವಾತಂತ್ರ್ಯ ದೇವರು ಧರ್ಮದ ಹಂಗಿಲ್ಲದ, ಆಧ್ಯಾತ್ಮಿಕ ಸ್ಥಿತಪ್ರಜ್ಞತೆಯ ಭಾವದಲ್ಲಿ ಇದರ ಅನುಭವವಾಗುತ್ತದೆ….. ಬಗೆಹರಿಸಲಾಗದ,…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 17 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

ಬೆಂಗಳೂರು 18 ಆಗಸ್ಟ್ 2025 ಹೆಬ್ಬಾಳ ಕೆಂಪಾಪುರದ ಜೈನ್ ಎಂಟೇಜ್ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ 17 ವರ್ಷದ ಮಗಳು ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ಯಲಹಂಕ ಉಪನಗರ ಪೊಲೀಸರ ಮಾಹಿತಿಯ ಪ್ರಕಾರ, ದೂರಿನುದಾರರ ಮಗಳು ಕುಮಾರಿ ನಮ್ರತಾ (17 ವರ್ಷ), ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ 2ನೇ ವರ್ಷದ ಕಾರ್ಮಸ್ ವ್ಯಾಸಂಗ ಮಾಡುತ್ತಿದ್ದಾಳೆ. ದಿನಾಂಕ 16 ಆಗಸ್ಟ್ 2025 ರಂದು ಬೆಳಿಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ ಆಕೆ ಮಧ್ಯಾಹ್ನ 1.30ರ ಸುಮಾರಿಗೆ ಯಾವುದೋ ಹುಡುಗನ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಳು ಎಂದು ದೂರಿನುದಾರರ ಮಗ ಅನಿರುದ್ಧ ಹೇಳಿದ್ದಾನೆ. ಆ ನಂತರ ನಮ್ರತಾ ತನ್ನ ಸ್ನೇಹಿತರಿಗೆ ತಮಿಳುನಾಡಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿ, ತನ್ನ ಫೋನ್ ಸ್ವಿಚ್ ಆಫ್ ಮಾಡಿ ಕಾಣೆಯಾಗಿದ್ದಾಳೆ. ಮನೆಯವರು, ಸ್ನೇಹಿತರು, ಬಂಧು-ಬಳಗ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕಾಣೆಯಾದ ನಮ್ರತಾ —…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ: ವೀಲಿಂಗ್ ಮಾಡುತ್ತಿದ್ದ ಯುವಕ ಬಂಧನ

ಬೆಂಗಳೂರು 18 ಆಗಸ್ಟ್ 2025 ದೇವನಹಳ್ಳಿಯ ಬಿ.ಬಿ.ರಸ್ತೆಯ ಮೇಲೆ ಸ್ಕೂಟರ್‌ನಲ್ಲಿ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ವೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 15 ಆಗಸ್ಟ್ 2025ರಂದು ಬೆಳಿಗ್ಗೆ ಸುಮಾರು 8:20ರ ಹೊತ್ತಿಗೆ, ಕೋಗಿಲು ಜಂಕ್ಷನ್ ಬಳಿ ಪಹರೆಯಲ್ಲಿ ತೊಡಗಿದ್ದ ಯಲಹಂಕ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಹೊಂಡಾ ಡಿಯೋ (KA-04-CH-7706) ಮೇಲೆ ವೀಲಿಂಗ್ ಮಾಡುತ್ತಾ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಯುವಕನನ್ನು ತಡೆದು ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ತನಿಖೆಯಲ್ಲಿ ಬಂಧಿತ ಯುವಕನ ಹೆಸರು ರಿಹಾನ್ ಬಿನ್ ರಫೀ (19), ವಾಸ: ಕಾವಲ ಬೈರಸಂದ್ರ ಬಸ್ ನಿಲ್ದಾಣ ಹತ್ತಿರ, ಆರ್.ಟಿ.ನಗರ, ಬೆಂಗಳೂರು ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯ ವಿರುದ್ಧ ಅತಿವೇಗ, ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟುಮಾಡುವಂತಹ ಕೃತ್ಯ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 80 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್ ಕಳ್ಳತನ

ಬೆಂಗಳೂರು 18 ಆಗಸ್ಟ್ 2025ಯಲಹಂಕ ತಾಲೂಕಿನ ಕಟ್ಟಿಗೆನಹಳ್ಳಿ ಯಲಿ ಮತ್ತೊಂದು ಸ್ಕೂಟರ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರ ಮಗ ಶೇಖ್ ಮುತಾಹಿರ್ ಅವರು ಬೂದು ಬಣ್ಣದ ಸ್ಕೂಟರ್ (KA-402120-125) ಅನ್ನು 27 ಜುಲೈ 2025 ರಂದು ಬೆಳಗ್ಗೆ ಸುಮಾರು 10:15 ಗಂಟೆಗೆ ಓಡಿಸಿಕೊಂಡು ಹೋಗಿದ್ದರು. ಆದರೆ, 28 ಜುಲೈ 2025 ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ. ಅಪರಿಚಿತರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳವಾದ ಸ್ಕೂಟರ್ ಮೌಲ್ಯವನ್ನು ಸುಮಾರು ₹80,000 ಎಂದು ಅಂದಾಜಿಸಲಾಗಿದೆ. ಫಿರ್ಯಾದಿನ ಮೇರೆಗೆ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಸ್ಕೂಟರ್ ವಾಪಸ್ ಪಡೆಯಲು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮಾಜಿ ಕಾರ್ ಚಾಲಕನ ಮೇಲೆ ಕನ್‌ಸ್ಟ್ರಕ್ಷನ್ ಕಂಪನಿಯ ಗೋಡೌನ್ ಕಳ್ಳತನ ಪ್ರಕರಣ

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಿಯಾ ಎಸ್ಮಸ್ ಕನ್‌ಸ್ಟ್ರಕ್ಷನ್ ಕಂಪನಿಯ ಮಾದಪ್ಪನಹಳ್ಳಿಯಲ್ಲಿರುವ ಗೋಡೌನ್‌ನಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ರಾಜನಕುಂಟೆ ಪೊಲೀಸರ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಶಂಕಿತನಾಗಿ ತಮಿಳುನಾಡು ಮೂಲದ ಜೈ ಕೃಷ್ಣನ್ ಎಂಬ ವ್ಯಕ್ತಿಯ ವಿರುದ್ಧ FIR ದಾಖಲಾಗಿದೆ. ಆತ ಹಿಂದಿನ ದಿನಗಳಲ್ಲಿ ಕಂಪನಿಯ ಮಾಲೀಕರ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನಂತರ ಕಂಪನಿಗೆ ಕಾರ್ಮಿಕರನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದ. ಕಂಪನಿಯ ದೂರು ಪ್ರಕಾರ, ಕಾರ್ಮಿಕರಿಗೆ ಅಡ್ವಾನ್ಸ್ ಹಣ ಪಾವತಿಸುವ ವಿಚಾರದಲ್ಲಿ ಜೈ ಕೃಷ್ಣನ್ ಮತ್ತು ಕಾರ್ಮಿಕರ ನಡುವೆ ವಾದ-ವಿವಾದ ಉಂಟಾಗಿತ್ತು. ನಂತರ ಆತ ಕೆಲಸ ಬಿಟ್ಟು ಹೋದರೂ, 2025ರ ಜೂನ್ 19ರಂದು ಮಾದಪ್ಪನಹಳ್ಳಿಯ ಗೋಡೌನ್ ಒಳಗೆ ಪ್ರವೇಶಿಸಿ ಸುಮಾರು ₹3.5 ಲಕ್ಷ ಮೌಲ್ಯದ ಕಾನ್ಸ್ಟ್ರಕ್ಷನ್ ಸಾಮಾನುಗಳನ್ನು ಕದ್ದುಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಗೋಡೌನ್ ಬಾಗಿಲಿನ ಚಿಲಕ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಕಲಿ ಕೀ…

ಮುಂದೆ ಓದಿ..
ಸುದ್ದಿ 

ರಾಜಾನುಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ – ಒಬ್ಬನ ಬಂಧನ

ಬೆಂಗಳೂರು ಗ್ರಾಮಾಂತರ 18 ಆಗಸ್ಟ್ 2025ಯಲಹಂಕ ತಾಲೂಕು ಭೈರಾಪುರ ಗ್ರಾಮದಲ್ಲಿ ರಾಜನಕುಂಟೆ ಪೊಲೀಸರು ಅಕ್ರಮ ಮದ್ಯಪಾನ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆಗಸ್ಟ್ 16ರಂದು ಸಂಜೆ ಎ.ಎಸ್.ಐ ಗಂಗಯ್ಯ ನೇತೃತ್ವದ ತಂಡ ಗಸ್ತಿನ ವೇಳೆ ಭೈರಾಪುರದಲ್ಲಿ ಗೋವಿಂದಪ್ಪ (70) ತಮ್ಮ ಮನೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿತು. ಸ್ಥಳದಲ್ಲಿ 90 ಎಂ.ಎಲ್ ಒರಿಜಿನಲ್ ಚಾಯ್ಸ್ ಮದ್ಯದ 6 ಪ್ಯಾಕ್‌ಗಳು, 6 ಡಿಸ್ಪೋಜಬಲ್ ಗ್ಲಾಸ್‌ಗಳು ಹಾಗೂ 500 ಎಂ.ಎಲ್ ನೀರಿನ 6 ಬಾಟಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಗೋವಿಂದಪ್ಪನು ಮದ್ಯದ ಪ್ಯಾಕ್ ಹಾಗೂ ತಿಂಡಿ ಸಾಮಾನುಗಳನ್ನು ಹೆಚ್ಚುವರಿ ಬೆಲೆಯಲ್ಲಿ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದನೆಂದು ರಾಜನಕುಂಟೆ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ KE Act 15(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದ ಮಾರನಾಯಕನಹಳ್ಳಿ ವ್ಯಕ್ತಿ ಕಾಣೆಯಾದ ಪ್ರಕರಣ

ಬೆಂಗಳೂರು:18 ಆಗಸ್ಟ್ 2025ನಗರದ ಮಾರನಾಯಕನಹಳ್ಳಿ ಒಂದು ಪ್ರದೇಶದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿ ಕಾಣೆಯಾದ ಘಟನೆ ವರದಿಯಾಗಿದೆ. ಚಿಕ್ಕಜಾಲ ಪೊಲೀಸರಿಗೆ ನೀಡಿದ ದೂರು ಪ್ರಕಾರ, ಆಗಸ್ಟ್ 2, 2025ರಂದು ರಾತ್ರಿ ಸುಮಾರು 9 ಗಂಟೆಗೆ ಮದ್ಯಪಾನ ಮಾಡಿದ ವೆಂಕಟೇಶ್ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಟಿದ್ದಾರೆ. ನಂತರದಿಂದ ಅವರು ಮನೆಗೆ ಮರಳಿಲ್ಲ ಮತ್ತು ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಹಿಂದೆ ಜಗಳವಾದ ಸಂದರ್ಭದಲ್ಲಿ ಅವರು ಮನೆ ಬಿಟ್ಟು ಹೋಗಿ ಮತ್ತೆ ವಾಪಸ್ಸಾದ ಘಟನೆಗಳಿದ್ದರೂ, ಈ ಬಾರಿ ಹಿಂತಿರುಗದಿರುವುದರಿಂದ ಕುಟುಂಬವು ಚಿಂತೆಗೆ ಒಳಗಾಗಿದೆ. ಕಾಣೆಯಾದ ವ್ಯಕ್ತಿಯ ವಿವರಗಳು: ಹೆಸರು: ವೆಂಕಟೇಶ್ ಧರಿಸಿದ್ದ ಉಡುಪು: ಬಿಳಿ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್, ಬೂದು ಬಣ್ಣದ ಹ್ಯಾಂಡ್ ಶಾರೀರಿಕ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯ ಮುಂಭಾಗ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ

ಆನ್‌ಲೈನ್ ವಂಚನೆ: ಬ್ಯಾಂಕ್ ಖಾತೆಗೆ ಹಣ ಹಾಕಿಸಿದ ಪ್ರಕರಣ ಬೆಂಗಳೂರು:18 ಆಗಸ್ಟ್ 2025ಆನ್‌ಲೈನ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ರೂಪ ಸಿ ಕಾಲಹವರಿಗೆ ಅಪರಿಚಿತರಿಂದ ಸಂದೇಶ ಬಂದು, ತಮ್ಮ ಖಾತೆಗೆ ಹಣ ಹಾಕಲು ಹೇಳಲಾಗಿದೆ. ರೂಪ ಅವರು ಸಂದೇಶವನ್ನು ನಂಬಿ, ಎನ್‌ಒಐ ಬ್ಯಾಂಕ್ ಖಾತೆ ಸಂಖ್ಯೆ 20407719457 ಹಾಗೂ ಇನ್ನೊಂದು 250100048700002 ಸೇರಿ ಹಲವು ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹1,94,980 ಮೊತ್ತವನ್ನು ಜಮೆ ಮಾಡಿದ್ದಾರೆ. ಅನಂತರ ತಾನು ಮೋಸಗೀಡಾದ ವಿಷಯ ತಿಳಿದುಕೊಂಡ ಪೀಡಿತರು ಅಮೃತ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು 9211930221, 7992050376, 8545822947, 9211938864 ಸೇರಿದಂತೆ ಹಲವು ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಹಣ ವರ್ಗಾಯಿಸಲು ಒತ್ತಾಯಿಸಿದ್ದರೆಂಬುದು ಪತ್ತೆಯಾಗಿದೆ.

ಮುಂದೆ ಓದಿ..