ಸುದ್ದಿ 

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಾಗಲೂರು ಪೊಲೀಸರು

ಬೆಂಗಳೂರು, ಜೂನ್ 26, 2025: ವಿಚಾರಣೆಗೆ ಹಾಜರಾಗದೇ ಅಡಗಿಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಾಗಲೂರು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎಚ್.ಸಿ-8385 ಮುನಿಸ್ವಾಮಿ ಅವರು ನೀಡಿದ ಮಾಹಿತಿಯ ಪ್ರಕಾರ, ಮುನಿರಾಜು ಬಿನ್ ಮುನಿಯಪ್ಪ (41 ವರ್ಷ), ವಿಳಾಸ: ವಿಚಾಗಾನಹಳ್ಳಿ ಗ್ರಾಮ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು ಎಂಬಾತನ ವಿರುದ್ಧ ಪ್ರಕರಣ ಸಂಖ್ಯೆ 4-607/2014 ರಲ್ಲಿ ದಸ್ಸಿಗಿರಿ ವಾರಂಟ್ ಜಾರಿಯಾಗಿದೆ. ಆರೋಪಿತನು ಮೊದಲು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೂ, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಪೊಲೀಸರು ಅನೇಕ ಬಾರಿ ಆರೋಪಿಯ ವಿಳಾಸಕ್ಕೆ ಭೇಟಿ ನೀಡಿದರೂ ಅವನ ಪತ್ತೆಯಾಗಿರಲಿಲ್ಲ. ಆದರೆ, 26/06/2025 ರಂದು ಮಧ್ಯಾಹ್ನ 1 ಗಂಟೆಗೆ, ಖಚಿತ ಮಾಹಿತಿ ಮೇರೆಗೆ, ಹೆಡ್ ಕಾನ್‌ಸ್ಟೆಬಲ್ ಮುನಿಸ್ವಾಮಿ ಮತ್ತು ಆಂಜಿನಪ್ಪ (ಎಚ್.ಸಿ-8397) ಅವರು ಒಟ್ಟಾಗಾನಹಳ್ಳಿ ಗ್ರಾಮದಲ್ಲಿ ಮುನಿರಾಜುವನ್ನು ವಶಕ್ಕೆ ಪಡೆದು, 1:20ಕ್ಕೆ…

ಮುಂದೆ ಓದಿ..
ಸುದ್ದಿ 

ಅಂಬೇಡ್ಕರ್ ನಗರದಲ್ಲಿ ಯುವತಿ ನಾಪತ್ತೆ – ಪೊಲೀಸರಿಂದ ಹುಡುಕಾಟ ಪ್ರಾರಂಭ

ಬೆಂಗಳೂರು, ಜೂನ್ 22 – ನಗರದ ಅಂಬೇಡ್ಕರ್ ನಗರದಿಂದ 17 ವರ್ಷದ ಯುವತಿ ಮಾನಾ ಎಂಬವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಗರಾಜ್ ಅವರು ತಮ್ಮ ಕುಟುಂಬ ಸಮೇತ ಅಂಬೇಡ್ಕರ್ ನಗರದಲ್ಲಿ ವಾಸವಾಗಿದ್ದು, ಜೂನ್ 18ರಂದು ಸಂಜೆ 7:30 ಗಂಟೆಗೆ ಮಾನಾ ಮನೆ ಬಿಟ್ಟು ಹೊರಟಿದ್ದರು. ಆದರೆ, ಈವರೆಗೆ ವಾಪಸ್ ಬಂದಿಲ್ಲ. ಯುವತಿ ನಾಪತ್ತೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದ ನಾಗರಾಜ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಕಪಕ್ಕದ ಮನೆಯವರು ಮತ್ತು ಸಂಬಂಧಿಕರೊಂದಿಗೆ ಸಂಪರ್ಕ ಮಾಡಿಕೊಂಡರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ, ಮಾನಾ ನಾಪತ್ತೆ ಪ್ರಕರಣವಾಗಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಯುವತಿಯ ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೇಳಿಕೊಳ್ಳಲಾಗಿದೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಾಗಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅಧಿಕಾರಿಗಳು ವಿನಂತಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆ: ಪೊಲೀಸರು ತನಿಖೆ ಆರಂಭಿಸಿದ್ದಾರೆ

ಬೆಂಗಳೂರು, ಜೂನ್ 25: ನಗರದ ಹೊರವಲಯದಲ್ಲಿನ ಎಂಜಿಯಾರ್ ಲೇಔಟ್ ಬಳಿ ಶಂಕಾಸ್ಪದ ಸ್ಥಿತಿಯಲ್ಲಿ ಒಂದು ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಈ ಘಟನೆ ಮಂಗಳವಾರ (17/06/2025) ಮಧ್ಯಾಹ್ನ 1:15ರ ಸುಮಾರಿಗೆ ಸಂಭವಿಸಿದೆ. ಪ್ರತಿಯಕ್ಷಿಗಳ ಮಾಹಿತಿ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹದ ಪಕ್ಕದಲ್ಲಿ ಕೆಲವು ವಸ್ತುಗಳು ಹಾಗೂ ಗಾಯದ ಗುರುತುಗಳು ಕಂಡುಬಂದಿವೆ. ಘಟನೆಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಶಂಕಾಜನಕ ಮರಣ ಎಂದು ಯು.ಡಿ. (Unnatural Death) ಪ್ರಕರಣ ದಾಖಲಿಸಿಕೊಂಡಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಮೃತ ವ್ಯಕ್ತಿಯು ಯಾರು ಎಂಬುದರ ಕುರಿತು ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. ಯಲಹಂಕ ಪೊಲೀಸ್ ಠಾಣೆ ಉಪನಗರ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮತ್ತು ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ

ಮುಂದೆ ಓದಿ..
ಸುದ್ದಿ 

ಹಿರಿಯ ವೈದ್ಯರಿಗೆ ಸಹೋದ್ಯೋಗಿಯಿಂದ ಕಿರುಕುಳ: ಪೊಲೀಸರಿಗೆ ದೂರು

ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯೆಯೊಬ್ಬರು ತಮ್ಮ ಹಳೆಯ ಸಹೋದ್ಯೋಗಿ ವಿರುದ್ಧ ನಿರಂತರ ಕಿರುಕುಳ ನೀಡಿರುವ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಶೆಟ್ಟಿ ರವರ ಪ್ರಕಾರ, ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಸೀನಿಯರ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ, ರೂಪಾ ಎಂಬುವವರು ಸಹ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸಂಬಂಧವಾಗಿ ರಾಹುಲ್ ಶೆಟ್ಟಿ ರವರ ಮೊಬೈಲ್ ನಂಬರ್ ಪಡೆದ ಬಳಿಕ, ರೂಪಾ ಅವರು ನಿರಂತರವಾಗಿ ಕರೆ ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದರೆಂದು ದೂರು ನೀಡಲಾಗಿದೆ. ಮತ್ತು, ರೂಪಾ ಅವರು ವೈದ್ಯೆಯ ಮನೆಗೆ, ಕ್ಲಿನಿಕ್‌ಗೆ ಹಾಗೂ ಆಸ್ಪತ್ರೆಯವರೆಗೆ ಅನಧಿಕೃತವಾಗಿ ಬಂದು ಗಲಾಟೆ ಮಾಡುತ್ತಿದ್ದರೆಂದು ರಾಹುಲ್ ಶೆಟ್ಟಿಯವರು ತಿಳಿಸಿದ್ದಾರೆ. ಇದರಿಂದಾಗಿ ವೈದ್ಯೆಯ ಮಾನಸಿಕ ನೆಮ್ಮದಿ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬಿದ್ದಿದ್ದು, ಆರೋಗ್ಯಕ್ಕೂ ಹಾನಿಯಾಗಿರುವುದಾಗಿ ತಿಳಿಸಲಾಗಿದೆ. ಅಲ್ಲದೆ, ರೂಪಾ ಆತ್ಮಹತ್ಯೆ ಮಾಡುವುದಾಗಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ: ಆಸ್ಪತ್ರೆಯಿಂದ ಯುವಕ ಕಾಣೆಯಾದ ಪ್ರಕರಣ

ಹುಬ್ಬಳ್ಳಿ, ಜೂನ್ 25: ಹಳೇಹುಬ್ಬಳ್ಳಿ, ಹಿರೇಪೇಟೆ ಡಂಬಳದವರ ಚಾಳ ಮನೆ ನಂ: 90/1 ರಲ್ಲಿ ವಾಸಿಸುವ ಶ್ರೀನಿವಾಸ ಶಂಕ್ರಪ್ಪ ಬ್ಯಾಡಗಿ (ವಯಸ್ಸು 41) ಅವರು ಠಾಣೆಗೆ ದೂರು ನೀಡಿದ್ದು, ತಮ್ಮ ಚಿಕ್ಕಪ್ಪನ ಮಗ ಮಂಜುನಾಥ ಪುಂಡಲಿಕ ಬ್ಯಾಡಗಿ (ವಯಸ್ಸು 26), ಉದ್ಯೋಗ: ಸಾಫ್ಟ್‌ವೇರ್ ಇಂಜಿನಿಯರ್, ದಿನಾಂಕ 24-06-2025 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ್ ರೋಡ್‌ನ ಸುಚಿರಾಯು ಆಸ್ಪತ್ರೆಯಿಂದ ಯಾರಿಗೂ ಹೇಳದೆ ಹೊರಗೆ ಹೋಗಿ, ವಾಪಸ್ ಬಾರದೇ ಕಾಣೆಯಾದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ಡಿಲಿವರಿ ಬಾಯ್ ಇಂದ ಲೈಂಗಿಕ ಕಿರುಕುಳದ ಮೆಸೇಜ್: ಪೊಲೀಸ್ ಪ್ರಕರಣ ದಾಖಲು

ನಗರದವರೊಬ್ಬರು ಆನ್‌ಲೈನ್ ಟ್ರ ಮೆಡ್ಸ್ ವೆಬ್‌ಸೈಟ್‌ನಲ್ಲಿ ಔಷಧಿ ಮಾತ್ರೆಗಳು ಆರ್ಡರ್ ಮಾಡಿದ ನಂತರ, ದಿನಾಂಕ 20-06-2025 ರಂದು ಡಿಲಿವರಿ ನೀಡಲು ಬಂದ ಡಿಲಿವರಿ ಬಾಯ್ ರಮೇಶ್ ರಡ್ಡಿ ಎಂಬಾತ ಮನೆಗೆ ಬೇಟಿ ನೀಡಿದ್ದನು. ಡಿಲಿವರಿ ವೇಳೆ ಈತ ಗ್ರಾಹಕರ ಮೊಬೈಲ್ ನಂಬರ್ ಪಡೆದು, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗ್ರಾಹಕರಿಗೆ ಅವಾಚ್ಯ ಹಾಗೂ ಲೈಂಗಿಕ ಅರ್ಥ ಬರುವ ರೀತಿಯ “Hello baby”, “Baby” ಎಂಬ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಪೀಡಿತರು ಕೂಡಲೇ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ತನ್ನ ಮೊಬೈಲ್ ನಂಬರ್ 9972429057 ಗೆ 9148859319 ನಂಬರ್‌ನಿಂದ ಕಿರುಕುಳದ ಮೆಸೇಜ್ ಬಂದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತ ಡಿಲಿವರಿ ಬಾಯ್ ರಮೇಶ್ ರಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಪ್ರಾರಂಭಿಸಿದ್ದಾರೆ. ವರದಿ :…

ಮುಂದೆ ಓದಿ..
ಸುದ್ದಿ 

ನಿರ್ಲಕ್ಷ್ಯದಿಂದ ಅಪಘಾತ

ಧಾರವಾಡ, 23 ಜೂನ್ 2025: ಸಾಯಂಕಾಲ 5.30 ಗಂಟೆ ಸುಮಾರಿಗೆ ಧಾರವಾಡ ಕಾರ್ಪೋರೇಷನ್ ಸರ್ಕಲ್ ಹತ್ತಿರ ನಡೆದ ಅಪಘಾತದಲ್ಲಿ 81 ವರ್ಷದ ವೃದ್ಧ ಪಾದಚಾರಿ ಮರಿಯಪ್ಪ ತಂದೆ ದುರಗಪ್ಪ ಪಡಗಲಿ ಗಾಯಗೊಂಡ ಘಟನೆ ನಡೆದಿದೆ. ಹುಬ್ಬಳ್ಳಿಯ ಅಲಾಭಕ್ಷ ತಂದೆ ಯಮನೂರಸಾಬ ನದಾಫ್ ಅವರು ಚಲಾಯಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ನಂ. ಕೆಎ-25/ಎಫ್-2870) ಅನ್ನು ಜುಬ್ಲಿ ಸರ್ಕಲ್ ಕಡೆಯಿಂದ ಕಾರ್ಪೋರೇಷನ್ ಸರ್ಕಲ್ ಕಡೆಗೆ ರಸ್ತೆಯಲ್ಲಿ ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮರಿಯಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ, ಮರಿಯಪ್ಪ ಅವರಿಗೆ ಬಲವಾದ ಗಾಯಗಳಾಗಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ನಿರ್ಲಕ್ಷ್ಯ ಚಾಲನೆಯಿಂದ ಅಪಾಯವುಂಟಾಗುತ್ತಿರುವ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಲು…

ಮುಂದೆ ಓದಿ..
ಸುದ್ದಿ 

ಅತಿವೇಗದ ಲಾರಿ ಡಿಕ್ಕಿ: ಮೂರು ವಾಹನಗಳಿಗೆ ಹಾನಿ, ವ್ಯಕ್ತಿಗೆ ಗಾಯ

ಧಾರವಾಡ: ದಿನಾಂಕ 22.06.2025 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಧಾರವಾಡ ಪಿಬಿ ರಸ್ತೆಯ ಎನ್‌ಟಿಟಿಎಫ್ ಬಿಆರ್‌ಟಿಎಸ್ ಬಸ್‌ಸ್ಟಾಪ್ ಹತ್ತಿರ ಭೀಕರ ಅಪಘಾತ ನಡೆದಿದೆ. ಉತ್ತರಪ್ರದೇಶ ಮೂಲದ ಪ್ರಮೋದಕುಮಾರ್ (ತಂದೆ: ರಾಜೇಂದ್ರಸಿಂಗ್) ಎಂಬಾತನು ತಾನೇ ಚಲಾಯಿಸುತ್ತಿದ್ದ ಟಾಟಾ ಕಂಪನಿಯ ಲಾರಿ (ನಂ. ಆರ್ ಜೆ-14/ಜಿಆರ್-3521)ಯನ್ನು ಜುಬ್ಲಿ ಸರ್ಕಲ್ ದಿಂದ ಹುಬ್ಬಳ್ಳಿ ಕಡೆಗೆ ಅತ್ಯಧಿಕ ವೇಗದಲ್ಲಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಾರಿ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಟಾಟಾ ಕಂಪನಿಯ ಕಾರು (ನಂ. ಕೆಎ-65/ಎಮ್-0972)ಗೆ ಡಿಕ್ಕಿ ಹೊಡೆದು ವಾಹನಕ್ಕೆ ಹಾನಿ ಮಾಡಿದ್ದಾನೆ. ಆ ನಂತರವೇ ಸಹ ನಿಯಂತ್ರಣ ತಪ್ಪಿ ಮುಂದೆ ಹೋಗಿ ಮತ್ತೊಂದು ಮಾರುತಿ ಕಂಪನಿಯ ಕಾರು (ನಂ. ಕೆಎ-25/ಪಿ-6675)ಗೆ ಡಿಕ್ಕಿ ಹೊಡೆದಿದ್ದು, ಆ ಕಾರಿನ ಸವಾರ ರವಿ (ತಂದೆ: ಶೇಖರಯ್ಯ ಸಿದಾಟಗಿಮಠ, ವಯಸ್ಸು: 48, ನಿವಾಸಿ ಮಾಳಮಡಿ, ಧಾರವಾಡ) ಅವರಿಗೆ ಸಾದಾ ಗಾಯಗಳು…

ಮುಂದೆ ಓದಿ..
ಅಂಕಣ 

ನಾವು ಯಾರು ? ನಮ್ಮ ಯೋಗ್ಯತೆ ಏನು ?.

ನಾವು ಯಾರು ? ನಮ್ಮ ಯೋಗ್ಯತೆ ಏನು ?……… ಕೆಲವರ ಬಗ್ಗೆ ಹಲವು ಉದಾಹರಣೆಗಳು……. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ…. ಮೂಕ ಪ್ರಾಣಿಗಳಿಗೆ ಆಹಾರದಲ್ಲಿ ವಿಷವಿಕ್ಕುವ ಅನಾಗರಿಕರು ನಾವು ಅನಾಗರಿಕರು………. ಅನ್ನಭಾಗ್ಯದ ಹಸಿದ ಹೊಟ್ಟೆಯ ಅಕ್ಕಿ ಕದಿಯುವ ಕಳ್ಳರು ನಾವು ಕಳ್ಳರು…. ಕೊರೋನಾ ಕಷ್ಟದ ಸಮಯದಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ದುಡ್ಡು ಹೊಡೆಯುವ ನೀಚರು ನಾವು ನೀಚರು….. ಬುದ್ಧಿಮಾಂದ್ಯ ಬೀದಿ ಹೆಣ್ಣಿನ ಅತ್ಯಾಚಾರ ಮಾಡುವ ಕೀಚಕರು ನಾವು ಕೀಚಕರು…… ವೃದ್ಧಾಪ್ಯದ ಪಿಂಚಣಿಯಲ್ಲಿ ಕಮೀಷನ್ ಹೊಡೆಯುವ ಕಿರಾತಕರು ನಾವು ಕಿರಾತಕರು…… ಡೆತ್ ಸರ್ಟಿಫಿಕೇಟ್ ನೀಡಲೂ ಲಂಚ ಪಡೆಯುವ ಭ್ರಷ್ಟರು ನಾವು ಭ್ರಷ್ಟರು…… ಗಂಡ ಹೆಂಡತಿಯ ಸ್ವಾರ್ಥಕ್ಕಾಗಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕೊಳಕರು ನಾವು ಕೊಳಕರು…… ಹಣಕ್ಕಾಗಿ ಮನುಷ್ಯನ ಕಿಡ್ನಿಯನ್ನೇ ಕದಿಯುವ ಕಟುಕರು ನಾವು ಕಟುಕರು…… ಮೂರು ವರ್ಷದ ಹಸುಳೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡುವ ರಾಕ್ಷಸರು ನಾವು…

ಮುಂದೆ ಓದಿ..
ಸುದ್ದಿ 

ಸ್ನಾಪ್‌ಡೀಲ್‌ ಕಾರ್‌ ಕವರ್ ಖರೀದಿಸಿ ಹಣ ಕಳೆದುಕೊಂಡ ಗ್ರಾಹಕ – ಸೈಬರ್ ವಂಚನೆ ಪ್ರಕರಣ

ಸ್ನಾಪ್‌ಡೀಲ್‌ನಿಂದ ಕಾರ್ ಕವರ್ ಖರೀದಿಸಿ ನಂತರ ಹಣವನ್ನು ಕಳೆದುಕೊಂಡಿರುವ ಘಟನೆ ನಾಡಿನಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಹೆಚ್ಚುತ್ತಿರುವ ಅಂಶಕ್ಕೆ ಮತ್ತೊಂದು ಉದಾಹರಣೆ ನೀಡಿದೆ. ಪ್ರಜ್ವಲ್ ರವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಅವರು ಆನ್‌ಲೈನ್‌ ಖರೀದಿ ವೇದಿಕೆ Snapdeal ಮೂಲಕ ಕಾರ್ ಕವರ್ ಖರೀದಿಸಿದ್ದರು. ಆದರೆ ಅದು ಹಾನಿಯಾಗಿರುವುದರಿಂದ ವಾಪಸ್ಸು ಮಾಡಿದ್ದಾರೆ. ವಾಪಸ್ಸು ಮಾಡಿದರೂ 7 ದಿನಗಳವರೆಗೆ ಹಣ ಜಮೆಯಾಗದ ಕಾರಣ, ಅವರು ನೀಡಲಾಗಿದ್ದ ಸಹಾಯವಾಣಿ ಸಂಖ್ಯೆಗಳಿಗೆ (8167899758, 7975747448) ಕರೆಮಾಡಿದರು. ಅಲ್ಲಿಂದ ಬಂದ ಕರೆಗಳಲ್ಲಿ ತಮ್ಮ ಮೊಬೈಲ್‌ನಲ್ಲಿ ಫೋನ್‌ಪೇ ಅಪ್ಲಿಕೇಶನ್ ತೆರೆಯಲು ಹಾಗೂ UPI ಆಯ್ಕೆಯನ್ನು ಕ್ಲಿಕ್ ಮಾಡಲು ಸೂಚನೆ ನೀಡಲಾಗಿದ್ದು, ಅವರು ನೀಡಿದ ಮಾಹಿತಿಯನ್ನು ದುರುಪಯೋಗ ಮಾಡಿಕೊಂಡ ಸೈಬರ್ ವಂಚಕರು, ದಿನಾಂಕ 15-06-2025 ರಂದು ಸಂಜೆ 5:59 ಗಂಟೆಗೆ ದೂರುದಾರರ ಖಾತೆ 91900100011594 ಇಂದ ₹85,954ನ್ನು IDBI ಬ್ಯಾಂಕ್‌ನ Nimesh Reang (ಖಾತೆ ಸಂಖ್ಯೆ: 122710400011231455)…

ಮುಂದೆ ಓದಿ..